Subscribe to Updates
Get the latest creative news from FooBar about art, design and business.
- ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
- ವಿದ್ಯಾರ್ಥಿನಿಯ ಪೋಷಕರಿಂದ ಲಂಚ ಸ್ವೀಕರಿಸುತ್ತಿದ್ದ ವಸತಿ ಶಾಲೆ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!
- ಮಣ್ಣಲ್ಲಿ ಮಣ್ಣಾದ ಚೆನ್ನಮ್ಮ: ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ
- ಸಂತಪೂರ ಗ್ರಾಮದಲ್ಲಿ ‘ಗೃಹಲಕ್ಷ್ಮಿ ದಿನ’: ಸಸಿ ನೆಟ್ಟು ಚಾಲನೆ
- ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ನಿಧನಕ್ಕೆ ಔರಾದ್ ತಾಲೂಕು ಜೆ.ಡಿ.ಎಸ್. ಸಂತಾಪ
- ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ
- ಜು.25: ಕೆಂಪೇಗೌಡ ಜಯಂತಿ, ಪ್ರತಿಭಾ ಪುರಸ್ಕಾರ
- ಮೊರಾರ್ಜಿ ವಸತಿ ಶಾಲೆಯಲ್ಲಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್
Author: admin
ವಿದ್ಯಾರ್ಥಿಯೊಬ್ಬ “ನನಗೆ ಉತ್ತಮ ಅಂಕ ನೀಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ” ಎಂದು ಬರೆದು ಬೆದರಿಕೆ ಹಾಕಿದ್ದಾನೆ. ಮೌಲ್ಯಮಾಪನದ ಸಂದರ್ಭದಲ್ಲಿ ಕೆಲವೊಂದು ವಿದ್ಯಾರ್ಥಿಗಳು ಬರೆಯುವ ನನ್ನನ್ನು ಪಾಸ್ ಮಾಡಿ, ಮನವಿ ಮಾಡುವಂತಹ ಅನೇಕ ಸುದ್ದಿಗಳು ಕೇಳಿ ಬರುತ್ತಿದೆ. ಅಂತಹುದೇ ಒಂದು ಸುದ್ದಿ ಇದೀಗ ವೈರಲ್ ಆಗಿದೆ. ಅದರಲ್ಲಿ ವಿದ್ಯಾರ್ಥಿಯೊಬ್ಬ “ನನಗೆ ಉತ್ತಮ ಅಂಕ ನೀಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ” ಎಂದು ಬರೆದು ಬೆದರಿಕೆ ಹಾಕಿದ್ದಾನೆ. ಅಂದಹಾಗೆ, ಈ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಇತ್ತೀಚೆಗೆ ಇಲ್ಲಿ 10 ನೇ ತರಗತಿ ಬೋರ್ಡ್ ಪರೀಕ್ಷೆ ನಡೆದಿದ್ದು, ಉತ್ತರ ಮೌಲ್ಯಮಾಪನ ಸಂದರ್ಭದಲ್ಲಿ ಈ ಕೆಲಸ ಪತ್ತೆಯಾಗಿದೆ. ಬಾಪಟ್ಲ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಪೇಪರ್ ತಿದ್ದುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಉತ್ತರಪತ್ರಿಕೆಯಲ್ಲಿ ಈ ಉತ್ತರ ಕಂಡು ಶಾಕ್ ಆಗಿದ್ದಾರೆ. ರಾಮಾಯಣದ ಮಹತ್ವವವನ್ನು ವಿವರಿಸಿ ಎನ್ನುವ ಪ್ರಶ್ನೆಗೆ ಉತ್ತರದ ರೂಪದಲ್ಲಿ ಇದನ್ನು ಬರೆಯಲಾಗಿತ್ತು.…
ತಮಿಳುನಾಡಿನಲ್ಲಿ ಗಿಳಿ ಶಾಸ್ತ್ರವು ಕೂಡ ರಾಜಕೀಯವಾಗಿ ಭವಿಷ್ಯ ನುಡಿದಿದೆ. ಆದರೆ ಈ ಭವಿಷ್ಯ ನುಡಿದ ಬೆನ್ನಲ್ಲೇ ಆ ಗಿಳಿ ಮಾಲೀಕನನ್ನು ಸರ್ಕಾರವು ಬಂಧಿಸಿದೆ. ಲೋಕಸಭಾ ಚುನಾವಣಾ ಅಕಾಡದಲ್ಲಿ ಸೋಲು- ಗೆಲುವಿನ ಲೆಕ್ಕಾಚಾರಗಳು ಜೋರಾಗಿದೆ. ಸಮೀಕ್ಷೆಗಳು ಯಾರಿಗೆ ಸೋಲು ಯಾರಿಗೆ ಜಯ ಎಂಬುದನ್ನು ಈಗಾಗಲೇ ತಿಳಿಸಿಕೊಟ್ಟಿವೆ. ಜ್ಯೋತಿಷಿಗಳು ಕೂಡ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಇಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ಗಿಳಿ ಶಾಸ್ತ್ರವು ಕೂಡ ರಾಜಕೀಯವಾಗಿ ಭವಿಷ್ಯ ನುಡಿದಿದೆ. ಆದರೆ ಈ ಭವಿಷ್ಯ ನುಡಿದ ಬೆನ್ನಲ್ಲೇ ಆ ಗಿಳಿ ಮಾಲೀಕನನ್ನು ಸರ್ಕಾರವು ಬಂಧಿಸಿದೆ. ತಮಿಳುನಾಡಿನ ಕಡಲೂರಿನಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ ಅಭ್ಯರ್ಥಿ ನಿರ್ದೇಶಕ ತಂಗರಬಚ್ಚನ್ ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರದ ಗಿಣಿ ಇತ್ತೀಚೆಗೆ ಭವಿಷ್ಯ ನುಡಿದಿತ್ತು. ಆದರೆ ಬುಧವಾರದ ವೇಳೆ ಈ ಗಿಳಿಗಳ ಮಾಲೀಕ ಸೆಲ್ವರಾಜ್ ಹಾಗೂ ಆತನ ಸಹೋದರ ಸೀನುವಾಸನ್ ಅವರನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ. ಗಿಳಿಯನ್ನು ಅಕ್ರಮವಾಗಿ ಸೆರೆಯಲ್ಲಿಟ್ಟ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರ ಬೆನ್ನಲ್ಲಿಯೆ NDA ಮೈತ್ರಿ…
ಯಾವುದೇ ಭಾಷೆಯಲ್ಲೂ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಮೈಸೂರು ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಒಟಿಟಿ ಸೇರಿದಂತೆ ಯಾವುದೇ ವಿಧಾನದಲ್ಲಿ ಯಾವುದೇ ಭಾಷೆಯಲ್ಲೂ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಮೈಸೂರು ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮುಂಬಯಿನ ದೈವೀವ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಬೋನಿ ಕಪೂರ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯಪೀಠ, ಈ ಮಧ್ಯಂತರ ಆದೇಶ ಮಾಡಿದೆ. ಹೈಕೋರ್ಟ್‌ಗೆ ಗುರುವಾರ ರಜೆ ಇದ್ದರೂ ತುರ್ತು ವಿಚಾರವೆಂದು ಮಂಡನೆ ಮಾಡಿ ‘ವಿಚಾರಣೆ ನಡೆಸುವಂತೆ ಅರ್ಜಿದಾರರು ಕೋರಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಮಧ್ಯಂತರ ಆದೇಶ ನೀಡಿದೆ. ಮೈಸೂರಿನ ಬರಹಗಾರ ಸಿ.ಆರ್. ಅನಿಲ್ ಕುಮಾರ್ ಕಾಪಿ ರೈಟ್ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಮೈಸೂರಿನ ಸಿಟಿ ಸಿವಿಲ್ ನ್ಯಾಯಾಲಯ, ಏ.8ರಂದು ಮೈದಾನ ಹಿಂದಿ ಚಲನಚಿತ್ರ ಪ್ರದರ್ಶನಕ್ಕೆ ತಡೆ ನೀಡಿತ್ತು. ಆ ಕಡೆ ತೆರವು ಕೋರಿ ಅರ್ಜಿದಾರರು,…
ತುರುವೇಕೆರೆ: ತಾಲೂಕಿಗೆ ಸಮೀಪದಲ್ಲಿರುವ ತಾವರೆಕೆರೆ ತಿರುವಿನಲ್ಲಿ ತಡರಾತ್ರಿ ಒಂದು ಗಂಟೆಯ ಸಮಯದಲ್ಲಿ, ಕೆ.ಬಿ. ಕ್ರಾಸ್ ನಿಂದ ತುರುವೇಕೆರೆಗೆ ಬರುತ್ತಿದ್ದ ಹುಂಡೈ ಐ ಟ್ವೆಂಟಿ KA52 MJ19 22 ನಂಬರಿನ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿರುವ ತಡೆಗೋಡೆಯ ಕಲ್ಲುಗಳನ್ನು ಮುರಿದು, ಗುಂಡಿ ಒಳಗೆ ಬಿದ್ದಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಜೊತೆಯಲ್ಲಿದ್ದ ಮತ್ತೊಬ್ಬನಿಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿ ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ಹೋಬಳಿಯ ಲಿಂಗರಾಜು ಬಿನ್ ಗೋವಿಂದಪ್ಪ 40 ವರ್ಷ ಹಾಗೂ ಗಾಯಾಳು ಅದೇ ಗ್ರಾಮದ ಅಕ್ಷಯ್ ಬಿನ್ ಚಂದ್ರಯ್ಯ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿಯ ಮೃತದೇಹವನ್ನು ತುರುವೇಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತ ವ್ಯಕ್ತಿಗೆ ಹೆಂಡತಿ ತಂದೆ ತಾಯಿ ಮತ್ತು ಓರ್ವ ಸಹೋದರ ಸಹೋದರಿಯರು ಇದ್ದು, ಮೃತ ವ್ಯಕ್ತಿಯ ಕುಟುಂಬದ ಆಕ್ರಂದನ ಮುಗಿಲು…
ಮೊಬೈಲ್ ಬಳಕೆದಾರರಿಗೆ ಲೋಕಸಭಾ ಚುನಾವಣೆ ನಂತರ ದರ ಏರಿಕೆಯ ಬಿಸಿ ತಟ್ಟಲಿದೆ. ಭಾರತೀಯ ಟೆಲಿಕಾಂ ಉದ್ಯಮವು ಲೋಕಸಭೆ ಚುನಾವಣೆ ನಂತರ ಸೇವಾ ಶುಲ್ಕಗಳ ಶೇ.15 ರಿಂದ 17ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಆಂಟಿಕ್ ಸ್ಟಾಕ್ ಬೋಕಿಂಗ್ ವರದಿ ತಿಳಿಸಿದೆ. ಕೊನೆಯ ಬಾರಿ 2021ರ ಡಿಸೆಂಬರ್ ನಲ್ಲಿದರ ಪರಿಷ್ಕರಣೆ ಮಾಡಿ ಶೇ.20ರಷ್ಟು ಹೆಚ್ಚಳ ಮಾಡಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಜ್ಯದಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ಅಧಿಸೂಚನೆ ಹೊರಬೀಳಲಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದ ಚುನಾವಣಾ ಅಖಾಡದಲ್ಲಿ ಪ್ರಚಾರ ಜೋರಾಗಿರುವ ಬೆನ್ನಲ್ಲೇ ಉತ್ತರ ಕರ್ನಾಟಕ ಭಾಗದ ಉಳಿದ 14 ಕ್ಷೇತ್ರಗಳಲ್ಲೂ ಶುಕ್ರವಾರದಿಂದ ಚುನಾವಣಾ ಅಬ್ಬರ ಶುರುವಾಗಲಿದೆ. ಮೊದಲ ದಿನವೇ ಕಲಬುರಗಿ ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ ಎಸ್ ಟಿ ಮೀಸಲು ಕ್ಷೇತ್ರದಲ್ಲಿ ಈ. ತುಕಾರಾಂ ಅವರೂ ಶುಕ್ರವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್ ಬೆಳಗಾವಿಯಲ್ಲಿ ಹಾಗೂ ಬಸವರಾಜ ಬೊಮ್ಮಾಯಿ ಹಾವೇರಿ ಕ್ಷೇತ್ರದಲ್ಲಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿದ್ದು, ಇವರು ಸೇರಿದಂತೆ ಹಲವು ಪ್ರಮುಖರು 2ನೇ ಹಂತದ ಈ ಚುನಾವಣೆ ಎದುರಿಸುತ್ತಿದ್ದಾರೆ. 2ನೇ ಹಂತದ…
ಔರಾದ್: ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಔರಾದ್ ಪಟ್ಟಣದ ಈದ್ಗಾ ಮೈದಾನಕ್ಕೆ ಭೇಟಿ ನೀಡಿ, ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮುಖಂಡ ಡಾ. ಭೀಮಸೇನರಾವ ಶಿಂಧೆ, ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು. ರಂಜಾನ್ ಮಾಸ ಹಾಗೂ ಅದೇ ಅವಧಿಯಲ್ಲಿ ಬರುವ ರಂಜಾನ್ ಹಬ್ಬ ಮುಸಲ್ಮಾನ ಸಮುದಾಯದ ಸಹೋದರರ ಅತ್ಯಂತ ಪವಿತ್ರ ಹಬ್ಬ, ಈ ಹಬ್ಬ ಶಾಂತಿ, ಸಾಮರಸ್ಯದ ಸಂದೇಶಗಳನ್ನು ವಿಶ್ವದಲ್ಲಿ ಸಾರಿದೆ. ಈ ಹಬ್ಬದ ಸಂದೇಶ ನಾವೆಲ್ಲರೂ ಪಾಲಿಸುವುದು ಇಂದಿನ ದಿನದಲ್ಲಿ ಅಗತ್ಯವಾಗಿದೆ. ನಾವು ಎಲ್ಲರು ಸಹೋದರತೆ, ಶಾಂತಿಯೊಂದಿಗೆ ಸಹಬಾಳ್ವೆ ನಡೆಸಬೇಕಿದೆ ಎಂದರು. ರಂಜಾನ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಡಾ. ಭೀಮಸೇನರಾವ ಶಿಂಧೆ ಅವರು ಎಲ್ಲ ಮುಸ್ಲಿಂ ಬಾಂಧವರೊಂದಿಗೆ ಭಾಗವಹಿಸಿ ಸಾಮರಸ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಯೂಬ್ ಮಾನುರಕರ್, ಡಾ ಫಯಾಜ್ ಅಲೀ, ಅಬ್ದುಲ್ ರಹೀಮ್, ಶೇಖ್ ಫರೀದ್, ಘುಡುಸಾಬ, ಅಮಿರೋದ್ದಿನ್, ಗಂಗಾಧರ ಮಜಿಗೆ, ಮಲ್ಲಿಕಾರ್ಜುನ ಪಾಟೀಲ್, ಚನ್ನಪ್ಪ ಉಪ್ಪೆ, ರಾಮಣ್ಣ ವಡಿಯಾರ,ಶಿವರಾಜ ದೇಶಮುಖ, ಸುಧಾಕರ ಕೊಳ್ಳುರ್, ಅಂಜಾರೆಡ್ಡಿ, ಅನಿಲ್…
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹಗರಣಗಳ ಪೋಸ್ಟರ್ ಗಳು ತಮಿಳುನಾಡಿನ ಹಲವೆಡೆ ರಾರಾಜಿಸುತ್ತಿವೆ. ಪೋಸ್ಟರ್ ಗಳ ಮೇಲ್ಭಾಗದಲ್ಲಿ “ಜಿ ಪೇ” ಎಂದು ಬರೆಯಲಾಗಿದ್ದು, ಅದರ ಮೇಲೆ ಪ್ರಧಾನಿ ಮೋದಿಯವರ ಫೋಟೋ ಮತ್ತು ಕ್ಯೂಆರ್ ಕೋಡ್ ಇದೆ. ಅದರಲ್ಲಿ “ದಯವಿಟ್ಟು ಸ್ಕ್ಯಾನ್ ಮಾಡಿ ಮತ್ತು ಸ್ಕ್ಯಾಮ್ ನೋಡಿ” ಎಂದು ಬರೆಯಲಾಗಿದೆ. ಪೋಸ್ಟರ್ ಅನ್ನು ಸ್ಕ್ಯಾನ್ ಮಾಡುವುದರಿಂದ ಮೊಬೈಲ್ ಫೋನ್ ಬಳಕೆದಾರರನ್ನು ವೀಡಿಯೊಗೆ ಕರೆದೊಯ್ಯುತ್ತದೆ. ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಯ ಭ್ರಷ್ಟಾಚಾರ, ಸಿಎಜಿ ವರದಿಯಲ್ಲಿ ಹೈಲೈಟ್ ಆಗಿರುವ ಅಕ್ರಮಗಳು, ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿನ ಭ್ರಷ್ಟಾಚಾರ ಇತ್ಯಾದಿಗಳನ್ನು ವ್ಯಕ್ತಿಯೊಬ್ಬರು ವಿವರಿಸುವುದನ್ನು ವೀಡಿಯೊದಲ್ಲಿ ಕೇಳಲಾಗಿದೆ. ಪೋಸ್ಟರ್ ಗಳನ್ನು ಡಿಎಂಕೆ ಹಾಕಿದೆ ಎಂಬ ಊಹಾಪೋಹವಿದೆ, ಆದರೆ ಇನ್ನೂ ಯಾವುದೇ ದೃಢೀಕರಣವಿಲ್ಲ. ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಮಧ್ಯಪ್ರದೇಶದ ನಿವೃತ್ತ ಐಎಎಸ್ ಅಧಿಕಾರಿ ಸುಬ್ರಮಣಿಯನ್ ಲಕ್ಷ್ಮೀ ನಾರಾಯಣ್ ಎಂಬವರು ಚೈತ್ರ ನವರಾತ್ರಿಯ ಮೊದಲ ದಿನದಂದು ರಾಮ ಮಂದಿರ ಟ್ರಸ್ಟ್ ಗೆ 7ಕೆಜಿ ಚಿನ್ನದಿಂದ ತಯಾರಿಸಿದ ಸುವರ್ಣ ರಾಮಾಯಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಏಳು ಕಿಲೋ ಚಿನ್ನವನ್ನು ಬಳಸಿ ಮಾಡಿದ ಚಿನ್ನದ ಪುಟಗಳಲ್ಲಿ ಬರೆದ ರಾಮಾಯಣವನ್ನು ರಾಮನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಲಕ್ಷ್ಮೀ ನಾರಾಯಣ್ ತಮ್ಮ ಇಡೀ ಜೀವಮಾನದ ಉಳಿತಾಯವನ್ನು ಬಾಲರಾಮನಿಗೆ ಅರ್ಪಿಸುವುದಾಗಿ ವಾಗ್ದಾನ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು 151 ಕೆಜಿ ತೂಕದ ‘ರಾಮಚರಿತ ಮಾನಸ’ ಪ್ರತಿಯನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. 10,902 ಕಾವ್ಯಗಳನ್ನು ಒಳಗೊಂಡಿರುವ ರಾಮಾಯಣದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. ಈ ಚಿನ್ನದ ಪ್ರತಿಕೃತಿಯು ಸರಿಸುಮಾರು 480-500 ಪುಟಗಳನ್ನು ಒಳಗೊಂಡಿದೆ. ಇದನ್ನು ತಯಾರಿಸಲು 140 ಕೆಜಿಯಷ್ಟು ತಾಮ್ರವನ್ನು ಸಹ ಬಳಸಲಾಗಿದೆ. ಏಪ್ರಿಲ್ 9, ಮಂಗಳವಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ನವಮಿ ಆಚರಣೆ ಆರಂಭವಾಗಿದೆ. ಅಯೋಧ್ಯೆಯ ಮಠದ ದೇವಾಲಯಗಳಲ್ಲಿ ರಾಮಕಥೆ, ರಾಮಲೀಲಾ ಮತ್ತು ಭಜನಾ ಸಂಧ್ಯಾವನ್ನು ಆಯೋಜಿಸಲಾಗುತ್ತಿದೆ. ದೇವಾಲಯದ…
ಜೆಡಿಎಸ್ ನವರು ಬಾಲಗಂಗಾಧರ ಶ್ರೀಗಳಿಗೆ ಎಷ್ಟು ಕಿರುಕುಳ ಕೊಟ್ಟರು ಎಂದು ಸಹ ಗೊತ್ತಿದೆ. ನಿರ್ಮಲಾನಂದನಾಥ ಶ್ರೀಗಳ ಫೋನ್ ಅನ್ನು ಕುಮಾರಸ್ವಾಮಿ ಸಿಎಂ ಆಗಿದ್ದಾಗ ಟ್ಯಾಪ್ ಮಾಡಿಸಿದ್ರು. ಈಗ ಹೇಗೆ ಶ್ರೀಗಳ ಬಳಿ ಹೋಗಿ ಆಶೀರ್ವಾದ ಕೇಳ್ತಾರೆ ಎಂದು ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಚಲುವರಾಯಸ್ವಾಮಿ ಮಾತನಾಡಿ, ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ನನ್ನು ಟ್ಯಾಪ್ ಮಾಡಿದ್ದಾರೆ. ಇದೀಗ ಹೇಗೆ ಅವರ ಬಳಿ ಹೋಗಿ ಕುಮಾರಸ್ವಾಮಿ ಆಶೀರ್ವಾದ ಕೇಳ್ತ ಇದ್ದಾರೆ. ನಾವು ಸಹ ಜೆಎಸ್‌ಎಸ್, ಸಿದ್ದಗಂಗಾ, ಚುಂಚನಗಿರಿ ಮಠಗಳಿಗೆ ನಾವು ಹೋಗಿದ್ದೀವಿ, ಅವರು ಹೋಗಿದ್ದಾರೆ. ಇದು ಚುನಾವಣೆ ವೇಳೆ ಸಹಜವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಚುಂಚನಗಿರಿ ಮಠ ಒಕ್ಕಲಿಗ ಸಮುದಾಯ ಮಠ ಆದ್ರೂ ಸಹ ರಾಜ್ಯದಲ್ಲಿ ಅತ್ಯಂತ ಜಾತ್ಯತೀತ ಮಠವಾಗಿದೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ ಬೆಳೆಸಿದವರು ಬಾಲಗಂಗಾಧರನಾಥ ಶ್ರೀಗಳು. ಜೆಡಿಎಸ್ ನವರು ಬಾಲಗಂಗಾಧರ ಶ್ರೀಗಳಿಗೆ ಎಷ್ಟು…