Author: admin

ಸಂಶೋಧನೆಯ ಪ್ರಕಾರ ದಿನಕ್ಕೆ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ಹೃದಯ ಮತ್ತು ಮನಸ್ಸು ಬಲಗೊಳ್ಳುತ್ತದೆ. ಮೆದುಳಿನ ಹೊಸ ಕೋಶಗಳ ಅಭಿವೃದ್ಧಿಗೆ ಸಹಕಾರಿ. ಪ್ರತಿದಿನ ಬೆಳಗ್ಗೆ ಕನಿಷ್ಟ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆಯೇ ಹೃದಯದ ಬಡಿತ ಹೆಚ್ಚಿಸುತ್ತದೆ. ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ನಿರಂತರ ಸೈಕ್ಲಿಂಗ್‌ ನಿಂದ ಖಿನ್ನತೆ ಮತ್ತು ಆತಂಕ ಕಡಿಮೆಯಾಗುತ್ತದೆ. ಒಟ್ಟಾರೆ ದೇಹದ ತೂಕ ಇಳಿಸಿ ಫಿಟ್ ಆಗಿರಲು ಸಹಕಾರಿಯಾಗಿದೆ.

Read More

ಪ್ರಜ್ವಲ್ ದೇವರಾಜ್ ಮತ್ತು ಮೇಘನಾರಾಜ್ ಅಭಿನಯದ ‘ತತ್ಸಮ ತದ್ಭವ’ ಚಿತ್ರವನ್ನು ಬೆಂಗಳೂರಿನ ಪೊಲೀಸ್ ಕಮಿಷನರ್ ಬಿ. ದಯಾನಂದ್ ಮತ್ತು 5 ಡಿಸಿಪಿಗಳು ಸೇರಿದಂತೆ 250 ಪೊಲೀಸ್ ಸಿಬ್ಬಂದಿಗಳು ಸಿನಿಮಾ ವೀಕ್ಷಿಸಿದ್ದು, ಅವರೆಲ್ಲಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೇ ಪ್ರಧಾನವಾಗಿರುವ ಈ ಸೈಕಲಾಜಿಕಲ್ ಕೈಮ್ ಥಿಲ್ಲರ್ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಪೊಲೀಸ್ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. ವಿಶಾಲ್ ಆತ್ರೇಯ ನಿರ್ದೇಶನದ ಸಿನಿಮಾ ಇದಾಗಿದ್ದು, ಪನ್ನಗಭರಣ ನಿರ್ಮಿಸಿದ್ದಾರೆ. ವರದಿ : ಆಂಟೋನಿ ಬೇಗೂರು

Read More

ಹೆಚ್.ಡಿ.ಕೋಟೆ: ಶುಕ್ರವಾರ ನಡೆದ ಕರ್ನಾಟಕ ಬಂದ್, ಕಾವೇರಿ ಹೋರಾಟದಲ್ಲಿ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಭಾಗಿಯಾಗಿ, ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದರು. ಹೆಚ್ ಡಿ ಕೋಟೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮುಖ್ಯರಸ್ತೆ  ಬಾಪೂಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿಗೆ ಕೂಡಲೇ ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು, ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯಿತು. ವರದಿ: ಮಲಾರ ಮಹದೇವಸ್ವಾಮಿ

Read More

ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣದ ಮೆಟ್ರಿಕ್ ನಂತರದ‌ ಬಾಲಕರ ವಸತಿ ನಿಲಯಕ್ಕೆ ಎಸಿ ಹಾಗೂ ತಹಶೀಲ್ದಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಮಕೂರು ಎ.ಸಿ. ಗೌರವ್ ಕುಮಾರ್ ಶೆಟ್ಟಿ, ಗುಬ್ಬಿ ತಹಶೀಲ್ದಾರ್ ಆರತಿ.ಬಿ  ದಿಢೀರ್ ಭೇಟಿ ನೀಡಿದ್ದರಿಂದ ಹಾಸ್ಟೆಲ್ ಸಿಬ್ಬಂದಿಗಳು ತಬ್ಬಿಬ್ಬಾಗಿದ್ದಾರೆ. ಹಾಸ್ಟೆಲ್ ನ ಅಡುಗೆ ಕೊಠಡಿ, ಶೌಚಾಲಯ, ವಿದ್ಯಾರ್ಥಿಗಳ ಕೊಠಡಿಗಳನ್ನ ವೀಕ್ಷಿಸಿದ ಅಧಿಕಾರಿಗಳು ಹಾಸ್ಟೆಲ್ ನಿರ್ವಹಣೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಸಿಬ್ಬಂದಿ ಜೊತೆಗೆ ಚರ್ಚಿಸಿದರು. ಹಾಸ್ಟೆಲ್ ಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ ವೇಳೆ ವಾರ್ಡನ್ ಅವರು ಹಾಸ್ಟೆಲ್ ನಲ್ಲಿ ಇಲ್ಲದೇ ಇರುವುದನ್ನು ಕಂಡ ಉಪ ವಿಭಾಗಾಧಿಕಾರಿಗಳು, ವಾರ್ಡನ್ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.

Read More

ಭಾರತ ದೇಶವನ್ನು ಬ್ರಿಟಿಷ್ ಬಂಧನದಿಂದ ಸ್ವತಂತ್ರಗೊಳಿಸಲು ಅತಿ ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಹುತಾತ್ಮ ಭಗತ್ ಸಿಂಗ್ ರವರು ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು. ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹುತಾತ್ಮರಾದ ಭಗತ್ ಸಿಂಗ್ ರವರ ಜನ್ಮ ದಿನಾಚರಣೆಯಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಲಾಲಾ ಲಜಪತ್ ರಾಯ್ ರವರ ಜೊತೆಗಿನ ಘಟನೆಯನ್ನು ತನ್ನ ಹೋರಾಟದ ಸ್ಪೂರ್ತಿಯಾಗಿಸಿಕೊಂಡು ಹೋರಾಡಿದವರು ಮತ್ತು ಯುವಕರಲ್ಲಿ ಹೊಸ ಜಾಗೃತಿಯ ಸಂಕೇತವಾದವರು ಕ್ರಾಂತಿಕಾರಿ ವೀರ ಹುತಾತ್ಮ ಭಗತ್ ಸಿಂಗ್ ರವರು ಎಂದು ಅವರು ತಿಳಿಸಿದರು. ಉಪನ್ಯಾಸಕರಾದ ಶಿವಪುತ್ರ ಧರಣಿ ಮಾತನಾಡಿ ಇಂದಿನ ಯುವಕರು ಭಗತ್ ಸಿಂಗ್ ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ ಇದ್ದರು. ಇದೇ ಸಂದರ್ಭದಲ್ಲಿ ಹುತ್ತಾತ್ಮರಾದ ಭಗತ್ ಸಿಂಗ್ ರವರ ಜನ್ಮ ದಿನಾಚರಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಂಜಲಿ…

Read More

ತುರುವೇಕೆರೆ : ಹಾವು ಕಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ತುರುವೇಕೆರೆ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ನಡೆದಿದೆ. ಸುಮಾರು 42 ವರ್ಷ ವಯಸ್ಸಿನ ಮಹೇಶ್ ಶೆಟ್ಟಿ ಸನ್ ಆಫ್ ತಿಮ್ಮಯ್ಯ ಎಂಬವರು ತಮ್ಮ ತೋಟದಲ್ಲಿ ತೆಂಗಿನ ಮರಗಳಿಗೆ ಗೊಬ್ಬರ ಹಾಕುವ ಸಮಯದಲ್ಲಿ ಆಕಸ್ಮಿಕವಾಗಿ ಹಾವು ಕಚ್ಚಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ  ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಎರಡು ಗಂಡು ಒಂದು ಹೆಣ್ಣು ಮಗುವಿದ್ದು ಹಾಗೂ ಪತ್ನಿ ಸುಜಾತ ಅವರನ್ನು ಅಗಲಿದ್ದಾರೆ. ಮೃತದೇಹವನ್ನು ತುರುವೇಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವ ಗಾರದಲ್ಲಿ ಇರಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ

Read More

ಕಾವೇರಿ ನೀರಿಗಾಗಿ ಶುಕ್ರವಾರ ರಾಜ್ಯಾದಂತ ಬಂದ್ ಹಿನ್ನೆಲೆ ಬೀದರ್‌ ನಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರವೇ ಪ್ರವೀಣ ಶೆಟ್ಟಿ ಬಣ, ಕನ್ನಡಿಗರ ರಕ್ಷಣಾ ವೇದಿಕೆ, ಕರವೇ ಯುವ ಘರ್ಜನೆಯಿಂದ ಬೀದರ್ ನಲ್ಲಿ ಪ್ರತಿಭಟನೆ ನಡೆಯಿತು. ಇಲ್ಲಿನ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು, ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ರೈತ ವಿರೋಧಿ ಸರ್ಕಾರ, ಒಳ ಒಪ್ಪಂದ ಮಾಡಿಕೊಳ್ಳುವ ಸರ್ಕಾರ ಎಂದು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್

Read More

ಬೆಂಗಳೂರು: ಮುಖಂಡರು ತಮ್ಮ ಕಾರುಗಳಿಗೆ ನಿಯಮ ಬಾಹಿರವಾಗಿ ಅಳವಡಿಸಿದ್ದ ಸಂಘಟನೆ ಹೆಸರಿದ್ದ ನಾಮಫಲಕ ಹಾಗೂ ಹಸಿರು ಟಾಪ್‌ ಲೈಟ್ (ಕಾರಿನ ಮೇಲ್ಬಾಗ) ಅನ್ನು ವೈಟ್‌ ಫಿಲ್ಡ್ ವಿಭಾಗದ ಪೋಲಿಸರು, ಶುಕ್ರವಾರ ತೆರವುಗೊಳಿಸಿದರು. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾವೇರಿ ಹೋರಾಟಕ್ಕೆ ರತ್ನ ಭಾರತ ರೈತ ಸಮಾಜದ ರಾಜ್ಯ ಅಧ್ಯಕ್ಷ ಲಕ್ಷ್ಮಣ್ ನೇತೃತ್ವದಲ್ಲಿ ಹೋರಾಟಗಾರರು ಕಾರುಗಳಲ್ಲಿ ಬರುತ್ತಿದ್ದರು  ಈ ವೇಳೆ ಪೋಲಿಸರು ನಾಮಫಲಕ ಹಾಗೂ ಹಸಿರು ಟಾಪ್‌ ಲೈಟ್ ತೆರವುಗೊಳಿಸಿದರು.

Read More

ತಮಿಳುನಾಡಿಗೆ ಕಾವೇರಿ ನೀರನ್ನ ಹರಿಸಲು ಸಿಡಬ್ಲ್ಯೂಎಂಎ ಆದೇಶ ಹೊರಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ರಿಷಬ್ ಶೆಟ್ಟಿ, ನಮಗೆ ನೀರಿಲ್ಲ, ಬೇರೆಯವರಿಗೆ ಎಲ್ಲಿ ಕೋಡಲು ಆಗುತ್ತದೆ? ಮಳೆ ಇಲ್ಲದೆ ಡ್ಯಾಮ್ ಗಳು ಭರ್ತಿ ಆಗಿಲ್ಲ, ನೀರು ಬಿಡುತ್ತಿರುವುದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಸಮಸ್ಯೆಗೆ ಎರಡು ಸರ್ಕಾರ ಕೂತು ಮಾತನಾಡಬೇಕು, ರೈತರಿಗೆ ನ್ಯಾಯ ಒದಗಿಸಬೇಕು ಎಂದರು. ಸದ್ಯ ಕಾಂತಾರ 2 ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿರುವ ರಿಷಬ್ ಹೊರಗಡೆ ಇದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.

Read More

ಚಿಕ್ಕೋಡಿ: ಬಿಜೆಪಿ –- ಜೆಡಿಎಸ್‌ ಮೈತ್ರಿ ವಿರೋಧಿಸಿ ಆ ಪಕ್ಷಗಳ ತೊರೆಯಲು ಹಲವು ಜನ ನಿರ್ಧರಿಸಿದ್ದಾರೆಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ಬಹಳಷ್ಟು ಜನ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರು. ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಮಾತನಾಡಿದ ಅವರು, ಕಾಲ ಕೂಡಿ ಬರಬೇಕು, ಲೋಕಸಭೆ ಸಮೀಪಿಸಿದಾಗ ಹಾಲಿ ಶಾಸಕರು, ಮಾಜಿ ಶಾಸಕರು ಇರಬಹುದು. ಬಹಳಷ್ಟು ಜನ ಬಿಜೆಪಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಆಸಕ್ತಿ ತೋರಿಸುತ್ತಿದ್ದಾರೆ. ಕಾಲ ಕೂಡಿ ಬಂದ ಸಂದರ್ಭದಲ್ಲಿ ಅದನ್ನ ಪ್ರಕಟ ಮಾಡುತ್ತೇವೆ ಎಂದರು. ರಮೇಶ್ ಕತ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಇಲ್ಲಿಯವರೆಗೆ ಆ ಬಗ್ಗೆ ಚರ್ಚೆ ಆಗಿಲ್ಲ.  ಕಾಲ ಕೂಡಿ ಬಂದಾಗ ಚರ್ಚೆ ಬಂದಾಗ ಆ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದರು.

Read More