Subscribe to Updates
Get the latest creative news from FooBar about art, design and business.
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
Author: admin
ವಿಜಯಪುರ: ಹುಬ್ಬಳ್ಳಿಯ ಶಹರ ಠಾಣಾ ಪೊಲೀಸರು ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತನನ್ನು ಬಂಧಿಸಿದ್ದನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪ್ರಕರಣದಲ್ಲಿ ಸಮಯ ಆದ ತಕ್ಷಣ ಅಪರಾಧವೇ ಹೋಗಿ ಬಿಡುತ್ತಾ” ಎಂದು ಪ್ರಶ್ನಿಸಿದ್ದಾರೆ. ವಿಜಯಪುರದ ಬಿಎಲ್ ಡಿಇ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ಯಾವತ್ತೂ ಅಪರಾಧಿ ಅಪರಾಧಿಯೇ ಆಗುತ್ತಾನೆ. ಹಳೆ ಪ್ರಕರಣವನ್ನು ಮುಗಿಸುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ. ಹಾಗಾಗಿ ಪ್ರಕರಣವನ್ನು ರೀಓಪನ್ ಮಾಡಲಾಗಿದೆ ಎಂದರು. ಕಾಂಗ್ರೆಸ್ ನೀಚ ಸರ್ಕಾರ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಪರಾಧಿಗಳಿಗೆ ಬೆಂಬಲ ಕೊಡುವ ಕೇಂದ್ರ ಸಚಿವ ಜೋಶಿಯವರದ್ದು ನೀಚತನ. ಈಗ ಅರೆಸ್ಟ್ ಮಾಡಿದರೆ ಏನು ತಪ್ಪು, ಬಂಧಿಸಬಾರದು ಅಂತಾ ಇದೆಯಾ? ಜೋಶಿ ಏನು ಕೋರ್ಟಾ? ಜೋಶಿ ಹೇಳಿದ್ದೇ ಅಂತಿಮವೇ ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಮಾತನಾಡಲಿ. ಕಾನೂನು ಏನ್ ಹೇಳುತ್ತೋ ಅದನ್ನು ಸರ್ಕಾರ ಮಾಡುತ್ತೆ ಎಂದು ಹೇಳುವ ಮೂಲಕ ಶ್ರೀಕಾಂತ್ ಪೂಜಾರಿ ಬಂಧನವನ್ನು…
ನೋಯ್ಡಾದ ಮಾಲ್ ಬಳಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, 3 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಪಿಂಗ್ ಮಾಲ್ ಬಳಿ ಸಾಮೂಹಿಕ ಅತ್ಯಾಚಾರ ನಡೆದಿತ್ತು, ಅದಾದ ಬಳಿಕ ಪದೇ ಪದೇ ಮಹಿಳೆಗೆ ಆರೋಪಿಗಳು ಕಿರುಕುಳ ನೀಡಿದ್ದರು ಎಂದು ತಿಳಿಸಿದ್ದಾರೆ. ಕಳೆದ ವಾರ ಆಕೆಯ ವೈದ್ಯಕೀಯ ಪರೀಕ್ಷೆಯ ನಂತರ ಕಾರ್ಯವಿಧಾನದ ಪ್ರಕಾರ ದೂರುದಾರರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಬಂಧಿತ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 30 ರಂದು ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ, ನಂತರ ತನಿಖೆಯನ್ನು ಕೈಗೆತ್ತಿಕೊಂಡು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಬಂಧಿತರನ್ನು ರಾಜ್ಕುಮಾರ್, ಆಜಾದ್ ಮತ್ತು ವಿಕಾಸ್ ಎಂದು ಗುರುತಿಸಲಾಗಿದೆ. ರವಿ ಮತ್ತು ಮೆಹ್ಮಿ ಎಂಬ ಇತರ ಇಬ್ಬರು ಶಂಕಿತರು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಬಂಧಿಸಲು ಪ್ರಯತ್ನಗಳು…
ಮಧ್ಯಪ್ರದೇಶ: ಮಹಿಳೆಯೊಬ್ಬರು ತನ್ನ ಪತಿ ಮತ್ತು ಸೋದರ ಮಾವನನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಗುಂಡಿಕ್ಕಿ ಕೊಂದಿದ್ದಾರೆ. ಸೋಮವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದೆ. ನಂತರ ಅಪರಾಧಕ್ಕೆ ಬಳಸಿದ ಪಿಸ್ತೂಲ್ ನೊಂದಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಆರೋಪಿ ಸವಿತಾ ಅವರ ಪತಿ ರಾಧೇಶ್ಯಾಮ್(41), ಮತ್ತು ಆಕೆಯ ಸೋದರ ಮಾವ ಧೀರಜ್(47) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. “ರಾಧೇಶ್ಯಾಮ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಧೀರಜ್ ಬದ್ ನಗರ ಆಸ್ಪತ್ರೆಯಲ್ಲಿ ಗುಂಡೇಟಿನ ಗಾಯದಿಂದ ಮೃತಪಟ್ಟಿದ್ದಾರೆ. ನಂತರ ಆರೋಪಿ ಪಿಸ್ತೂಲ್ ನೊಂದಿಗೆ ಶರಣಾಗಿದ್ದಾರೆ ಎಂದು ಇಂಗೋರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಚಂದ್ರಿಕಾ ಸಿಂಗ್ ಯಾದವ್ ಹೇಳಿದರು.
ಬೆಳಗಾವಿ: ಜಿಲ್ಲೆಯ ನವಗಿ ಗ್ರಾಮದಲ್ಲಿ ನಿನ್ನೆ ಜನವರಿ 1ರ ಹೊಸವರ್ಷ ರಾತ್ರಿ ಸುಮಾರು 30 ಜನ ಮುಸುಕುಧಾರಿ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಸುತ್ತಮುತ್ತ ನಿವಾಸಿಗಳು ಭಯಭೀತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನವಗಿ ಗ್ರಾಮದಲ್ಲಿ ಆಯುಧಗಳು, ಕತ್ತಿಗಳು ಮತ್ತು ದೊಣ್ಣೆಗಳನ್ನು ಹಿಡಿದು ದುಷ್ಕರ್ಮಿಗಳು ಮುಖ್ಯವಾಗಿ ನಾಲ್ಕು ಮನೆಗಳ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೆ ವಾಹನಗಳು ಮತ್ತು ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ದಾಳಿಗೆ ಒಳಗಾದವರಲ್ಲಿ ಮಾಜಿ ಮತ್ತು ಹಾಲಿ ಪಂಚಾಯಿತಿ ಸದಸ್ಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರೇಮ ಪ್ರಕರಣದ ವಿವಾದವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.
ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಕ್ಯಾತಗನಹಳ್ಳಿ ಮತ್ತು ಹೊಟ್ಟೆ ಬೊಮ್ಮನಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಕಾವಲು ಮಾರಮ್ಮ ದೇವಿಯ ಮೆರವಣಿಗೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ, 41 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ, 41ನೇ ದಿನ ಎರಡು ಗ್ರಾಮಗಳ ಗ್ರಾಮಸ್ಥರು ಶ್ರೀ ಕಾವಲು ಮಾರಮ್ಮ ದೇವಿಗೆ ವಿಶೇಷ ಆರತಿ ದೀಪೋತ್ಸವ ಪೂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದರು. ಶ್ರೀ ಕಾವಲು ಮಾರಮ್ಮ ದೇವಿಯ ಪ್ರಧಾನ ಅರ್ಚಕ ಮದಕರಿ ನಾಯಕ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಿಡಗಲ್ ಸಂಸ್ಥಾನದ ಮಡಿಲಲ್ಲಿ ನೆಲೆಸಿರುವ ಈ ಶಕ್ತಿ ದೇವತೆಗೆ ನಮ್ಮ ಎರಡು ಗ್ರಾಮಗಳ ಗ್ರಾಮ ದೇವತೆಯಾಗಿದ್ದು, ಅನೇಕ ಗ್ರಾಮಗಳಿಂದ ಭಕ್ತರು ಶ್ರೀ ಕಾವಲು ಮಾರಮ್ಮ ದೇವಿಯ ವಿಶೇಷ ಪೂಜೆಗೆ ಆಗಮಿಸಿ ಭಕ್ತಿಯಿಂದ ಬೇಡಿಕೊಂಡಿರುವ ವರಗಳನ್ನು ಕರುಣಿಸುವ ದೇವಿಯಾಗಿದ್ದು, ಇಂತಹ ದೇವಿಯನ್ನು ಪೂಜಿಸಿದರೆ ಕಂಕಣ ಭಾಗ್ಯ ಸಂತಾನ ಭಾಗ್ಯ ಗೃಹ ನಿರ್ಮಾಣಭಾಗ್ಯ ಮತ್ತು ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಪ್ರತಿ ಮಂಗಳವಾರ ವಿಶೇಷ ಪೂಜೆ…
ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಬಿ ಹೊಸಹಳ್ಳಿಯ ಮಲ್ಲಿಕಾರ್ಜುನ್ ಅವರು ಮಾತನಾಡಿ, ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಮಹತ್ವವನ್ನು ವಿವರಿಸಿದರು. ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖಂಡರಾದ ಪೃಥ್ವಿ ರಾಜ್, ರಾಮನಜಮಪ್ಪ ಆಂಜೆಯ, ರಾಮಪ್ಪ, ಮಾದೇವಪ್ಪ ನಾಗರಾಜು ಅಶೋಕ್ ಇನ್ನಿತರರು ಭಾಗವಹಿಸಿದ್ದರು. ವರದಿ: ನಂದೀಶ್ ನಾಯ್ಕ
ವೈ.ಎನ್.ಹೊಸಕೋಟೆ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಜನವರಿ 13ರಂದು ರಂಗಸಮುದ್ರ ಗ್ರಾಮದಲ್ಲಿ ನಡೆಯಲಿದೆ ಎಂದು ಪಾವಗಡ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಕಟ್ಟ ನರಸಿಂಹಮೂರ್ತಿ ತಿಳಿಸಿದರು. ತಾಲ್ಲೂಕಿನ ವೈ ಎನ್ ಹೊಸಕೋಟೆ ಗ್ರಾಮದಲ್ಲಿ ಇರುವ ಶತಮಾನ ಶತಮಾನ ಕಂಡ ಸರ್ಕಾರಿ ಹಿರಿಯ ಬಾಲಕರ ಪಾಠ ಶಾಲೆಯಲ್ಲಿ ಸೋಮವಾರದಂದು ವೈ.ಎನ್. ಹೊಸಕೋಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಸಮ್ಮೇಳನದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವೈ ಎನ್ ಹೊಸಕೋಟೆ ಹೋಬಳಿ ಘಟಕದ ಅಧ್ಯಕ್ಷ ಹೋ.ಮ. ನಾಗರಾಜು ಮಾತನಾಡಿ, ಈ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ ಇರುತ್ತದೆ, ಎಲ್ಲರೂ ತಪ್ಪದೇ ಹಾಜರಾಗಬೇಕೆಂದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಐ.ಎ.ನಾರಾಯಣಪ್ಪ, ಚಂದ್ರಶೇಖರ್ ಮುದರಾಡಿ, ಫಕ್ರುದ್ದೀನ್, ದೇವರಾಜ್, ನಿರ್ಮಲ ಹಾಗೂ ಮುಂತಾದವರು ಹಾಜರಾಗಿದ್ದರು. ವರದಿ: ನಂದೀಶ್ ನಾಯ್ಕ
ಪಂಜಾಬ್: ಜಲಂಧರ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿದ್ದ ದಲ್ಬೀರ್ ಸಿಂಗ್ ಅವರ ಮೃತದೇಹವನ್ನು ಡಿಸೆಂಬರ್ 31 ಮತ್ತು ಜನವರಿ 1ರ ಮಧ್ಯರಾತ್ರಿ ಬಸ್ತಿ ಬಾವಾ ಖೇಲ್ ಕಾಲುವೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಪೊಲೀಸ್ ಅಧಿಕಾರಿಯ ತಲೆಯ ಮೇಲೆ ಗಾಯದ ಗುರುತುಗಳಿವೆ.ನಾವು ಹತ್ತಿರದ ಪ್ರದೇಶಗಳಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಜಲಂಧರ್ ಡಿಸಿಪಿ-1 ಬಲ್ವಿಂದರ್ ಸಿಂಗ್ ರಾಂಧವಾ ಅವರು ತಿಳಿಸಿದ್ದಾರೆ.
ಜಪಾನ್: ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಜಪಾನ್ ಏರ್ಲೈನ್ಸ್ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. ರನ್ವೇಯಲ್ಲಿ ವಿಮಾನ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದ್ದು ವಿಮಾನದಲ್ಲಿ 350ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಈ ದುರಂತ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ನಂತರ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿಯಾದ ನಂತರ ಜಪಾನ್ ಏರ್ ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಾಗ ಅದರಲ್ಲಿ 350 ಮಂದಿ ಇದ್ದರು. ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿಮಾನದಲ್ಲಿದ್ದ ಎಲ್ಲ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇಂತಹ ಸಂದರ್ಭದಲ್ಲಿ ಭಾರೀ ಅನಾಹುತ ತಪ್ಪಿದೆ. ಸದ್ಯ ವಿಮಾನದ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಯುತ್ತಿದೆ.
ಯೋಗಿ ಆದಿತ್ಯನಾಥ್ ಅವರು ಹೊಸ ವರ್ಷದಂದು ಗೋರಖನಾಥ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿದರು. ಅವರು ಗೋರಖನಾಥ ದೇವಾಲಯದಲ್ಲಿ ಹೋಮ ಮತ್ತು ರುದ್ರಾಭಿಷೇಕವನ್ನು ಮಾಡುವ ಮೂಲಕ 2024 ಅನ್ನು ಪ್ರಾರಂಭಿಸಿದರು. ಗೋರಖನಾಥ ಮಠದ ಮಹಾಂತಯ್ಯ (ಪ್ರಧಾನ ಅರ್ಚಕ) ಯೋಗಿ ಆದಿತ್ಯನಾಥ್ ಅವರು ಶಕ್ತಿಪೀಠದಲ್ಲಿ ಪದ್ಧತಿಯಂತೆ ರುದ್ರಾಭಿಷೇಕವನ್ನು ನೆರವೇರಿಸಿದರು. 2024 ರ ಇಂಗ್ಲಿಷ್ ಹೊಸ ವರ್ಷಕ್ಕೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು ” ಎಂದು ಯೋಗಿ ಆದಿತ್ಯನಾಥ್ ಎಕ್ಸ್ ನಲ್ಲಿ ಬರೆದಿದ್ದಾರೆ. ಹೋಮ ಮತ್ತು ಆರತಿ ಮಾಡುವ ಮೂಲಕ ಸಮಾರಂಭವನ್ನು ಪೂರ್ಣಗೊಳಿಸಿದರು. ಸಮಾರಂಭದ ನಂತರ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ಶಾಂತಿಯಿಂದ ಕೂಡಿದ ಜೀವನಕ್ಕಾಗಿ ಹಾರೈಸಿದರು. ದೇವಸ್ಥಾನದ ಪ್ರಾಂಗಣದಲ್ಲಿ ಜನತಾ ದರ್ಬಾರ್ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಬಳಿಕ ಯೋಗಿ ಆದಿತ್ಯನಾಥ್ ವಾಪಸಾದರು.