Subscribe to Updates
Get the latest creative news from FooBar about art, design and business.
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
Author: admin
ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನ ಒಲೈಸುವ ಕೆಲಸ ಮಾಡುತ್ತಿದ್ದಾರೆ. ಮತಕ್ಕಾಗಿ ರಾಜಕೀಯ ಮಾಡೋದು ಸಿಎಂ ಸಿದ್ದರಾಮಯ್ಯ ರಕ್ತದ ಕಣದಲ್ಲಿ ಬಂದಿದೆ. ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಅಶೋಕ್, ರಾಮ ಈ ದೇಶದ ಆದರ್ಶ ಪುರುಷ. ರಾಮಮಂದಿರ ಆಗಬೇಕು, ರಾಮರಾಜ್ಯ ಆಗಬೇಕು ಎಂಬುದು ನಮ್ಮ ಗುರಿ. ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ರಾಮನ ಆರಾಧನೆ ಮಾಡುವುದಾದರೇ ರಾಮನ ಪೂಜೆ ಮಾಡಬೇಕಿತ್ತು. ರಾಮನ ಹೆಸರು ಹೇಳಿದರೇ ಕಾಂಗ್ರೆಸ್ ಗೆ ಭಯ ಎಂದು ಕಿಡಿಕಾರಿದರು. ರಾಜ್ಯದಲ್ಲಿ ರೈತರ ಕೊರಳಿಗೆ ಸಿದ್ದರಾಮಯ್ಯ ಸರ್ಕಾರ ಕುಣಿಕೆ ಹಾಕುತ್ತಿದೆ. ಮತಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
31 ವರ್ಷದ ಹಿಂದಿನ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ಬಂದಿದ್ದು, ಈ ಸಂಬಂಧ ಈಗಾಗಲೇ 3ನೇ ಆರೋಪಿ ಶ್ರೀಕಾಂತ್ ಪೂಜಾರಿ ಎಂಬುವವರನ್ನ ಬಂಧಿಸಲಾಗಿದೆ. ಈ ಸಂಬಂಧ ಸರ್ಕಾರ ರಾಮಭಕ್ತರ ಮೇಲೆ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದು ಇದಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಹಳೆಯ ಎಲ್ಲಾ ಕೇಸ್ ಗಳನ್ನ ಕ್ಲಿಯರ್ ಮಾಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 32 ಕೇಸ್ ಗಳೂ ಬಾಕಿ ಇವೆ. ಹುಬ್ಬಳ್ಳಿಯಲ್ಲಿ ಪ್ರಕರಣಕ್ಕೂ ಜೀವ ಬಂದಿದೆ. ಬೇರೆ ಯಾವುದೇ ಉದ್ದೇಶ ಇಟ್ಟುಕೊಂಡಿಲ್ಲ. ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿಲ್ಲ ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇದಕ್ಕೆ ಕೋಮುಬಣ್ಣ ಕಟ್ಟುವುದು ಸೂಕ್ತವಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ಕರಸೇವೆಗೂ ಮುನ್ನ ಅಂದರೆ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿದ್ದು, ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9…
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ನಿರ್ವಹಿಸಿದ್ದ ನ್ಯಾಷನಲ್ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. ತೀರ್ಥಹಳ್ಳಿಯ ಸುಲೈಮಾನ್ ಎಂಬುವರಿಗೆ ಸೇರಿದ ನ್ಯಾಷನಲ್ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ಅವರ ಮನೆ ಮೇಲೂ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸಂಸ್ಥೆಯ ಹಣದ ವಿಚಾರದಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಏರ್ ಪೋರ್ಟ್ ಸೇರಿದಂತೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾವಿರಾರು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮಾಡಿದ್ದಾರೆ. ಅದರಲ್ಲೂ ಹೈವೇ ಮತ್ತು ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನೂ ಈ ಕಂಪನಿಯೇ ನಡೆಸುತ್ತಿದೆ.
ಕಾಂಗ್ರೆಸ್ ಸೇರುವಾಗಲೇ ನನ್ನನ್ನ ಮಂತ್ರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ನನ್ನನ್ನು ಮಂತ್ರಿ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಾತು ಕೊಟ್ಟಿದ್ದಾರೆ. 2 ವರ್ಷದ ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದಿದ್ದಾರೆ. ಅಲ್ಲಿವರೆಗೆ ನಿಗಮ ಮಂಡಳಿಯ ಭರವಸೆ ನೀಡಿದ್ದಾರೆ. ನಾನು ಸಿಎಂ ಮತ್ತು ಡಿಸಿಎಂ ಅಣತಿಯಂತೆ ನಡೆಯುತ್ತೇನೆ ಎಂದರು. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪತನ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಶಿವಲಿಂಗೇಗೌಢ, ರಾಜ್ಯ ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ. ಬಿಜೆಪಿಗರು ಹಿಂದೂಗಳನ್ನ ಗುತ್ತಿಗೆ ತೆಗೆದುಕೊಂಡಿದ್ದಾರೆ. ನಾವೂ ಹಿಂದೂಗಳೇ. ಹಿಂದೂಗಳ ಪರ ಹೋರಾಟ ಮಾಡುತ್ತೇವೆ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಹೇಳಿದರು.
ಚಿತ್ರರಂಗದಲ್ಲಿ ಸ್ಟಾರ್ ವಾರ್ ಹೊಸದೇನು ಅಲ್ಲ. ದಶಕಗಳಿಂದಲೂ ಇದು ಚಾಲ್ತಿಯಲ್ಲಿದೆ. ಆದರೆ, ಕಾಲಕ್ಕೆ ತಕ್ಕಂತೆ ಈ ವಾರ್ ನ ಸ್ವರೂಪ ಬದಲಾಗುತ್ತಿರುತ್ತದೆ ಅಷ್ಟೆ. ಚಿತ್ರನಟರು ಅನೊನ್ಯವಾಗಿಯೇ ಇದ್ದರು, ಈ ನಟರ ಫ್ಯಾನ್ಸ್ ಮಾತ್ರ ಕಿತ್ತಾಡೋದು ಬಿಡಲ್ಲ. ಇದಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ ಎಂಬ ಬೇಧಭಾವವಿಲ್ಲ. ಎಲ್ಲಾ ಭಾಷೆಯ ಚಿತ್ರರಂಗದಲೂ ಈ ಸ್ಟಾರ್ ವಾರ್ ಇದ್ದದ್ದೇ. ಮೊನ್ನೆಯಷ್ಟೆ ತಮಿಳು ನಟ ಕ್ಯಾಪ್ಟನ್ ವಿಜಯಕಾಂತ್ ನಿಧನದ ವೇಳೆ ನಡೆದ ಘಟನೆಯೊಂದು ಈ ಲೇಖನಕ್ಕೆ ಪ್ರೇರಣೆ. ೮೦-೯೦ ರ ದಶಕದ ಸೂಪರ್ ಸ್ಟಾರ್ ವಿಜಯಕಾಂತ್, ಅನಾರೋಗ್ಯದಿಂದ ನಿಧನ ಹೊಂದಿದರು. ಈ ನಟನ ಅಪಾರ ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದದ್ದನ್ನು ಟಿವಿಗಳಲ್ಲಿ ಗಮನಿಸಿದ್ದೇವೆ. ಇದೇ ವೇಳೆ ನಟನ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ನೆರೆದಿದ್ದದ್ದನ್ನು ನೋಡಿದ್ದೇವೆ. ವಿಜಯಕಾಂತ್ ಅವರ ಸಮಕಾಲೀನ ನಟರಾದ ರಜನಿಕಾಂತ್, ಕಮಲ ಹಾಸನ್, ಸತ್ಯರಾಜ್.. ಸೇರಿದಂತೆ ತಮಿಳು ಚಿತ್ರರಂಗದ ದಿಗ್ಗಜರು ಅಂತಿಮ ದರ್ಶನ ಪಡೆದು ವಿದಾಯ ಹೇಳಲು ಆಗಮಿಸುತ್ತಿದ್ದರು. ಇದೇ ವೇಳೆ…
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಬರುತ್ತಿದೆ. ಆದರೆ ನಾನು ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ಈ ಕುರಿತು ಮಾತನಾಡಿದ ಡಿ.ವಿ. ಸದಾನಂದಗೌಡರು, 35 ವರ್ಷಗಳ ಸುದೀರ್ಘ ರಾಜಕೀಯ ನೋಡಿದ್ದೇನೆ. ಹೊಸಬರು ಬರಬೇಕೆಂಬ ಕಾರಣಕ್ಕೆ ದೂರ ಸರಿದಿದ್ದೇನೆ. ಮಾಜಿ ಸಿಎಂ ಬೊಮ್ಮಾಯಿ, ಆರ್. ಅಶೋಕ್, ಅಶ್ವಥ್ ನಾರಾಯಣ್, ಎಸ್.ಟಿ. ಸೋಮಶೇಖರ್ ಭೇಟಿ ಮಾಡಿದ್ದಾರೆ. ನನ್ನ ಇಡೀ ಲೋಕಸಭಾ ಕ್ಷೇತ್ರದಲ್ಲಿ ಒಂದೇ ಒಂದು ಮತದಾರರು ನನ್ನನ್ನು ಬೇಡ ಎಂದಿಲ್ಲ. ವಿರೋಧಿಸಿಲ್ಲ. ನನಗೆ ಖುಷಿ ಇದೆ. ನೋಡೋಣ ಮುಂದೆ ಏನಾಗುತ್ತದೆ ಎಂದು ತಿಳಿಸಿದರು. ರಾಮ ಒಬ್ಬರಿಗೆ ಸೇರಿದವನಲ್ಲ. ನಾವು ಹಿಂದೂಗಳೆ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ವಿ. ಸದಾನಂದಗೌಡರು, , ಪರಮೇಶ್ವರ್ ಅವರಿಗೆ ಈಗ ಒಳ್ಳೆಯ ಬುದ್ಧಿ ಬಂದಿದೆ. ಅವರಿಗೆ ರಾಮ ಒಳ್ಳೆಯದು ಮಾಡಲಿ. ಅವರು ಕೂಡ ಬರಲಿ ಎಂದರು.
ಕೆಲವರು ಡಿ.ಕೆ. ಶಿವಕುಮಾರ್ ರನ್ನ ಭೇಟಿ ಮಾಡಲು ರಾತ್ರಿ ವೇಳೆ ಬರ್ತಾರೆ. ಆದರೆ ನಾನು ಹಗಲಿನಲ್ಲೇ ಬಂದು ಭೇಟಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು. ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, ಹೊಸ ವರ್ಷದ ಶುಭಾಶಯ ಹೇಳಲು ಬಂದಿದ್ದೆ. ಇನ್ನೂ ಕೆಲವರು ಡಿಕೆಶಿ ಭೇಟಿಗೆ ರಾತ್ರಿ ಸಮಯದಲ್ಲಿ ಬರ್ತಾರೆ. ಎಲ್ಲರು ಕಣ್ಣು ತಪ್ಪಿಸಿ ಡಿಕೆಶಿ ಭೇಟಿ ಮಾಡುತ್ತಾರೆ. ಕೆಲವರ ಹಾಗೆ ನಾನು ಕತ್ತಲಲ್ಲಿ ಬಂದು ಹೋಗಲ್ಲ ಎಂದರು. ಡಿಕೆಶಿ ಭೇಟಿಗಾಗಿ ತುಂಬಾ ಜನ ಬರ್ತಾರೆ. ಆದರೆ ಬೇರೆಯವರನ್ನ ಗಮನಿಸದೇ ನಮ್ಮನ್ನ ಗಮನಿಸುತ್ತೀರಾ ಯಾಕೆ ..? ಎಂದು ಮಾಧ್ಯಮದವರಿಗೆ ಎಸ್.ಟಿ. ಸೋಮಶೇಖರ್ ಪ್ರಶ್ನಿಸಿದರು.
ಎಪಿಎಂಸಿ ಮತ್ತು ಜೈಕಿಸಾನ್ ತರಕಾರಿ ಮಾರುಕಟ್ಟೆಯ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಯಿತು. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್(ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಬಿಹಾರದಲ್ಲಿ ದಲಿತ ಮಹಿಳೆಗೆ ಪೊಲೀಸ್ ಅಧಿಕಾರಿಯಿಂದ ಸಾರ್ವಜನಿಕವಾಗಿ ಥಳಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಬಿಹಾರದ ಸೀತಾಮರ್ಹಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ರಾಜ್ ಕಿಶೋರ್ ಸಿಂಗ್ ಎಂಬ ಪೊಲೀಸ್ ಅಧಿಕಾರಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯನ್ನು ಲಾಠಿಯಿಂದ ಥಳಿಸುತ್ತಿರುವುದನ್ನು ಕಾಣಬಹುದು. ಇದು ದೊಡ್ಡ ವಿವಾದವಾಯಿತು. ಇದೇ ವೇಳೆ ರಸ್ತೆಯಲ್ಲಿ ಮಹಿಳೆಯರಿಬ್ಬರ ನಡುವೆ ವಾಗ್ವಾದ, ಗಲಾಟೆ ನಡೆದಿದ್ದು, ಕರೆದುಕೊಂಡು ಹೋಗುವಾಗ ಥಳಿಸಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದರು. ಅಧಿಕಾರಿ ತಪ್ಪಿತಸ್ಥರೆಂದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೀತಾಮರ್ಹಿ ಎಸ್ಪಿ ಮನೋಜ್ ಕುಮಾರ್ ತಿವಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸರ ವಿರುದ್ಧ ಬಿಜೆಪಿ ಟೀಕೆಗೆ ಮುಂದಾಯಿತು. ಬಿಹಾರದಲ್ಲಿ ಕ್ರಿಮಿನಲ್ ಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದರೆ, ಪೊಲೀಸರು ಜನರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಆರೋಪಿಸಿದ್ದಾರೆ.
ಬೊಕ್ಕೆ, ಸಿಹಿತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ತಮ್ಮ ಕಿರಿಯ ಅಧಿಕಾರಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ವಿಶೇಷ ಸೂಚನೆ ನೀಡಿ ಮಾದರಿಯಾಗಿದ್ದಾರೆ. ಹೊಸ ವರ್ಷ ಮತ್ತು ಕೆಲ ವಿಶೇಷ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಕಿರಿಯ ಅಧಿಕಾರಿಗಳು ಹೂ ಗುಚ್ಚ, ಸಿಹಿ ತಿನಿಸು ನೀಡಿ ಶುಭಾಶಯ ಕೋರೋದು ವಾಡಿಕೆ. ಆದರೆ ಈ ಬಾರಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಲು ಬರುವ ಕಿರಿಯ ಅಧಿಕಾರಿಗಳು ಬೊಕ್ಕೆ, ಸಿಹಿ ತಿನಿಸು ತರದೆ ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ಬಿ. ದಯಾನಂದ್ ತಿಳಿಸಿದ್ದಾರೆ. ಹಾಗೆಯೇ ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಆ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ. ಫೋಟೋ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೂ ಮಾದರಿಯಾಗುತ್ತೀರಾ ಎಂದು ಬಿ. ದಯಾನಂದ್ ಸಲಹೆ ನೀಡಿದ್ದಾರೆ.