Subscribe to Updates
Get the latest creative news from FooBar about art, design and business.
- ಪ್ರಥಮ ಬಿ.ಸಿ.ಎ. ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
- ಕುಣಿಗಲ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ತುಮಕೂರು: ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಸಿನಿಮಾ ಮುಹೂರ್ತ ಸಮಾರಂಭ
- ತುಮಕೂರು: ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ
- ಭೀಕರ ಅಪಘಾತ: ಶನಿಮಹಾತ್ಮ ದೇವಾಲಯ ವ್ಯವಸ್ಥಾಪಕ ಜಗನ್ನಾಥ್ ನಿಧನ
- ನೈರ್ಮಲ್ಯ ಕಾಪಾಡಿ, ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ: ಮಹಿಳೆಯರಿಗೆ ಕಾವೇರಿ ಎನ್. ಕರೆ
- ಪೌತಿ ಖಾತೆ, ಕಂದಾಯ ಗ್ರಾಮ ಹಕ್ಕುಪತ್ರ, ಪೋಡಿ ಮುಕ್ತ ಅಭಿಯಾನ: ರೈತರ ಅಲೆದಾಟ ತಪ್ಪಿಸಲು ಸರ್ಕಾರದ ಮಹತ್ವದ ಕ್ರಮ
- ತುಮಕೂರನ್ನು ಬೆಂಗಳೂರಿನ ಭಾಗವಾಗಿಸಿ: ಸಾಧನಾ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಪ್ರಸ್ತಾಪ
Author: admin
ಧಾರವಾಡ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿಸೆಂಬರ್ 16 ರಂದು ಸಂಜೆ ಧಾರವಾಡಕ್ಕೆ ಆಗಮಿಸಲಿದ್ದು, ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ತಿಳಿಸಿದರು. ಧಾರವಾಡದ ನೂತನ ಅತಿಥಿ ಗೃಹದಲ್ಲಿ ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಸಚಿವರು, ದಿನಾಂಕ: 16 ರಂದು ಸಂಜೆ ಕೆಸಿಡಿ ಮೈದಾನದಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಳ್ಳಲಿರುವ ಬೃಹತ್ ಕಾರ್ಯಕ್ರಮದಲ್ಲಿ ಸಿಎಸ್ ಆರ್ ಅನುದಾನದಲ್ಲಿ ಅಂಗವಿಕಲರಿಗೆ 500 ಕ್ಕೂ ಹೆಚ್ಚು ತ್ರಿಚಕ್ರ ವಾಹನ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡುವರು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಹ ಜರುಗಲಿವೆಯೆಂದು ಸಚಿವರು ತಿಳಿಸಿದರು. ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದರು. ಮುಖ್ಯ ವೇದಿಕೆ, ಆಸನದ ವ್ಯವಸ್ಥೆ, ಅತಿಥಿಗಳ ಕಾರ್ಯಕ್ರಮ, ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಕುರಿತಂತೆ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಇನ್ನೊಮ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದೆಂದರು.
SC-ST ಸಮುದಾಯಕ್ಕೆ ಮೀಸಲಿದ್ದ SCSP-TSP ಹಣವನ್ನು ಗ್ಯಾರಂಟಿ ಯೋಜನಗೆ ಬಳಸಿಕೊಂಡ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ದೊಡ್ಡ ಗಲಾಟೆ ನಡೆದಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನಾರಾಯಣಸ್ವಾಮಿ ಪ್ರಶ್ನೆ ಕೇಳಿದ್ರು. ಸರ್ಕಾರ ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ ಮಾಡಿದೆ. ನಮ್ಮ ಹಣ ಬಳಕೆ ಮಾಡಿದ್ದು ತಪ್ಪು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 7D ತೆಗೆಯೋದಾಗಿ ಹೇಳಿದ್ರು. ಆದರೆ 7D ರದ್ದು ಮಾಡಿಲ್ಲ. 11,500 ಕೋಟಿ ರೂ. SCSP-TSP ಹಣವನ್ನು ಗ್ಯಾರಂಟಿಗೆ ಕೊಡಲಾಗಿದೆ. ದಲಿತರ ಹಣ ಯಾಕೆ ಎಲ್ಲರಿಗೂ ಕೊಡ್ತಿದ್ದೀರಾ? ಶಕ್ತಿ ಯೋಜನೆಯಲ್ಲಿ ಹೇಗೆ ದಲಿತರಿಗೆ ಹಣ ಬಿಡುಗಡೆ ಆಗುತ್ತೆ? ಜಾತಿ ನೋಡಿ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಕೊಡ್ತೀರಾ. SCSP-TSP ಹಣ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಬಾರದು ಅಂತ ಆಗ್ರಹಿಸಿದರು. ಇದಕ್ಕೆ ಸಚಿವ ಮಹದೇವಪ್ಪ ಉತ್ತರ ನೀಡಿ, 2013-14 ರಲ್ಲಿ SCSP-TSP ಹಣ ಬಳಕೆ ಮಾಡಿಕೊಳ್ಳಬಾರದು ಅನ್ನೋ ನಿಯಮ…
ರಾಜ್ಯ ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸರಿನಲ್ಲಿ ಕಮಿಷನ್ ಹಗರಣ ನಡೀತಿದೆ. ಕಮಿಷನ್ ಪಡೆದು ಆಂಧ್ರದ ಗುತ್ತಿಗರದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ಮತ್ತೆ ಕಮಿಷನ್ ಬಾಂಬ್ ಸಿಡಿಸಿದ್ದಾರೆ. ವಿಧಾನಸಭೆ ಕಲಾಪ ಶೂನ್ಯ ವೇಳೆಯಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಟೆಂಡರ್/ಕಾಮಗಾರಿ ಬಾಕಿ ಬಿಲ್ ಗಳಿಗೆ ಆಗ್ರಹಿಸಿದ್ದು, ಈ ವೇಳೆ ಕಮಿಷನ್ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಣ್ಣ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸರ್ಕಾರ ಕಾಮಗಾರಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಿಲ್ಲ, ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಅನ್ಯ ರಾಜ್ಯಗಳ ಗುತ್ತಿಗೆದಾರರಿಗೆ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. ಈ ಮೂಲಕ ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸರಿನಲ್ಲಿ ಕಮಿಷನ್ ಹಗರಣ ನಡೀತಿದೆ. ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗಿದೆ. ಕಮಿಷನ್ ಪಡೆದು ಆಂಧ್ರದ ಗುತ್ತಿಗರದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಹಗರಣ ನಡೆದಿದೆ, ಸರ್ಕಾರ ಇದಕ್ಕೆ ಸ್ಪಷ್ಟನೆ ಕೊಡಬೇಕು…
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರಿಗೆ, ಜೆಡಿಎಸ್‌ನ ಉಚ್ಚಾಟಿತ ಅಧ್ಯಕ್ಷ ಸಿ. ಎಂ. ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಅವರು, ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಜೆಡಿಎಸ್‌ನ ನಾಯಕರು ಮಾಡಿರುವ ಬಿಜೆಪಿ ಜೊತೆಗಿನ ಮೈತ್ರಿ ಸರಿಯಲ್ಲ. ಇದನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದೇನೆ. ಈಗಲೂ ನಾನು ದೇವೇಗೌಡರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಿರ್ಧಾರ ಹಿಂದೆ ಸರಿಯಿರಿ. ಇದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪುತ್ರನ ನಿರ್ಧಾರಗಳಿಂದ ದೇವೇಗೌಡ ಅವರು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು ಜಾತ್ಯತೀತ ಸಿದ್ಧಾಂತದಲ್ಲೇ ಗೆದ್ದು ಬಂದಿರುವುದು. ಈಗಾಗಲೇ ಜೆಡಿಎಸ್‌ನ ಐವರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದು ದೇವೇಗೌಡ, ಕುಮಾರಸ್ವಾಮಿ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಸಮಾಧಾನದಿಂದ ಅವರಿಗೆ ಸಂದೇಶ ಮುಟ್ಟಿಸುತ್ತಿದ್ದೇನೆ ಎಂದರು. ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸಿ. ಎಂ. ಇಬ್ರಾಹಿಂ, ಪಕ್ಷದ ವರಿಷ್ಠ ಹೆಚ್.…
ಹೊಸ ವರ್ಷಕ್ಕೆ ಈ ಬಾರಿ ಯಾವುದೇ ಕಂಡೀಷನ್ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಹೊಸ ವರ್ಷಕ್ಕೆ ಯಾವದೇ ಕಂಡೀಷನ್ ಇಲ್ಲ. ಕಳೆದ ಬಾರಿಯೂ ಯಾವದೇ ಕಂಡೀಷನ್ ಇರಲಿಲ್ಲ. 2022 ರಲ್ಲಿ ಕೋವಿಡ್ ಕಾರಣದಿಂದ ನಿರ್ಬಂಧ ಹಾಕಲಾಗಿತ್ತು. ಈ ಬಾರಿಯೂ ಎಲ್ಲಾ ನಿರ್ಬಂಧಗಳು ಸಡಿಲಿಕೆ ಮಾಡುತ್ತೇವೆ. ಸುರಕ್ಷತೆ ಬಗ್ಗೆ ಪೊಲೀಸ್ ಅಧಿಕಾರಿಗಳು ಗಮನ ಹರಿಸುತ್ತಾರೆ ಎಂದು ಹೇಳಿದ್ದಾರೆ.
ರಾಮಮಂದಿರ ತೀರ್ಥ ಕ್ಷೇತ್ರದ ಅಧಿಕೃತ ಜಾಹೀರಾತಿಗೆ ಪ್ರತಿಕ್ರಿಯೆಯಾಗಿ, ಸುಮಾರು 3,000 ಅರ್ಜಿದಾರರು ಅಯೋಧ್ಯೆಯ ರಾಮ ಮಂದಿರದ ಅರ್ಚಕರ ಹುದ್ದೆಗೆ ಉತ್ಸುಕತೆಯಿಂದ ಅರ್ಜಿ ಸಲ್ಲಿಸಿದ್ದಾರೆ. 3,000 ಹುದ್ದೆಗಳ ಪೈಕಿ ಅರ್ಹತೆಯ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಜ್ಞಾನ ಮತ್ತು ಧಾರ್ಮಿಕ ಆಚರಣೆಗಳ ತಿಳುವಳಿಕೆಯ ಮೇಲೆ ಒಳಗೊಂಡಿರುವ ಕಾರ್ಯವಿಧಾನಗಳ ವಿವರಣೆಗಳು ಮತ್ತು ಈ ಪೂಜೆಗೆ ಸಂಬಂಧಿಸಿದ ನಿರ್ದಿಷ್ಟ ‘ಮಂತ್ರಗಳು’. ಇದಲ್ಲದೆ, ಅಭ್ಯರ್ಥಿಗಳು ಭಗವಾನ್ ರಾಮನ ಆರಾಧನೆಯಲ್ಲಿ ಬಳಸುವ ‘ಮಂತ್ರಗಳಲ್ಲಿ’ ತಮ್ಮ ಪ್ರಾವೀಣ್ಯತೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ‘ಕರ್ಮ ಕಾಂಡ’ – ಭಗವಾನ್ ರಾಮನ ಆರಾಧನೆಗೆ ಸಂಬಂಧಿಸಿದ ನಿಗದಿತ ಆಚರಣೆಗಳು ಮತ್ತು ಸಮಾರಂಭಗಳು. ಈ ಕಠಿಣ ಪ್ರಶ್ನೆಯು ಆಯ್ದ ಪುರೋಹಿತರು ಧಾರ್ಮಿಕ ಆಚರಣೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವುದು ಮಾತ್ರವಲ್ಲದೆ, ಅದಕ್ಕೆ ಸಂಬಂಧಿಸಿದ ಪವಿತ್ರ ಕರ್ತವ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು. ರಾಮ ಮಂದಿರ ಸಂದರ್ಶನ ಪ್ರಕ್ರಿಯೆಯು ತೆರೆದುಕೊಳ್ಳುತ್ತಿದ್ದಂತೆ, ಗೌರವಾನ್ವಿತ ಧಾರ್ಮಿಕ ಸಂಸ್ಥೆಯೊಳಗಿನ ಈ ಸ್ಥಾನಗಳ ಪ್ರಾಮುಖ್ಯತೆಯ ಮೇಲೆ ಸ್ಪಾಟ್ಲೈಟ್ ಉಳಿದಿದೆ.
ಬೆಂಗಳೂರು: ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಇಂಟರ್ ಪೋಲ್ ಪೊಲೀಸರು ದುಬೈನಲ್ಲಿ ಬಂಧಿಸಿದ್ದಾರೆ. ಮಿಧುನ್ ಚಂದ್ರನ್ ಜೊತೆ ಸಂಬಂಧ ಹೊಂದಿದ್ದ 33 ವರ್ಷದ ಮಹಿಳೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡ ಎಂದು ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಎಫ್ ಐಆರ್ ಪ್ರಕಾರ, ಚಂದ್ರನ್ ತನ್ನ ತಾಯಿ ಗೀತಾಗೆ ಪರಿಚಯಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಅವರು ಆರಂಭದಲ್ಲಿ ಮದುವೆಗೆ ಒಪ್ಪಿದ್ದರು. ಸಂತ್ರಸ್ತೆ 2016ರಲ್ಲಿ ಅದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತೆಯ ಜತೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಚಂದ್ರನಿಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಸಂತ್ರಸ್ತೆ ಮತ್ತು ಆತನ ತಾಯಿ ಆಮಿಷ ಒಡ್ಡಿದ್ದರು. ಎಫ್ ಐಆರ್ ನ ಪ್ರಕಾರ ಚಂದ್ರನ್ ಮತ್ತು ಅವರ ತಾಯಿ ಗೀತಾ ಸಂತ್ರಸ್ತೆಯನ್ನು ಮದುವೆಯಾಗುವಂತೆ ಕೇಳಿದಾಗ ನಿಂದನೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯು ಫೆಬ್ರವರಿ 2020 ರಲ್ಲಿ ಚಂದ್ರನ್ ಮತ್ತು ಆತನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಶಂಕಿತರ ವಿರುದ್ಧ…
ಬೆಂಗಳೂರು: ಹಳೇ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ಮೊಬೈಲ್ ಟವರ್ ಒಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಗ್ಗೆರೆಯಲ್ಲಿ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಜೆಸಿಬಿಯಲ್ಲಿ ಸೈಟ್ ಕ್ಲೀನ್ ಮಾಡಲಾಗುತ್ತಿತ್ತು. ಈ ವೇಳೆ ಜೆಸಿಬಿ ಮುಂಭಾಗ ಟವರ್ ಗೆ ತಗುಲಿದ್ದ ಮನೆ ಸಮೇತ ಕುಸಿದು ಬಿದ್ದಿದೆ. ಟವರ್ ಬೀಳುವ ಮುನ್ಸೂಚನೆ ಸಿಗುತ್ತಿದ್ದಂತೆ ಮನೆಯೊಳಗಿದ್ದ ಎಲ್ಲರನ್ನೂ ಹೊರಗೆ ಕರೆತರಲಾಗಿತ್ತು. ಹೀಗಾಗಿ ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಬೈಲ್ ಟವರ್ ಬಿದ್ದು ಪಕ್ಕದಲ್ಲಿದ್ದ 2 ಅಂಗಡಿಗಳಿಗೆ ಹಾನಿಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಿವೇಶನದ ಮಾಲೀಕ ಹರೀಶ್ ಎಂಬವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಆರೋಪದಡಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬ್ಲೂಮ್‌ಬರ್ಗ್ ಫಿಲಾಂತ್ರಪಿಸ್ ಇನೀಶಿಯೇಟಿವ್ ಹಾಗೂ ಡಬ್ಲ್ಯುಆರ್ ಐ ಇಂಡಿಯಾ ಸಹಭಾಗಿತ್ವದಲ್ಲಿ 2 ದಿನಗಳ ಕಾಲ ಬಿಬಿಎಂಪಿ ಕೇಂದ್ರ ಕಚೇರಿ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ನಡೆದ ನಮ್ಮ ರಸ್ತೆ ಪ್ರದರ್ಶನ ಕಾರ್ಯಾಗಾರ ನಡೆಯುತ್ತಿದೆ. ಈ ಕಾರ್ಯಾಗಾರಕ್ಕೆ ತುಷಾರ್ ಗಿರಿನಾಥ್ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ರಸ್ತೆ ಪ್ರದರ್ಶನ ಹಾಗೂ ಕಾರ್ಯಾಗಾರವನ್ನು ಒಳ್ಳೆಯ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಉಪಯೋಗಿಸುವ ರಸ್ತೆ, ಪಾದಚಾರಿ ಮಾರ್ಗಗಳನ್ನು ನಾಗರಿಕರ ಸುರಕ್ಷತೆಯ ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಬಂದಂತಹ ಉತ್ತಮ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.
ಬೆಂಗಳೂರು: ಹಿರಿಯ ನಟಿ ಲೀಲಾವತಿಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಸೋಲದೇವನಹಳ್ಳಿಯ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೆ. ತಾಯಿ-ಮಗನ ಬಾಂಧವ್ಯ ಅನ್ಯೋನ್ಯವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಲೀಲಾವತಿಯವರ ಅಂತ್ಯಸಂಸ್ಕಾರಕ್ಕೆ ಮುನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇವತ್ತು ಲೀಲಾವತಿಯವರಿಗೆ ಸರ್ಕಾರದ ಎಲ್ಲಾ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲು ನಾನು ಆದೇಶ ನೀಡಿದ್ದೇನೆ. ಅವರು ಕರ್ನಾಟಕ ಚಲನಚಿತ್ರ ಕಂಡ ಅಪರೂಪದ ನೈಜ ನಟನೆಯ ಕಲಾವಿದೆ. ರಂಗಭೂಮಿಯಿಂದ ಸಿನಿಮಾರಂಗಕ್ಕೆ ಬಂದು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಅವರು ಬಹುಭಾಷೆ ಕಲಾವಿದೆ. ಯಾವುದೇ ಪಾತ್ರವಿರಲಿ ಅದಕ್ಕೆ ಜೀವ ತುಂಬುತ್ತಿದ್ದರು.ನಾನು ಕಾಲೇಜು ವಿದ್ಯಾರ್ಥಿ ದೆಸೆಯಿಂದ ಅವರ ಚಲನಚಿತ್ರಗಳನ್ನು ನೋಡುತ್ತಿದ್ದೆ. ಅಂದು ನಮ್ಮ ಕಾಲದಲ್ಲಿ ರಾಜ್ ಕುಮಾರ್-ಲೀಲಾವತಿ ಎಂದರೆ ಬಹಳ ಜನಪ್ರಿಯ ಜೋಡಿ. ಅವರಿಬ್ಬರೂ ಅಭಿನಯಿಸಿದ್ದ ಎಲ್ಲಾ ಚಿತ್ರಗಳನ್ನು ನಾನು…