Subscribe to Updates
Get the latest creative news from FooBar about art, design and business.
- ಪ್ರಥಮ ಬಿ.ಸಿ.ಎ. ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
- ಕುಣಿಗಲ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ತುಮಕೂರು: ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಸಿನಿಮಾ ಮುಹೂರ್ತ ಸಮಾರಂಭ
- ತುಮಕೂರು: ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ
- ಭೀಕರ ಅಪಘಾತ: ಶನಿಮಹಾತ್ಮ ದೇವಾಲಯ ವ್ಯವಸ್ಥಾಪಕ ಜಗನ್ನಾಥ್ ನಿಧನ
- ನೈರ್ಮಲ್ಯ ಕಾಪಾಡಿ, ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ: ಮಹಿಳೆಯರಿಗೆ ಕಾವೇರಿ ಎನ್. ಕರೆ
- ಪೌತಿ ಖಾತೆ, ಕಂದಾಯ ಗ್ರಾಮ ಹಕ್ಕುಪತ್ರ, ಪೋಡಿ ಮುಕ್ತ ಅಭಿಯಾನ: ರೈತರ ಅಲೆದಾಟ ತಪ್ಪಿಸಲು ಸರ್ಕಾರದ ಮಹತ್ವದ ಕ್ರಮ
- ತುಮಕೂರನ್ನು ಬೆಂಗಳೂರಿನ ಭಾಗವಾಗಿಸಿ: ಸಾಧನಾ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಪ್ರಸ್ತಾಪ
Author: admin
ಬಿಜೆಪಿ ಜೊತೆ ಮೈತ್ರಿ ವಿಚಾರದ ಬಗ್ಗೆ ಸಿಎಂ ಇಬ್ರಾಹಿಂ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನನ್ನ ನಿರ್ಧಾರ ಅಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಏಕ ಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈ ಕಾರಣದಿಂದ ದೇವೇಗೌಡರನ್ನು ಉಚ್ಚಾಟನೆ ಮಾಡುವ ನಿರ್ಧಾರ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಇಬ್ರಾಹಿಂ ಪರೋಕ್ಷವಾಗಿ ಸುಳಿವು ನೀಡಿದರು. ಡಿ 11ರಂದು ಜನತಾ ದಳದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದೆ. 5 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಜನವರಿ ನಂತರ ಕ್ಲಿಯರ್ ಪಿಚ್ಚರ್ ಸಿಗಲಿದೆ. ಜೆಡಿಎಸ್ ಬಿಡುವ ಶಾಸಕರ ಸಂಖ್ಯೆ 12 ದಾಟಲಿದೆ. ನಾವು ಆತುರ ಮಾಡಲ್ಲ, ದೇವೇಗೌಡರ- ಕುಮಾರಸ್ವಾಮಿಯವರ ಆರೋಗ್ಯ ಮುಖ್ಯ ಅಂತ ಇಬ್ರಾಹಿಂ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಮೇಲೆ ಸಿಟ್ಟಿಲ್ಲ. ಕಾಂಗ್ರೆಸ್ ನಾಯಕರು ಸಂಪರ್ಕದಲ್ಲೂ ಇಲ್ಲ.
ಬಲವಾದ ಮೂಳೆಗಳಿಗೆ ಈ 5 ಆರೋಗ್ಯಕರ ಜ್ಯೂಸ್ ಇಲ್ಲಿದೆ! ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ನಂತಹ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಪೌಷ್ಟಿಕ ಜ್ಯೂಸ್ ಅನ್ನು ಕುಡಿಯುವುದರಿಂದ ನಿಮ್ಮ ಮೂಳೆಗಳು ಬಲಗೊಳ್ಳುತ್ತವೆ. ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಪ್ರಮುಖ ವಿಟಮಿನ್ ಎಂದು ತಜ್ಞರು ಹೇಳುತ್ತಾರೆ. ಹಾಲು, ಗ್ರೀನ್ ಸ್ಕೂಥಿ, ಬೊಕೊಲಿ ಜ್ಯೂಸ್, ಕಿತ್ತಳೆ ಜ್ಯೂಸ್ ಮತ್ತು ಗ್ರೀನ್ ಟೀಯನ್ನು ನಿಯಮಿತವಾಗಿ ಸೇವಿಸಿದರೆ ಮೂಳೆಗಳು ದೃಢವಾಗಿ ಮತ್ತು ಆರೋಗ್ಯಕರವಾಗಿರುತ್ತವೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ. ನೆನೆಸಿದ ನೆಲಗಡಲೆ ಕಾಯಿಯನ್ನು ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ಇಲ್ಲಿದೆ ಮಾಹಿತಿ: ನೆಲಗಡಲೆ ಅನೇಕ ಪ್ರಯೋಜನಗಳನ್ನು ಹೊಂದಿದ್ದು ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ನೆನೆಸಿದ ಕಡಲೆ ತುಂಬಾ ಒಳ್ಳೆಯದಾಗಿದ್ದು, ಇದರಲ್ಲಿನ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ದೇಹದಲ್ಲಿನ ಕೆಟ್ಟ ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ದೀರ್ಘಾವಧಿಯಲ್ಲಿ ಹೃದಯಾಘಾತದ ಅಪಾಯವನ್ನು ತಡೆಯುವುದರ ಜತೆಗೆ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು…
ಬೆಂಗಳೂರು: ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಹೋಮ್ ವರ್ಕ್ ಮಾಡಿಲ್ಲ ಎಂದು ವಿದ್ಯಾರ್ಥಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ. ವಿದ್ಯಾರ್ಥಿ ಅಸೈನ್ಮಂಟ್ ಕಂಪ್ಲೇಟ್ ಮಾಡಿಲ್ಲ ಎಂದು ಏಳನೇ ತರಗತಿ ವಿದ್ಯಾರ್ಥಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಕೈಗೆ ರಾಡ್ ನಲ್ಲಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು, ವಿದ್ಯಾರ್ಥಿ ಕೈಗೆ ಆರು ಹೊಲಿಗೆ ಹಾಕಲಾಗಿದೆ. ಹುಳಿಮಾವು ಸಾಯಿ ರಾಮ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಫರ್ದೀನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ನಡೆದು ಮೂರು ದಿನಗಳಾದರೂ ಶಾಲೆ ಶಿಕ್ಷಕಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗೂ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಅತಿಥಿ ಶಿಕ್ಷಕನೋರ್ವ ಪೋಲೀಸರ ಅತಿಥಿಯಾಗಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ. ಕಳೆದ 4ನೇ ತಾರೀಖಿನಂದು ವಿದ್ಯುಚ್ಛಕ್ತಿ ಬಿಲ್ ವಸೂಲಿಗೆ ಸಿಬ್ಬಂದಿ ತೆರಳಿದ್ದ ವೇಳೆ ಶಾಲಾ ಕೊಠಡಿಯಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನ್ನು ಕಂಡು ಈ ವಿಚಾರವನ್ನು ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದ್ದಾರೆ. ಅತಿಥಿ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಿಹಾರ: ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ. ಇತ್ತೀಚೆಗೆ, ಬಲ್ಗೇರಿಯಾದಲ್ಲಿ ವಧು ಮಾರುಕಟ್ಟೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗಿತ್ತು. ವಧುಗಳನ್ನು ಖರೀದಿಸಲು ಜನರು ಈ ಮಾರುಕಟ್ಟೆಗೆ ಬರುತ್ತಾರೆ ಎನ್ನಲಾಗುತಿತ್ತು. ಆದರೆ ವರರನ್ನು ಮಾರಾಟ ಮಾಡುವ ಮಾರುಕಟ್ಟೆಯೂ ಇದೆ. ಬಿಹಾರದ ಮಧುಬನಿಯಲ್ಲಿ ಪ್ರತಿ ವರ್ಷ ವರ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ. ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಯುವಕರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ. ಇಲ್ಲಿ ಹುಡುಗರ ವಿದ್ಯಾರ್ಹತೆಗೆ ಅನುಗುಣವಾಗಿ ಅವರ ವಯಸ್ಸು 35 ವರ್ಷಕ್ಕಿಂತ ಹೆಚ್ಚಿದ್ದರೆ ಅವರ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ ಆರಂಭವಾಗುತ್ತದೆ. ವರನನ್ನು ಕುಟುಂಬದ ಪರಂಪರೆಯ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಅತ್ಯಂತ ಪ್ರಮುಖ ವಿಷಯವೆಂದರೆ ಈ ಮಾರುಕಟ್ಟೆ ಇರುವುದು ನಮ್ಮದೇ ದೇಶದಲ್ಲಿ. ಈ ಮಾರುಕಟ್ಟೆಯಲ್ಲಿ ವರನ ಅರ್ಹತೆಯ ಆಧಾರದ ಮೇಲೆ ವರರನ್ನು ಮಾರಾಟ ಮಾಡಲಾಗುತ್ತದೆ. ವರದಕ್ಷಿಣೆ ಪದ್ಧತಿಯನ್ನು…
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ, ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಯಾವ ‘ಜೀ” ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ಧ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ ಎಂದು ಲೇವಡಿ ಮಾಡಿದರು.
ಬೆಂಗಳೂರು: ಆಸ್ತಿ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಮಂಜುನಾಥ್ ಅಲಿಯಾಸ್ ದಾಸನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ದಾಸ, ಇನ್ ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ವಿಡಿಯೊ ಮಾಡುತ್ತಿದ್ದ. ಈತನ ವಿಡಿಯೊವನ್ನು ಹಲವರು ಲೈಕ್ ಮಾಡುತ್ತಿದ್ದರು. ಅಲ್ಲಾಳಸಂದ್ರದ ನಿವಾಸಿಯಾಗಿರುವ 45 ವರ್ಷದ ಮಹಿಳೆ ನೀಡಿರುವ ದೂರು ಆಧರಿಸಿ ದಾಸನನ್ನು ಸೆರೆ ಹಿಡಿಯಲಾಗಿದೆ. ಜಾಗದ ವಿಚಾರಕ್ಕೆ ದಲಿತ ಕುಟುಂಬಕ್ಕೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ದಾಸ ನನ್ನಹ ಅರೆಸ್ಟ್ ಮಾಡಲಾಗಿದೆ. ಜಾಗದ ವಿಚಾರಕ್ಕೆ ರಾಮಮೂರ್ತಿ ಎಂಬಾತ ರೌಡಿ ಆಕ್ಟಿವಿಟಿಯಲ್ಲಿರೋ ದಾಸನ ಸಹಾಯ ಪಡೆದಿದ್ದ. ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲು ದಾಸನ ಹುಡುಗರನ್ನ ಕರೆಸಿಕೊಂಡಿದ್ದ. ಸದ್ಯ ದಾಸ ಎಂಬಾತನನ್ನು ಅರೆಸ್ಟ್ ಮಾಡಿದ್ದೇವೆ. ಆತನ ವಿರುದ್ಧ ರೌಡಿಶೀಟರ್ ಹಾಕುವ ಪ್ರಕ್ರಿಯೆ ನಡೀತಿದೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.
ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಗ್ರಾಮೀಣ ಮತ್ತು ಸಣ್ಣ ಉದ್ಯೋಗ ಇಲಾಖೆ ಕೃಷಿ ಇಲಾಖೆ ಜಿಲ್ಲಾ ತೋಟಗಾರಿಕಾ ಸಂಘ ಮತ್ತು ಜಿಲ್ಲಾ ಕೃಷಿಕ ಸಮಾಜ ವತಿಯಿಂದ 2023/ 24 ನೇ ಸಾಲಿನ ಜಿಲ್ಲಾ ಮಟ್ಟದ 64ನೇ ಫಲ ಪುಷ್ಪ ಪ್ರದರ್ಶನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಿದರು. ಪ್ರದರ್ಶನ ಡಿಸೆಂಬರ್ 10ರವರೆಗೆ ಫಲ ಪುಷ್ಪ ಪ್ರದರ್ಶನ ಹಾಗೂ ಮಾರಾಟಗೊಳ್ಳಲಿದೆ. ವಿವಿಧ ಆಕರ್ಷಿಕ ವಸ್ತು ಪ್ರದರ್ಶನ ವಿವಿಧ ಅಲಂಕೃತಕ್ಕೆ ಸಸ್ಯಗಳು ಹಾಗೂ ಪುಷ್ಪಗಳು ಪ್ರದರ್ಶನಕ್ಕೆ ಇಡಲಾಗಿದೆ. ಅದರಂತೆ ವಿವಿಧ ಬಗೆಯ ಪುಷ್ಪಾಲಂಕರ ದಿಂದ ತಯಾರಿಸಲ್ಪಟ್ಟಿರುವ ಬೆಳಗಾವಿ ಸುಪ್ರಸಿದ್ಧ ಕಮಲ ಬಸತಿ, ಗುಡಿಸಿಲಿನ ಆಕೃತಿ ,ಹೂಗಳಿಂದ ಸುಂದರವಾದ ಕರ್ನಾಟಕ ನಕ್ಷೆ ಮತ್ತು ಶಾವಿಗೆ ಮತ್ತು ವಿವಿಧ ಪದಾರ್ಥಗಳಿಂದ ತಯಾರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮಿಗಳ ವಿಗ್ರಹ ಮತ್ತು ವೀರಾಣಿ ಕಿತ್ತೂರು ಚೆನ್ನಮ್ಮ ಕಲಾಕೃತಿಗಳು ಜನರನ್ನು ಆಕರ್ಷಣೆ ಮಾಡುತ್ತಾ ಇದೆ. ತೋಟಗಾರಿಕೆ ಇಲಾಖೆ ವಿವಿಧ…
ಧಾರವಾಡ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಕಾರ್ಯಕ್ರಮ ನಿಮಿತ್ಯ ಧಾರವಾಡ ಜಿಲ್ಲಾಡಳಿತ ಆವರಣದಲ್ಲಿ ಸ್ಥಾಪಿಸಿರುವ ಮತದಾನ ಪ್ರಾತ್ಯಕ್ಷಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಉದ್ಘಾಟಿಸಿದರು. ಮತದಾರರಿಗೆ ವಿದ್ಯುನ್ಮಾನ ಮತ ಯಂತ್ರಗಳ ಹಾಗೂ ಮತದಾನ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಪಾಲಿಕೆ ಆವರಣದಲ್ಲಿ ಮತದಾನ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು. ಇವಿಎಮ್ ಗಳು ಸತ್ಯದ ಕನ್ನಡಿ ಇದ್ದ ಹಾಗೆ. ಯಾವುದೇ ರೀತಿಯಲ್ಲಿ ತಿರುಚಲು ಸಾಧ್ಯವಿಲ್ಲ. ಮತದಾರರು ತಾವು ಹಾಕಿದ ಮತವನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆಯೆಂದರು. ಜಿಲ್ಲೆಯ 1652 ಮತದಾನ ಕೇಂದ್ರಗಳಲ್ಲಿ 142 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ, ಅವರಿಂದ ಇವಿಎಂ ಪ್ರಾತ್ಯಕ್ಷಿಕೆ ಮಾಡಲಾಗುತ್ತದೆ. ಬಹಳಷ್ಟು ಜನರು ಸೇರುವ ಸ್ಥಳಗಳಲ್ಲಿ ಮೊಬೈಲ್ ವಾಹನ ಮುಖಾಂತರವು ಸಹ ಪ್ರಾತ್ಯಕ್ಷಿಕೆ ಹಾಗೂ ಅರಿವು ಮೂಡಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹಾಗೂ ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ವರ್ಷದ ಅಂತ್ಯದ ವೇಳೆಗೆ ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ ಸಿದ್ಧವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. “ಅಯೋಧ್ಯೆ ವಿಮಾನ ನಿಲ್ದಾಣವು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ನಾನು ಅದನ್ನು ಪ್ರತಿದಿನವೂ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಅದು ಸಿದ್ಧವಾದ ನಂತರ ಪ್ರಧಾನಿ ಮೋದಿ ಅದನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ವಿಮಾನ ಕಾರ್ಯಾಚರಣೆಗಳು ಸಹ ಪ್ರಾರಂಭವಾಗುತ್ತವೆ” ಎಂದು ಸಿಂಧಿಯಾ ಹೇಳಿದರು. ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಸಭೆಯ ಅಧ್ಯಕ್ಷತೆ ವಹಿಸಿ ಅಯೋಧ್ಯೆಯ ‘ಮರ್ಯಾದಾ ಪುರುಷೋತ್ತಮ ಶ್ರೀ ರಾಮ್’ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲಸದ ಬಗ್ಗೆ ನವೀಕರಣಗಳನ್ನು ಕೋರಿದ ಒಂದೆರಡು ದಿನಗಳ ನಂತರ ಸಿಂಧಿಯಾ ಅವರ ಹೇಳಿಕೆ ಬಂದಿದೆ. ಕಳೆದ ಶನಿವಾರ, ಸಿಂಧಿಯಾ ಅವರು ಕೇಂದ್ರ ಸಚಿವ ವಿಕೆ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವಿಮಾನ ನಿಲ್ದಾಣದ…