Subscribe to Updates
Get the latest creative news from FooBar about art, design and business.
- ಪ್ರಥಮ ಬಿ.ಸಿ.ಎ. ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
- ಕುಣಿಗಲ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ತುಮಕೂರು: ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಸಿನಿಮಾ ಮುಹೂರ್ತ ಸಮಾರಂಭ
- ತುಮಕೂರು: ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ
- ಭೀಕರ ಅಪಘಾತ: ಶನಿಮಹಾತ್ಮ ದೇವಾಲಯ ವ್ಯವಸ್ಥಾಪಕ ಜಗನ್ನಾಥ್ ನಿಧನ
- ನೈರ್ಮಲ್ಯ ಕಾಪಾಡಿ, ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ: ಮಹಿಳೆಯರಿಗೆ ಕಾವೇರಿ ಎನ್. ಕರೆ
- ಪೌತಿ ಖಾತೆ, ಕಂದಾಯ ಗ್ರಾಮ ಹಕ್ಕುಪತ್ರ, ಪೋಡಿ ಮುಕ್ತ ಅಭಿಯಾನ: ರೈತರ ಅಲೆದಾಟ ತಪ್ಪಿಸಲು ಸರ್ಕಾರದ ಮಹತ್ವದ ಕ್ರಮ
- ತುಮಕೂರನ್ನು ಬೆಂಗಳೂರಿನ ಭಾಗವಾಗಿಸಿ: ಸಾಧನಾ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಪ್ರಸ್ತಾಪ
Author: admin
U.K. ನಲ್ಲಿರುವ ಆರೋಗ್ಯ ತಜ್ಞರು ಮಾನವನ ನಿದ್ರೆಗೆ ಅಡ್ಡಿಪಡಿಸುವ ಮತ್ತೊಂದು ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಸಿದ್ದಾರೆ. ಯುಕೆಯಲ್ಲಿ ಅನೇಕ ಜನರು ಈಗ ವೂಪಿಂಗ್ ಕೆಮ್ಮಿನಿಂದ ಬಳಲುತ್ತಿದ್ದಾರೆ, ಇದು 100 ದಿನಗಳವರೆಗೆ ಇರುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದ ಈ ರೋಗದಲ್ಲಿ 250% ಹೆಚ್ಚಳವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನೆಗಡಿಯಾಗಿ ಶುರುವಾಗುವುದು ನಿಧಾನವಾಗಿ ಮೂರು ತಿಂಗಳ ತಡೆರಹಿತ ಕೆಮ್ಮಿನವರೆಗೆ ಬೆಳೆಯಬಹುದು. ಈ ವರ್ಷದ ಜುಲೈ ಮತ್ತು ನವೆಂಬರ್ ನಡುವೆ 716 ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ರೋಗ ಹರಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು. ಬೊರ್ಡಿಟೆಲ್ಲಾ ಪೆರ್ಟುಸಿಸ್ ಬ್ಯಾಕ್ಟೀರಿಯಾ ನಾಯಿಕೆಮ್ಮಿನ ಹಿಂದೆ ವಿಲನ್ ಆಗಿದೆ. ವೂಪಿಂಗ್ ಕೆಮ್ಮು, ಒಮ್ಮೆ ಮಕ್ಕಳ ಜೀವಕ್ಕೆ ದೊಡ್ಡ ಅಪಾಯವಾಗಿತ್ತು. 1950 ರ ದಶಕದಲ್ಲಿ ಲಸಿಕೆಯನ್ನು ಪರಿಚಯಿಸುವುದರೊಂದಿಗೆ ಸ್ವಲ್ಪಮಟ್ಟಿಗೆ ನಿರಾಕರಿಸಿತು. ವೂಪಿಂಗ್ ಕೆಮ್ಮು ಶಿಶುಗಳಿಗೆ ಮಾತ್ರವಲ್ಲದೆ ವಯಸ್ಕರ ಮೇಲೂ ಪರಿಣಾಮ ಬೀರುತ್ತದೆ. ವೂಪಿಂಗ್ ಕೆಮ್ಮು ಅಂಡವಾಯುಗಳು, ಕಿವಿ ಸೋಂಕುಗಳು ಮತ್ತು ಸ್ವಯಂಪ್ರೇರಿತ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ನ್ಯಾಷನಲ್ ಇನ್…
ಶೇಕ್ ಅಬ್ದುಲ್ಲಾ ಖುಷಿಪಡಿಸಲು ನೆಹರೂ ಅವರು ಆರ್ಟಿಕಲ್ 370 ಜಾರಿಗೆ ತಂದಿದ್ದರು. ಆದರೆ ಮೋದಿ ಅವರು ಧೈರ್ಯದಿಂದ ಆರ್ಟಿಕಲ್ 370 ರದ್ದು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಏಜೆಂಟ್ ನಂತೆ ವರ್ತಿಸುತ್ತಿದ್ದ ಲೋಕಸಭೆ ಸದಸ್ಯನೊಬ್ಬ 370 ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಿದ್ದ. ಇಂದು ಸುಪ್ರೀಂಕೋರ್ಟ್ ಮೋದಿ ಸರ್ಕಾರ ರದ್ದು ಮಾಡಿದ್ದನ್ನ ಮಾನ್ಯ ಮಾಡಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಕನಸು-ನನಸು ಮಾಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಜನ ಸಂಘ, ಹುಟ್ಟಿದ್ದು ಆರ್ಟಿಕಲ್ 370 ತೆಗೆದು ಹಾಕಬೇಕೆಂದು. ಯಾಕೆಂದರೆ ಒಂದು ದೇಶದಲ್ಲಿ ಎರಡು ಧ್ವಜ ಎರಡು ಸಂವಿಧಾನ ಇರಬಾರದು ಎಂದು ಹೇಳಿದರು.
ಮುಸ್ಲಿಂ ಸ್ಪೀಕರ್ ಕುರಿತಾದ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ಹಿಂದೂಗಳು ನಮಸ್ಕಾರ ಮಾಡ್ಬೇಕು ಅಂತ ನಾನು ಹೇಳಿದ್ದೀನಾ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಮಾಡಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನ 4ನೇ ತಾರೀಖು ಶುರುವಾಗಿದೆ. ಮೊದಲ ವಾರ ಏನೂ ಮಾತಾಡಿಲ್ಲ. 2ನೇ ವಾರ ಇದ್ದಕ್ಕಿದ್ದಂತೆ ಈ ವಿಷಯ ತೆಗೆದುಕೊಂಡಿದ್ದಾರೆ. ಇದರ ಅಗತ್ಯವಾದರೂ ಏನಿತ್ತು? ನಾನೇನು ತಪ್ಪು ಮಾತಾಡಿದ್ದೇನೆ? ಹೈದರಾಬಾದ್ ಸಭೆಯಲ್ಲಿ ಮಾತಾಡಿದ್ದೇನೆ. ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಮಾನ ಅವಕಾಶ ಕೊಡಲ್ಲ ಎಂದು ಕೇಳಿದ್ರು. ಆಗ ನಿನ್ನ ಭಾವನೆ ತಪ್ಪಿದೆ ಎಂದು ತಿಳಿವಳಿಕೆ ಹೇಳಿದೆ ಎಂದರು. ಕರ್ನಾಟಕದಲ್ಲಿ 17 ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ, ಅದರಲ್ಲಿ 9 ಜನ ಗೆದಿದ್ದಾರೆ. 9 ರಲ್ಲಿ 5 ಜನರಿಗೆ ಅಧಿಕಾರಿ ಕೊಟ್ಟಿದ್ದಾರೆ. ನನ್ನ, ರಹೀಮ್ ಖಾನ್‌ನ ಮಂತ್ರಿ ಮಾಡಿದ್ದಾರೆ. ಸಲೀಂ ಅಹ್ಮದ್ ಅವರನ್ನ ಚಿಫ್ ವಿಪ್ ಮಾಡಿದ್ದಾರೆ. ನಜೀರ್ ಅಹ್ಮದ್ ಅವರನ್ನ ಸಿಎಂ ರಾಜಕೀಯ…
ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸಂತ್ರಸ್ತ ಮಹಿಳೆ ಬೆಳಗಾವಿ ಭೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಗೆ ಧೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಡೀ ಮಾನವ ಕುಲ ತಲೆತಗ್ಗಿಸುವ ಘಟನೆ ಇದು. ನನ್ನ ತಾಲೂಕಿನಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಖೇದಕರ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮೇ ಬಳಿಕ ಸರ್ಕಾರ ಪತನ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ –ಜೆಡಿಎಸ್ ನವರು ಪಾಪ ನೀರಿನಿಂದ ತೆಗೆದ ಮೀನಿನ ರೀತಿ ವಿಲಿವಿಲಿ ಎಂದು ಒದ್ದಾಡುತ್ತಿದ್ದಾರೆ. ಅವರು ಭ್ರಮಾ ಲೋಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ. ನಾವು ಯಾವುದಕ್ಕೂ ವಿಳಂಬ ಮಾಡೋದಾಗಲಿ, ಕಾಲಹರಣ ಮಾಡಲ್ಲ. ಇವತ್ತು ಬರಗಾಲದ ಬಗ್ಗೆ ಚರ್ಚೆಯಾಗುತ್ತಿದ್ದು, ಉತ್ತರ ಕೊಡುತ್ತಿದ್ದೇವೆ. ನಾಳೆಯಿಂದ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ವಿಷಯ ಪ್ರಸ್ತಾಪ ಆಗಿದೆ ಎಂದರು. ಬಿಜೆಪಿ ನಾಯಕರ ಸಮನ್ವಯ ಕೊರತೆಯಿಂದ ಕಲಾಪದ ಸಮಯ ವ್ಯರ್ಥ ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವತ್ತೂ ಸಮನ್ವಯ ಇಲ್ಲ. ಅವರು ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದವರು. ಬಳಿಕ ಸೋತಿದ್ದಾರೆ, ಜನ ತಿರಸ್ಕರಿಸಿದ್ದಾರೆ. ಇದಾದ ಮೇಲೆ ಸಮನ್ವಯ ಬರಲು ಸಾಧ್ಯವೇ ಇಲ್ಲ. ಅಲ್ಲಿ ಎರಡು ಗುಂಪು, ಮೂರು…
ಮಹಿಳಾ ಹಾಸ್ಟೆಲ್ ನಲ್ಲಿ ಅಸಭ್ಯ ವರ್ತನೆ: ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಇನ್ನೂ ದಾಖಲಾಗದ ಎಫ್ ಐಆರ್
ತುಮಕೂರು: ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ತುಮಕೂರು ಜಿಲ್ಲೆ ವ್ಯಾಪ್ತಿಯ ಸರ್ಕಾರಿ ವೃತ್ತಿಪರ ಕಾಲೇಜು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ದೀಪಾವಳಿಯ ದಿನದಂದು ಅಶ್ಲೀಲ ಹಾಡುಗಳಿಗೆ ಕುಣಿದ ವಿಚಾರವಾಗಿ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಾಮಾಜಿಕ ಹೊರಾಟಗಾರರಾದ ಹಂದ್ರಾಳ್ ನಾಗಭೂಷಣ್ ರವರು ಸಂಬಂಧಪಟ್ಟವರ ಮೇಲೆ ದಿನಾಂಕ 06– 12 — 2023 ರಂದು ದೂರನ್ನು ದಾಖಲಿಸಿದ್ದರು. ಆದರೆ ದೂರು ದಾಖಲಿಸಿ ಸುಮಾರು 5 ದಿನ ಕಳೆದರೂ FIR ದಾಖಲಿಸದೆ, ಪೊಲೀಸರು ಸುಪ್ರಿ೦ ಕೋರ್ಟ್ ಆದೇಶ ಲಲಿತಕುಮಾರಿ U/S ಯುನಿಯನ್ ಆಫ್ ಇಂಡಿಯಾ ಆದೇಶವನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ. ಆದ್ದರಿಂದ ಇಂದು ಕೋಡಿಗೇನಹಳ್ಳಿ ಪೋಲೀಸ್ ಠಾಣೆಯ ಎದುರು ಇಂದು FIR ದಾಖಲಿಸುವಂತೆ ಹೋರಾಟಗಾರರು ಒತ್ತಾಯಿಸಿದರು.. ಈ ಸಂದರ್ಭದಲ್ಲಿ ಹಂದ್ರಾಳ್ ನಾಗಭೂಷಣ್, ಮಂಜುನಾಥ್, ಮಧುಗಿರಿ ಮಹೇಶ್, ಸತೀಶ್, ರಫೀಕ್ ಹಾಗೂ ಮಂಜುನಾಥ ತುಮಕೂರು, ಶಿವಕುಮಾರ್ ಮಾಷ್ಟುಮನೆ ವಕೀಲರು,…
ತುಮಕೂರು: ಆಹಾರ ಅರಸಿ ಗ್ರಾಮದಲ್ಲಿರುವ ಶ್ವಾನಗಳನ್ನು ಬೇಟೆಯಾಡಿ ತಿಂದು ಹಾಕುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿರುವ ಘಟನೆ ತುಮಕೂರು ತಾಲ್ಲೂಕಿ ಕಸಬಾ ಹೋಬಳಿ ಊರುಕೆರೆಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅನೇಕ ದಿನಗಳಿಂದ ಗ್ರಾಮದ ಸುತ್ತಮುತ್ತ ಜಾನುವಾರುಗಳನ್ನು ಹಾಗೂ ಕುರಿ ಮೇಕೆಗಳನ್ನು ಚಿರತೆಯು ತಿಂದು ಹಾಕುತ್ತಿತ್ತು. ಚಿರತೆಯನ್ನು ಸರಿ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ನಿರಂತರವಾಗಿ ಅರಣ್ಯ ಇಲಾಖೆ, ಸಿಬ್ಬಂದಿಗಳಿಗೆ ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಇರಿಸಿದ್ದರು. ,ಸಂಜೆಯಾಗುತ್ತಿದ್ದಂತೆ ಊರ ಸಮೀಪವೇ ಎರಡು ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದವು,ಜನರು ಭೀತಿಗೊಂಡಿದ್ದರು. ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸ್ತಳೀಯ ಗ್ರಾಮಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ತರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ,ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಸಿಕ್ಕಿದೆ. ಇನ್ನೂ ಎರಡು ಚಿರತೆಗಳಿದ್ದು ಅವುಗಳನ್ನು ಶೀಘ್ರವಾಗಿ ಸೆರೆ ಹಿಡಿಯುವಂತೆ ಗ್ರಾಮಸ್ತರು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದ ಅಯೋಧ್ಯೆಯಿಂದ ಬಂದಿದ್ದ ಪವಿತ್ರ ಮಂತ್ರಾಕ್ಷತೆಯನ್ನು ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪವಿತ್ರ ಮಂತ್ರಾಕ್ಷತೆಯನ್ನು ತುಮಕೂರು ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ತುಮಕೂರಿನ 10 ತಾಲ್ಲೂಕುಗಳಿಗೆ ಹಿಂದೂ ಕಾರ್ಯಕರ್ತರ ಮೂಲಕ ಪವಿತ್ರ ಮಂತ್ರಾಕ್ಷತೆ ಕಳುಹಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಶತಶತಮಾನಗಳಿಂದಲೂ ರಾಮಭಕ್ತರು ಕಾತರದಿಂದ ಕಾಯುತ್ತಿರುವಂತಹ ಕ್ಷಣಕ್ಕೆ ಕಾನೂನು ಬದ್ಧವಾಗಿ ರಾಮ ಜನ್ಮ ಭೂಮಿಯಲ್ಲಿ ಭವ್ಯವಾದ ಮಂದಿರವು ಸಂಕ್ರಾಂತಿಯ ನಂತರ ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು. ಲೋಕಾರ್ಪಣೆಗೊಳ್ಳಲಿರುವ ದಿನದಂದು ಭಕ್ತರರೆಲ್ಲರೂ ಅಯೋಧ್ಯೆಗೆ ಬಂದು ಸಂಭ್ರಮಿಸುವ ಅಗತ್ಯವಿಲ್ಲ ಬದಲಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ದೊಡ್ಡ ಪರದೆಯ ಮೂಲಕ ಅದನ್ನು ವೀಕ್ಷಿಸಿ ಭಕ್ತಿ ಪರಾಕಾಷ್ಟೆಯನ್ನು ಮೆರೆಯಬೇಕು ಎಂದು ಹೇಳಿದರು. ಅಲ್ಲದೆ ಅಂದು ಪ್ರತಿ ಗ್ರಾಮಗಳಲ್ಲಿರುವ ದೇವಾಲಯ ದೇವಾಲಯಗಳಲ್ಲಿ ಪೂಜೆ ಹೋಮ ಹವನ ಹಾಗೂ ಭಜನೆಗಳ ಮೂಲಕ ಭಕ್ತಿ ಸಮರ್ಪಣೆ…
ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಪಿಟ್ ಬುಲ್ ದಾಳಿಯಲ್ಲಿ 70 ವರ್ಷದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ನಂತರ, ವೃದ್ಧೆಯ ಮಗ ನಾಯಿ ಮಾಲೀಕರ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಪ್ರಭಾರಿ ಆರ್.ಕೆ. ಸಕ್ಲಾನಿ ಪ್ರಕಾರ, ಧಂದೇರಾ ನಿವಾಸಿಯಾಗಿರುವ ಮಹಿಳೆ, ನೆರೆಹೊರೆಯಲ್ಲಿ ಯಾರನ್ನೋ ಭೇಟಿ ಮಾಡಲು ಹೋಗುತ್ತಿದ್ದಾಗ ಪಿಟ್ ಬುಲ್ ದಾಳಿ ಮಾಡಿದೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಮೈಚಾಂಗ್ ಚಂಡಮಾರುತದೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಅಲ್ಲದೇ ಈಶಾನ್ಯ ಮಾನ್ಸೂನ್ ಜೊತೆಗೆ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಕರ್ನಾಟಕದಿಂದ 3,250-3,300 ಕ್ಯೂಸೆಕ್ ನಷ್ಟು ಕಾವೇರಿ ನೀರನ್ನು ಹರಿಸಲಾಗುತ್ತಿದೆ. ಕಾವೇರಿ ನೀರು ಬಿಡುವ ಕುರಿತು ತೀವ್ರ ವಿರೋಧ ವ್ಯಕ್ತವಾಗಿದ್ದರೂ ಉತ್ತಮ ಮಳೆಯಿಂದಾಗಿ ತಮಿಳುನಾಡಿಗೆ ನಿತ್ಯ 3,250-3,300 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳು ಹೇಳುವಂತೆ ಇದನ್ನು ಕಬಿನಿ ಅಥವಾ ಕೆಆರ್ಎಸ್ ಅಣೆಕಟ್ಟುಗಳಿಂದ ಹರಿಸಲಾಗುತ್ತಿಲ್ಲ. ಆದರೆ ಕೆಆರ್ಎಸ್ ಮತ್ತು ಕಬಿನಿ ನಡುವಿನ ವಲಯದಲ್ಲಿ ಬಿಳಿಗುಂಡ್ಲುವಿಗೆ ಹೆಚ್ಚುವರಿ ನೀರು ಹರಿಯುತ್ತಿದೆ. ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸುಮಾರು 200 ಮಿ. ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿದೆ.