ಮರ್ಯಾದಾ ಪುರುಷ ಶ್ರೀರಾಮನಿಗೂ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀರಾಮ ತನ್ನ ವನವಾಸ ಕಾಲದಲ್ಲಿ ಲಕ್ಷಣ, ಸೀತಾದೇವಿಯ ಜೊತೆಗೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪ ಇರುವ ಧನುಷ್ಕೋಟಿಗೆ ಬಂದು ತಂಗಿದ್ದ.
ಆ ವೇಳೆ, ಸೀತಾದೇವಿಗೆ ಬಾಯಾರಿಕೆಯಾಗಿ ನೀರು ಬೇಕು ಎಂದಾಗ ಶ್ರೀರಾಮ ಬಂಡೆಗೆ ಬಾಣ ಬಿಟ್ಟು ನೀರು ಬರಿಸಿದ್ದ. ಹೀಗಾಗಿಯೇ ಇಲ್ಲಿ ಎಂತಹ ಕಾಲದಲ್ಲೂ ನೀರು ಇರುತ್ತೆ. ಬೇಸಿಗೆ ಇರಲಿ, ಬರಗಾಲ ಎದುರಾದರೂ ನೀರು ಖಾಲಿಯಾಗುವುದಿಲ್ಲ. ಶ್ರೀರಾಮ ಧನಸ್ಸು ಬಿಟ್ಟು ನೀರು ಬರಿಸಿದ ಸ್ಥಳ ಧನುಷ್ಕೋಟಿ ಎಂದೇ ಹೆಸರಾಗಿದೆ.


