Subscribe to Updates
Get the latest creative news from FooBar about art, design and business.
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
- ಡಕಾಯಿತಿಗೆ ಸಂಚು: ಐವರ ಬಂಧನ
- ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
- ನ.30 ರಂದು ಅಮೋಘ ಸಂಗೀತ ಕಛೇರಿ
- ಹುಳಿಯಾರು: ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ: ಗ್ರಾಮಸ್ಥರಿಂದ ವಿರೋಧ
- ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
Author: admin
ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಪೂರ್ಣ ವೈಫಲ್ಯವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕಾಂಗ್ರೆಸ್ ಸರಕಾರ ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ; ಕಾಂಗ್ರೆಸ್ ಪಕ್ಷವು ತಮಿಳುನಾಡಿನ ಡಿಎಂಕೆ ಪಕ್ಷದ ಬಿ ಟೀಂ ಎಂದು ಟಾಂಗ್ ನೀಡಿದ್ದಾರೆ ಅವರು. ಕಾವೇರಿ ಹೋರಾಟವನ್ನು ಹತ್ತಿಕ್ಕುತ್ತಿರುವ ಸರಕಾರದ ಕ್ರಮವನ್ನು ಚೋದ್ಯ ಎಂದು ಟೀಕಿಸಿರುವ ಅವರು; ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಎಂದು ಕೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಶಾಂತಿಯುತವಾಗಿ…
ಬೆಂಗಳೂರು: ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ನೀರಿನ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಹೀಗಾಗಿ, ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಎಎಪಿ, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ 150ಕ್ಕೂ ಅಧಿಕ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ರೈತರಿಗಾಗಿ ಹೋರಾಟ ನಡೆಸುತ್ತಿದ್ದು, ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಲಾಯಿತು. ತಲೆಯ ಮೇಲೆ ಕಲ್ಲು ಹೊತ್ತ ಎಎಪಿ ಕಾರ್ಯಕರ್ತರು, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಇದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ನ್ಯಾಯಾಲಯಕ್ಕೂ ಪರಿಸ್ಥಿತಿಯನ್ನು…
ಕೆ.ಆರ್.ಪೇಟೆ: ತಾಲ್ಲೂಕು ಛಾಯಾಗ್ರಾಹಕರು ಇಂದು ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಸೇರಿ ರೈತರು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಬೆಂಬಲ ಸೂಚಿಸಿದರು. ಟಿ.ಬಿ. ಸರ್ಕಲ್ ನಿಂದು ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ನಂತರ ಕೆ.ಆರ್.ಪೇಟೆಯ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಒಗ್ಗಟ್ಟನ್ನು ಪ್ರದರ್ಶನ ಮಾಡುವವರು ಕಾವೇರಿ ಮತ್ತು ಕರ್ನಾಟಕ್ಕಾಗಿ ಮಾತ್ರ ಹೋರಾಟ ಮಾಡಿ ಅದು ಬಿಟ್ಟು ನಿಮ್ಮ ರಾಜಕೀಯ ಪಕ್ಷಗಳ ಬಾವುಟವನ್ನು ಹಿಡಿದು ಒಗ್ಗಟ್ಟನ್ನು ಪ್ರದರ್ಶನ ಮಾಡಬ್ಯಾಡಿ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೇಳಿದ್ದರು ಈ ಸಂದರ್ಭದಲ್ಲಿ ತಾಲ್ಲೋಕಿನ ಎಲ್ಲಾ ಛಾಯಾಗ್ರಾಹಕರು ಮತ್ತು ಕನ್ನಡ ಪರ ಸಂಘಟನೆಗಳು ಹಾಜರಿದ್ದರು. ವರದಿ: ಮಂಜು ಶ್ರವಣೂರು
ತುಮಕೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ಹಗರಣದ ಆರೋಪ ಹೊರಿಸಿ ಅಲ್ಲಿನ ಸರ್ಕಾರ ಬಂಧಿಸಿದ್ದ ಕ್ರಮ ವಿರೋಧಿಸಿ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಲ್ಲಿ ಚಂದ್ರ ಬಾಬು ನಾಯ್ಡು ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಇತ್ತೀಚಿಗೆ ಆಂದ್ರ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಂದಮೂರಿ ಬಾಲಕೃಷ್ಣ ಅಭಿಮಾನಿ ಬಳಗ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿ ಬಳಗ, ನಾರಾ ಚಂದ್ರಬಾಬು ನಾಯ್ಡು ಅಭಿಮಾನಿ ಬಳಗದ ವತಿಯಿಂದ ಪಾವಗಡ ಪಟ್ಟಣದ ನಿರೀಕ್ಷಣ ಮಂದಿರದಿಂದ ಶನಿಮಹಾತ್ಮ ಸರ್ಕಲ್ ನ ವರೆಗೂ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಡಾ,ವೆಂಕಟರಾಮಯ್ಯ, ಆಂಧ್ರಪ್ರದೇಶ ಕಲ್ಯಾಣದುರ್ಗಂ ಟಿಡಿಪಿ ಉಸ್ತುವಾರಿ ಉಮಾ ಮಹೇಶ್ವರ್,ಪಾವಗಡ ತಾಲೂಕಿನ ಹಿರಿಯ ಮುಖಂಡರಾದ ಮಾನಂ ವೆಂಕಟಸ್ವಾಮಿ, ಹಿಂದೂಪುರ ಟಿಡಿಪಿ ಜಿಲ್ಲಾಧ್ಯಕ್ಷೆ ಸುಬ್ಬರತ್ನಮ್ಮ, ಶಾಂತಿ ಮೆಡಿಕಲ್ ನ ದೇವರಾಜ್, ರೈತ ಮುಂಖಡ ಗಂಗಾಧರ್ ನಾಯ್ಡು, ಪರಿಟಾಲ ವೆಂಕಟೇಶ್,…
ರಾತ್ರಿ ವೈದ್ಯರು ಮಲಗಲು ಎಸಿ ಆನ್ ಮಾಡಿದ ನಂತರ ಎರಡು ನವಜಾತ ಶಿಶುಗಳು ಶೀತವಾಗಿ ಸಾವನ್ನಪ್ಪಿವೆ ಎಂದು ದೂರು ದಾಖಲಾಗಿದೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ದೂರಿನ ಮೇರೆಗೆ ಖಾಸಗಿ ಕ್ಲಿನಿಕ್ ಮಾಲೀಕರಾದ ಡಾ.ನೀತೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕಿತ್ಸಾಲಯದ ಮಾಲೀಕಿ ಡಾ. ನೀತು ಶನಿವಾರ ಎಸಿ ಆಪರೇಟ್ ಮಾಡಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಭಾನುವಾರ ಬೆಳಗ್ಗೆ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ನೀತು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಆರೋಗ್ಯ ಇಲಾಖೆ ತನಿಖೆಯನ್ನು ಘೋಷಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ. ಕೈರಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಮಕ್ಕಳು ಜನಿಸಿದರು. ನಂತರ, ಮಕ್ಕಳನ್ನು ಅದೇ ದಿನ ವಿಶೇಷ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗೆ ಸ್ಥಳಾಂತರಿಸಲಾಯಿತು. ಶನಿವಾರ ರಾತ್ರಿ ವೈದ್ಯರು ಎಸಿ ಹಾಕಿಕೊಂಡು ಮಲಗಿದ್ದು, ಮರುದಿನ ಎರಡೂ ಕುಟುಂಬದವರು ಮಕ್ಕಳನ್ನು ನೋಡಲು ಬರುವಷ್ಟರಲ್ಲಿ ಮಕ್ಕಳು…
ಬೆಂಗಳೂರು: ನಾನು ಯಾವುದೇ ಬಂದ್ ಗೆ ಬೆಂಬಲ ಕೊಡಲ್ಲ. ಕನ್ನಡ ಭಾಷೆ, ನೆಲ, ಜಲದ ವಿಚಾರವಾಗಿ ನನ್ನ ಹೋರಾಟ ಮುಂದುವರಿಯುತ್ತೆ. ಬಂದ್ ನಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತೆ. ದಿನಗೂಲಿ ನೌಕಕರಿಗೆ ಈ ಬಂದ್ ನಿಂದ ತೊಂದರೆ ಆಗುತ್ತೆ. ಬಂದ್ ನಿಂದ ಕಾವೇರಿಯನ್ನ ಉಳಿಸಿಕೊಳ್ಳಲು ಆಗಲ್ಲ. ಬಂದ್ ಅಂದರೇ ಟೌನ್ ಹಾಲ್ ನಿಂದ ಮೆರವಣಿಗೆ ಬರುವುದು ಅಷ್ಟೇನಾ? ಮಾತಿಗೆ ಮುಂಚೆ ಬಂದ್ ಒಂದೇ ಬ್ರಹ್ಮಾಸ್ತ್ರ ಆಗಬಾರದು. ರಾಜಕಾರಿಣಿಗಳನ್ನು ನಂಬಿಕೊಂಡು ಹೋರಾಟಕ್ಕೆ ಹೋಗಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದರು.
ಮೈಸೂರು: ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಕಾವೇರಿ ನದಿ ವಿವಾದ ಉದ್ಭವವಾಗಿದೆ. ರಾಜ್ಯದ ನಾಯಕರು ಅವರವರ ಹೊಡೆದಾಟದಲ್ಲಿ ಮುಳುಗಿರಬೇಕು. ಕಾಂಗ್ರೆಸ್ ನವರು ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗಿರಬೇಕು. ಸರ್ಕಾರ ಸರಿಯಾಗಿ ಕಾವೇರಿ ಕೊಳ್ಳದ ಅಧ್ಯಯನ ನಡೆಸದೇ ಇರಬಹುದು. ಹೀಗಾಗಿಯೇ ರಾಜ್ಯ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ಸರ್ಕಾರ ನ್ಯಾಯಾಲಯಕ್ಕೂ ಕೂಡ ಸೂಕ್ತ ಅಂಕಿ ಅಂಶ ನೀಡಿಲ್ಲ. ಇದರ ಬದಲು ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದ್ದಾರೆ. ಮೋದಿ ಕೇವಲ ತಮಿಳುನಾಡು, ಕರ್ನಾಟಕಕ್ಕೆ ಪ್ರಧಾನಿ ಅಲ್ಲ, ಬೇರೆ ರಾಜ್ಯಗಳ ಜಲ ವಿವಾದ ಕೂಡ ಪ್ರಧಾನಿಗಳು ಬಗೆಹರಿಸಬೇಕಿದೆ. ಕೇಂದ್ರ ಸರ್ಕಾರ, ಬಿಜೆಪಿ ರಾಜ್ಯದ ರೈತರು, ಕನ್ನಡ ಸಂಘಗಳ ಜೊತೆಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಒಬಿಸಿ ವಿಷಯವನ್ನು ಪುನರುಚ್ಚರಿಸಿದ್ದಾರೆ. ನರೇಂದ್ರ ಮೋದಿ ಜಾತಿ ಗಣತಿ ಡೇಟಾವನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ರಾಹುಲ್ ಪ್ರಶ್ನಿಸಿದರು. ಲೋಕಸಭೆಯಲ್ಲಿ ಅದಾನಿ ಬಗ್ಗೆ ಪ್ರಧಾನಿಯನ್ನು ಕೇಳಿದ್ದಕ್ಕೆ ಅವರ ಲೋಕಸಭಾ ಸದಸ್ಯತ್ವವನ್ನು ಕಸಿದುಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಛತ್ತೀಸ್ ಗಢದಲ್ಲಿ ಗ್ರಾಮೀಣ ಆವಾಜ್ ನ್ಯಾಯ್ ಯೋಜನೆ ಉದ್ಘಾಟನೆ ವೇಳೆ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ. ಮೋದಿಯವರ ಬಳಿ ರಿಮೋಟ್ ಕಂಟ್ರೋಲ್ ಇದೆ. ಆದರೆ ಅವರು ಅದನ್ನು ರಹಸ್ಯವಾಗಿಟ್ಟಿದ್ದಾರೆ. ನಾವು ಅದನ್ನು ಸಾರ್ವಜನಿಕಗೊಳಿಸಿದ್ದೇವೆ. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಮುಂಬೈ ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಬಿಜೆಪಿ ಅದಾನಿಗೆ ಖಾಸಗೀಕರಣ ಮಾಡುತ್ತಿದೆ. ರಾಹುಲ್ ಟೀಕಿಸಿದ್ದಾರೆ. ಚುನಾವಣೆಗೂ ಮುನ್ನ ಮಧ್ಯಪ್ರದೇಶದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ತುಕ್ಕು ಹಿಡಿದ ಪಕ್ಷ ಎಂದು ಲೇವಡಿ ಮಾಡಿದ ಬೆನ್ನಲ್ಲೇ ರಾಹುಲ್ ಪ್ರತಿದಾಳಿ ನಡೆಸಿದ್ದಾರೆ. ಜಾತಿ ಗಣತಿಯಿಂದ ಕೇಂದ್ರ ಸರಕಾರ ಓಡುತ್ತಿದೆ.…
ಬೆಂಗಳೂರು ಬಂದ್ ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಬಂದ್ ಆಗಿದೆ. ಅಲ್ಲದೇ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಸ್ಥಗಿತ ಮಾಡಲಾಗಿದೆ. ಬಂದ್ ಗೆ ಬೆಂಬಲ ನಗರದಲ್ಲಿ ಇವತ್ತು ಚಿತ್ರಮಂದಿರಗಳಲ್ಲಿ ಇಂದು ಸಿನಿಮಾ ಪ್ರದರ್ಶನವಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೂಡ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಗಳು ನಡೆಯುತ್ತಿಲ್ಲ.
ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಆರೋಪ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನೇಮಕಾತಿ ಪ್ರಕರಣ ಸಂಬಂಧ ಕಿರಿಯ ತನಿಖಾಧಿಕಾರಿಗಳು ಅಮೃತ್ ಪೌಲ್ ಅವರ ತನಿಖೆ ನಡೆಸುತ್ತಿದ್ದು, ಇವರಿಗೆ ಬೆದರಿಕೆ ಹಾಕದಂತೆ ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ನೀಡಿದೆ. 545 ಪಿಎಸ್ ಐಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.