Subscribe to Updates
Get the latest creative news from FooBar about art, design and business.
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
Author: admin
ಬೆಳಗಾವಿ: ಹಿರಿಯ ನಾಗರಿಕರೇ ನಮಗೆ ಕಣ್ಣಿಗೆ ಕಾಣುವ ದೇವರು. ಅವರ ಸೇವೆ ಮಾಡುವ ಮೂಲಕ ದೇವರ ಸೇವೆ ಮಾಡೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಇಲ್ಲಿಯ ಕಿಣಿಯೆಯಲ್ಲಿರುವ ಶಾಂತಾಯಿ ವೃದ್ದಾಶ್ರಮದಲ್ಲಿ ಗುರುವಾರ ಪ್ರಾರ್ಥನಾ ಮಂದಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ದುರ್ಬಲರೆಂದು ಗುರುತಿಸಲ್ಪಟ್ಟಿರುವ ಹಿರಿಯ ನಾಗರಿಕರು, ವಿಕಲಚೇತನರು, ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ನನ್ನ ಅವಧಿಯಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಕನಸು ಹೊತ್ತಿದ್ದೇನೆ. ನಮ್ಮನ್ನು ದುರ್ಬಲರ ಸೇವೆಯಲ್ಲಿ ತೊಡಗಿಸಿಕೊಂಡಾಗ ಅದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು. ಆಶ್ರಮದ ರಸ್ತೆ ಅಭಿವೃದ್ಧಿ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಕಳೆದ 25 ವರ್ಷದಿಂದ ಶಾಂತಾಯಿ ವೃದ್ದಾಶ್ರಮ ನಿರಂತರ ಸೇವೆಯಲ್ಲಿ ತೊಡಗಿಕೊಂಡಿದೆ. ವಿಜಯ ಮೋರೆ ಮತ್ತು ಇಲ್ಲಿನ…
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿರುವುದು ದುಃಖವಾಗಿದೆ. ಕನ್ನಡ ಹೋರಾಟಗಾರನ್ನು ನಾವು ಬೆಂಬಲಿಸಬೇಕು. ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಕನ್ನಡಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ನವೀಕೃತ ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೆವು. ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು ಎಂದಿದ್ದಾರೆ. ನಾವು ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಜಾರಿಗೊಳಿಸಿದ್ದೆವು. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಕನ್ನಡ ನಾಡಿನಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಈಗ ಕಾನೂನೂ ಮಾಡದಿದ್ದರೆ ನಮ್ಮ ಮಕ್ಕಳಿಗೆ ಕಷ್ಟವಾಗಲಿದೆ. ಈಗಲೂ ಕಾನೂನು ಅನುಷ್ಠಾನ ಮಾಡದಿದ್ದರೆ…
ಬೆಳಗಾವಿ: ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯ, ಸಂಗೀತ, ನಾಟಕ, ಕಥೆ, ಕಾದಂಬರಿ ರಚಿಸಿ ಅವುಗಳನ್ನು ವಿಶ್ವಕ್ಕೆ ಸಾರುವುದರ ಮೂಲಕ ಸಮಾಜದಲ್ಲಿ ಸಮಾನತೆಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಕವಿಯಾಗಿದ್ದಾರೆ ಎಂದು ಸಾಹಿತಿ ಟಿ.ಎಸ್. ವಂಟಗೂಡಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶುಕ್ರವಾರ (ಡಿ.29) ರಂದು ಏರ್ಪಡಿಸಲಾಗಿದ್ದ ರಾಷ್ಟ್ರ ಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ ವಿಶ್ವ ಮಾನವ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ, ಕಥೆ, ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೆಯವಾದದ್ದು, ಅವರನ್ನು ಸಾಹಿತ್ಯದ ಮೂಲಕ ಚಿರಂಜೀವಿಯಾಗಿಸುವುದರ ಜೊತೆಗೆ ಅವರು ಹಾಕಿ ಕೊಟ್ಟ ಮಾರ್ಗದರ್ಶನ ತತ್ವ ಆದರ್ಶ, ಸಿದ್ಧಾಂತ ಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಎಂದರು. ಸಾಹಿತ್ಯ ಲೋಕದ ಮೇರುಶಿಖರ ಕುವೆಂಪು: ಮನುಜ ಮತ ವಿಶ್ವ ಪಥ ಎಂದು…
ಬೆಂಗಳೂರು: 2023ಕ್ಕೆ ವಿದಾಯ ಹೇಳಿ 2024ನ್ನು ಸ್ವಾಗತಿಸಲು ಬಹಳಷ್ಟು ಜನರು ಕಾತುರರಾಗಿದ್ದು, ಹೊಸವರ್ಷ ಹತ್ತಿರ ಬರುತ್ತಿದ್ದು, ಆಚರಣೆಯ ಕೇಂದ್ರ ಬಿಂದುವಾಗಿರುವ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯರ್ ಸ್ಟ್ರೀಟ್ ಗಳಲ್ಲಿ ಈಗಾಗಲೇ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಪ್ರತೀ ವರ್ಷದಂತೆಯೇ ಈ ವರ್ಷವೂ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯರ್ ಸ್ಟ್ರೀಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಸ್ಫೋಟ, ದೌರ್ಜನ್ಯದಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಮಾಡಲು ಕ್ಯಾಮೆರಾ, ವೀಕ್ಷಣಾ ಗೋಪುರ (ವಾಚ್ ಟವರ್)ಗಳನ್ನು ಸ್ಥಾಪಿಸಿ ಭದ್ರತೆಗಳ ಹೆಚ್ಚಿರುವಂತೆ ವ್ಯಾಪಾರಿಗಳು ಹಾಗೂ ಅಂಗಡಿ ಸಂಘಗಳು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಬ್ರಿಗೇಡ್ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಸುಹೇಲ್ ಯೂಸುಫ್ ಮಾತನಾಡಿ, ಬಿಗಿ ಪೊಲೀಸ್ ನಿಯೋಜನೆಗಾಗಿ ಕೇಂದ್ರ ಡಿಸಿಪಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಸಂಘದಿಂದ ಕ್ಯಾಮೆರಾ, ವಾಚ್ ಟವರ್ ಗಳನ್ನು ಅಳವಡಿಸಲಾಗುತ್ತಿದೆ…
ಮಣಿಪುರ: ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗಾಯಕನ ಹೆಂಡತಿ ಮತ್ತು ತಾಯಿಗೆ ಬಂದೂಕು ತೋರಿಸಿ ನಂತರ ಗಾಯಕನನ್ನು ಅಪಹರಿಸಿದ ಘಟನೆ ಮಣಿಪುರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಘಟನೆ ನಡೆದಿದ್ದು ಬಂದೂಕುದಾರಿಗಳು ಮಣಿಪುರದ ಗಾಯಕ ಅಖು ಚಿಂಗಾಂಗ್ ಬಾಮ್ ಅವರನ್ನು ಅಪಹರಿಸಿದ್ದಾರೆ. ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿರುವ ಗಾಯಕ ಅಖು ಚಿಂಗಾಂಗ್ಬಾಮ್ ಇಂಫಾಲ್ ಪೂರ್ವದ ಖುರೈ ನಿವಾಸಿ.
ಕೋಲಾರ: ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಸಂತ್ರಸ್ತೆ ತಾಯಿ ದೂರಿನ ಮೇರೆಗೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳ ಪೈಕಿ ನಾಗರಾಜ್, ಲವಕುಮಾರ, ನವೀನ್ ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಶಬರೀಶ್, ಸುಮನ್ ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ: ಮತ್ತು ಬರುವ ಔಷಧಿ ನೀಡಿ ಯುವತಿಗೆ ಅತ್ಯಾಚಾರವೆಸಗಿದ ಆರೋಪಿ ಗುಲಾಮ ಜಿಲಾನಿ ಅಜಹರಿ ಮೌಲ್ವಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಗುಲಾಮ್ ಜಿಲಾನಿ ಅಜಹರಿ ಸೇರಿದಂತೆ 8 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಹುಬ್ಬಳ್ಳಿ ಮೂಲದ 23 ವರ್ಷದ ಯುವತಿ, ಮಧ್ಯಪ್ರದೇಶದ ಖಂಡವಾದಲ್ಲಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಗುಲಾಮ ಜಿಲಾನಿ ಅಜಹರಿ ಯುವತಿಯ ತಂದೆಯ ಪರಿಚಯಸ್ಥನಾಗಿದ್ದನು. ಹೀಗಾಗಿ ಗುಲಾಮ ಜಿಲಾನಿ ಅಜಹರಿ ಯುವತಿಯ ತಂದೆಗೆ “ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ” ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಯುವತಿ ಖಂಡವಾ ಪಟ್ಟಣಕ್ಕೆ ಹೋಗಿದ್ದಳು. ಅಲ್ಲಿ ಯುವತಿಯನ್ನು ಪುಸಲಾಯಿಸಿದ ಮುಫ್ತಿ ಗುಲಾಮ ಜಿಲಾನಿ ಅಜಹರಿ, ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ಯುವತಿಗೆ ಮತ್ತು ಬರುವ ಔಷಧ ಕೊಟ್ಟು ನಿರಂತರವಾಗಿ ಅತ್ಯಾಚಾರವೆಸಗಿದ್ದು, ಆರೋಪಿಯ ಬಂಧನ ಮಾಡಲಾಗಿದೆ.
ಬೆಂಗಳೂರು: ಕನ್ನಡ ಸೇನಾನಿ ಕನ್ನಡ ಪರ ಚಿಂತಕ ನಾಡ ಹೋರಾಟಗಾರ ಕನ್ನಡ ಚಳುವಳಿಯ ಭೀಷ್ಮ ಎಂದು ರಾಜ್ಯದ ಕನ್ನಡ ಪ್ರೇಮಿಗಳು ಕರೆಯುವ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌ ರವರನ್ನು ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು ಖಂಡನೀಯವೆಂದು ಕರ್ನಾಟಕ ರಣಧೀರರ ವೇದಿಕೆಯು ನೆಲಮಂಗಲ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.. ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಶೇಕಡಾ 60% ರಷ್ಟು ಕನ್ನಡ ಭಾಷೆಯನ್ನು ಬಳಸಬೇಕೆಂದು ಶೇಕಡಾ 40% ರಷ್ಟು ಇಂಗ್ಲೀಷ್ ಆಂಗ್ಲ ಭಾಷೆಯನ್ನು ಬಳಸಬೇಕೆಂದು ಸ್ಥಳೀಯ ಪ್ರಾಧಿಕಾರದ ಹಾಗೂ ಬಿ.ಬಿ.ಎಂ.ಪಿ ಮತ್ತು ಸರ್ಕಾರದ ಆದೇಶಗಳಿದ್ದರೂ ಸಹ ಸದರಿ ಆದೇಶಗಳನ್ನು ಉಲ್ಲಂಘನೆ ಮಾಡಿ ಹಿಂದಿ ತೆಲುಗು ತಮಿಳು ಮಲಯಾಳಿ ಸೇರಿದಂತೆ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ನಾಮಫಲಕಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳು 27 ರಂದು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ…
ಪಾವಗಡ: ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಒತ್ತಾಯಿಸಿ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಿಸಿ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಕನ್ನಡ ನಾಮಫಲಕ ಬಳಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸೂಚನೆ ನೀಡಿತು. ಬಳಿಕ ಗ್ರೇಟ್ 2 ತಹಶೀಲ್ದಾರ್ ನರಸಿಂಹಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿ ಕಡ್ಡಾಯ ಕನ್ನಡ ನಾಮಫಲಕ ಹಾಕಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷರಾದ ಸಂಗಮ್ ಅಂಗಡಿ ಮಾಲೀಕರಾದ ನರಸೀ ಪಾಟೀಲ್, ಪದಾಧಿಕಾರಿಗಳಾದ ಪಾಳೆಗಾರ್ ಲೋಕೇಶ್, ರಂಗನಾಯಕ, ಮಣಿ, ರಾಜು, ಪ್ರಶಾಂತ್, ಲಚ್ಚಿ, ಮಂಜು, ಜೆ.ಆರ್.ಶ್ರೀನಿವಾಸ್, ನಾಗಲಮಡಿಕೆ ಮಲ್ಲಿಕಾರ್ಜುನ, ಕುಮಾರ್, ಗೋಪಾಲ್, ನಾಗೇಂದ್ರ ಚಂದ್ರು, ಮುಂತಾದವರು ಭಾಗವಹಿಸಿದ್ದರು. ವರದಿ: ಮಲ್ಲಿಕಾರ್ಜುನ್ ನಾಗಲಮಡಿಕೆ
ಬೆಂಗಳೂರು: ಸರಣಿ ಅಪಘಾತ ಮಾಡಿ ಅಪ್ರಾಪ್ತನ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಚಾಲಕ ಸುರೇಶ್(24) ಶಿಕ್ಷೆಗೆ ಗುರಿಯಾದವ. 2017ರ ಮೇ. 27ರಂದು ಬಾಬುಸಾಪಾಳ್ಯದಲ್ಲಿ ನಡೆದಿದ್ದ ಅಪಘಾತವು ಕಾರಿನಲ್ಲಿದ್ದ ಸುರೇಶ್ ನಿಂದ ಸರಣಿ ಅಪಘಾತವಾಗಿತ್ತು. ಇಬ್ಬರು ಬಾಲಕರಿಗೆ ಡಿಕ್ಕಿ ಹೊಡೆದಿದ್ದ. ಇದರಿಂದ 12ವರ್ಷದ ಬಾಲಕ ಮೃತಪಟ್ಟು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿತ್ತು. ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಚಾಲಕನಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.