Subscribe to Updates
Get the latest creative news from FooBar about art, design and business.
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
Author: admin
ಹೊಸ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡಲಾಗಿದೆ. ಕೊಟ್ಟಿರುವ ಹೆಸರು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಅಯೋಧ್ಯೆಯನ್ನು ಪ್ರಪಂಚದ ಎಲ್ಲಾ ಭಾಗಗಳೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ಡಿಸೆಂಬರ್ 30 ರಂದು ಪ್ರಧಾನಿಯವರು ಅದನ್ನು ರಾಷ್ಟ್ರಕ್ಕೆ ಪ್ರಸ್ತುತಪಡಿಸುವ ಸಂದರ್ಭದಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣದ ಹೊಸ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಪೂರ್ಣಗೊಂಡಿರುವ ರೈಲು ನಿಲ್ದಾಣವನ್ನೂ ಅವರು ಉದ್ಘಾಟಿಸಲಿದ್ದಾರೆ. ನಂತರ ಅಯೋಧ್ಯೆಯಲ್ಲಿ ರೋಡ್ ಶೋ ನಡೆಯಲಿದೆ. ರಾಮಮಂದಿರದ ಮಾದರಿಯಲ್ಲಿರುವ ವಿಮಾನ ನಿಲ್ದಾಣದ ಸಂಕೀರ್ಣವನ್ನು ಭಗವಾನ್ ರಾಮನ ಜೀವನ ಕಥೆಯನ್ನು ಚಿತ್ರಿಸುವ ಭಿತ್ತಿಚಿತ್ರಗಳು ಮತ್ತು ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ. 1,450 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ವಿಮಾನ ನಿಲ್ದಾಣವು 6500 ಚದರ ಮೀಟರ್ ಗಳಲ್ಲಿ ಹರಡಿದೆ ಮತ್ತು ವರ್ಷಕ್ಕೆ 10 ಲಕ್ಷ ಪ್ರಯಾಣಿಕರನ್ನು ನಿಭಾಯಿಸುತ್ತೆ ಎನ್ನಲಾಗಿದೆ.
ದ್ವಿಚಕ್ರವಾಹನದಲ್ಲಿಒಂದು ವೇಳೆ ಅಪಘಾತ ಸಂಭವಿಸಿ ಹಿಂಬದಿ ಸವಾರ ಮೃತಪಟ್ಟರೆ ಅವರ ಸಾವಿಗೆ ಬೈಕ್ ಮಾಲೀಕನೇ ಪರಿಹಾರ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಕುಣಿಗಲ್ ಬಳಿ ಬೈಕ್ ವೊಂದರ ಹಿಂಬದಿಯಲ್ಲಿ ಸಿದ್ದಿಕ್ ಉಲ್ಲಾಖಾನ್ ಎಂಬುವವರು ಕುಳಿತು ಸಂಚರಿಸುತ್ತಿದ್ದರು. ನಿಜಾಮುದ್ದೀನ್ ಎಂಬುವರ ಬೈಕ್ ಅಪಘಾತಕ್ಕೀಡಾಗಿ ಸಿದ್ದಿಕ್ ಉಲ್ಲಾಖಾನ್ ಮೃತಪಟ್ಟಿದ್ದರು. ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ವಿಮಾ ಸಂಸ್ಥೆಗೆ ಪರಿಹಾರ ವಿತರಿಸಬೇಕೆಂದು ಆದೇಶಿಸಿತ್ತು. ಹೈಕೋರ್ಟ್ ಈ ಆದೇಶವನ್ನು ರದ್ದುಪಡಿಸಿದೆ. ನ್ಯಾಯಾಧೀಕರಣ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮೃತ ಸಿದ್ದಿಕ್ ಉಲ್ಲಾಖಾನ್ ಅವರ ಕುಟುಂಬದವರಿಗೆ ನೀಡುವಂತೆ ಬೈಕ್ ಮಾಲೀಕ ನಿಜಾಮುದ್ದೀನ್ ಅವರಿಗೆ ಹೈಕೋರ್ಟ್ ಸೂಚಿಸಿದೆ. ವಾಹನವು ಎರಡು ಆಸನವನ್ನು ಹೊಂದಿದೆ. ಇದರ ಆಧಾರದ ಮೇಲೆ ನ್ಯಾಯಾಧೀಕರಣವು ವಿಮಾ ಕಂಪನಿಗೆ ಪರಿಹಾರ ನೀಡಬೇಕೆಂದು ಹೇಳಿದೆ. ಇದು ಸೂಕ್ತವಲ್ಲ. ಬೈಕ್ ಮಾಲೀಕನೇ ಪರಿಹಾರ ನೀಡಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ.
ಬಾಗಲಕೋಟೆ: ಉತ್ತಮ ಆರೋಗ್ಯಕ್ಕಾಗಿ ಚಿಕಿತ್ಸೆಯ ಜೊತೆಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು ರೇಡಿಯೋ ಕನ್ನಡಿ ಮತ್ತು ನೆರಳಿನಂತೆ ಸಮಾಜಮುಖಿಯಾಗಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಹೇಳಿದರು. ನಗರದ ಬಿವಿವಿ ಸಂಘದ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ನೂತನ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಸಂಪೂರ್ಣ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹೋಮಿಯೋಪಥಿಯು ಭಾರತ ಜಗತ್ತಿಗೆ ನೀಡಿದ ವೈದ್ಯ ಪದ್ದತಿಯಾಗಿದ್ದು 12ನೇ ಶತಮಾನದಲ್ಲಿಯೇ ವೈದ್ಯ ಸಂಗಣ್ಣ ತನ್ನ ವಚನದಲ್ಲಿ ಜೀವನಕ್ರಮ ಮತ್ತು ದೇಹದ ಆರೋಗ್ಯದ ಕುರಿತು ಉಲ್ಲೇಖಿಸಿದ್ದು ಗಮನಾರ್ಹ ಸಂಗತಿ. ತನು, ಮನ, ಭಾವ ಶುದ್ದಿಗಳೆ ನಿಜವಾದ ಆರೋಗ್ಯ. ಸರಿಯಾದ ನಿದ್ರೆ, ಆಹಾರ, ವ್ಯಾಯಾಮಗಳಂತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ರೇಡಿಯೋ ಸಂವಾದ, ಚರ್ಚೆ, ಹರಟೆಯಂತಹ ಕಾರ್ಯಕ್ರಮಗಳನ್ನು ಆಲಿಸುವುದು ಉತ್ತಮ ಎಂದರು. ಕೊರೋನಾದಂತಹ ಸಂದರ್ಭದಲ್ಲಿ ಮಾದ್ಯಮಗಳು ಮತ್ತು ವೈದ್ಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದು ಅದರಲ್ಲಿ ರೇಡಿಯೋ ಪಾತ್ರವು…
ನೌಕಾಪಡೆಯ ಹಿರಿಯ ಅಧಿಕಾರಿಗಳಿಗೆ ಹೊಸ ವಿನ್ಯಾಸದ ಎಪೌಲೆಟ್ ಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ವಿನ್ಯಾಸವು ಛತ್ರಪತಿ ಶಿವಾಜಿಯವರ ರಾಜಮುದ್ರೆಯಿಂದ ಪ್ರೇರಿತವಾಗಿದೆ. ಡಿಸೆಂಬರ್ 4 ರಂದು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನಡೆದ ನೌಕಾಪಡೆಯ ದಿನಾಚರಣೆಯಲ್ಲಿ ನೌಕಾಪಡೆಯ ಸಿಬ್ಬಂದಿಗೆ ಹೊಸ ವಿನ್ಯಾಸವನ್ನು ಅನಾವರಣಗೊಳಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದರು. ಭಾರತೀಯ ನೌಕಾಪಡೆಯ ಉನ್ನತ ಮೂರು ಶ್ರೇಣಿಯ ಅಧಿಕಾರಿಗಳಿಗೆ ಹೊಸ ವಿನ್ಯಾಸದ ಎಪೌಲೆಟ್‌ಗಳನ್ನು ನೀಡಲಾಗಿದೆ. ಹೊಸ ಎಪೌಲೆಟ್ ಗಳನ್ನು ಆರಂಭದಲ್ಲಿ ಅಡ್ಮಿರಲ್, ವೈಸ್ ಅಡ್ಮಿರಲ್ ಮತ್ತು ರಿಯರ್ ಅಡ್ಮಿರಲ್ ಶ್ರೇಣಿಗಳಿಗೆ ನೀಡಲಾಗುತ್ತದೆ. ನೌಕಾಪಡೆಯ ದಿನದ ಭಾಷಣದಲ್ಲಿ ಪ್ರಧಾನಿಯವರು ಇನ್ನು ಮುಂದೆ ನೌಕಾ ಅಧಿಕಾರಿಗಳಿಗೆ ಇಪೌಲೆಟ್ ಗಳು ಭಾರತೀಯ ಪರಂಪರೆಯ ಆಧಾರದ ಮೇಲೆ ಹೊಸ ವಿನ್ಯಾಸವಾಗಿದೆ ಎಂದು ಹೇಳಿದ್ದರು. ನೆಲ್ಸನ್ಸ್ ರಿಂಗ್, ಬ್ರಿಟಿಷ್ ಆಳ್ವಿಕೆಯಲ್ಲಿ ಪರಿಚಯಿಸಲಾದ ವಸಾಹತುಶಾಹಿ ಸಂಪ್ರದಾಯವನ್ನು ಇಲ್ಲಿಯವರೆಗೆ ಭಾರತೀಯ ನೌಕಾಪಡೆಯ ಚಿಹ್ನೆಯಾಗಿ ಬಳಸಲಾಗುತ್ತಿತ್ತು.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗಾಗಿ ಅನೇಕ ಜನರು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿದ್ದಾರೆ. ಬೃಹತ್ ಡ್ರಮ್ ಮತ್ತು ಅದರ ವೈಶಿಷ್ಟ್ಯಗಳನ್ನು ಈಗ ಅಹಮದಾಬಾದ್ ನ ತಂಡವು ಚರ್ಚಿಸುತ್ತಿದೆ. ಇಂಡಿಯಾ ಟುಡೇ ಈ ಬಗ್ಗೆ ಸುದ್ದಿ ಮಾಡಿದೆ. ಜನವರಿ 15 ರಂದು ಅಯೋಧ್ಯೆಗೆ ಡ್ರಮ್ ತಲುಪಿಸಲಾಗುವುದು ಎಂದು ಸಂಘಟಕರು ಹೇಳುತ್ತಾರೆ. ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲ ಈ ಡೋಲು ನಾಶವಾಗುವುದಿಲ್ಲ ಎನ್ನುತ್ತಾರೆ ಸಂಸ್ಥೆಯ ಪ್ರತಿನಿಧಿಗಳಾದ ಅಂಬಾಲಾಲ್ ದಗ್ಬರ್ ಮತ್ತು ದೀಪಕ್. ತಾಮ್ರದ ತಗಡುಗಳನ್ನು ಡ್ರಮ್ ನ ಹೊರಭಾಗದಲ್ಲಿ ಜೋಡಿಸಲಾಗಿದೆ ಮತ್ತು ಡ್ರಮ್ ಮಾಡಲು ಚಿನ್ನ ಮತ್ತು ಬೆಳ್ಳಿಯನ್ನು ಬಳಸಲಾಗುತ್ತದೆ. ಅಖಿಲ ಭಾರತ ದಗ್ಬರ್ ಸಮಾಜದಿಂದ ಡೋಲು ವಾದನ ನಡೆಯಿತು. ದೇವಸ್ಥಾನಕ್ಕೆ 450 ಕೆಜಿ ತೂಕದ ಡೋಲು ತರಲು ವಿಶೇಷ ರಥದ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರ ತೂಕ 700 ಕೆ.ಜಿ. ದೈತ್ಯಾಕಾರದ ಡ್ರಮ್ ನ ಕಾಮಗಾರಿ ಪೂರ್ಣಗೊಳಿಸಲು ಎರಡೂವರೆ ತಿಂಗಳು ಬೇಕಾಯಿತು. ಡೋಲು ಹೊತ್ತ ರಥ ಮುಂದಿನ ವಾರ ಅಹಮದಾಬಾದ್ ನ ದ್ರ್ಯಾಪುರ ತಲುಪಲಿದೆ. ಅಹಮದಾಬಾದ್…
ಶಾಲಾ ಸ್ವಚ್ಚತೆ ಕಾಪಾಡುವುದು ಕೇವಲ ಶಿಕ್ಷಕರ ಜವಾಬ್ದಾರಿಯಲ್ಲ, ಎಸ್ ಡಿಎಂಸಿಯ ಜವಾಬ್ದಾರಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲೆಗಳಲ್ಲಿನ ಸ್ವಚ್ಛತೆಯ ಜವಾಬ್ದಾರಿಯನ್ನ ಶಾಲಾ ಶಿಕ್ಷಕರ ಜೊತೆ ಎಸ್ ಡಿಎಂಸಿ ತೆಗೆದುಕೊಳ್ಳಬೇಕು. ಈ ಸಂಬಂಧ ಅಧಿಸೂಚನೆ ಹೊರಡಿಸುತ್ತೇವೆ ಎಂದಿದ್ದಾರೆ. ಶಾಲಾಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು. ಇದರಿಂದ ಇಲಾಖೆಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಶಾಲಾ ಸ್ವಚ್ಚತೆ ಕಾಪಾಡುವುದು ಕೇವಲ ಶಿಕ್ಷಕರ ಜವಾಬ್ದಾರಿಯಲ್ಲ. ಎಸ್ ಡಿಎಂಸಿಯೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದೆ. ಹೀಗಾಗಿ ಬಿಜೆಪಿಯವರು ಯತ್ನಾಳ್ ವಿರುದ್ದ ಶಿಸ್ತುಕ್ರಮ ಜರುಗಿಸುತ್ತಿಲ್ಲ ಅನ್ನಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಲೇವಡಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ. ಯತ್ನಾಳ್ ಕಾಂಗ್ರೆಸ್ ನ ಏಜೆಂಟ್ ಅಲ್ಲ. ಯತ್ನಾಳ್ ಹಿಂದಿನಿಂದಲೂ ಹೇಳುತ್ತಾ ಬಂದಿರುವುದು ಎಲ್ಲವೂ ಸತ್ಯ. ಹೀಗಾಗಿ ಬಿಜೆಪಿ ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಯತ್ನಾಳ್ ಬಳಿ ಎಲ್ಲಾ ದಾಖಲೆ ಇದ್ದಿರಬಹುದು. ಹೀಗಾಗಿ ಬಿಜೆಪಿಗೆ ಯತ್ನಾಳ್ ಕಂಡರೇ ಭಯ. ಯತ್ನಾಳ್ ಆರೋಪದ ಬಗ್ಗೆ ಸರ್ಕಾರವೂ ತನಿಖೆ ನಡೆಸುತ್ತದೆ. ಗುತ್ತಿಗೆದಾರ, ಅಸೋಸಿಯೇಷನ್ ಆರೋಪ ಸೇರಿ ಎಲ್ಲವನ್ನೂ ತನಿಖೆ ಮಾಡುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಸಂಸದರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮ ಮಂದಿರದ ಉದ್ಘಾಟನೆ ಮತ್ತು ಅಬುಧಾಬಿಯ ಬಿಎಪಿಎಸ್ ಹಿಂದೂ ದೇವಾಲಯದ ಕಾರ್ಯಕ್ರಮಗಳ ನಂತರವೇ ಸಾರ್ವತ್ರಿಕ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗುವುದು. ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ‘ಹಿಂದೂ ಹೃದಯ ಚಕ್ರವರ್ತಿ’ ಎಂದು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ ಎಂದರು. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದೆ. ಸಂದೇಶವು ಸ್ಪಷ್ಟವಾಗಿದೆ…2009 ರಲ್ಲಿ, ಮೋದಿಯನ್ನು ಆರ್ಥಿಕ ಅಭಿವೃದ್ಧಿಯ ದ್ಯೋತಕವಾಗಿ ಭಾರತೀಯ ಮತದಾರರಿಗೆ ಮಾರಲಾಯಿತು. 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯು ಮೋದಿಯವರಿಗೆ ಸಾರ್ವತ್ರಿಕ ಚುನಾವಣೆಯನ್ನು ರಾಷ್ಟ್ರೀಯ ಭದ್ರತಾ ಚುನಾವಣೆಯನ್ನಾಗಿ ಪರಿವರ್ತಿಸುವ ಅವಕಾಶವನ್ನು ನೀಡಿತು. 2024ರಲ್ಲಿ ಬಿಜೆಪಿ ಮೋದಿಯನ್ನು ‘ಹಿಂದೂ ಹೃದಯ ಚಕ್ರವರ್ತಿ’ ಎಂದು ಬಿಂಬಿಸಲಿದೆ ಎಂಬುದು ಸ್ಪಷ್ಟವಾಗಿದೆ’ ಎಂದು ಶಶಿ ತರೂರ್ ಹೇಳಿದ್ದಾರೆ. “ಅಚ್ಛೇ ದಿನ್ ಏನಾಯಿತು? ವರ್ಷಕ್ಕೆ 2…
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ನಿಗೂಢವಾಗಿ ಐದು ಅಸ್ಥಿಪಂಜರ ಪತ್ತೆ ಆಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೂ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಅಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಸ್ಥಳಕ್ಕೆ ಡಿವೈಎಸ್ ಪಿ ಪಿ.ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮನೆಯಲ್ಲಿ ಪವನ್ ಕುಮಾರ್ ಸಂಬಂಧಿ ಜಗನ್ನಾಥರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು ಎನ್ನಲಾಗಿದೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ತಿಳಿದು ಬರಬೇಕಿದೆ. ಸದ್ಯ ಅಸ್ಥಿಪಂಜರಗಳನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಬಗ್ಗೆ ಮಾಹಿತಿ ತಿಳಿದು ಬರಲಿದೆ.
ಗೋವಾದಿಂದ ಅಕ್ರಮವಾಗಿ ಕಲಬುರಗಿಗೆ ಮದ್ಯ ಸಾಗಿಸುತ್ತಿದ್ದ ವೇಳೆ ಖಾಸಗಿ ಬಸ್ ಮೇಲೆ ಕಲಬುರಗಿ ಜಿಲ್ಲಾ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 48 ಲೀಟರ್ ಮದ್ಯ ಸೀಜ್ ಮಾಡಿದ್ದಾರೆ. ಇದರೊಂದಿಗೆ 51 ಲಕ್ಷ ರೂ. ಮೌಲ್ಯದ ಒಂದು ಖಾಸಗಿ ಬಸ್ ಹಾಗೂ 2 ಬೈಕ್ ಸೀಜ್ ಮಾಡಿದ್ದಾರೆ. ಅಲ್ಲದೇ 6 ಜನರನ್ನ ಬಂಧಿಸಿದ್ದಾರೆ ಪಣಜಿಯಿಂದ ಬರುತ್ತಿದ್ದ ಖಾಸಗಿ ಬಸ್ ನ ವಿವಿಧೆಡೆ ಮದ್ಯದ ಬಾಟಲಿಗಳನ್ನ ಇಡಲಾಗಿತ್ತು. ಬಸ್ ಕಲಬುರಗಿ ಗಡಿಗೆ ಎಂಟ್ರಿ ಕೊಡುತ್ತಿದ್ದಂತೆ ಅಲರ್ಟ್ ಆದ ಕಲಬುರಗಿ ಅಬಕಾರಿ ಪೊಲೀಸರು, ಇಡೀ ಬಸ್ ಜಾಲಾಡಿದ್ದಾರೆ. ಈ ವೇಳೆ ನೂರಾರು ಬಾಟಲ್ ಗಳು ಅಬಕಾರಿ ಪೊಲೀಸರ ಕೈಗೆ ಸಿಕ್ಕಿವೆ. ನೆರೆ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ. ಹೀಗಾಗಿ ನ್ಯೂ ಇಯರ್ ಸೆಲಬ್ರೇಷನ್ ಗಾಗಿ ಈ ಎರಡು ರಾಜ್ಯದ ಅಗ್ಗದ ಮದ್ಯಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ. ಅದಕ್ಕಾಗಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.