Subscribe to Updates
Get the latest creative news from FooBar about art, design and business.
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
- ಡಕಾಯಿತಿಗೆ ಸಂಚು: ಐವರ ಬಂಧನ
- ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
- ನ.30 ರಂದು ಅಮೋಘ ಸಂಗೀತ ಕಛೇರಿ
- ಹುಳಿಯಾರು: ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ: ಗ್ರಾಮಸ್ಥರಿಂದ ವಿರೋಧ
- ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
Author: admin
ಮಧುಗಿರಿ: ಕುಂಚಿಟಿಗರ ಕುಲಶಾಸ್ರ ಅಧ್ಯಯನವನ್ನು ಯಥಾವತ್ ಜಾರಿ ಮಾಡಿ ಓಬಿಸಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಆಡಳಿತದ ಸೌಧ ಮುಂಭಾಗ ತಾಲೂಕು ಕುಂಚಿಟಿಗ ಸಮುದಾಯದ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಗಾಂಧಿವಾದಿ ಕಸುವನಹಳ್ಳಿ ರಮೇಶ್ ಮಾತನಾಡಿ, ರಾಜ್ಯದ 18 ಜಿಲ್ಲೆ ಹಾಗೂ 46 ತಾಲೂಕುಗಳಲ್ಲಿ ಕೃಷಿ ಮತ್ತು ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ಕುಂಚಿಟಿಗರನ್ನು ದೇಶಕ್ಕೆ ಸ್ವತಂತ್ರ ಬಂದು 77 ವರ್ಷಗಳು ಕಳೆದರು ಸಹ ಇನ್ನೂ ನಮ್ಮ ಸಮುದಾಯವನ್ನು ಮೀಸಲಾತಿಯಿಂದ ವಂಚಿಸಲಾಗಿದೆ ಎಂದರು. ಇಂದೂ ನಾವುಗಳು ಕೂಲಿ ಮಾಡುವಂತಹ ಪರಿಸ್ಥಿತಿ ತಲುಪಿದ್ದು. ನಮ್ಮ ಸಮುದಾಯದ ಜನರು ವಾಸ ವಿರುವ ಪ್ರದೇಶಗಳು ನಗರ ಪ್ರದೇಶಗಳಿಂದ ದೂರವಿದ್ದು ಈ ಪ್ರದೇಶಗಳು ಬಯಲು ಸೀಮೆ , ಗುಡ್ಡಗಾಡು ಹಾಗೂ ಮಳೆಯಾಶ್ರಿತ ಪ್ರದೇಶಗಳಾಗಿಂದ ಕೂಡಿದ್ದು ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಹೇಳಿದರು. ರಾಜ್ಯ ಸರಕಾರದ ಪ್ರವರ್ಗ 3 ರಲ್ಲಿ 101 ಜಾತಿಗಳನ್ನು ಕೇಂದ್ರ ಸರಕಾರವು ಓಬಿಸಿಯಲ್ಲಿ ಮೀಸಲಾತಿ ಪಟ್ಟಿಯಲ್ಲಿ…
ಕ್ರೈಂ ವಿಶೇಷ ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ ಕೊರಟಗೆರೆ: ಪಾರಿವಾಳದ ಹಣದ ವಿಚಾರಕ್ಕೆ ಜಗಳವಾಗಿ ತಲ್ವಾರ್ ಗ್ಯಾಂಗ್ ನಿಂದ ಯುವಕನ ಮೇಲೆ ಮಂಗಳವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆ ಹಿಂಭಾಗ ಸಿನಿಮಾ ಶೈಲಿಯಲ್ಲಿ ಲಾಂಗ್ ಹಿಡಿದು ಗಲಾಟೆ ಮಾಡಿದ್ದ ಯುವಕರನ್ನು ಪಿಎಸೈ ಚೇತನಗೌಡ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ. ಬೆಂಗಳೂರು ಮೂಲದ ಅಜಯ್ ಎಂಬಾತನಿಂದ ಸಂಜಯ್ 2ಸಾವಿರಕ್ಕೆ ಪಾರಿವಾಳ ಖರೀದಿಸಿ 800ರೂ ಅಡ್ವಾನ್ಸ್ ನೀಡಿದ್ದಾರೆ. ಉಳಿದ ಹಣ ಕೇಳಿದಾಗ ಗಲಾಟೆ ನಡೆದಿದೆ. ಉಳಿದ ಹಣ 1200 ರೂ ಕೊಡುವಂತೆ ಅಜಯ್ ಒತ್ತಡಕ್ಕೆ ಆಕ್ರೋಶಗೊಂಡ ಸಂಜಯ್ ಬಾಕಿ ಹಣ ಕೊಡೋದಾಗಿ ಕರೆಯಿಸಿ ಲಾಂಗ್ ತೆಗೆದು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಲೆಯತ್ನದ ಆರೋಪಿ ಸಂಜಯ್, ಗಣೇಶ, ನಂದಾಕುಮಾರ್, ತೇಜಾ ಸೇರಿದಂತೆ ಅಪ್ರಾಪ್ತ ವಯಸ್ಕರಾದ 6ಜನ ಯುವಕ ಪೋಲು ಗ್ಯಾಂಗ್ ಪೊಲೀಸರ ಅತಿಥಿ ಆಗಿದ್ದಾರೆ. ಮಕ್ಕಳ ಬಗ್ಗೆ ಪೋಷಕರ ಜಾಗೃತಿ ಅಗತ್ಯ: ವ್ಯಾಸಂಗ ಮಾಡುತ್ತಿರುವ ಹದಿಹರಿಯದ ತಮ್ಮ…
ಹೆಚ್.ಡಿ.ಕೋಟೆ: ಪಟ್ಟಣದ ಬಿ ಜಿ ಎಸ್ ಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೋಷಣ್ ಅಭಿಯಾನದ ಅಂಗವಾಗಿ ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಪೋಷಣ್ ಅಭಿಯಾನದ ಅಡಿಯಲ್ಲಿ ಗರ್ಭೀಣಿಯರಿಗೆ ಪೌಷ್ಟಿಕಾಂಶ ಉಳ್ಳಂತಹ ಆಹಾರ ಪದಾರ್ಥಗಳನ್ನು ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆಶಾ ಮಾತನಾಡಿ, ಮಕ್ಕಳಿಗೆ ಮಹಿಳೆಯರಿಗೆ ಕಾಲ ಕಾಲಕ್ಕೆ ಪೌಷ್ಠಿಕ ಆಹಾರ ಒದಗಿಸುವುದರಿಂದ ಅಪೌಷ್ಠಿಕತೆಯನ್ನು ತೊಲಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಪ್ರಾಮಾಣಿಕ ಕೆಲಸ ಮಾಡುತಿದೆ ಗರ್ಭೀಣಿಯರಿಗೆ ಪ್ರತೀ ತಿಂಗಳು ಪೌಷ್ಠಿಕ ಆಹಾರ ವಿತರಣೆ ಮಾಡುತಿದ್ದು ಇದರಲ್ಲಿ ನಮ್ಮ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ…
ಪಡೆದ ಹಣವನ್ನು ಮರುಪಾವತಿ ಮಾಡದ ಕಾರಣ ಬೆಳ್ಳುಳ್ಳಿ ವ್ಯಾಪಾರಿಯನ್ನು ಮಾರುಕಟ್ಟೆಯ ಮೂಲಕ ವಿವಸ್ತ್ರಗೊಳಿಸಲಾಯಿತು. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಉದ್ಯಮಿಯನ್ನು ಥಳಿಸಿ ವಿವಸ್ತ್ರಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 18ರ ಸೋಮವಾರ ಮಧ್ಯಾಹ್ನ ನೋಯ್ಡಾದ ಫೇಸ್-2 ಮಂಡಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಬೆಳ್ಳುಳ್ಳಿ ವ್ಯಾಪಾರಿ ಒಂದು ತಿಂಗಳ ಹಿಂದೆ ಸುಂದರ್ ಎಂಬ ಕಮಿಷನ್ ಏಜೆಂಟ್ ಬಳಿ 5,600 ರೂ. ‘ಅಡಿಯಾಸ್’ ಎಂದು ಕರೆಯಲ್ಪಡುವ ಈ ಏಜೆಂಟರು ರೈತರು ಮತ್ತು ವ್ಯಾಪಾರಿಗಳ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಸೋಮವಾರ ಮಧ್ಯಾಹ್ನ, ಕಮಿಷನ್ ಏಜೆಂಟ್ ಎರವಲು ಪಡೆದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ವ್ಯಾಪಾರಿಯನ್ನು ಸಂಪರ್ಕಿಸಿದರು. 2500 ಪಾವತಿಸಿದ ವ್ಯಾಪಾರಿ ಬಾಕಿ ಪಾವತಿಸಲು ಸ್ವಲ್ಪ ಕಾಲಾವಕಾಶ ಕೇಳಿದ್ದಾನೆ. ಇದರಿಂದ ಕೋಪಗೊಂಡ ಸುಂದರ್ ತನ್ನ ಜನರನ್ನು ಕರೆಸಿದನು. ಉದ್ಯಮಿಯನ್ನು ಇಬ್ಬರು ವ್ಯಕ್ತಿಗಳು ಥಳಿಸಿ, ಅವರ ಬಟ್ಟೆಗಳನ್ನು ಬಲವಂತವಾಗಿ ಹರಿದು ಹಾಕಿದ್ದಾರೆ. ನಂತರ ಆತನನ್ನು ಬೆತ್ತಲೆಯಾಗಿ ಮಾರುಕಟ್ಟೆಯ…
ಬೆಂಗಳೂರು: ಕೆಟ್ಟದಾಗಿ ಮಾತಾಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಫಾರುಕ್ ಮೃತಪಟ್ಟವನು. ಮುಬಾರಕ್, ಸುಹೇಲ್, ಆಲಿ ಅಕ್ರಮ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮತ್ತು ಕೊಲೆಯಾದವರು ಎಲ್ಲರೂ ಪರಿಚಿತರೇ ಆಗಿದ್ದಾರೆ. ಕೊಲೆಯಾದ ಫಾರುಕ್ ಸುಖಾಸುಮ್ಮನೆ ಸೋಹೆಲ್ ಎಂಬಾತನಿಗೆ ಬೆದರಿಕೆ ಹಾಕುತ್ತಿದ್ದ. ಸೋಹೆಲ್ ಗಾಂಜಾ ಮಾರಾಟ ಮಾಡದೆ ಇದ್ದರೂ, ಫಾರೂಕ್ ಗಾಂಜಾ ಮಾರಾಟ ಮಾಡುತ್ತಾನೆ ಎಂದು ಪೊಲೀಸರಿಗೆ ಹೇಳುತ್ತಿನಿ ಎಂದು ಹೆದರಿಸುತ್ತಿದ್ದ.
ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಗರ ಪೊಲೀಸರಿಗೆ ಮೌಖಿಕವಾಗಿ ಸೂಚಿಸಿದೆ. ಆಜ್ ತಕ್ ನ್ಯೂಸ್ ಚಾನೆಲ್ ಮತ್ತು ಟಿವಿ ಟುಡೇ ನೆಟ್ ವರ್ಕ್ ಲಿಮಿಟೆಡ್ ಆಯಂಕರ್ ಸುಧೀರ್ ಚೌಧರಿ ವಿರುದ್ಧ ಸೆಪ್ಟೆಂಬರ್ 12 ರಂದು, ದ್ವೇಷವನ್ನು ಉತ್ತೇಜಿಸುವ ಮಾತುಗಳು ಮತ್ತು ತಪ್ಪು ಮಾಹಿತಿ ರವಾನೆ ಎಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲ್ಪಡುವ ಅಧಿಕೃತ ಸಭೆ, ಸಮಾರಂಭಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಏಕ ಕಾಲಿಕ ಬಳಕೆ ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ, ಸರಬರಾಜನ್ನು ಸಂಪೂರ್ಣವಾಗಿ ನಿಷೇಧಿಸಿ, ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಎಲ್ಲಾ ಸಭೆ-ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರಿನ ಬಳಕೆ/ಸರಬರಾಜು ಮಾಡುವುದನ್ನು ನಿಲ್ಲಿಸಬೇಕು. ನಿಗಧಿಪಡಿಸಿದಂತೆ ಕುಡಿವ ನೀರಿನ ವಿತರಣಾ ವ್ಯವಸ್ಥೆಯನ್ನು ಕಲ್ಪಿಸುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದ್ದಾರೆ.
ಬೆಂಗಳೂರು: ಕರ್ತವ್ಯ ಲೋಪ ಆರೋಪದಡಿ ಹಲಸೂರು ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತ್ತುಗೊಳಿಸಲಾಗಿದೆ. ಹಲಸೂರು ಠಾಣೆ ಇನ್ಸ್ ಪೆಕ್ಟರ್ ಎಂ. ಮಂಜುನಾಥ್ ಅಮಾನತ್ತು ಆಗಿದ್ದು ಕಳೆದ ಆಗಸ್ಟ್ 11 ರಂದು ಠಾಣೆಗೆ ಭೇಟಿ ಕೊಟ್ಟಿದ್ದ ನಗರ ಪೊಲೀಸ್ ಆಯುಕ್ತರು, ಈ ವೇಳೆ ಠಾಣೆಯ ದಾಖಲಾತಿ ನಿರ್ವಹಣೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ನಂತರ ಈ ಕುರಿತು ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಜನ ಸಂಪರ್ಕಕ್ಕಾಗಿ ಎಂಬ ವಾಟ್ಸ್ ಆಪ್ ಚಾನಲ್ ಆರಂಭಿಸಿದ್ದಾರೆ. ವಾಟ್ಸ್ ಆಪ್ ಇತ್ತೀಚೆಗೆ ವಾಟ್ಸ್ ಆಪ್ ಚಾನಲ್ ಫೀಚರ್ ಸೇರ್ಪಡೆಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಫ್ ಕರ್ನಾಟಕ ಹೆಸರಿನ ವಾಟ್ಸ್ ಆಯಪ್ ಚಾನಲ್ ಆರಂಭಿಸಿದ್ದಾರೆ. ಕಳೆದ ವಾರ ವಾಟ್ಸ್ಆಯಪ್ ಚಾನಲ್ ಎಂಬ ಹೊಸ ಆವಿಷ್ಕಾರವನ್ನು ವಾಟ್ಸ್ ಆಪ್ ಪರಿಚಯಿಸಿತ್ತು. ಸೆಪ್ಟೆಂಬರ್ 12 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾನಲ್ ಆರಂಭಿಸಿದ್ದಾರೆ.
ರಾಜಧಾನಿ ಬೆಂಗಳೂರು ನಗರದಲ್ಲಿ ನಾಯಿಕೊಡೆಗಳಂತೆ ಅನಧಿಕೃತ ಚುನಾವಣಾ ಹೋರ್ಡಿಂಗ್ ಗಳು ತಲೆ ಎತ್ತುತ್ತಿರುವುದರಿಂದ ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ನಗರದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಮತ್ತಿತರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.