Author: admin

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಕಾರ್ಯಾರಂಭ ಮಾಡಿರುವ 2ನೇ ಟರ್ಮಿನಲ್ ನಲ್ಲಿರುವ ಮೂಲ ಸೌಕರ್ಯಕ್ಕೆ ಪ್ರಸಿದ್ಧ ನಟ, ನಿರ್ದೇಶಕ ಹಾಗೂ ಲೇಖಕ ಆರ್. ಮಾಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೋ ಸಂದೇಶವನ್ನು ಬಿತ್ತರಿಸಿದ್ದಾರೆ. ಇದಕ್ಕೆ ಲಕ್ಷಾಂತರ ಲೈಕ್ ಗಳು ಬಂದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Read More

ಹೆಚ್.ಡಿ.ಕೋಟೆ: ಗೌರಿ ಗಣೇಶ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಹುಣಸೂರು ವಿಭಾಗೀಯಪೊಲೀಸ್ ಮತ್ತು ಹೆಚ್.ಡಿ.ಕೋಟೆ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಹುಣಸೂರು ವಿಭಾಗೀಯ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮತ್ತು ಹೆಚ್.ಡಿ.ಕೋಟೆ ವೃತ್ತನಿರೀಕ್ಷಕ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಹೆಚ್.ಡಿ.ಕೋಟೆ ಪಟ್ಟಣದ ವರದರಾಜ ಸ್ವಾಮಿ ದೇವಾಲಯ ರಸ್ತೆ,ನಾಯಕರ ಬೀದಿ, ಸಿದ್ದಪ್ಪಾಜಿ ರಸ್ತೆ,ಹೌಸಿಂಗ್ ಬೋರ್ಡ್, ವಿದ್ಯಾನಗರ,ಆಸ್ಪತ್ರೆ ಬಡಾವಣೆ , ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಬಳಿಕ ಡಿವೈಎಸ್ಪಿ ಮಹೇಶ್ ಮಾತನಾಡಿ, ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳ ಅಂಗವಾಗಿ ಹೆಚ್ ಡಿ ಕೋಟೆಯಲ್ಲಿ ಪಥ ಸಂಚಲನ ನಡೆಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಪೊಲೀಸರು, ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳೊಂದಿಗೆ ಪಥ ಸಂಚಲನ ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಾಲ್ಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಘಟನೆ ನಡೆದರು ಕೂಡಲೇ…

Read More

ತುಮಕೂರು: ತುಮಕೂರು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೂತನ ಡ್ರಾಮ ಕೇರ್ ಸೆಂಟರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಇಂದು ಕಾರ್ಯ ಚಟುವಟಿಕೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಿದರು. ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರಾಮಾ ಕೇರ್ ಸೆಂಟರ್, ಸಾಕಷ್ಟು ರೋಗಿಗಳಿಗೆ ಅನುಕೂಲವಾಗಲಿದೆ ಬಹುತೇಕ ತುರ್ತು ಚಿಕಿತ್ಸೆಗಾಗಿ ಬೆಂಗಳೂರು ಕಡೆಗೆ ಹೋಗುತ್ತಿದ್ದಂತಹ ರೋಗಿಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡುವ ಸಲುವಾಗಿ ಈ ಸೆಂಟರ್ ಅನ್ನು ತೆರೆಯಲಾಗಿದೆ. ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಡಿ ಈ ಟ್ರಾಮಾ ಕೇರ್ ಸೆಂಟರ್ ಅನ್ನು ತೆರೆಯಲಾಗಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಉನ್ನತ ಮಟ್ಟದ ಆರೋಗ್ಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಇದನ್ನು ತೆರೆಯಲಾಗಿದೆ.ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಲ್ಲಾ ಎಸ್ ಪಿ ಅಶೋಕ್ ಹಾಜರಿದ್ದರು.

Read More

ಬೆಂಗಳೂರು: ಕಾವೇರಿ ನೀರು ಸಂಕಷ್ಟ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯ ತಾಜ್ ಹೋಟೆಲ್ ನಲ್ಲಿ ಬುಧವಾರ ಕರ್ನಾಟಕದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಜತೆ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಕುಡಿಯುವ ನೀರು ಮತ್ತು ರೈತರಿಗೆ ಅಭಾವ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಅದೇಶಿಸಿರುವುದರಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಡಿ ವಿ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್, ಶ್ರೀ ವೀರೇಂದ್ರ ಹೆಗ್ಗಡೆ, ಡಿ ಕೆ ಸುರೇಶ್, ಪ್ರತಾಪ್ ಸಿಂಹ, ಪ್ರಜ್ವಲ್ ರೇವಣ್ಣ, ಸುಮಲತಾ ಅಂಬರೀಶ್, ತೇಜಸ್ವಿ ಸೂರ್ಯ, ಜಿ ಸಿ ಚಂದ್ರಶೇಖರ್, ರಾಜ್ಯದ ಸಚಿವರಾದ ಚಲುವರಾಯಸ್ವಾಮಿ, ಎಚ್ ಕೆ ಪಾಟೀಲ್, ಎಚ್ ಸಿ ಮಹದೇವಪ್ಪ, ದೆಹಲಿಯಲ್ಲಿ ಕರ್ನಾಟಕ ಸರಕಾರದ ಪ್ರತಿನಿಧಿ ಟಿ ಬಿ ಜಯಚಂದ್ರ ಸೇರಿದಂತೆ ಬಹುತೇಕ ಸಂಸದರು, ರಾಜ್ಯಸಭೆ ಸದಸ್ಯರು…

Read More

ನಟ ಪ್ರಕಾಶ್ ರಾಜ್(58) ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆಯೊಡ್ಡಿರುವ ವೀಡಿಯೊಗಳನ್ನು ಹರಿಬಿಟ್ಟಿರುವ ಯೂಟ್ಯೂಬ್‌ ನ ‘ವಿಕ್ರಮ್ ಟಿ. ವಿ’ ಚಾನೆಲ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿದೆ. ನಟ ಪ್ರಕಾಶ್ ರಾಜ್ ಅವರು ದೂರು ನೀಡಿದ್ದಾರೆ. ಅದನ್ನು ಆಧರಿಸಿ ವಿಕ್ರಮ್ ಟಿ. ವಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

Read More

ನವದೆಹಲಿ: ಸುಂದರ ನೆನಪುಗಳೊಂದಿಗೆ ಹಳೆ ಸಂಸತ್‌ ಭವನಕ್ಕೆ ಸಂಸದರು ಇಂದು (ಮಂಗಳವಾರ) ವಿದಾಯ ಹೇಳಿದರು. ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಸಂಸತ್‌ ಸದಸ್ಯರು ಒಟ್ಟಾಗಿ ಸೇರಿ ಮೆಗಾ ಫೋಟೋಶೂಟ್‌ ಮಾಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್‌, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಸಂಸದರು ಇಂದಿನ ಸಂಸತ್ತಿನ ಅಧಿವೇಶನದ ಮೊದಲು ಜಂಟಿ ಫೋಟೋ ಸೆಷನ್‌ಗಾಗಿ ಪಾಲ್ಗೊಂಡಿದ್ದರು. ಬಿಜೆಪಿ ಸಂಸದ ನರಹರಿ ಅಮೀನ್ ಅವರು ಸಂಸದರ ಗ್ರೂಪ್ ಫೋಟೋಶೂಟ್‌ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಂತರ ಮತ್ತೆ ಫೋಟೋಶೂಟ್‌ ನಲ್ಲಿ ಸೇರಿದರು. ಕಾಂಗ್ರೆಸ್‌ ನ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಸಂಸತ್‌ ಸದಸ್ಯರೂ ಆಗಿರುವ ವಿಪಕ್ಷಗಳ ನಾಯಕರು ಸಹ ಫೋಟೋಶೂಟ್‌ ನಲ್ಲಿ ಪಾಲ್ಗೊಂಡರು. ಇಂದಿನಿಂದ ನೂತನ ಸಂಸತ್ ಭವನದಲ್ಲಿ ಸದನದ ಕಲಾಪ ನಡೆಯಲಿದೆ.

Read More

ದೆಹಲಿ: 2010ರಲ್ಲಿಯೇ ನಾವು ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದೆವು, ಹೀಗಾಗಿ ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಖರ್ಗೆ ಹೇಳಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರ ಜೊತೆಗೆ ಮಹಿಳಾ ಮೀಸಲಾತಿ ಬಿಲ್ ನಲ್ಲಿ ಒಬಿಸಿ ಒಳ ಮೀಸಲಾತಿಗೆ ಮನವಿ ನೀಡುವಂತೆ ಖರ್ಗೆ ಆಗ್ರಹಿಸಿದರು.

Read More

ತಮಿಳುನಾಡಿಗೆ ಕಾವೇರಿ ನೀರು ಬಿಡಲು CWMA ಆದೇಶ ವಿಚಾರ ಸಂಬಂಧ ದೆಹಲಿಗೆ ಸಂಸದರ ನಿಯೋಗ ತೆರಳಲು ಏನೂ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿವಹಿಸಬೇಕು. ನನ್ನ ಸಲಹೆ ಇಕ್ಕಟಿಗೆ ಸಿಲುಕಿಸಿದೆ ಎಂದು ಡಿಕೆಶಿ ಹೇಳಿದ್ದಾರೆ. ರಾಜ್ಯ ಸರ್ಕಾರದ ನಡೆ ರೈತರನ್ನು ಇಕ್ಕಟಿಗೆ ಸಿಲುಕಿಸಿದೆ. ಸರ್ಕಾರ ತಾನು ಸಲ್ಲಿಸಿರುವ ಅಫಿಡವಿಟ್ಗೆ ಬದ್ಧರಾಗಿರಬೇಕಲ್ವಾ? ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಮಾಹಿತಿ, ಜವಾಬ್ದಾರಿ ಇರಬೇಕು. ಡಿಸಿಎಂ ಡಿಕೆಶಿ ಏನೋ ಮಾತನಾಡಬೇಕು ಅಂತಷ್ಟೇ ಹೇಳಿಕೆ ನೀಡ್ತಾರೆ. ತಮಿಳುನಾಡಿನಂತೆ ವಸ್ತುಸ್ಥಿತಿ ಹೇಳಲು ನಾವು ಯಾವಾಗ ಕಲಿಯುತ್ತೇವೋ, ತಮಿಳುನಾಡಿನ ಡ್ಯಾಮ್ ಗಳ ಬಗ್ಗೆ ನಮ್ಮ ವಕೀಲರು ಮಾತನಾಡಲ್ಲವೋ ಎಂದರು.

Read More

ಕಚ್ಚಾತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ  ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಭಾರತ ಸೇರಿದಂತೆ ಏಷ್ಯಾ ದೇಶಗಳ ಹಣದುಬ್ಬರ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಾದ್ಯತೆ ಇದೆ. ಚುನಾವಣೆ ವರ್ಷವಾಗಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು ದೇಶದ ಜನತೆ. ಆದರೆ, ಕಚ್ಚಾ ತೈಲದ ದರ ಏರಿಕೆ ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಇಳಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಜನವರಿಯಿಂದ ಕಚ್ಚಾ ತೈಲ ದರ ಬ್ಯಾರೆಲ್ ಗೆ 90 ಡಾಲರ್ ದಾಟಿದೆ. ಭಾರತ ವಿಶ್ವದಲ್ಲೇ ಕಚ್ಚಾ ತೈಲು ಆಮದು ಮಾಡುವುದರಲ್ಲಿ ಮೂರನೇ ದೊಡ್ಡ ದೇಶವಾಗಿದೆ. ತೈಲ ದರದಲ್ಲಿ 10 ಡಾಲರ್ ಏರಿಕೆ ಆದರೆ, ಭಾರತದ ಚಾಲ್ತಿ ಖಾತೆಯ ವಿತ್ತೀಯ ಕೊರತೆಯನ್ನು ಶೇಕಡ 0.2ರಷ್ಟು ಹೆಚ್ಚಿಸುತ್ತದೆ. ತೈಲ ದರ 90 ಡಾಲರ್ ದಾಟಿದ್ದು, ಈ ಟ್ರೆಂಡ್ ಮುಂದುವರೆದರೆ ತೈಲ ಕಂಪನಿಗಳಿಗೆ…

Read More

ತುರುವೇಕೆರೆ: ಭಾರತದಲ್ಲಿ ಸಂವಿಧಾನಕ್ಕೆ ಅತಿ ಹೆಚ್ಚು ಮಹತ್ವ ನೀಡಿರುವುದರಿಂದಲೇ ಇಂದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ನಮ್ಮ ಭಾರತ ಹೊರಹೊಮ್ಮಿದೆ. ಇದು ಪ್ರಜಾಪ್ರಭುತ್ವದ ಶಕ್ತಿ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಎಂಜಿನಿಯರ್ ಕೃಷ್ಣಕಾಂತ್ ಅಭಿಪ್ರಾಯಪಟ್ಟರು. ತುರುವೇಕೆರೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಓದು ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ 164 ವರ್ಷದ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಆಧಾರಿತ ಸಂವಿಧಾನ ಇರುವುದರಿಂದಲೇ ಭಾರತ ಇಂದು ವಿಶ್ವಖ್ಯಾತಿ ಪಡೆದುಕೊಂಡಿದೆ, ನಮ್ಮ ದೇಶದ ಸಂವಿಧಾನವನ್ನು ಇತರೆ ರಾಷ್ಟ್ರದವರು ಅಧ್ಯಯನ ನಡೆಸಿ ತಮ್ಮ ದೇಶಕ್ಕೆ ಅಳವಡಿಸಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು. ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನಂ.ರಾಜು ಮಾತನಾಡಿ, ಎಂ.ವಿಶ್ವೇಶ್ವರಯ್ಯನವರು ಹಲವಾರು ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಹಾಗೆಯೇ ವಿಶ್ವೇಶ್ವರಯ್ಯರವರಂತದ ಎಂಜಿನಿಯರ್ ಗಳು ನಿರ್ಮಿಸಿರುವ ಕಾಮಗಾರಿಗಳು ಇಂದಿಗೂ ಜನರ ಮನದಲ್ಲಿ ಎಂದರು. ಈ ಸಂದರ್ಭದಲ್ಲಿ ಬೆಸ್ಕಾಂ…

Read More