Subscribe to Updates
Get the latest creative news from FooBar about art, design and business.
- “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ
- ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಉರುಳಿ ತಾಯಿ–ಮಗಳು ಸ್ಥಳದಲ್ಲೇ ಸಾವು
- ಗುಜರಾತ್ ಮಾದರಿ ನಮಗೆ ಬೇಡ, ಕರ್ನಾಟಕ ಇಡೀ ದೇಶಕ್ಕೆ ಮಾದರಿ: ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು
- ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ
- ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
- ಪಾರ್ಟ್ಟೈಮ್ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ
- ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!
- ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ
Author: admin
ಬೆಂಗಳೂರು ವಿಶ್ವವಿದ್ಯಾಲಯ ಎಂಸಿಎ, ಎಂ. ಟೆಕ್ ಕೋರ್ಸ್‌ಗಳ ಬೋಧನೆಗೆ ಅವಶ್ಯವಿರುವ 7 ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಪಿಎಚ್. ಡಿ, ನೆಟ್ ಮತ್ತು ಪ್ಲೆಟ್ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಿದೆ. ಗೌರವ ಧನ ಕೂಡ ಮಾಸಿಕ 43,520 ರೂ. ಗಳಿಂದ 49,920 ರೂ. ಗಳವರೆಗೆ ನಿಗದಿ ಮಾಡಿದೆ. ಅರ್ಜಿಗಳನ್ನು ಡಿ.4ರೊಳಗೆ ಸಮನ್ವಯಾಧಿಕಾರಿ, ಎಂಸಿಎ ವಿಭಾಗ, ಸೈಕಾಲಜಿ ಕಟ್ಟಡ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056 ಈ ವಿಳಾಸಕ್ಕೆ ಕಳುಹಿಸಬಹುದು.
1931 ರಲ್ಲಿ ಮನೋವಿಜ್ಞಾನಿಯೊಬ್ಬರಿಗೆ ಗೋರಿಲ್ಲಾದ ಮರಿ ಹಾಗೂ ತನ್ನ ಮಗುವನ್ನು ಒಂದೇ ಮನೆಯಲ್ಲಿ ಸಾಕಿ ಬೆಳಸಿದರೆ ಗೋರಿಲ್ಲಾ ಮನುಷ್ಯರಂತೆ ವರ್ತಿಸಬಹುದು ಎಂಬ ಯೋಚನೆ ಬರುತ್ತದೆ. ಇದನ್ನು ಪರೀಕ್ಷಿಸಲು ಗೋರಿಲ್ಲಾ ಮರಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ನಂತರ ತನ್ನ ಮಗುವಿಗೆ ನೀಡುತ್ತಿದ್ದ ಆಹಾರ ಹಾಗೂ ಬಟ್ಟೆಯನ್ನು ಗೋರಿಲ್ಲಾ ಮರಿಗೂ ನೀಡುತ್ತಾರೆ. ಆದರೆ ಕೆಲವು ದಿನಗಳ ನಂತರ ಗೋರಿಲ್ಲಾ ಮರಿಯನ್ನು ಸಾಕುವುದೇ ನಿಲ್ಲಿಸುತ್ತಾರೆ. ಕಾರಣ ಗೋರಿಲ್ಲಾ ಮನುಷ್ಯರ ರೀತಿ ವರ್ತಿಸದೆ ಅವರ ಮಗುವೇ ಗೋರಿಲ್ಲಾದ ರೀತಿ ವರ್ತಿಸಲು ಆರಂಭಿಸಿರುತ್ತದೆ.
ತುಪ್ಪದ ಕಾಫಿ ಎಂಬ ಹೆಸರು ಕೇಳಲು ನಿಮಗೆ ವಿಚಿತ್ರ ಎನಿಸಬಹುದು. ಆದರೆ ಈ ಕಾಫಿ ಈಗ ಜನರಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ತುಪ್ಪದ ಕಾಫಿ ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ತುಪ್ಪದ ಕಾಫಿಯ ಪ್ರಯೋಜನಗಳು: ಕಾಫಿ ಚಯಾಪಚಯವನ್ನು ಹೆಚ್ಚಿಸಲು ತುಪ್ಪ ಸಹಾಯ ಮಾಡುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತುಪ್ಪವು ಕಾಫಿ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ತುಪ್ಪದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು ಅದರ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಪ್ಪದ ಕಾಫಿ ಸೇವನೆಯೂ ಜೀರ್ಣಕ್ರಿಯೆಗೆ ಸಹಕಾರಿ. ತುಪ್ಪವು ಕಾಫಿ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ತುಪ್ಪ ಮತ್ತು ಕಾಫಿಯ ಸೇವನೆಯು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಕರುಳಿನ ಒಳಪದರವನ್ನು ಬಲಪಡಿಸುತ್ತದೆ. ತುಪ್ಪವು ಕಾಫಿ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ನಿಮ್ಮ ಮನಸ್ಥಿತಿ ಉತ್ತಮ ಮತ್ತು ತಾಜಾವಾಗಿರುತ್ತದೆ. ತುಪ್ಪ ಮತ್ತು ಕಾಫಿಯ ಸೇವನೆಯು ಶಕ್ತಿಯನ್ನು ನೀಡುತ್ತದೆ ಮತ್ತು ಏಕಾಗ್ರತೆಗೆ ಸಹಾಯ…
ಟೆಕ್ ದೈತ್ಯ, ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ತಮ್ಮ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಎಚ್ಚರವಾದಾಗ ಫೋನ್ ನೋಡುವುದರೊಂದಿಗೆ ತನ್ನ ದಿನ ಆರಂಭವಾಗುತ್ತದೆ ಎಂದು ಹೇಳಿರುವ ಅವರು, ಬೆಳಿಗ್ಗೆ ಎದ್ದ ತಕ್ಷಣ ನಾನು ಮಾಡುವ ಮೊದಲ ಕೆಲಸ ನನ್ನ ಫೋನ್ ನಲ್ಲಿ ಫೇಸ್ ಬುಕ್ ತೆರೆಯುವುದು. ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯುವುದು ಎಂದಿದ್ದಾರೆ. ನಿಜ ಹೇಳಬೇಕೆಂದರೆ, ಲೆನ್ಸ್ ಇಲ್ಲದೆ ನನಗೆ ಸರಿಯಾಗಿ ಕಾಣುವುದಿಲ್ಲ. ಹೀಗೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ. ನಾನು ಫೋನ್ ನೋಡುತ್ತೇನೆ ಎಂದು ಬರ್ಗ್ ಹೇಳಿದ್ದಾರೆ.
ಇತ್ತೀಚೆಗೆ ಬಾರ್ ಆಂಡ್ ರೆಸ್ಟೋರೆಂಟ್ ಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಆರ್. ಟಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಇಮ್ರಾನ್ ಅಲಿಯಾಸ್ ಬೊಡ್ಡೆ(29), ಕೆ. ಜಿ. ಹಳ್ಳಿಯ ಮೋಹಿತ್ ಅಲಿಯಾಸ್ ಮೋಹನ್(24), ಅರಾಫತ್ ಅಹಮದ್(25) ಹಾಗೂ ಸೈಯದ್ ಮಾಜ್(22) ಬಂಧಿತರು. ಆರೋಪಿಗಳಿಂದ 12,500 ರೂ. ನಗದು ಹಾಗೂ ನಾಲ್ಕು ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ.
ದಾವಣಗೆರೆಯಲ್ಲಿ ಒಂಬತ್ತು ತಿಂಗಳ ಹಿಂದೆ ನಡೆದ ರೇಣುಕಾಚಾರ್ಯ ಅವರ ಸಹೋದರನ ಮಗನ ಅನುಮಾನಾಸ್ಪದ ಸಾವು ಪ್ರಕರಣ ರಾಜಕೀಯ ವಲಯದಲ್ಲಿ ತಲ್ಲಣ ಎಬ್ಬಿಸಿತ್ತು. ಇದು ಅಪಘಾತವೋ? ಕೊಲೆಯೋ ಅನ್ನೋ ಅನುಮಾನ ಮೂಡಿಸಿತ್ತು. ಆದರೆ ಸುದೀರ್ಘ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಫೈನಲ್ ರಿಪೋರ್ಟ್ ಸಲ್ಲಿಕೆ ಮಾಡಿದೆ. ದಾವಣಗೆರೆಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಇದು ಕೊಲೆಯಿಂದ ಸಂಭವಿಸಿರೋ ಸಾವಲ್ಲ. ಇದು ಅಪಘಾತದಿಂದ ಸಂಭವಿಸಿರೋ ಸಾವು ಎಂದು ಸಿಐಡಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ.
ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಪ್ರೋಟೀನ್ ಆಗಿದೆ. ರಕ್ತ ಕಣಗಳ ಕಾರ್ಯವು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುವುದು. ಕಡಿಮೆ ಹಿಮೋಗ್ಲೋಬಿನ್ ಮಟ್ಟದಿಂದಾಗಿ, ದೇಹದ ಕಾರ್ಯಚಟುವಟಿಕೆಯು ಕೆಟ್ಟದಾಗಿ ಪರಿಣಾಮ ಬೀರಬಹುದು. ಕಡಿಮೆ ಮಟ್ಟಗಳು ನೀವು ರಕ್ತಹೀನತೆ ಅಥವಾ ಕೆಲವು ಯಕೃತ್ತು ಅಥವಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದು ಸೂಚಿಸುತ್ತದೆ. ಹಿಮೋಗ್ಲೋಬಿನ್ ಕೊರತೆಯಿಂದಾಗಿ, ನೀವು ಆಯಾಸ, ದೌರ್ಬಲ್ಯ, ಕಾಮಾಲೆ ಅಥವಾ ಆಗಾಗ್ಗೆ ತಲೆನೋವು ಮುಂತಾದ ಲಕ್ಷಣಗಳನ್ನು ಅನುಭವಿಸಬಹುದು. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು, ನೀವು ಕಬ್ಬಿಣದ ಭರಿತ ಆಹಾರವನ್ನು ಸೇವಿಸಬೇಕು. ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ. ಬೀಟ್ರೂಟ್: ಬೀಟ್ರೂಟ್ ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ರಂಜಕ ಮತ್ತು ವಿಟಮಿನ್ ಬಿ 1, ಬಿ 2, ಬಿ 6, ಬಿ 12 ಮತ್ತು ಸಿ ಯಲ್ಲಿ ಸಮೃದ್ಧವಾಗಿದೆ. ಈ ಅದ್ಭುತ ತರಕಾರಿ ಹಿಮೋಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಕೆಲಸ ಮಾಡುತ್ತದೆ. ನೀವು ಇದನ್ನು ತರಕಾರಿಗಳು,…
ತಿಪಟೂರಿನಲ್ಲಿ 33ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕ ಬಾಲಕಿಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್ ಶಿಪ್ ಡಿಸೆಂಬರ್ 13 ರಿಂದ 17ರವರೆಗೆ ಆಯೋಜಿಸಲಾಗಿದೆ. ಈಗಾಗಲೇ ಹಲವು ಬಾರಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕೋ ಕೋ ಪಂದ್ಯಾವಳಿಗಳನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ವರ್ ಅನುಭವ ಅವರಿಗಿದ್ದು, ಈಗ ಅವರು ರಾಷ್ಟ್ರೀಯ ಕೋಕೋ ಫೆಡರೇಶನ್ ಉಪಾಧ್ಯಕ್ಷ ಸ್ಥಾನದ ಜೊತೆಗೆ ಕರ್ನಾಟಕ ಖೋ ಖೋ ಸಂಸ್ಥೆಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು ಈ ಪಂದ್ಯಾವಳಿ ಮಹತ್ವ ಪಡೆದುಕೊಂಡಿದೆ ಡಿಸೆಂಬರ್ 13ರಂದು ಗೃಹ ಸಚಿವ ಪರಮೇಶ್ವರ್ ಕ್ರೀಡಾ ಸಚಿವ ಬಿ ನಾಗೇಂದ್ರ ಅವರು ರಾಷ್ಟ್ರೀಯ ಕೋ ಕೋ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಬಹುಮಾನ ವಿತರಣೆಯನ್ನು ಸಹಕಾರ ಸಚಿವ ಕೆ. ಎನ್. ರಾಜಣ್ಣ ಸಂಸದ ಡಿ ಎಸ್ ಬಸವರಾಜ್ ತಿಪಟೂರು ಶಾಸಕ ಕೆ ಷಡಕ್ಷರಿ ಅವರು ಆಗಮಿಸಲಿದ್ದಾರೆ. ಪಂದ್ಯಾವಳಿಗಾಗಿ ಎರಡು ಸಂಪೂರ್ಣ ಸಿಂಥಟಿಕ್ ಕೋಟ್ ಸೇರಿ ಐದು ವಿಶೇಷ ಕೋರ್ಟ್ ಗಳನ್ನು ನಿರ್ಮಿಸಲಾಗಿದ್ದು, ಈ ಪಂದ್ಯಾವಳಿ ಯಶಸ್ವಿಗೆ ಹಲವು ಕ್ರೀಡಾ ಸಂಘ…
ಕೊರಟಗೆರೆ: ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆ ಹಾಗೂ ಅವರ ಸ್ನೇಹಿತ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಮಾರ್ಗದಲ್ಲಿ ನಡೆದಿದೆ. ಕೊಡಿಗೆನಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಹೇಶ್ (27) ಹಾಗೂ ಚಂದ್ರಯ್ಯ (35) ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಭರತ್ (22) ಎಂಬವರು ಗಾಯಗೊಂಡಿದ್ದು, ಅವರನ್ನು ತುಮಕೂರಿನ ಆದಿತ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಸಿಲುಕಿದವರೆಲ್ಲರೂ ಮಧುಗಿರಿ ತಾಲೂಕಿನ ಗರಣಿ ಗ್ರಾಮದ ಯುವಕರಾಗಿದ್ದಾರೆ. ಸ್ನೇಹಿತನ ಮದುವೆ ಮುಗಿಸಿ, ಸಿದ್ಧರಬೇಟ್ಟದಿಂದ ಕೊರಟಗೆರೆಗೆ ಬರುವ ಮಾರ್ಗದ ಅರಣ್ಯ ಇಲಾಖೆಯ ನರ್ಸರಿಯ ಸಮೀಪದ ರಸ್ತೆಯ ತಿರುವಿನಲ್ಲಿ ಬೈಕ್ ಆಯಾ ತಪ್ಪಿ ಬಿದ್ದಿದ್ದು, ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ, ಕೊರಟಗೆರೆ ಸಿಪಿಐ, ಪಿಎಸೈ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ಬೆಂಗಳೂರು: “ನಮ್ಮ ರಾಜ್ಯದಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸಿಎಸ್ಆರ್ ನಿಧಿಯನ್ನು ಮೀಸಲಿಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉದ್ಯಮಿಗಳಿಗೆ ಕರೆ ನೀಡಿದರು. ಬೆಂಗಳೂರು ಮುಖ್ಯ ಅರಮನೆಯಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,“ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಹೆಚ್ಚಿದರೆ ಆ ಭಾಗದ ಮಕ್ಕಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುತ್ತದೆ. ಈ ಬಗ್ಗೆ ಪ್ರೇಮ್ ಜೀ ಸೇರಿದಂತೆ ಹಲವರ ಜತೆ ಚರ್ಚೆ ಮಾಡಿದ್ದು, ಈಗಾಗಲೇ 2 ಸಾವಿರ ಕೋಟಿ ಹಣವನ್ನು ಈ ಉದ್ದೇಶಕ್ಕೆ ನೀಡಲು ಅವರು ಮುಂದಾಗಿದ್ದಾರೆ. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಡಿಕೆಶಿ ಕರೆ ನೀಡಿದರು. ರಾಜ್ಯದಲ್ಲಿ ನೂತನ ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಲಾಗಿದೆ. ಆದರೂ ಉದ್ಯಮದಾರರಿಗೆ ರಾಜ್ಯ ಸರ್ಕಾರ ಯಾವ ಸವಲತ್ತು ಹಾಗೂ ಪ್ರೋತ್ಸಾಹ ಸಿಗುತ್ತದೆ ಎಂಬುದು ಮುಖ್ಯವಾಗುತ್ತದೆ. ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಬಲಿಷ್ಠವಾದರೆ,…