Subscribe to Updates
Get the latest creative news from FooBar about art, design and business.
- ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
- 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
- ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
- ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
Author: admin
ಕರ್ನಾಟಕ ರಾಜಕೀಯ ರಾಜ್ಯ ವಿಶೇಷ ಚೇತನ ಸಮುದಾಯವು ರಾಜಕೀಯವಾಗಿ ಒಳಗೊಳ್ಳುವಿಕೆ ಮತ್ತು ಅವರ ಗೌರವ ಹೆಚ್ಚಿಸಲು ಕೇಂದ್ರ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಯಾವುದೇ ರಾಜಕೀಯ ಪಕ್ಷಗಳ ಸದಸ್ಯರು ಅಥವಾ ಅವರ ಅಭ್ಯರ್ಥಿಗಳು ಭಾಷಣ, ಪ್ರಚಾರದಲ್ಲಿ ದಿವ್ಯಾಂಗರಿಗೆ ಧಕ್ಕೆ ತರುವಂತಹ ಭಾಷೆ ಬಳಸುವಂತಿಲ್ಲ. ಉದಾಹರಣೆಗೆ ಮೂಕ(ಗುಂಗಾ), ರಿಟಾರ್ಡೆಡ್ (ಪಾಗಲ್, ಸಿರ್ಫಿರಾ), ಕುರುಡು (ಅಂಧ, ಕನಾ), ಕಿವುಡ (ಬೆಹ್ರಾ) ಕುಂಟ (ಲಂಗ್ಲಾ, ಲೂಲಾ, ಅಪಹಿಜ್) ಮುಂತಾದ ಪದಗಳ ಬಳಕೆ ಮಾಡುವಂತಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವರ ಪ್ರತಿನಿಧಿಗಳು ತಮ್ಮ ಬರಹಗಳು, ಲೇಖನಗಳು ಸೇರಿದಂತೆ ಪ್ರಚಾರದ ಸಂದರ್ಭಗಳಲ್ಲಿ ಅಥವಾ ರಾಜಕೀಯ ಪ್ರಚಾರದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ, ಭಾಷಣದ ಸಮಯದಲ್ಲಿ ದಿವ್ಯಾಂಗರ ಅಂಗವೈಕಲ್ಯ ಅಥವಾ ಅಂಗವಿಕಲತೆಯನ್ನು ಆಡಿಕೊಳ್ಳುವ, ಅವಹೇಳನಕಾರಿ, ಅವಮಾನಕರ ಪದಗಳನ್ನು ಬಳಸಬಾರದು. ರಾಜಕೀಯ ಪಕ್ಷಗಳು ಮತ್ತು ಪಕ್ಷದ ಪ್ರತಿನಿಧಿಗಳು ದಿವ್ಯಾಂಗರ ಅಂಗವಿಕಲತೆ, ಭಾಷೆ, ಪರಿಭಾಷೆ, ಸಂದರ್ಭ, ಅಪಹಾಸ್ಯ, ಅವಹೇಳನಕಾರಿ ಉಲ್ಲೇಖಗಳು ಮತ್ತು ಅವರನ್ನು ಅವಮಾನಿಸುವ ಯಾವುದೇ…
ನಿಮಗಿಂತ ಹಿರಿಯ ಅಥವಾ ಗೌರವಾನ್ವಿತರನ್ನು ನೀವು ಭೇಟಿಯಾದಾಗ ಪಾದಗಳನ್ನು ಮುಟ್ಟಿ ನಮಸ್ಕರಿಸಬೇಕು ಎಂದು ಬಾಲ್ಯದಿಂದಲೂ ಕಲಿಸಲಾಗುತ್ತದೆ. ಆದರೆ, ಜನರ ಪಾದಗಳನ್ನು ಮುಟ್ಟಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ದೇವರಿಗಿಂತ ದೊಡ್ಡವರು ಯಾರೂ ಇಲ್ಲ, ದೇವರ ವಿಗ್ರಹದ ಮುಂದೆ ಯಾರ ಪಾದವನ್ನೂ ಮುಟ್ಟಬಾರದು. ಒಬ್ಬ ವ್ಯಕ್ತಿಯು ಮಲಗಿದ್ದರೆ ಅಥವಾ ಮಲಗುತ್ತಿದ್ದರೆ ಅವನ ಪಾದಗಳನ್ನು ಮುಟ್ಟಬಾರದು. ಸ್ಮಶಾನದಿಂದ ಹಿಂತಿರುಗುವ ವ್ಯಕ್ತಿಯ ಪಾದಗಳನ್ನು ಮುಟ್ಟಬಾರದು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ಕೆ. ಪೊನ್ಮುಡಿ ಜೈಲು ಪಾಲಾಗಿದ್ದಾರೆ. ಮದ್ರಾಸ್ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ಪೊನ್ಮುಡಿ ಅವರ ಪತ್ನಿ ಪಿ. ವಿಶಾಲಾಕ್ಷಿ ಅವರಿಗೂ ಹೈಕೋರ್ಟ್ ಶಿಕ್ಷೆ ವಿಧಿಸಿದೆ. ಪೊನ್ಮುಡಿ ಅವರು 2006-2011ರ ಅವಧಿಯಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಆರೋಪಿಗಳಿಗೆ ಮೇಲ್ಮನವಿ ಸಲ್ಲಿಸಲು ಮದ್ರಾಸ್ ಹೈಕೋರ್ಟ್ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿದೆ. ಹೈಕೋರ್ಟ್ ತೀರ್ಪಿನೊಂದಿಗೆ ಪೊನ್ಮುಡಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ಪೊನ್ಮುಡಿ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವರು. ಕಳೆದ ದಿನ ಪೊನ್ಮುಡಿ ಅವರನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಜಿ. ಜಯಚಂದ್ರನ್ ರದ್ದುಗೊಳಿಸಿದ್ದರು. ಪೊನ್ಮುಡಿ ಮತ್ತು ಅವರ ಪತ್ನಿಯನ್ನು ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರ…
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಎಂಟು ವಾರಗಳಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿಯನ್ನು ‘ಪಿಕ್ ಪಾಕೆಟ್’ ಎಂದು ಬಣ್ಣಿಸಿದ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ ಮತ್ತು ರಾಜಕೀಯ ನಾಯಕರ ಇಂತಹ ದುರ್ವರ್ತನೆಗಳನ್ನು ತಡೆಯಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ರಾಹುಲ್ ಗಾಂಧಿ ಅವರ ಹೇಳಿಕೆ ಸರಿಯಲ್ಲ ಎಂದು ಹೇಳಿದ ಕೋರ್ಟ್, ನವೆಂಬರ್ 23 ರಂದು ನೀಡಲಾದ ನೋಟಿಸ್ ಕುರಿತು ಎಂಟು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.…
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯೋಧ ವೀರ ಮರಣವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಒಟ್ಟು ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ಪತ್ತೆ ಹಚ್ಚಿದ ಸೇನೆ ನಡೆಸಿದ ಶೋಧದ ವೇಳೆ ಉಗ್ರರು ಸೇನಾ ವಾಹನದ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಇಬ್ಬರು ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸೇನಾ ವಾಹನದ ಮೇಲೆ ದಾಳಿ ನಡೆಸಿದ ನಂತರ ಉಗ್ರರು ಅರಣ್ಯ ಪ್ರದೇಶಕ್ಕೆ ನುಗ್ಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿಯಾಗಿ ಎನ್ ಕೌಂಟರ್ ನ ನೇತೃತ್ವ ವಹಿಸಿದೆ. ನಿನ್ನೆ ಮಧ್ಯಾಹ್ನ 3.45ಕ್ಕೆ ರಾಜೌರಿಯ ಪೂಂಚ್ ಪ್ರದೇಶದಲ್ಲಿ ಡೇರಾ ಕಿ ಗಲಿ ಮೂಲಕ ಸಾಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚುದಾಳಿ ನಡೆಸಿದಾಗ ಎನ್ ಕೌಂಟರ್ ಪ್ರಾರಂಭವಾಯಿತು. ನಿನ್ನೆ ರಾತ್ರಿಯಿಂದ ರಾಜೌರಿ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಪೂಂಚ್…
ಮೈಸೂರು ವಿಮಾನದ ನಿಲ್ದಾಣಕ್ಕೆ ಟಿಪ್ಪು ಹೆಸರು ನಾಮಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಟಿಪ್ಪು ಒಬ್ಬ ನಮ್ಮ ನಾಡೀನ ವೀರ ಬ್ರಿಟಿಷರ ವಿರುದ್ಧ ಹೋರಾಡಿ, ತನ್ನ ಮಕ್ಕಳನ್ನೇ ಒತ್ತೆ ಇಟ್ಟ ವ್ಯಕ್ತಿ. ಈ ನಾಡಿಗೆ ಟಿಪ್ಪು ಕೊಡುಗೆ ಅಪಾರ. ಮೈಸೂರು ಮಹಾರಾಜರ ಹೆಸರು ಎಲ್ಲಾ ಕಡೆ ಇದೆ. ನನ್ನ ಅಭಿಪ್ರಾಯದ ಪ್ರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಟ್ಟರೆ ನನ್ನ ಸಹಮತ ಇದೆ ಎಂದು ಟಿಪ್ಪು ಪರ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಬ್ಯಾಟ್ ಬೀಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಡಬ್ಲ್ಯೂಆರ್ ಸಿ ಮತ್ತೆ ಆದೇಶ ಹಿನ್ನೆಲೆ, ಕಾವೇರಿ ವಿವಾದ ವಿಚಾರದಲ್ಲಿ ಪ್ರತಿ ಬಾರಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನ ನಿಲ್ಲಿಸುವಂತೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರದ ಮತ್ತು ಕಾವೇರಿ ನ್ಯಾಯಾ ಮಂಡಳಿ ವಿರುದ್ಧ ಆಕ್ರೋಶ…
ರಾಜ್ಯದಲ್ಲಿ JN.1 ವೈರಸ್ ಭೀತಿ ಹಿನ್ನೆಲೆ ಬೆಂಗಳೂರು ನಗರದ ಶಾಲೆಗಳ ಮಕ್ಕಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ. ರಾಜಧಾನಿಯಲ್ಲಿ ಕೋವಿಡ್ ಗೆ ಈಗಾಗಲೇ ಮೂವರು ಸೋಂಕಿತರು ಸಾವನ್ನಪ್ಪಿದೆ. ಹೀಗಾಗಿ ಮಕ್ಕಳಿಗೆ ಕೊರೋನಾ ವಕ್ಕರಿಸಿದಂತೆ ನೋಡಿಕೊಳ್ಳಲು ಖಾಸಗಿ ಶಾಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಹಿಂದಿನ ಕೊರೊನಾ ಅಲೆಯಲ್ಲಿ ಆರ್ಥಿಕ ಹೊಡೆತ ತಿಂದಿದ್ದ ಖಾಸಗಿ ಶಾಲೆಗಳಿಗೆ ಇದೀಗ ಮತ್ತೊಮ್ಮೆ ಭೀತಿ ಎದುರಾಗಿದೆ. ಅಲ್ಲದೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಚಿಂತನೆ ನಡೆಸಲಾಗುತ್ತಿದ್ದು, ಕೆಲವು ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪೋಷಕರಿಗೆ ಶಾಲೆ ಆಡಳಿತ ಮಂಡಳಿಗಳು ಸಂದೇಶ ರವಾನಿಸಿದ್ದಾರೆ. JN.1 ವೈರಸ್ ರಾಕೆಟ್ ವೇಗದಲ್ಲಿ ಹರಡುವ ಹಿನ್ನೆಲೆ ಮಕ್ಕಳ ಬಗ್ಗೆ ಜಾಗೃತಿಗೆ ಕೆಲ ಖಾಸಗಿ ಶಾಲೆಗಳು ನಿರ್ಧಾರ ಮಾಡಿದ್ದು, ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಿ, ತಮ್ಮ ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇದ್ದರೆ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದ್ದಾರೆ. ಖಾಸಗಿ ಶಾಲಾ ಒಕ್ಕೂಟ ಹೈ…
ಮನೆಯಿಂದ ಹೊರ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿರುವ ಘಟನೆ ಬೆಳಗಾವಿ ತಾಲೂಕಿನ ಬಿ ಕೆ ಕಂಗ್ರಾಳಿ ಗ್ರಾಮದಲ್ಲಿ ನಡೆದಿದೆ. ಸುಭಾಷ್ ಕಲ್ಲಪ್ಪ ಕುರುಡೆ (56) ಮೃತಪಟ್ಟ ದುರ್ದೈವಿಯಾಗಿದ್ದು ಅನೈತಿಕ ಸಂಬಂಧ ಕೊಲೆಗೆ ಕಾರಣವಾಗಿದೆ ಎಂಬ ಶಂಕೆ ವ್ಯಲ್ತವಾಗಿದೆ. ಪತ್ನಿಯು ಪರಪುರುಷನೊಂದಿಗೆ ಅನೈತಿಕ ಸಂಬಂಧ ಕುರಿತು ಪ್ರಶ್ನಿಸಿದಾಗ ಪತಿಗೆ ಪತ್ನಿಯಿಂದ ಪ್ರತಿ ಬಾರಿ ಹಲ್ಲೆಗೊಳಾಗುತ್ತಿದ್ದ ಹಾಗೂ ಸುಮಾರು ವರ್ಷಗಳಿಂದ ಈ ಘಟನೆ ನಡೆಯುತ್ತ ಬಂದಿದ್ದು ಮಂಗಳವಾರ ಈ ಜಗಳ ಪಂಚಾಯತಿ ಕಟ್ಟಿಗೆ ಹತ್ತಿದೆ. ಸುಭಾಷ್ ಉರುಡೆ ಅವರು ಪಂಚಾಯತಿ ಸದಸ್ಯರುಗಳಿಗೆ ತಮ್ಮ ಪತ್ನಿಯ ವಿರುದ್ಧ ದೂರ ನೀಡಲು ಹೋದಾಗ ಪತ್ನಿ ಪಂಚಾಯಿತಿಗೆ ಬಂದು ಪತಿಯನ್ನು ಥಳಸಿ ಕರೆದುಕೊಂಡು ಹೋಗಿದ್ದಾಳೆ ಎಂದು ಸ್ಥಳೀಯ ಪ್ರತ್ಯಕ್ಷಿದರ್ಶಿಗಳ ಹೇಳಿಕೆಯಾಗಿದೆ. ಮಂಗಳವಾರ ರಾತ್ರಿಯಿಂದ ಮನೆಯಿಂದ ಹೊರಗೆ ಹೋಗಿರುವ ಸುಭಾಷ್ ಉರುಡೆ ಅವರು ಬುಧವಾರ ಸಾಯಂಕಾಲ ಶವ ಆಗಿ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಎಪಿಎಂಸಿ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ…
ಬೆಂಗಳೂರು: ಒಮಿಕ್ರಾನ್ ಉಪತಳಿ JN.1 ತಳಿಯಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇರಬೇಕು, ಕ್ರಮ ಅನುಸರಿಸಬೇಕು. ಮಾಸ್ಕ್ ಕಡ್ಡಾಯ ಮಾಡಲ್ಲ. ಕಡ್ಡಾಯ ಮಾಡುವ ಪರಿಸ್ಥಿತಿ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ, ಹೋಂ, ಡಿಸಿಎಂ, ಸಿಎಸ್, ಹಣಕಾಸು, ತಜ್ಞರ ಸಮಿತಿ ಜೊತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೂವರು ಕೊರೊನಾದಿಂದ ಮೃತರಾಗಿದ್ದಾರೆ. ಆದರೆ ಅವರು ಕೋವಿಡ್ ನಿಂದಲೇ ಸತ್ತಿದ್ದಾರೆ ಅನ್ನೋಕೆ ಆಗಲ್ಲ. ಅವರಿಗೆ ಬೇರೆ ಬೇರೆ ಸಮಸ್ಯೆ ಇತ್ತು. ಅವರಿಗೆ ಕೋವಿಡ್ ಪಾಸಿಟಿವ್ ಇತ್ತು. ಆರೋಗ್ಯ ಸಚಿವರು ಈಗಾಗಲೇ ಸಭೆ ಮಾಡಿದ್ದಾರೆ ಎಂದರು. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ ಯಾವುದೂ ಕೊರತೆ ಆಗಬಾರದು. ಬೇರೆ ಕಾಯಿಲೆ ಇರೋರಿಗೂ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ. ಯಾವುದೇ ಕೊರತೆ ಆಗದಂತೆ ಸೂಚನೆ ನೀಡಿದ್ದೇನೆ. ಲಸಿಕೆ ಅಭಿಯಾನ…
ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಮೊದಲ ಬಾರಿಗೆ ದಳಪತಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಪುತ್ರರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಅವರೊಂದಿಗೆ ಮೋದಿ ಅವರನ್ನು ಭೇಟಿಯಾದರು. ಭೇಟಿ ಮಾಡಿದ ಬಳಿಕ ಎಕ್ಸ್ ನಲ್ಲಿ ಫೋಟೋಗಳನ್ನು ಮೋದಿ ಪೋಸ್ಟ್ ಮಾಡಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ರಾಷ್ಟ್ರದ ಪ್ರಗತಿಗೆ ದೇವೇಗೌಡರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ ಎಂದು ಬರೆದು ಕೊಂಡಿದ್ದಾರೆ. ಭೇಟಿಯ ವೇಳೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಜೊತೆಗಿದ್ದರು.