Subscribe to Updates
Get the latest creative news from FooBar about art, design and business.
- ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
- ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
- ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
- ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ
- ಸರಗೂರು: ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಆಯ್ಕೆ
Author: admin
ಬೆಳಗಾವಿ: ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದ್ದಾರೆ. ಇದಕ್ಕೂ , ಮೊದಲು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿವರೆಗೂ ಪ್ರತಿಭಟನೆ, ಬಡವರ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ, ನೀರಾವರಿ ನಿಗಮದ ಮುಖ್ಯ ಅಭಿಯಂತರ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪರಿಹಾರ ಕೊಡಿ ಇಲ್ಲವಾದರೆ ಒಂದು ತೊಟ್ಟು ವಿಷ ಕೊಡಿ ಎಂದು ರೈತರು ಆಕ್ರೋಶ ಹೊರಹಾಕಿದರು. ನೀರಾವರಿ ಕಚೇರಿ ಮುತ್ತಿಗೆ ಹಾಕಿ, ಪರಿಹಾರ ವಿಳಂಬ ಮಾಡುತ್ತಿರುವ ನೀರಾವರಿ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿದರು. ರೈತರ ಫಲವತ್ತಾದ 394 ಎಕರೆ ಜಮೀನುಗಳು ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಕಳೆದ 40 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಅನ್ನದಾತರಿಗೆ ಮೋಸ ಮಾಡುತ್ತಿರುವ 3 ಅಧಿಕಾರಿಗಳನ್ನು ಶೀಘ್ರವೇ…
ಲಖನೌ: ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ತಾನು ಸಾಲ ಕೊಟ್ಟ ₹ 200 ವಾಪಸ್ ಕೇಳಿದ್ದ 10ನೇ ತರಗತಿಯ ಬಾಲಕನಿಗೆ ಆತನ ಸಹಪಾಠಿಗಳು ಬಲವಂತವಾಗಿ ಮದ್ಯ ಕುಡಿಸಿ, ಬಟ್ಟೆ ಬಿಚ್ಚಿಸಿ ಥಳಿಸಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಝಾನ್ಸಿಯಲ್ಲಿ ಈ ಕೃತ್ಯ ನಡೆದಿದ್ದು, 16 ವರ್ಷದ ಸಂತ್ರಸ್ತ ಬಾಲಕನಿಗೆ ಶಂಕಿತರು ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆದು, ತಮ್ಮ ಫೋನ್ ಗಳಲ್ಲಿ ಹಲ್ಲೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದೃಶ್ಯಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ವೈರಲ್ ವೀಡಿಯೊದಿಂದ ನಾನು ಅವಮಾನಿತನಾಗಿದ್ದೇನೆ. ನಾನು ತುಂಬಾ ನೊಂದಿದ್ದೇನೆ ಎಂದು ಬಾಲಕ ತನ್ನ ಕುಟುಂಬ ಸದಸ್ಯರೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಅವರು ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಳೆಯುವ, ನಿಷ್ಕಳಂಕ ತ್ವಚೆ ಪ್ರತಿಯೊಬ್ಬರ ಕನಸಾಗಿದ್ದು, ಪರಿಹಾರವು ನಿಮ್ಮ ಅಡುಗೆ ಮನೆಯಲ್ಲಿಯೇ ಇರಬಹುದು! ನೆಲ್ಲಿಕಾಯಿ ನಿಮ್ಮ ತ್ವಚೆಗೆ ಕಾಂತಿಯುತ ಚರ್ಮವನ್ನು ನೀಡುತ್ತದೆ. ಕಾಂತಿಯುತ ಚರ್ಮಕ್ಕಾಗಿ ನೆಲ್ಲಿಕಾಯಿಯನ್ನು ಹೇಗೆ ಬಳಸುವುದು: ಚರ್ಮಕ್ಕಾಗಿ ನೆಲ್ಲಿಕಾಯಿ ಫೇಸ್ ಮಾಸ್ಕ್: ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪ ಅಥವಾ ಮೊಸರಿನೊಂದಿಗೆ ಬೆರೆಸಿ ಫೇಸ್ ಮಾಸ್ಕ್ ಅನ್ನು ರಚಿಸಿ. ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ, 15-20 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ನೆಲ್ಲಿಕಾಯಿಯ ಉತ್ಕರ್ಷಣ ನಿರೋಧಕಗಳು ಅದ್ಭುತಗಳನ್ನು ಮಾಡುತ್ತದೆ, ನಿಮ್ಮ ಚರ್ಮವನ್ನು ಉಲ್ಲಾಸಗೊಳಿಸುತ್ತದೆ. ನೆಲ್ಲಿಕಾಯಿ ಮತ್ತು ಅರಿಶಿನ ಫೇಸ್ ಸ್ಕ್ರಬ್: ನೆಲ್ಲಿಕಾಯಿ ಪುಡಿ ಮತ್ತು ಅರಿಶಿನವನ್ನು ಬಳಸಿ ಮೃದುವಾದ ಸ್ಕ್ರಬ್ ಮಾಡಿ. ಇದು ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ, ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ ಮತ್ತು ಹೊಳಪಿನ ಮೈಬಣ್ಣವನ್ನು ಬಹಿರಂಗಪಡಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಬಳಸಿ. ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ: ಇದು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ…
ಮೈಸೂರು: ಜಿಲ್ಲೆಯ ಕೆಆರ್ ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಬಳಿ ಎರಡು ಅಪರಿಚಿತ ಶವಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಶವಗಳನ್ನು ಮೂಟೆಯಲ್ಲಿ ಕಟ್ಟಿ ಮೃತದೇಹವನ್ನು ಬಿಸಾಕಿದ್ದಾರೆ. ಎರಡು ಮೃತದೇಹದ ಮೇಲೂ ವಿಭಿನ್ನವಾದ ಟ್ಯಾಟುಗಳಿದ್ದು, ಓರ್ವನ ಒಂದು ಕೈನಲ್ಲಿ VR 4B THE DOCTOR LEGEND ಎಂದಿದ್ದರೆ, ಮತ್ತೊಂದು ಕೈನಲ್ಲಿ ಸೂಪರ್ ಮ್ಯಾನ್ ಸಿಂಬಲ್ ಹಾಗೂ ಸಿಂಹದ ಟ್ಯಾಟು ಇದೆ. ಇನ್ನು ಮತ್ತೋರ್ವನ ಕೈನಲ್ಲೂ ಟ್ಯಾಟು ಇದೆ. ಇಬ್ಬರನ್ನು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಕೆ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮದ್ಯ ಸೇವಿಸಿ ಬಂದು ಪತ್ನಿಯ ಶೀಲದ ಬಗ್ಗೆ ಶಂಕಿಸಿ ಹೀನಾಯವಾಗಿ ಮಾತನಾಡಿ ಜಗಳವಾಡಿದ ಪತಿಯ ಎದೆಗೆ ಪತ್ನಿಯೇ ಚಾಕುವಿನಿಂದ ತಿವಿದು ಹತ್ಯೆಗೈದಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಮೇಶ್ ದಾಮಿ (27) ಮೃತನಾಗಿದ್ದು, ಆತನ ಪತ್ನಿ ಮನಿಷಾ ಆರೋಪಿಯಾಗಿದ್ದಾರೆ. ರಾತ್ರಿ ಉಮೇಶ್ ಸ್ನೇಹಿತರೊಡನೆ ಹೊರಹೋಗಿ, ಕಂಠಪೂರ್ತಿ ಮದ್ಯಸೇವನೆ ಮಾಡಿ ಮನೆಗೆ ಬಂದಿದ್ದ. ಈ ವೇಳೆ ಹೆಂಡತಿ ಯಾರೊಡನಯೋ ಫೋನ್ ನಲ್ಲಿ ಮಾತಾಡುತ್ತಿರುವುದನ್ನು ಕಂಡು ಸಿಟ್ಟಾಗಿ, ಆಕೆಯ ಶೀಲದ ಬಗ್ಗೆ ಹೀನಾಯವಾಗಿ ಮಾತನಾಡಿದ್ದ. ಇದರಿಂದ ರೊಚ್ಚಿಗೆದ್ದ ಪತ್ನಿ ಚಾಕುವಿನಿಂದ ಉಮೇಶ್ ಎದೆಗೆ ತಿವಿದಿದ್ದಳು. ರಕ್ತಸ್ರಾವದಿಂದಾಗಿ ಉಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹುಳಿಮಾವು ಠಾಣೆಯ ಪೊಲೀಸರು ಮನಿಷಾಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ನೆರೆ ಮನೆಯ ಬ್ಯಾಚುಲರ್ ಯುವಕರ ಎಡವಟ್ಟಿಗೆ 5ವರ್ಷದ ಬಾಲಕಿ ತೆರೆದ ಸಂಪ್ ಗೆ ಬಿದ್ದುಸಾವನ್ನಪ್ಪಿರುವ ಘಟನೆ ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ. ನಸ್ತಿನ ಭಾನು ಮತ್ತು ಸೈಯದ್ ಹುಸೇನ್ ದಂಪತಿಗಳ ಮಗಳಾದ ಶಾಹಿದ ಬಾನು(05) ಮೃತ ಬಾಲಕಿ. ಆಟವಾಡುತ್ತಿದ್ದ ಮಗು ಕಾಣದ ಹಿನ್ನೆಲೆ ಮನೆಯ ಅಕ್ಕಪಕ್ಕದಲ್ಲಿ ಅಜ್ಜಿ ಫಾಮೀದಾ ಹುಡುಕಾಟ ನಡೆಸಿದ್ದರು. ಹೀಗೆ ಹುಡುಕಾಟ ನಡೆಸುತ್ತಾ ತೆರೆದ ಸಂಪ್ ನಲ್ಲಿ ನೋಡಿದಾಗ ಮಗು ಚಪ್ಪಲಿಯೊಂದು ನೀರಿನ ಮೇಲೆ ತೇಲುತ್ತಿತ್ತು. ಈ ಹಿನ್ನಲೆ ಎದುರು ಮನೆಯ ಚಂದ್ರಶೇಖರ್ ಎಂಬುವವರು ನೀರಿಗಿಳಿದು ನೋಡಿದಾಗ ಮಗು ಸಂಪ್ ನಲ್ಲಿ ತೇಲುತ್ತಿತ್ತು. ಕೂಡಲೇ ಸ್ಥಳಕ್ಕೆ ಬಂದ ಬಾಗಲಗುಂಟೆ ಪೊಲೀಸರು, ಸ್ಥಳೀಯರ ನೆರವಿನಿಂದ ಮಗುವಿನ ಮೃತದೇಹವನ್ನು ಹೊರಕ್ಕೆ ತೆಗೆದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಹಿನ್ನೆಲೆ ಬಿಹಾರಿ ಬ್ಯಾಚುಲರ್ ಹುಡುಗರು ಸ್ಥಳದಿಂದ ಪರಾರಿಯಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನವದೆಹಲಿ: ಶೀತ ನಿರೋಧಕ ಸಿರಪ್ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಭಾರತದ ಔಷಧ ನಿಯಂತ್ರಕ ಹೇಳಿದೆ. ಕೆಮ್ಮಿನ ಸಿರಪ್ ನೀಡಿದ ಬಳಿಕ ಜಾಗತಿಕವಾಗಿ 141 ಮಕ್ಕಳು ಮೃತಪಟ್ಟಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಔಷಧ ನಿಯಂತ್ರಕ ಈ ಕ್ರಮ ಕೈಗೊಂಡಿದೆ. ಮಕ್ಕಳಿಗೆ ಶೀತ ನಿರೋಧಕ ಔಷಧ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಶೀತ ನಿರೋಧಕ ಔಷಧದ ಸಂಯೋಜನೆಯ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಸದ್ಯದ ಮಟ್ಟಿಗೆ ಚಿಕ್ಕಮಕ್ಕಳಿಗೆ ಅನುಮೋದಿತವಲ್ಲದ ಈ ಸಿರಪ್ ಅನ್ನು ನೀಡಬಾರದು ಎಂದು ಔಷಧ ನಿಯಂತ್ರಕ ಹೇಳಿದೆ. ಕಳೆದ ವರ್ಷ ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್ನಲ್ಲಿ ಕನಿಷ್ಠ 141 ಮಕ್ಕಳು ಸಿರಪ್ ಸೇವನೆಯ ಪರಿಣಾಮ ಮೃತಪಟ್ಟಿದ್ದರು. 2019ರಿಂದಲೂ ಕಫ್ ಸಿರಪ್ ಗಳಲ್ಲಿ ವಿಶಾಂಷ ಇರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಮಕ್ಕಳ ಸಾವಿನ ವಿಚಾರ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಔಷಧ ತಯಾರಕರು ‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್ ಅನ್ನು ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಉತ್ಪನ್ನಗಳ ಮೇಲೆ ಲೇಬಲ್…
ಕ್ಯಾಮಲಿನ್ ಉತ್ಪನ್ನಗಳ ಬಳಕೆ ಕುರಿತು ಪ್ರಾಯೋಗಿಕ ಕಲಾ ಕಾರ್ಯಾಗಾರ ತುಮಕೂರು: ಅಂಗೈಯಲ್ಲಿಯೇ ಪ್ರಪಂಚ ನೋಡುವಂತಹ ಕಾಲದಲ್ಲಿ ನಾವಿದ್ದೇವೆ. ಇವತ್ತು ಶಿಕ್ಷಣ ಎಂಬುದು ಕೂತಲ್ಲಿಯೇ ತಿಳಿದುಕೊಳ್ಳುವ ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಗ್ರಹಿಸಿಕೊಂಡು ಆಳವಾದ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹಿರಿಯ ಚಿತ್ರಕಲಾವಿದ ಪಿ.ಎಸ್.ಗ್ರಾಮ್ ಪುರೋಹಿತ್ ಹೇಳಿದರು. ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜು ಹಾಗೂ ಕ್ಯಾಮಲಿನ್ ಕಂಪನಿ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕ್ಯಾಮಲಿನ್ ಉತ್ಪನ್ನಗಳ ಬಳಕೆ ಕುರಿತು ಒಂದು ದಿನದ ಪ್ರಾಯೋಗಿಕ ಕಲಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಚಿತ್ರಕಲಾ ಕ್ಷೇತ್ರ ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗಿದೆ. ಈ ಕ್ಷೇತ್ರಕ್ಕೆ ತನ್ನದೇ ಆದ ಮೌಲ್ಯವನ್ನು ತಂದುಕೊಡುವ ಕೆಲಸ ಕಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರು ಮಾಡಬೇಕು. ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಮುಂದುವರಿಯಲು ಕಾಲೇಜಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರಗಳು ಒದಗಿಸಬೇಕು ಎಂದು ಮನವಿ ಮಾಡಿದರು. ನಿವೃತ್ತ ಶಿಕ್ಷಕರಾದ ಎಂ.ಎನ್.ಸುಬ್ರಮಣ್ಯ ಮಾತನಾಡಿ, ಕಲಾ ವಿದ್ಯಾರ್ಥಿಗಳು ಕಲಾಕೃತಿಗಳ ವೀಕ್ಷಣೆಯತ್ತ ಹೆಚ್ಚು ಮುಖಮಾಡಬೇಕು. ಕಲೆಗೆ…
ಬೆಂಗಳೂರು: ಎರಡನೇ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಹೋಮ್ ಗಾರ್ಡ್ ಆಗಿರುವ ಪ್ರಿಯತಮೆ ಪ್ರಿಯಕರ ಕಾನ್ ಸ್ಟೇಬಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾನ್ ಸ್ಟೇಬಲ್ ಸಂಜಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಪುಟ್ಟೇನಹಳ್ಳಿ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮನೆಗೆ ಬಂದು ಜಗಳ ಮಾಡಿಕೊಂಡ ಸಂಜಯ್ ಮೇಲೆ ರಾಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು ಎಂದು ಆರೋಪಿಸಲಾಗಿದೆ. ಸಂಜಯ್ ಬಂಕ್ಗೆ ತೆರಳಿ ಒಂದು ಲೀಟರ್ ಪೆಟ್ರೋಲ್ ತಂದಿದ್ದನು. ಪೆಟ್ರೋಲ್ ಹಾಕ್ತಿಯ ಹಾಕು ನೋಡೋಣ ಎಂದಿದ್ದನು. ಈ ವೇಳೆ ಸಂಜಯ್ ಹೊಟ್ಟೆ ಬೆನ್ನಿನ ಮೇಲೆ ಪೆಟ್ರೋಲ್ ಸುರಿದಿದ್ದು, ನಂತರ ನೀರು ಹಾಕಿ ಬೆಂಕಿ ಆರಿಸಿ, ಸಂಜಯ್ ನನ್ನ ತನ್ನದೇ ಗಾಡಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಳು. ಪೊಲೀಸರ ತನಿಖೆ ವೇಳೆ ಆಕಸ್ಮಿಕವಾಗಿ ಘಟನೆ ನಡೆದಿದೆ ಎಂದು ರಾಣಿ ಹೇಳಿಕೆ ನೀಡಿದ್ದಾಳೆ. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಭಾರಿ ಸಿದ್ಧತೆ ನಡೆಸುತ್ತಿದೆ. ರಾಮ ಭಕ್ತರು ತಮ್ಮ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದಾರೆ. ರಾಮಭಕ್ತರೊಬ್ಬರು ಐದೂವರೆ ಲಕ್ಷ ರೂಪಾಯಿ ವೆಚ್ಚ ವ್ಯಯಿಸಿ ತಯಾರಿಸಿದ ಬೃಹತ್ ಅಗರಬತ್ತಿಯನ್ನು ಅಯೋಧ್ಯೆಗೆ ಸ್ಥಳಾಂತರಿಸಲಾಗುತ್ತಿದೆ. ವಡೋದರ ರಾಮ ಭಕ್ತನೊಬ್ಬ ಮಾಡಿದ ಭವ್ಯವಾದ, ಭಾರವಾದ ಧೂಪದ್ರವ್ಯವು ತನ್ನ ಪರಿಮಳವನ್ನು ಅಯೋಧ್ಯೆಯಲ್ಲಿ ಹರಡಲು ಸಿದ್ಧವಾಗುತ್ತಿದೆ. ರಾಮಮಂದಿರ ಪ್ರಾಣಪ್ರತಿಷ್ಠಾ ಮಹೋತ್ಸವದಲ್ಲಿ ಈ ಧೂಪದ್ರವ್ಯವನ್ನು ಬಳಸಲಾಗುವುದು. ವಡೋದರದ ತರ್ಸಾಲಿ ಮೂಲದ ವಿಹಾಭಾಯಿ ಭರ್ವಾಡ್ ಅವರು ವೃತ್ತಿಯಲ್ಲಿ ಕೃಷಿಕರು ಮತ್ತು ಜಾನುವಾರು ಸಾಕಣೆದಾರರಾಗಿದ್ದಾರೆ. ರಾಮನನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾರೆ. ರಾಮಮಂದಿರ ಉದ್ಘಾಟನೆ ನಿಮಿತ್ತ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸುತ್ತಿದ್ದಾರೆ. ಇದು 108 ಅಡಿ ಉದ್ದ ಮತ್ತು ನಾಲ್ಕೂವರೆ ಅಡಿ ಅಗಲದ ಬೃಹತ್ ಊದುಬತ್ತಿಯಾಗಿದೆ. ಡಿಸೆಂಬರ್ ಅಂತ್ಯದಲ್ಲಿ ವಡೋದರಾದಿಂದ ಅಯೋಧ್ಯೆಗೆ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. 108 ಅಡಿ ಉದ್ದದ ಈ ಧೂಪದ್ರವ್ಯವನ್ನು ಅಯೋಧ್ಯೆಗೆ ಸಾಗಿಸಲು ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆಯಂತೆ. ವಡೋದರದ ತಾರ್ಸಾಲಿಯಲ್ಲಿರುವ ವಿಹಾಭಾಯಿ ಅವರ ಮನೆಯ ಸಮೀಪ ತೆರೆದ…