nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026
    Facebook Twitter Instagram
    ಟ್ರೆಂಡಿಂಗ್
    • ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
    • 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
    • ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
    • ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
    • ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
    • ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
    • 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
    • ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಭೂ” ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮಸ್ಥರಿಂದ ಬೃಹತ್‌ ಧರಣಿ
    ಜಿಲ್ಲಾ ಸುದ್ದಿ December 22, 2023

    “ಭೂ” ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮಸ್ಥರಿಂದ ಬೃಹತ್‌ ಧರಣಿ

    By adminDecember 22, 2023No Comments2 Mins Read
    protest

    ಬೆಳಗಾವಿ: ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದ್ದಾರೆ.

    ಇದಕ್ಕೂ , ಮೊದಲು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿವರೆಗೂ ಪ್ರತಿಭಟನೆ, ಬಡವರ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ, ನೀರಾವರಿ ನಿಗಮದ ಮುಖ್ಯ ಅಭಿಯಂತರ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ಪರಿಹಾರ ಕೊಡಿ ಇಲ್ಲವಾದರೆ ಒಂದು ತೊಟ್ಟು ವಿಷ ಕೊಡಿ ಎಂದು ರೈತರು ಆಕ್ರೋಶ ಹೊರಹಾಕಿದರು. ನೀರಾವರಿ ಕಚೇರಿ ಮುತ್ತಿಗೆ ಹಾಕಿ, ಪರಿಹಾರ ವಿಳಂಬ ಮಾಡುತ್ತಿರುವ ನೀರಾವರಿ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿದರು.

    ರೈತರ ಫಲವತ್ತಾದ 394 ಎಕರೆ ಜಮೀನುಗಳು ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಕಳೆದ 40 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಅನ್ನದಾತರಿಗೆ ಮೋಸ ಮಾಡುತ್ತಿರುವ 3 ಅಧಿಕಾರಿಗಳನ್ನು ಶೀಘ್ರವೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

    ಬಾಳೇಶ ಮಾವನೂರಿ ಮಾತನಾಡಿ, ಸಂಭಂದ ಪಟ್ಟ ನೀರಾವರಿ ಇಲಾಖೆ ಭೂ ಸ್ವಾಧೀನ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳವಂತೆ ಹೈಕೋರ್ಟ್ ಆದೇಶ ನೀಡಿದೆ. ಮೂರು ತಿಂಗಳಾದರೂ ನೀರಾವರಿ ಇಲಾಖೆಯಿಂದ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

    ಫಲವತ್ತಾದ 394 ಎಕರೆ ಜಮೀನು ನೀರಲ್ಲಿ ಮುಳುಗಿ ಹೋಗಿದೆ. ಎಲ್ಲಾ ಸರ್ಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಕ್ರಮ ಕೈಗೊಂಡಿಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸೂಚನೆ ನೀಡಿದ್ದಾರೆ. ಆದರೆ, ಸಂಭಂದ ಪಟ್ಟ ಅಧಿಕಾರಿಗಳು ಮಾತ್ರ ನ್ಯಾಯಾಲಯ ಆದೇಶ ಗಾಳಿಗೆ ತೂರಿದ್ದಾರೆ, ವಿನಾಕಾರಣ ಕಾಲಹರಣ ಮಾಡಿ ರೈತರನ್ನು ಕಚೇರಿಗೂ ಅಲೆಸುತ್ತಿದ್ದಾರೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳಾದ ರವೀಂದ್ರ ತಾಳೂರ, ಎಸ್.‌ ಆರ್‌ . ಕಮತ, ಎಸ್.‌ಎಮ್.‌ ಮಾಡಿಮಾಲೆ  ಅವರನ್ನು ಶೀಘ್ರವೇ ಅನಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

    ಜೀವನ ಉಪಯೋಗಕ್ಕೆ ಮೂಲಾಧಾರ ಜಮೀನು ಮುಳುಗಡೆಯಾಗಿದೆ. ಡ್ಯಾಂ ಹಿನ್ನರಿಯಲ್ಲಿ ಸಣ್ಣ ಭೂ ಮಾಲಿಕರು ಇದ್ದವೆ, ಸರ್ಕಾರ ರೈತರ ಕಷ್ಟಗಳನ್ನು ಅರಿತು ತ್ವರೀತವಾಗಿ ಭೂ ಪರಿಹಾರ ನೀಡಬೇಕು. ಇಲ್ಲವಾದರೆ ಜಿಲ್ಲಾಧಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತರಿಗೆ ಕಿರುಕುಳ ನೀಡಿದ ಮೂವರು ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆತರುವಂತೆ ಎಚ್ಚರಿಕೆ ನೀಡಿದರು.

    ಸಂದರ್ಭದಲ್ಲಿ ನಿಂಗಪ್ಪಾ ಗೋಣಿ, ದುಂಡಪ್ಪಾ ಬಡಿಗೇರ, ಬಸಪ್ಪಾ ಬಸಾಪೂರಿ, ನಿಂಗಪ್ಪಾ ಮಾವನೂರಿ, ರಾಯಗೌಡ ಪಾಟೀಲ್, ಬಸವರಾಜ ಮೋಕಾಶಿ, ಪರಸಪ್ಪಾ ಪಾಟೀಲ್, ಕಮಲವ್ವಾ ಇರಗಾರ, ಶೋಬಾ ಮೇಕಲಿ, ಸಂತೋಷ ಪಾಟೀಲ, ಸವಿತಾ ಕುಂಬಾರ, ಗೌರವಾ ಮೂಕಾಶಿ, ಶಾಂತವ್ವಾ ಗಸ್ತಿ, ಸುಶೀಲಾ ಮಾವನೂರಿ, ಭರಮಾ ಕಮತೆ, ಉದಯ ಹೀರೆಮಠ ಹಾಗೂ ಇತರರು ಇದ್ದರು.


    Provided by
    Provided by
    admin
    • Website

    Related Posts

    ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ

    July 12, 2026

    ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ

    July 11, 2026

    ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!

    July 11, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಆರೋಗ್ಯ

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    ನವದೆಹಲಿ: ಸಾಮಾನ್ಯವಾಗಿ ದಂಪತಿಗಳು ಮಗುವಿಗಾಗಿ ಪ್ರಯತ್ನಿಸುತ್ತಿರುವಾಗ (Trying for a baby) ಅವರ ಸಂಪೂರ್ಣ ಗಮನ ಒತ್ತಡ ಕಡಿಮೆ ಮಾಡಿಕೊಳ್ಳುವುದು,…

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026

    ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

    July 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.