Subscribe to Updates
Get the latest creative news from FooBar about art, design and business.
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
- ಡಕಾಯಿತಿಗೆ ಸಂಚು: ಐವರ ಬಂಧನ
- ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
- ನ.30 ರಂದು ಅಮೋಘ ಸಂಗೀತ ಕಛೇರಿ
- ಹುಳಿಯಾರು: ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ: ಗ್ರಾಮಸ್ಥರಿಂದ ವಿರೋಧ
- ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
Author: admin
ದಾವಣಗೆರೆ: ಲೋಕಸಭಾ ಚುನಾವಣೆ ಸಮೀಪಿಸಲಿ. ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಅವತ್ತೇ ಹೇಳುವೆ ಎಂದು ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ. ದಾವಣಗೆರೆಯ ಹೊನ್ನಾಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬಳಿಕ ಒಂದು ಪಕ್ಷ ಆಡಳಿತ ನಡೆಸುತ್ತದೆ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ಆಗಿದೆ. ಅದರಂತೆ ಅವಘಡಗಳಿವೆ. ಅ ಅವಘಡಗಳು ಕಳೆಯಬೇಕು. ಅ ಬಳಿಕ ಮುಂದಿನ ಭವಿಷ್ಯ ಹೇಳುವೆ ಎಂದು ತಿಳಿಸಿದ್ದಾರೆ. ಕಾರ್ತಿಕ ಮಾಸ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ. ರಾಜ್ಯ-ರಾಷ್ಟ್ರದಲ್ಲಿ ನಡೆಯುವ ಅವಘಡಗಳಿಂದ ಪಾರು ಮಾಡಿದರೆ ಮುಂದಿನ ಭವಿಷ್ಯ ಹೇಳುವೆ ಎಂದು ಮಾತನಾಡಿದ್ದಾರೆ.
ಬೆಂಗಳೂರು: ಬಿಜೆಪಿ ಮನಿಸಲು ಸಜ್ಜಾದ INDIA 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರ್ನಬ್ ಗೋಸ್ವಾಮಿ ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ಒಟ್ಟು 14 ಸುದ್ದಿ ನಿರೂಪಕರ ಬಹಿಷ್ಕರಿಸಿ ಗುರುವಾರ ಹೆಸರುಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಪರ ಎಂದು ಗುರುತಿಸಿಕೊಂಡಿರುವ ಅಥವಾ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚಾ ಕಾರ್ಯಕ್ರಮ ನಡೆಸುವ ಆರೋಪದಡಿ ಈ ನಿರೂಪಕರನ್ನು ಬಹಿಷ್ಕರಿಸಲು INDIA ಬಣ ನಿರ್ಧರಿಸಿದೆ. ಅದಿತಿ ತ್ಯಾಗಿ, ಅಮನ್ ಚೋಪ್ರಾ, ಅಮೀಶ್ ದೇವಗನ್, ಆನಂದ್ ನರಸಿಂಹನ್, ಅರ್ನಬ್ ಗೋಸ್ವಾಮಿ, ಅಶೋಕ್ ಶ್ರೀವಾಸ್ತವ ಚಿತ್ರ ತ್ರಿಪಾಠಿ, ಗೌರವ್ ಸಾವಂತ್, ನವಿಕಾ ಕುಮಾರ್, ಪ್ರಾಚಿ ಪರಾಶರ್, ರುಬಿಕಾ ಲಿಯಾಖತ್ ಶಿವ್ ಅರೂರ್, ಸುಧೀರ್ ಚೌಧುರಿ, ಸುಶಾಂತ್ ಸಿನ್ಹಾ ಪಟ್ಟಿಯಲ್ಲಿ ಇರುವವರಾಗಿದ್ದು, ಇವರುಗಳು ನೈಜ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ತಿರುಗಿಸುವ ಕೆಲಸವನ್ನು ಈ ನಿರೂಪಕರು ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ಬೆಂಗಳೂರು: ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಡಿಸಿಪಿ, ಎಸ್ ಪಿ ಮಟ್ಟದ ಅಧಿಕಾರಿಗಳನ್ನೂ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಹೇಳಿದರು. ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈ ತೊಳೆದು ಕೊಳ್ಳುವುದಿಲ್ಲ, ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್ ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಬೆಂಗಳೂರು ಬಿಸಿನೆಸ್ ಪ್ರೊಸೆಸಿಂಗ್ ಔಟ್ ಸೋರ್ಸಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬ, ಮಹಿಳಾ ಸಹೋದ್ಯೋಗಿಯೊಬ್ಬರ ವೈಯಕ್ತಿಕ ಡೇಟಾವನ್ನು ಕದ್ದು, ಅವರ ಹೆಸರಿನಲ್ಲಿ ಬ್ಯಾಂಕ್ ನಿಂದ 2 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿ ಲೋಕೇಶ್ವರ್ ಸುಗುಮಾರನ್ ಗಾಗಿ ಬಲೆ ಬೀಸಿದ್ದಾರೆ. ಮಹಿಳಾ ಉದ್ಯೋಗಿ ಈತನ ಕೈಯಲ್ಲಿ ಮೊಬೈಲ್ ಕೊಟ್ಟು ಕಂಪನಿ ಒಳಗಡೆ ಹೋಗಿದ್ದಾರೆ. ಈ ವೇಳೆ ಲೋಕೇಶ್ವರ್ ಸುಗುಮಾರನ್ ಇವರ ಮೊಬೈಲ್ ಅನ್ ಲಾಕ್ ಮಾಡಿ ಅವರ ಆಧಾರ್ ಮತ್ತು ಪ್ಯಾನ್ ಮಾಹಿತಿಯನ್ನು ತಿಳಿದುಕೊಂಡಿದ್ದಾನೆ.
ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 29.49 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಸತೀಶ್, ಗಿರೀಶ್, ಎಂ. ಆರ್. ಮಂಜುನಾಥ್, ನವೀನ್‌ಕುಮಾರ್ ಸೇರಿ ಆರು ಮಂದಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ‘ಜಾಲತಾಣ ಹಾಗೂ ಮೊಬೈಲ್ ಆ್ಯಪ್ ಗಳಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಪಂದ್ಯಗಳ ಸೋಲು-ಗೆಲುವು ಲೆಕ್ಕಾಚಾರದಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಬೆಟ್ಟಿಂಗ್ ನಲ್ಲಿ ಗೆದ್ದವರಿಗೆ ಹಣ ತಲುಪಿಸುತ್ತಿದ್ದರು. ಆರು ಮಂದಿಯೂ ಹಲವು ತಿಂಗಳಿನಿಂದ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ಇದೆ ಎಂದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ
ಬೆಂಗಳೂರು ಹೊರ ವಲಯದಲ್ಲಿರುವ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಶೂ, ಚಪ್ಪಲಿ ಗೋಡೌನ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಐದು ಕೋಟಿಗೂ ಅಧಿಕ ಮೌಲ್ಯದ ಶೂಗಳು ಹಾಗೂ ಚಪ್ಪಲಿಗಳು ಸುಟ್ಟು ಭಸ್ಮವಾಗಿವೆ. ಗೋಡೌನ್ ಬಳಿಯ ವಿದ್ಯುತ್ ಕಂಬಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ಉತ್ತರಹಳ್ಳಿ ನಿವಾಸಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ಎಎಸ್‌ಆರ್ ಮಾರ್ಕೆಟಿಂಗ್, ಯುನಿಕಾರ್ನ್ ಮಾರ್ಕೆಟಿಂಗ್ ಎಂಬ ಹೆಸರಿನ ಗೋಡೌನ್ ನಲ್ಲಿ ಅವಘಡ ಸಂಭವಿಸಿದೆ.
ಬೆಂಗಳೂರು: ಪ್ರೇಮಿಗಳ ಖಾಸಗಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ 1 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ನಿವಾಸಿಗಳಾದ ನಯನಾ ಮತ್ತು ಕಿರಣ್ ಬಂಧಿತರು. ಆರೋಪಿ ನಯನಾ ಸಂತ್ರಸ್ತ ಯುವತಿಯ ಸಂಬಂಧಿಯಾಗಿದ್ದಳು. ಆರೋಪಿಗಳು ಕೆಂಗೇರಿ ಮುಖ್ಯರಸ್ತೆಯ ಕೆಂಚನಾಪುರದಲ್ಲಿ ಹೋಟೆಲ್ ನಡೆಸುತ್ತಿದ್ದರು.
ಬಾರ್ ಮಾಲೀಕರು ಮತ್ತು ಗ್ರಾಹಕರ ನಡುವೆ ನಡೆದಿದ್ದ ಗಲಾಟೆ ಸಂಬಂಧ ಪ್ರಕರಣ ಮುಕ್ತಾಯಗೊಳಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ತಮ್ಮ ವಿರುದ್ಧದ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಕೋರಿ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಉರಿಯ ಪರನ್ ಪೀಲನ್ ಸೇತುವೆಯಲ್ಲಿ ಸ್ಥಾಪಿಸಲಾದ ಜಂಟಿ ಚೆಕ್ ಪೋಸ್ಟ್ ನಲ್ಲಿ ಬಾರಾಮುಲ್ಲಾ ಪೊಲೀಸರು ಮತ್ತು ಸೇನೆಯ ಎಂಟು ಆರ್ ಆರ್ ಗಳು ಇಬ್ಬರನ್ನು ಹಿಡಿದಿದ್ದಾರೆ. ಆದರೆ ಚೆಕ್ ಪೋಸ್ಟ್ ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಾರಾಮುಲ್ಲಾ ಮೂಲದ ಹಸನ್ ಮಲ್ಲ ಮತ್ತು ಮೊಹಮ್ಮದ್ ಆರಿಫ್ ಚನ್ನಾ ಬಂಧಿತ ಆರೋಪಿಗಳು. ಅವರಿಂದ ಎರಡು ಗ್ಲೋಕ್ ಪಿಸ್ತೂಲ್ ಗಳು, ಎರಡು ಪಿಸ್ತೂಲ್ ಮ್ಯಾಗಜೀನ್ ಗಳು, ಎರಡು ಪಿಸ್ತೂಲ್ ಸೈಲೆನ್ಸರ್ ಗಳು, ಐದು ಚೈನೀಸ್ ಗ್ರೆನೇಡ್ ಗಳು, 28 ಲೈವ್ ಪಿಸ್ತೂಲ್ ರೌಂಡ್ ಗಳು ಮತ್ತು ಇತರ ಯುದ್ಧೋಚಿತ ಮಳಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕರ ಸೂಚನೆ ಮೇರೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಿ ಲಷ್ಕರ್-ಇ-ಟಿ ಭಯೋತ್ಪಾದಕರಿಗೆ ಹಂಚುತ್ತಿದ್ದವರನ್ನು ಇದೀಗ ಬಂಧಿಸಲಾಗಿದೆ. ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಮತ್ತು ಯುಎ (ಪಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಬೆಂಗಳೂರು: ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿದ ಆರೋಪದ ಹಿನ್ನಲೆಯಲ್ಲಿ ಯಲಹಂಕ ಉಪವಿಭಾಗಾಧಿಕಾರಿ ಎಂ. ಜಿ. ಶಿವಣ್ಣ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಯಲಹಂಕ ಉಪವಿಭಾಗಾಧಿಕಾರಿಯಾಗಿದ್ದ ಎಂ. ಜಿ. ಶಿವಣ್ಣ ಅವರನ್ನು ಕಳೆದ ಫೆ. 2ರಂದು ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡ ನಂತರವು ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿರುವುದು ತನಖೆಯಿಂದ ಸಾಬೀತಾಗಿತ್ತು. ಇದು ಕ್ರಿಮಿನಲ್ ಸ್ವರೂಪದ ಅಪರಾಧವಾಗಿರುವುದರಿಂದ ಶಿವಣ್ಣ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ)ರಡಿ ಎಫ್ ಐಆರ್ ದಾಖಲಾಗಿದೆ.