Author: admin

ಆರೋಪಿ ಪತಿಯಾಗಿದ್ದರೂ ಅತ್ಯಾಚಾರ ಅಪರಾಧ, ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆಯ ಅನುಮತಿಯಿಲ್ಲದೆ ಆಕೆಯ ದೇಹವನ್ನು ಆಕೆಯ ಪತಿ ಸ್ಪರ್ಶಿಸುವುದು ಅತ್ಯಾಚಾರ ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಎಲ್ಲಾ ವಿದೇಶಗಳಲ್ಲಿ ಇರುವ ವಿಧಾನವೇ ಭಾರತದಲ್ಲಿಯೂ ಅನ್ವಯಿಸುತ್ತದೆ ಎಂದು ಕೋರ್ಟ್ ಗಮನಿಸಿದೆ. ಪತಿ ಮತ್ತು ಸಂಬಂಧಿಕರು ತನ್ನ ವೈವಾಹಿಕ ಜೀವನದ ಖಾಸಗಿ ಕ್ಷಣಗಳನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡುತ್ತಿರುವ ಬಗ್ಗೆ ರಾಜ್‌ ಕೋಟ್ ‌ನ ಯುವತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ತನ್ನ ಪತಿ ತನ್ನ ಮೊಬೈಲ್ ಫೋನ್ ‌ನಲ್ಲಿ ತನ್ನ ಖಾಸಗಿ ಚಿತ್ರಗಳನ್ನು ತೆಗೆದುಕೊಂಡು, ಕುಟುಂಬ ವಾಟ್ಸಾಪ್ ಗುಂಪುಗಳು ಮತ್ತು ಅಶ್ಲೀಲ ವೆಬ್‌ ಸೈಟ್ ‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ನ್ಯಾಯಾಲಯವು ಬಲವಂತದ ದೈಹಿಕ ಸಂಬಂಧಕ್ಕೆ ಪತಿ ತಪ್ಪಿತಸ್ಥನೆಂದು ತೀರ್ಪು ನೀಡಿತು. ನ್ಯಾಯಾಲಯದ ಆದೇಶವು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ ನ ಕಾನೂನುಗಳನ್ನು ಉಲ್ಲೇಖಿಸುತ್ತದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ವ್ಯಕ್ತಿಯನ್ನು…

Read More

ತಮಿಳುನಾಡಿನ ದಕ್ಷಿಣ ಜಿಲ್ಲೆಗಳು ಪ್ರವಾಹ ಭೀತಿಯಲ್ಲಿವೆ. ಇಂದು ಮಧ್ಯಾಹ್ನದವರೆಗೆ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಥೇಣಿ ಮತ್ತು ವಿರುದುನಗರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಆರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ತೂತುಕುಡಿ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಇಂದು ಸಾರ್ವಜನಿಕ ರಜೆ. ಕನ್ಯಾಕುಮಾರಿಯಲ್ಲಿ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ಮಳೆ ಕೊಂಚ ತಗ್ಗಿದ್ದರೂ ನಾಲ್ಕೂ ಜಿಲ್ಲೆಗಳಲ್ಲಿ ಜಲಾವೃತ ತೀವ್ರವಾಗಿದೆ. ನಿನ್ನೆ ವಾಯುಪಡೆಯ ಹೆಲಿಕಾಪ್ಟರ್ ಕೂಡ ರಕ್ಷಣಾ ಕಾರ್ಯಾಚರಣೆಗೆ ಬಂದಿತ್ತು. ನಿನ್ನೆ 42 ಜನರನ್ನು ಹೆಲಿಲಿಫ್ಟ್ ಮಾಡಲಾಗಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಇನ್ನೂ ನಾಲ್ವರು ಸಚಿವರನ್ನು ಪ್ರವಾಹ ಪರಿಹಾರ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಹಳಿಗಳಿಗೆ ನೀರು ನುಗ್ಗಿದ ಕಾರಣ ಇಂದು ರೈಲನ್ನು ರದ್ದುಗೊಳಿಸಲಾಗಿದೆ. ಕೊಯಮತ್ತೂರು-ನಾಗರ್‌ಕೋಯಿಲ್ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಲಾಗಿದೆ. 16 ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. 3 ರೈಲುಗಳ ಮಾರ್ಗ ಬದಲಿಸಲಾಗಿದೆ. ಕೇರಳದಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ…

Read More

ರೈತರೊಬ್ಬರ ಬಳಿ ಲಂಚ ಸ್ವೀಕರಿಸುವಾಗ ಸರ್ವೇಯರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮಹಾಂತೇಶ್ ಕವಳಿಕಟ್ಟಿ ಲೋಕಾಯುಕ್ತದ ಬಲೆಗೆ ಬಿದ್ದ ಸರ್ವೇಯರ್. ಬಾಗಲಕೋಟೆ ಬೀಳಗಿ  ತಾಲ್ಲೂಕಿನ  ಸುನಗ ಗ್ರಾಮದಲ್ಲಿರುವ ಜಮೀನಿನ ನಕ್ಷೆ ನೀಡಲು ರೈತ ಅಣ್ಣೇಶಿ ಲಮಾಣಿ ಎಂಬುವವರಿಂದ ಮಹಾಂತೇಶ್ ಕವಳಿಕಟ್ಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು 25 ಸಾವಿರ ರೂ. ಲಂಚ ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ನಂತರ ಮತ್ತಷ್ಟು ಲಂಚಕ್ಕೆ ಬೇಡಿಕೆ ಇಟ್ಟು ಎಡಿಎಲ್ ಆರ್ ಕಚೇರಿಯಲ್ಲೇ 15 ಸಾವಿರ ರೂ. ಲಂಚ ಸ್ವೀಕರಿಸುವಾಗ ಸರ್ವೇಯರ್ ಮಹಾಂತೇಶ್ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಪುಷ್ಪಲತಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Read More

ತುರುವೇಕೆರೆ: ಬಿಜೆಪಿಯ ಕೆಲವು ತಪ್ಪುಗಳಿಂದ ರಾಜ್ಯದಲ್ಲಿ ಪಕ್ಷಕ್ಕೆ ಈ ಸ್ಥಿತಿ ಬಂದಿದೆ. ಅಧಿಕಾರವನ್ನು ಕಳೆದುಕೊಂಡಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅನೈತಿಕವಾದದ್ದು ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ತುರುವೇಕೆರೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿರುವ ಡಿ.ಟಿ. ಶ್ರೀನಿವಾಸ್ ರವರ ಪರವಾಗಿ ಮತಯಾಚಿಸಲು ಆಗಮಿಸಿದ್ದೇನೆ. ಇಲ್ಲಿ ಬೆಮೆಲ್ ಕಾಂತರಾಜು ರವರರಲ್ಲಿ ಮಾತನಾಡಿದ್ದೇನೆ. ಅವರು ಸಂಪೂರ್ಣ ಬೆಂಬಲ ಇದೆಯೆಂದು ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಆಗಮಿಸಲಿದ್ದಾರೆ. ನಾವುಗಳು ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ಕೊಟ್ಟು ಮತಯಾಚನೆಯನ್ನು ಮಾಡಲಿದ್ದೇವೆ. ಕ್ಷೇತ್ರದ ಎಲ್ಲ ಕಾಂಗ್ರೆಸ್ ನಾಯಕರುಗಳು ನಮ್ಮ ಜೊತೆಗಿದ್ದಾರೆ. ಹಿಂದೆ ಶ್ರೀನಿವಾಸ್ ರವರು ಆಗ್ನೇಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಎರಡನೆಯ ಸ್ಥಾನ ಪಡೆದಿದ್ದರು. ಈಗ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಪರವಾಗಿ ಮತ ಯಾಚನೆ ಮಾಡುತಿದ್ದೇನೆ ಎಲ್ಲಾ ಶಿಕ್ಷಕರುಗಳು ಬೆಂಬಲಿಸುವಂತೆ ಮನವಿ ಮಾಡಿದರು. ಇನ್ನು ಎರಡು…

Read More

ಗೂಗಲ್ ತನ್ನ ಪ್ಲೇ ಸ್ಟೋರ್‌ ನಿಂದ 2,500 ಮೋಸದ ಸಾಲದ ಆ್ಯಪ್‌ ಗಳನ್ನು ತೆಗೆದು ಹಾಕಿದೆ. ಈ ಕ್ರಮಗಳನ್ನು ಏಪ್ರಿಲ್ 2021 ಮತ್ತು ಜುಲೈ 2022 ರ ನಡುವೆ ತೆಗೆದು ಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕೇಂದ್ರವು ಕಾಲಕಾಲಕ್ಕೆ ರಿಸರ್ವ್ ಬ್ಯಾಂಕ್ ಮತ್ತು ಇತರ ನಿಯಂತ್ರಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಅವರು ಹೇಳಿದರು. ಕಾನೂನಿಗೆ ವಿರುದ್ಧವಾಗಿರುವ ಸಾಲದ ಆ್ಯಪ್ ಗಳ ವಿವರಗಳನ್ನು ರಿಸರ್ವ್ ಬ್ಯಾಂಕ್ ನೀಡಿದೆ ಎಂದು ಅವರು ಹೇಳಿದರು.

Read More

ನೂರರ ಗಡಿ ತಲುಪಿದ್ದ ಈರುಳ್ಳಿ ದರ ಭಾರಿ ಇಳಿಕೆ ಕಂಡಿದೆ. ತಿಂಗಳ ಹಿಂದೆ 80 ರೂ. ವರೆಗೆ ಇದ್ದ ಈರುಳ್ಳಿ ಬೆಲೆ ಈಗ 35 ರೂ.ಗೆ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟಿಸಿರುಬಿಟ್ಟಿದ್ದಾರೆ. ಆದರೆ, ಬೆಲೆ ಇಳಿಕೆಯಾಗಿರುವುದು ರೈತರಿಗೆ ಆತಂಕ ತಂದಿದೆ. ಈರುಳ್ಳಿಗೆ ಸರ್ಕಾರ ರಫ್ತು ನಿರ್ಬಂಧ ಹೇರಿದೆ. ಇದರ ನಡುವೆಯೇ ಮಾರುಕಟ್ಟೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವ ಕಾರಣ ಬೆಲೆ ಕುಸಿತ ಆಗಿದೆ. ಶೀಘ್ರದಲ್ಲೇ ಹಿಂಗಾರು ಹಂಗಾಮಿನ ಬೆಳೆ ಕೂಡ ಮಾರುಕಟ್ಟೆಗೆ ಬರಲಿದೆ. ಹೀಗಾಗಿ, ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ತೀರಾ ಕಡಿಮೆ.

Read More

ಸಾಮಾಜಿಕ ಅಸಮಾನತೆಯಿರುವ ಕಾಲಮಾನದಲ್ಲಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಡುಪಿ ಹಾಗೂ ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಈ ಸಮುದಾಯ ಒಳ್ಳೆಯ ಬುನಾದಿಯನ್ನು ಹಾಕಿದೆ. ಭಾರತೀಯ ಸಮಾಜದಲ್ಲಿ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲೀನಿಯರ್ ಆಕ್ಸರಲೇಟ‌ರ್ ರೆಡಿಯೇಷನ್ ಥೆರಪಿ ಸೇವೆಯನ್ನು ಆರಂಭಿಸಲಾಯಿತು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲೀನಿಯರ್ ಆಕ್ಸರಲೇಟರ್ ರೆಡಿಯೇಷನ್‌ ಥೆರಪಿ ಸೇವೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಆ‌ರ್.ವಿ. ದೇಶಪಾಂಡೆ, ಬೈರತಿ ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Read More

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಆಯೋಜನೆಯ ಕಣ್ಮನ ಸೆಳೆಯುವ ದೀಪಾಲಂಕಾರದಿಂದ, 25ಕ್ಕೂ ಹೆಚ್ಚು ರಾಜ್ಯಗಳು, ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿ  ನಡೆಸಿಕೊಟ್ಟ 33 ನೇ ರಾಷ್ಟ್ರೀಯ ಸಬ್ ಜೂನಿಯರ್ ಖೋಖೋ ಪಂದ್ಯಾವಳಿಯಲ್ಲಿ ಬಾಲಕ ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಎರಡು ತಂಡಗಳು ಚಾಂಪಿಯನ್  ಗಳಾಗಿ ಹೊರಹೊಮ್ಮಿದವು. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ತಂಡವು ಕರ್ನಾಟಕ ತಂಡವನ್ನು 16=14ಅಂಕಗಳೊಂದಿಗೆ ಮಣಿಸಿ ಪ್ರಥಮ ಸ್ಥಾನಗಳಿಸಿತು. ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದ್ದು. ಕೊಲ್ಲಾಪುರ ತೃತೀಯ ಸ್ಥಾನ ರಾಜಸ್ಥಾನ ನಾಲ್ಕನೇ ಸ್ಥಾನಗಳಿಸಿತು. ಹತ್ತು ಸಾವಿರ ನಗದು,ಆಕರ್ಷಕ ಟ್ರೋಫಿಯನ್ನು  ನೀಡಲಾಯಿತು. ಬಾಲಕರ ವಿಭಾಗದಲ್ಲಿ  ಮಹಾರಾಷ್ಟ್ರ ತಂಡವು 34=20 ಕರ್ನಾಟಕ ತಂಡವನ್ನು ಮಣಿಸಿ. ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನ ಕರ್ನಾಟಕ, ತೃತೀಯ ಸ್ಥಾನವನ್ನು ತೆಲಂಗಾಣ ಪಡೆದು  ನಾಲ್ಕನೇ ಸ್ಥಾನವನ್ನು ಡೆಲ್ಲಿ ಅಲಂಕರಿಸಿತು, ಪ್ರಥಮ ಸ್ಥಾನ ಪಡೆದ ತಂಡಕ್ಕೆ ಹತ್ತು ಸಾವಿರ ನಗದು ಬಹುಮಾನ ಆಕರ್ಷಕ ಟ್ರೋಫಿ ನೀಡಲಾಯಿತು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಟ್ರಾಲಿ…

Read More

ತುಮಕೂರು: ತುಮಕೂರು ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಅಪ್ರಾಪ್ತ ಬಾಲಕಿಯರ ಹಾಸ್ಟೆಲ್ ನಲ್ಲಿ ತಡರಾತ್ರಿ ದೀಪಾವಳಿ/ಮಕ್ಕಳ ದಿನಾಚರಣೆ ಆಚರಿಸುವ ನೆಪದಲ್ಲಿ, ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಕೈ ಕೈ ಹಿಡಿದು ಅಶ್ಲೀಲ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿದ್ದ ತುಮಕೂರಿನ ಹಿಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತುಮಕೂರು ತಹಸಿಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ನಿರ್ದೇಶಕ ದಿನೇಶ್ ಹಾಗೂ ಇತರರ ವಿರುದ್ದ ಪೊಲೀಸ್ ಇಲಾಖೆಗೆ ನೈಜ ಹೋರಾಟಗಾರರ ವೇದಿಕೆ ದೂರು ನೀಡಿದ್ದು ಪೊಲೀಸ್ ಇಲಾಖೆಯು ಆರೋಪಿತರನ್ನು ರಕ್ಷಿಸುವ ಸಲುವಾಗಿ ಪ್ರಥಮ ವರ್ತಮಾನ ವರದಿ ದಾಖಲಿಸದೆ ಸದರಿ ಅಧಿಕಾರಿಗಳಿಗೆ ರಕ್ಷಣೆಗೆ ನಿಂತಿದೆ ಎಂದು ನೈಜ ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಅಧಿಕಾರಿಗಳ ಮೇಲೆ ದೂರು ನೀಡಿದ ಹೋರಾಟಗಾರರ ವಿರುದ್ದವೇ ಎಫ್.ಐ.ಆರ್ ದಾಖಲಿಸಿರುವುದು ಹೋರಾಟಗಾರರನ್ನು ಕುಗ್ಗಿಸುವ ಕೆಲಸವನ್ನು ಮಾಡುವಂತಾಗಿರುತ್ತದೆ. ಆದ್ದರಿಂದ, ನೈಜ ಹೋರಾಟಗಾರರ ವೇದಿಕೆಯು ದಿನಾಂಕ:15-12-2023 ರಂದು ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯ…

Read More

ಹಾಸನ: ಜಮೀನು ಬಳಿ ಫಸಲಿಗೆ ನೀರು ಹಾಯಿಸುತ್ತಿದ್ದ ಹೊಳೆನರಸೀಪುರ ತಾಲ್ಲೋಕಿನ ಹಾರಗೌಡನಹಳ್ಳಿ ಗ್ರಾಮದ ರೈತರಾದ ರಾಜೇಗೌಡ (63) ಎಂಬುವವರ ಮೇಲೆ ಏಕಾಏಕಿ ಕಾಡುಹಂದಿ ದಾಳಿ ಮಾಡಿದೆ. ದಾಳಿ ಮಾಡಿದೆ ಪರಿಣಾಮ ರೈತ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ರೈತ ರಾಜೇಗೌಡರಿಗೆ ಸಹಾಯ ಮಾಡಲು ಹೋದ ಇಬ್ಬರು ಮಹಿಳೆಯರಿಗೂ ಕಾಡು ಹಂದಿ ಗಾಯ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರೈತನ ಹತ್ಯೆ ಮಾಡಿದ ಕಾಡು ಹಂದಿ ವಿರುದ್ಧ ಸಿಟ್ಟಿಗೆದ್ದು ಸ್ಥಳೀಯ ರೈತರು ಕಾಡುಹಂದಿಯನ್ನು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ.. ಸುದ್ದಿ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ: ಮಂಜು ಶ್ರವಣೂರು

Read More