Author: admin

ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ -HSRP ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳ ಮಾಲೀಕರು ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಹೆಚ್‌ಎಸ್‌ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯ ಮಾಡಲಾಗಿದೆ. ನವೆಂಬರ್ 17 ಈ ಪ್ರಕ್ರಿಯೆಗೆ ಕೊನೆಯ ದಿನವಾಗಿದೆ.

Read More

ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರವಾಗಲಿದೆ. ಫ್ಲೈಓವರ್, ಸುರಂಗ ರಸ್ತೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತೆ. ಬೆಂಗಳೂರಿನ ಪ್ರತಿ ವಾರ್ಡ್ ಗೆ ಯುವ ಐಎಎಸ್ ಅಧಿಕಾರಿಗಳ ನೇಮಕ ಮಾಡುತ್ತೇವೆ. ಬೆಂಗಳೂರಿಗರ ಆಸ್ತಿ ಮೌಲ್ಯದ ಬಗ್ಗೆ ಇ-ಸ್ವತ್ತು ಮಾಡಿಸುತ್ತೇವೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಇ-ಸ್ವತ್ತು ದಾಖಲೆ ತಲುಪಿಸುತ್ತೇವೆ. ಸರ್ಕಾರಕ್ಕೆ ತೆರಿಗೆ ಕಟ್ಟುವವರಿಗೆ ನಾವು ಸೌಲಭ್ಯ ಕಲ್ಪಿಸಬೇಕಾಗಿದೆ. ಆಸ್ತಿ ಮೌಲ್ಯಮಾಪನ ಮಾಡಿಸಿದರೆ ತೆರಿಗೆ ವಂಚಕರು ಗೊತ್ತಾಗುತ್ತೆ. ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿಗೆ ನೀರು ತರುತ್ತೇವೆ. ತಿಪ್ಪಗೊಂಡನಹಳ್ಳಿ ತಲುಪಿದ ನಂತರ ಮುಂದಿನ ಯೋಜನೆಗೆ ನಿರ್ಧಾರ ಎಂದರು.

Read More

ಉಡುಪಿ: ನಾವು ಯಾರೂ ಕೂಡ ಚೈತ್ರಾ ಕುಂದಾಪುರಳ ಬೆಂಬಲಕ್ಕೆ ನಿಂತಿಲ್ಲ. ನಾವು ಯಾರೂ ಅವಳನ್ನು ರಕ್ಷಣೆ ಮಾಡುತ್ತಿಲ್ಲ. ಯಾರು ತಪ್ಪು ಮೋಸ ಮಾಡಿದ್ರು ಕೂಡ ಶಿಕ್ಷೆ ಆಗಲೇಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬಿಜೆಪಿ ಟಿಕೆಟ್ ಡೀಲ್ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಟೀಂ ಸಿಸಿಬಿ ವಶದಲ್ಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ತನಿಖೆ ಮಾಡಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ನನಗೂ ಚೈತ್ರಾ ಕುಂದಾಪುರಳಿಗೂ ಯಾವುದೇ ಸಂಬಂಧ ಇಲ್ಲ. ಕಾರ್ಯಕ್ರಮದಲ್ಲಿ ಸಿಕ್ಕಾಗ ಫೋಟೋ ತೆಗೆದುಕೊಂಡಿರಬಹುದು. ಕಾಸು ಕೊಟ್ಟು ಟಿಕೆಟ್ ಪಡೆಯುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ ಎಂದರು. ಚೈತ್ರಾ ಕುಂದಾಪುರ ಅರೆಸ್ಟ್ ಆಗಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಚೈತ್ರಾ ಕುಂದಾಪುರದ ವೈಯಕ್ತಿಕ ಸಂಪರ್ಕ ನನಗೆ ಇರಲಿಲ್ಲ. ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಫೋಟೋ ತೆಗೆದಿರಬಹುದು ಗೊತ್ತಿಲ್ಲ. ರಾಜಕೀಯ ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಬೇಕು. ಪ್ರಕರಣದ ಕುರಿತು ತನಿಖೆ…

Read More

ಬೆಂಗಳೂರು: ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇನೆ. ಈ ಬಾರಿಯೂ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಜಾರಿ ಮಾಡಿದ್ದೇವೆ. ಮುಂದಿನ ವರ್ಷ ಜನವರಿಯಲ್ಲಿ 5ನೇ ಗ್ಯಾರಂಟಿ ಜಾರಿ ಮಾಡುತ್ತೇವೆ. ಸಾಮಾಜಿಕ, ಆರ್ಥಿಕವಾಗಿ ದುರ್ಬಲ ಇದ್ದವರಿಗೆ ಶಕ್ತಿ ತುಂಬಬೇಕಿದೆ. ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದು ಅಪಹಾಸ್ಯ ಮಾಡಿದ್ದರು. ರಾಜ್ಯ ದಿವಾಳಿ ಆಗುತ್ತೆ ಎಂದು ಅಪಹಾಸ್ಯ ಮಾಡಿದ್ದರು ಎಂದರು.

Read More

ತುಮಕೂರು: ನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಉತ್ತಮ ಪ್ರಜೆಗಳಾಗಿ ಬದುಕುವುದರ ಮೂಲಕ ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಯ ಏಳಿಗೆಗಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು. ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ  ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿದ ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಇಲ್ಲಿ ಸೇರುವುದಕ್ಕೆ ಕಾರಣ ಡಾ:ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಎಲ್ಲ ವರ್ಗದ ಜನರಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ನೀಡಿದ್ದಾರೆ. ಎಲ್ಲರೂ ಸ್ವಾಭಿಮಾನದ ಬದುಕನ್ನು ನಡೆಸುವುದಕ್ಕೆ ಅವರು ದಿಟ್ಟ ಹೆಜ್ಜೆಯನ್ನು ಹಾಕಿ ಕೊಟ್ಟಿದ್ದಾರೆ ಎಂದು ಸ್ಮರಿಸಿದರು. ಭಾರತ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ರೀತಿಯ ಹಕ್ಕು ಮತ್ತು ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳನ್ನು ಸಹ ನೀಡಲಾಗಿದೆ. ಭಾರತ ದೇಶದಲ್ಲಿ ಜನವರಿ 26, 1950ರಿಂದ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಆ ದಿನವನ್ನು ಗಣರಾಜ್ಯ ದಿನವೆಂದು ಪ್ರತಿ ವರ್ಷ…

Read More

ಈ ವರ್ಷದ ನೌಕಾಪಡೆಯ ದಿನಾಚರಣೆಯು ಡಿಸೆಂಬರ್ 4 ರಂದು ನಡೆಯಲಿದೆ. ಛತ್ರಪತಿ ಶಿವಾಜಿ ನಿರ್ಮಿಸಿದ ಸಿಂಧುದುರ್ಗ ಕೋಟೆಯಲ್ಲಿ ಭಾರತವು ನೌಕಾಪಡೆಯ ದಿನವನ್ನು ಆಚರಿಸುತ್ತದೆ. ಇದು 1971 ರಲ್ಲಿ ಪಾಕಿಸ್ತಾನದ ವಿರುದ್ಧ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ನಡೆಸಿದ ದಾಳಿಯನ್ನು ಸ್ಮರಿಸುತ್ತದೆ. ಸಿಂಧುದುರ್ಗ ಕೋಟೆಯ ಇತಿಹಾಸವು ಭಾರತೀಯ ನೌಕಾಪಡೆಗೆ ನಿಕಟ ಸಂಬಂಧ ಹೊಂದಿದೆ. ಕಳೆದ ವರ್ಷ, ನೌಕಾಪಡೆಯು ಸೇಂಟ್ ಜಾರ್ಜ್ ಕ್ರಾಸ್ ಲಾಂಛನವನ್ನು ಛತ್ರಪತಿ ಶಿವಾಜಿ ಲಾಂಛನದೊಂದಿಗೆ ಬದಲಾಯಿಸಿತ್ತು. ಐಎನ್‌ಎಸ್ ವಿಕ್ರಾಂತ್ ಆಯೋಗದ ಅವಧಿಯಲ್ಲಿ ಇದನ್ನು ಬದಲಾಯಿಸಲಾಯಿತು. ವಸಾಹತುಶಾಹಿ ಸಂಸ್ಕೃತಿಯ ಹೊರೆಯನ್ನು ತೆಗೆದುಹಾಕಲಾಗಿದೆ ಎಂದು ಪ್ರಧಾನಿ ಈ ಬದಲಾವಣೆಯ ಬಗ್ಗೆ ಪ್ರತಿಕ್ರಿಯಿಸಿದರು. ಕಳೆದ ವರ್ಷ ವಿಶಾಖಪಟ್ಟಣದಲ್ಲಿ ನೌಕಾಪಡೆಯ ದಿನವನ್ನು ಆಚರಿಸಲಾಯಿತು. ಕಳೆದ ವರ್ಷ ನೌಕಾಪಡೆಯ ದಿನವನ್ನು ಭಾರತದ ಪೂರ್ವ ಕರಾವಳಿಯಲ್ಲಿ ಆಚರಿಸಲಾಯಿತು. ಈ ವರ್ಷ ಪಶ್ಚಿಮ ಕರಾವಳಿಯಲ್ಲಿ ಉತ್ಸವಗಳನ್ನು ಆಯೋಜಿಸಲಾಗಿದೆ. ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಕಳೆದ ವರ್ಷ ಬೆಂಗಳೂರು ಮತ್ತು ಚಂಡೀಗಢದಲ್ಲಿ ಪರೇಡ್‌ ಗಳನ್ನು ಆಯೋಜಿಸಿತ್ತು. ಈ ವರ್ಷದ…

Read More

ರಾಷ್ಟ್ರ ರಾಜಧಾನಿಯಲ್ಲಿ ಸೇನಾ ಕರ್ನಲ್ ಒಬ್ಬರನ್ನು ಥಳಿಸಿ ಹಣ ಮತ್ತು ಮೊಬೈಲ್ ದೋಚಿದ್ದಾರೆ. ದಕ್ಷಿಣ ದೆಹಲಿಯ ಮಾಳವೀಯ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೆಮಿನಾರ್‌ ನಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಯೋಧನ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಾಣಕ್ಯಪುರಿ ಮೂಲದ ಸೇನಾ ಕರ್ನಲ್ ವಿನಿತ್ ಮೆಹ್ತಾ (49) ಹಲ್ಲೆಗೊಳಗಾದವರು. ಕರ್ನಲ್ ಮತ್ತು ಅವರ ಸ್ನೇಹಿತ ತಾಜ್ ಹೋಟೆಲ್‌ನಲ್ಲಿ ಸೆಮಿನಾರ್‌ನಿಂದ ಹಿಂತಿರುಗುತ್ತಿದ್ದರು. ರಾತ್ರಿ 11.30ರ ಸುಮಾರಿಗೆ ಮಾಳವೀಯ ನಗರದ ತ್ರಿವೇಣಿ ಕಾಂಪ್ಲೆಕ್ಸ್‌ ನಲ್ಲಿ ತನ್ನ ಸ್ನೇಹಿತನನ್ನು ಡ್ರಾಪ್ ಮಾಡಿದ ನಂತರ ಮೆಹ್ತಾ ಸಮೀಪದ ಪೆಟ್ರೋಲ್ ಪಂಪ್‌ ಗೆ ಹೋಗಿದ್ದಾನೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಲೈಟರ್ ಬೇಕೆಂದು ಕರ್ನಲ್ ಬಳಿ ಬಂದ. ಲೈಟರ್ ಇಲ್ಲ ಎಂದು ಹೇಳಿದ ಬಳಿಕ ಹಲ್ಲೆಗೆ ಮುಂದಾದರು. ಕಣ್ಣಿಗೆ ಪೌಡರ್ ಎರಚಿದ ಬಳಿಕ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ನಂತರ ಇನ್ನಿಬ್ಬರು ಧಾವಿಸಿ ಬಂದು ಕರ್ನಲ್ ನನ್ನು ಕಾರಿನಿಂದ ಹೊರಗೆಳೆದು ಅಮಾನುಷವಾಗಿ ಥಳಿಸಿ ಕಾರಿನಲ್ಲಿದ್ದ…

Read More

ತಮಿಳುನಾಡು ಸರ್ಕಾರ ಯುವತಿಯರನ್ನು ದೇವಸ್ಥಾನದ ಅರ್ಚಕರ ಸ್ಥಾನಕ್ಕೆ ಬಡ್ತಿ ನೀಡಿದ್ದು, ಈಗಲೂ ಕೆಲ ದೇವಸ್ಥಾನಕ್ಕೆ ಮಹಿಳೆಯರಿಗೆ ನಿಷೇಧವಿದೆ. ತಮಿಳುನಾಡು ಶ್ರೀ ವೈಷ್ಣವ ದೇವಾಲಯಗಳಲ್ಲಿ ಮೂವರು ಯುವತಿಯರನ್ನು ಸಹ ಅರ್ಚಕರನ್ನಾಗಿ ನೇಮಿಸುವ ಮೂಲಕ ಸಮಾನತೆಯ ಹೊಸ ಇತಿಹಾಸ ಬರೆಯುತ್ತಿದೆ. ಎಸ್ ಕೃಷ್ಣವೇಣಿ, ಎಸ್ ರಮ್ಯಾ ಮತ್ತು ರಂಜಿತಾ ಅವರು ಅರ್ಚಕರ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮೂವರೂ ತಮ್ಮ ತರಬೇತಿಯನ್ನು ಶ್ರೀರಂಗಂನ ಶ್ರೀ ರಂಗನಾಥರ ದೇವಸ್ಥಾನದಿಂದ ನಡೆಸಲ್ಪಡುವ ಅರ್ಚಕರ್ (ಪುರೋಹಿತರು) ತರಬೇತಿ ಶಾಲೆಯಿಂದ ಪೂರ್ಣಗೊಳಿಸಿದರು. ಒಂದು ವರ್ಷದೊಳಗೆ ಶ್ರೀ ವೈಷ್ಣವ ದೇವಾಲಯಗಳಲ್ಲಿ ಸಹ ಅರ್ಚಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಯುವತಿಯರ ಸಾಧನೆಯನ್ನು ಕೊಂಡಾಡಿದರು. ಒಳಗೊಳ್ಳುವಿಕೆ ಮತ್ತು ಸಮಾನತೆಯ ಹೊಸ ಯುಗವು ಉದಯಿಸುತ್ತಿದೆ ಎಂದು ಸ್ಟಾಲಿನ್ ಎಕ್ಸ್-ಹ್ಯಾಂಡಲ್ ‌ನಲ್ಲಿ ಹೇಳಿದರು. ಸೆ.12ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಶೇಖರ್ ಬಾಬು ಅವರಿಂದ ತರಬೇತಿ ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ಅರ್ಚಕರ್ ಸ್ವೀಕರಿಸಿದರು. ಅವರೊಂದಿಗೆ 91 ಪುರುಷರು 2022-2023 ರಲ್ಲಿ ತಮ್ಮ ತರಬೇತಿಯನ್ನು…

Read More

5 ಕೋಟಿ ವಂಚನೆಯ ಸೂತ್ರಧಾರಿ ಅಭಿನವ ಹಾಲಶ್ರೀಗಾಗಿ ಸಿಸಿಬಿ ಶೋಧ ಕಾರ್ಯ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ಮೂರು ತಂಡ ರಚಿಸಿ ಶೋಧ ಮಾಡುತ್ತಿದ್ದಾರೆ. ಬಂಧಿತ ಆರೋಪಿಗಳು ಕೊಟ್ಟ ಸುಳಿವಿನ ಆಧಾರದ ಮೇಲೆ ತಪಾಸಣೆ ನಡೆಸಲಾಗುತ್ತದೆ. ಬೆಂಗಳೂರು, ಉತ್ತರ ಕರ್ನಾಟಕ ಸೇರಿ ಹಲವು ಕಡೆ ಶೋಧಿಸುತ್ತಿದ್ದು, ಹೊರ ರಾಜ್ಯಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ವಂಚನೆ ಕೇಸ್ ‌ನಲ್ಲಿ ಅಭಿನವ ಹಾಲಶ್ರೀ 3ನೇ ಆರೋಪಿಯಾಗಿದ್ದಾರೆ. ಚೈತ್ರಾ ಕುಂದಾಪುರ ಜತೆ ಸೇರಿ ವಂಚಿಸಿದ್ದ ಆರೋಪ ಕೇಳಿ ಬಂದಿದೆ.

Read More

ತುಮಕೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಎರಡು ಬಸ್ ಗಳ ನಡುವೆ ಸಿಲುಕಿ ಮಹಿಳೆಯರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ 60 ವರ್ಷದ ಪುಟ್ಟತಾಯಮ್ಮ ಹಾಗೂ 55 ವರ್ಷದ ಪಂಕಜ ಮೃತ ದುರ್ದೈವಿಗಳು. ಮೃತ ಮಹಿಳೆಯರು ತಮ್ಮ ನೆರೆಹೊರೆಯವರೊಂದಿಗೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಾಲಯಕ್ಕೆ ಹೊರಟ್ಟಿದ್ದರು. ಶುಕ್ರವಾರ ಬೆಳಗ್ಗೆ ನಗರದ ಬಸ್ ನಿಲ್ದಾಣದಲ್ಲಿ ಕೊರಟಗೆರೆಯ ಬಸ್ ಹತ್ತಲು ಮುಂದಾದಾಗ ಗೌರಿ ಬಿದನೂರು ಮತ್ತು ಕೊರಟಗೆರೆಯ ಬಸ್ ಗಳ ನಡುವೆ ಸಿಲುಕಿಕೊಂಡು ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಚಿತ ಬಸ್ ಪ್ರಯಾಣ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಲವು ಮಹಿಳೆಯರು ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆಂದು ಬಂದಿದ್ದರು. ಅದರಂತೆ ಇಂದು ಗೊರವನಹಳ್ಳಿಗೆ ಹೊರಟಿದ್ದರು. ಆದರೆ ದುರಾದೃಷ್ಟವಶಾತ್ ಬಸ್ ಹತ್ತುವ ಪೈಪೋಟಿಯಲ್ಲಿ ಎರಡು ಬಸ್  ಗಳ  ನಡುವೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

Read More