Subscribe to Updates
Get the latest creative news from FooBar about art, design and business.
- ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
- ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
- ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
- ಡಕಾಯಿತಿಗೆ ಸಂಚು: ಐವರ ಬಂಧನ
- ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
- ನ.30 ರಂದು ಅಮೋಘ ಸಂಗೀತ ಕಛೇರಿ
- ಹುಳಿಯಾರು: ಘನತ್ಯಾಜ್ಯ ವಿಲೇವಾರಿ ಘಟಕ ಅವಕಾಶ ಕೊಡುವುದಿಲ್ಲ: ಗ್ರಾಮಸ್ಥರಿಂದ ವಿರೋಧ
- ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
Author: admin
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ನಾನು ಹೇಳಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಬದಲಾಗಿ ಅವರು ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸನಾತನ ಧರ್ಮದ ಬಗ್ಗೆ ಮಾತನಾಡಿಲ್ಲ. ಬೇರೆಯವರು ಏನು ವಿಶ್ಲೇಷಣೆ ಮಾಡುತ್ತಾರೆ ಅದಕ್ಕೆಲ್ಲ ಉತ್ತರ ಕೊಡಲ್ಲ. ನಾನು ಸಮಯ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದರು. ಧರ್ಮದ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೆ. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರು ಹಾಗೆ ಮಾತನಾಡುತ್ತಾರೆ, ಹೀಗೆ ಮಾತನಾಡುತ್ತಾರೆ ಅಂದರೆ ನಾನು ಉತ್ತರ ಕೊಡಲ್ಲ. ಮೋದಿ ಅವರು ನಾನು ಹೇಳಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿಯವರು ಹೋರಾಟ ಮಾಡಲಿ. ನಾವು ಉತ್ತರ ಕೊಡುತ್ತೇವೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಉತ್ತರ ಕೊಡುತ್ತಾರೆ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ.…
ಖ್ಯಾತ ವ್ಯಂಗ್ಯ ಚಿತ್ರಕಾರ ಅಜಿತ್ ನೈನಾನ್ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ. ಇಂಡಿಯಾ ಟುಡೇ ಮ್ಯಾಗಜೀನ್ ನಲ್ಲಿನ ಕಾರ್ಟೂನ್ ಸರಣಿ ‘ಸೆಂಟ್ರೆಸ್ಟೇಜ್’ ಮತ್ತು ಟೈಮ್ಸ್ ಆಫ್ ಇಂಡಿಯಾದಲ್ಲಿ ‘ನಿನಾನ್ಸ್ ವರ್ಲ್ಡ್’ ಗಾಗಿ ಅವರು ಪ್ರಸಿದ್ಧರಾಗಿದ್ದರು. ಮಕ್ಕಳ ನಿಯತಕಾಲಿಕೆ ಟಾರ್ಗೆಟ್ ನಲ್ಲಿನ ‘ಡಿಟೆಕ್ಟಿವ್ ಮೂಚ್ ವಾಲಾ’ ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಔಟ್ ಲುಕ್ ನಲ್ಲಿ ಕೆಲಸ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಎಲ್ಲಾ ಆವೃತ್ತಿಗಳಲ್ಲಿ ಅವರ ಕಾರ್ಟೂನ್ ಅಂಕಣಗಳು ಕಾಣಿಸಿಕೊಂಡವು. ಅವುಗಳೆಂದರೆ ಜಸ್ಟ್ ಲೈಕ್ ದಟ್ (ಡೈಲಿ), ಲೈಕ್ ದಟ್ ಓನ್ಲಿ (ಪೈವೀಕ್ಲಿ), ಸಿಇಒ ಟೂನ್ಸ್ (ಡೈಲಿ) ಮತ್ತು ಎಂಡ್ – ಕ್ರೆಸ್ಟ್ (ಸಾಪ್ತಾಹಿಕ). ಅವರು ಮೇ 15, 1955 ರಂದು ಹೈದರಾಬಾದ್ ನಲ್ಲಿ ಎ.ಎಮ್ ಮ್ಯಾಥ್ಯೂ ಮತ್ತು ಆನಿ ಮ್ಯಾಥ್ಯೂಗೆ ಜನಿಸಿದರು. ಇವರು ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಅಬು ಅಬ್ರಹಾಂ…
ಜೈಪುರದಲ್ಲಿ ಪಟಾಕಿ ಸದ್ದು ಕೇಳಿದ ವಿದೇಶಿ ಪ್ರವಾಸಿ ಹೋಟೆಲ್ ನ ಎರಡನೇ ಮಹಡಿಯಿಂದ ಜಿಗಿದಿದ್ದಾನೆ. ಜೈಪುರದ ಜವಾಹರ್ ವೃತ್ತದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. 33 ವರ್ಷದ ನಾರ್ವೇಜಿಯನ್ ಫಿನ್ ವೆಟೆಲಿನ್ ಅವರ ಒಂದು ಕೈ ಮತ್ತು ಎರಡೂ ಕಾಲುಗಳು ಮುರಿದಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಜೈಪುರ ತಲುಪಿದ ಅವರು ನ್ಯೂ ಏರ್ ಪೋರ್ಟ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಕೊಠಡಿ ಕಾಯ್ದಿರಿಸಿದ್ದಾರೆ. ಅಂದು ರಾತ್ರಿ, ಜನ್ಮಾಷ್ಟಮಿ ಆಚರಣೆಯ ಅಂಗವಾಗಿ, ಅವರು ಹತ್ತಿರದ ದೇವಸ್ಥಾನದಲ್ಲಿ ಪಟಾಕಿ ಸಿಡಿಸುವುದನ್ನು ಕೇಳಿ ಎರಡನೇ ಮಹಡಿಯಿಂದ ಕೆಳಗೆ ಹಾರಿದರು. ಬಿದ್ದ ರಭಸಕ್ಕೆ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪಟಾಕಿ ಸಿಡಿಸುವ ವೇಳೆ ನಿದ್ದೆಯಲ್ಲಿದ್ದ ಯುವಕ, ಕೊಠಡಿಯಲ್ಲಿ ಯಾರೋ ಗುಂಡು ಹಾರಿಸಿದ ಸದ್ದು ಕೇಳಿದ ಅನುಭವವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಬಹಳ ದೊಡ್ಡ ದೊಡ್ಡ ಆಶ್ವಾಸನೆ ಕೊಟ್ಟು ಸರ್ಕಾರ ಅಧಿಕಾರಕ್ಕೆ ಬಂತು. ಇವರು ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿ ಅವರು ಕೊಡುತ್ತಿರುವ ಅಕ್ಕಿ. ಕರ್ನಾಟಕದಲ್ಲಿ ಗೃಹಲಕ್ಷಿ ಯೋಜನೆ ಬರುವಂತಹ ದಿನಗಳಲ್ಲಿ ಕಾಂಗ್ರೆಸ್ ಗೆ ಮುಳುವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು. ಬೆಂಗಳೂರಿನ ಹೊರ ವಲಯದ ಅಧಿಕಾರಿ 8 ಕೋಟಿ ಕೊಟ್ಟಿದ್ದಾರೆ. ಅವರು ಬೇಡ ಅಂತ ಹೋದರೇ ಅದೇ ಜಾಗಕ್ಕೆ 13 ಕೋಟಿ ಪಡೆದು ನೇಮಕ ಮಾಡಿದ್ದಾರೆ. ಕುಮಾರ ಕೃಪಾದಲ್ಲಿ ದಂಧೆ ನಡೆಯುತ್ತಿದೆ. ಇವತ್ತು ಯಾವುದೇ ಅಧಿಕಾರಿ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಸಣ್ಣಪುಟ್ಟ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ನಿಮ್ಮ ನಿಷ್ಟೆ ಕಾನೂನಿಗೆ ಇರಬೇಕು. ಕಾವೇರಿ ನದಿ ನೀರಿನ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ನೀರು ಹರಿಸದೇ ತಮಿಳುನಾಡಿಗೆ ಹರಿಸಿದೆ. ಒಂದು ಕಾಳು ಅಕ್ಕಿಯನ್ನೂ ನೀವು ಕೊಟ್ಟಿಲ್ಲ, ನೀವು ನೀಚರು ಎಂದು ವಾಗ್ದಾಳಿಮಾಡಿದರು.
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ 98 ಅಡಿಗೆ ಕುಸಿತವಾಗಿದೆ. ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ 12 ಟಿಎಂಸಿ ನೀರು ಖಾಲಿಯಾಗಿದೆ. ಜಲಾಶಯದ ಹಿನ್ನೀರು ಪ್ರದೇಶ ಬಹುತೇಕ ಬರಡು ಭೂಮಿಯಂತಾಗಿದೆ. ತಮಿಳುನಾಡಿಗೆ ಮತ್ತಷ್ಟು ನೀರು ಹರಿಸಿದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ. ಬೆಳೆಗೆ ನೀರಿಲ್ಲದೆ ಆತಂಕದಲ್ಲಿರುವ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕೃಷ್ಣವೇಣಿ ಸಾವನ್ನಪ್ಪಿರುವ ನವವಿವಾಹಿತೆ. ಮೂರು ತಿಂಗಳ ಹಿಂದಷ್ಟೆ ಕೃಷ್ಣವೇಣಿಯನ್ನ ಕೋಲಾರ ಮೂಲದ ಪೃಥ್ವಿರಾಜ್ ಗೆ ವಿವಾಹ ಮಾಡಿಕೊಡಲಾಗಿತ್ತು. ಪೃಥ್ವಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.ಇದೀಗ ಕೃಷ್ಣವೇಣಿ ಕುಟುಂಬದವರು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಮದುವೆಯಾದ ಎರಡು ತಿಂಗಳಿಗೆ ಕಿರಿಕ್ ಶುರುಮಾಡಿದ್ದ. ಮದುವೆಯಾದ ಮೂರು ತಿಂಗಳಿಗೆ ನಾಲೈದು ಬಾರಿ ಜಗಳ ಮಾಡಿ ತವರಿಗೆ ಕಳುಹಿಸಿದ್ದ. ಗುರುವಾರವೂ ಕುಡಿದು ಬಂದು ಗಲಾಟೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಮೃತ ಕೃಷ್ಣವೇಣಿ ಎರಡು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಆಕೆಯ ಪತಿ ಪೃಥ್ವಿರಾಜ್ ನನ್ನು ಬಂಧಿಸುವಂತೆ ಕಾಡುಗೋಡಿ ಠಾಣೆ ಮುಂದೆ ಕೃಷ್ಣವೇಣಿ ಕುಟುಂಬದವರು ಜಮಾಯಿಸಿದ್ದಾರೆ
ಕೋಮುವಾದ ಪೀಡಿತ ಮಣಿಪುರದಲ್ಲಿ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ. ತೆಂಗನೌಪಾಲ್ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಪ್ರತಿಭಟನಾಕಾರರು ಮತ್ತು ಅಸ್ಸಾಂ ರೈಫಲ್ಸ್ ನಡುವೆ ಘರ್ಷಣೆ ನಡೆಯಿತು. ವರದಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ನಡೆದ ಘರ್ಷಣೆಯಲ್ಲಿ ಸುಮಾರು ಐವತ್ತು ಜನರು ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತೆಂಗ್ ನೌಪಾಲ್ ಜಿಲ್ಲೆಯ ಪಲ್ಲೆಲ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. ಸಾವಿರಾರು ಪ್ರತಿಭಟನಾಕಾರರು ಬುಧವಾರ ಬಿಷ್ಣುಪುರ್ ಜಿಲ್ಲೆಯ ಫೌಗಕ್ಚಾವೊ ಇಖಾದಲ್ಲಿ ಟೊರ್ಬಂಗ್ ನಲ್ಲಿ ಖಾಲಿ ಇರುವ ಮನೆಗಳಿಗೆ ನುಗ್ಗಲು ಪ್ರಯತ್ನಿಸಿದರು. ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್), ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಬ್ಯಾರಿಕೇಡ್‌ಗಳನ್ನು ಭೇದಿಸಲು ಪ್ರಯತ್ನಿಸಿದವರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಪ್ರತಿಭಟನೆಗೆ ಒಂದು ದಿನ ಮುಂಚಿತವಾಗಿ ಮಣಿಪುರದ ಎಲ್ಲಾ ಐದು ಕಣಿವೆ ಜಿಲ್ಲೆಗಳಲ್ಲಿ ಸಂಪೂರ್ಣ…
ತುಮಕೂರು: ನಾನು ಸನಾತನ ಧರ್ಮದ ವಿರೋಧಿಯಲ್ಲ. ನಾನು ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ ಎಂದು ಚಿತ್ರನಟ ಚೇತನ್ ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕೆ ಘೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮ ಅನ್ನೋದನ್ನು ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು ಎಂದರು. ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು ಎಂದರು. ಕಮ್ಯೂನಿಸ್ಟ್ ರು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ. ಕಾಂಗ್ರೆಸ್ ನವರು ತಂದಿರುವ ಐದು ಗ್ಯಾರಂಟಿ ತೇಪೆ ಹೆಚ್ಚುವ ಕೆಲಸ ಎಂದರು. ಅದನ್ನು ದೇವರಾಜ್ ಅರಸರ ಆಡಳಿತಕ್ಕೆ ಹೋಲಿಸಬೇಡಿ.ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ ಸಿದ್ದರಾಮಯ್ಯ ರೈತರ ಭೂಮಿಯನ್ನು ಮೈನಿಂಗೆ ಕೊಟ್ಟಿದ್ದಾರೆ. ಮೈನಿಂಗ್ ವಿರುದ್ದವೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ರು…
ತುಮಕೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಹಾಗೂ ರೈತರ ಜಮೀನುಗಳಲ್ಲಿರುವ ಬೋರ್ವೆಲ್ ಮತ್ತು ತೆರೆದ ಬಾವಿಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು ಹಗಲು ಹೊತ್ತಿನಲ್ಲೂ ಲೋಡ್ ಸೆಟ್ಟಿಂಗ್ ಇಲ್ಲದೆ ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಎಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ರಾಜ್ಯದ ಕಾವೇರಿ ನೀರನ್ನು ತಮಿಳುನಾಡಿನ ಡಿಎಂಕೆ ಪಕ್ಷದೊಂದಿಗೆ ಶಾಮೀಲಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಥೇಚ್ಛವಾಗಿ ನೀರುಹರಿಸಿ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಈಗಾಗಲೇ ರಾಜ್ಯದ 143ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರವಾದ ಬರಗಾಲ ಪರಿಸ್ಥಿತಿ ಉದ್ಭವಿಸಿದ್ದು ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ನಿರ್ಲಕ್ಷ್ಯ ಭಾವನೆ ತೋರಿದೆ ಎಂದು ಶಾಸಕ ಸುರೇಶ್ ಗೌಡ ಆರೋಪಿಸಿದರು.
ತುರುವೇಕೆರೆ: ಸಿದ್ದಗಂಗಾ ಮಠದಲ್ಲಿ ನಡೆದ ಜಿಲ್ಲಾಮಟ್ಟದ Under 14 free style Wrestling ಕುಸ್ತಿಯ 48 ಕೆಜಿ ವಿಭಾಗದಲ್ಲಿ ಮಾರುತಿ ವಿದ್ಯಾ ಮಂದಿರ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಯಶ್ವಂತ್ ಕಲ್ಮನೆ ಜಯಗಳಿಸಿ, ಚಿನ್ನದ ಪದಕ ಗೆದ್ದಿದ್ದಾನೆ. ತಾಲೂಕಿನ ಅಮ್ಮಸಂದ್ರ ನಿವಾಸಿಗಳಾದ ಪದ್ಮ ಮತ್ತು ರೋಹಿತ್ ದಂಪತಿಯ ಪುತ್ರನಾದ, ಯಶ್ವಂತ್ ಕಲ್ಮನೆ ಹುಟ್ಟೂರಿಗೆ ಮತ್ತು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಯಶ್ವಂತ್ 9ನೇ ತಾರೀಖಿನಂದು ಬಾಗಲಕೋಟೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯದಲ್ಲೂ ಕೂಡ ಭಾಗವಹಿಸಲಿದ್ದಾನೆ. ಈತನ ತಾಯಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಕೂಡ ಆಗಿದ್ದಾರೆ. ಈತನ ಈ ಯಶಸ್ಸಿಗೆ ತುರುವೇಕೆರೆ ತಾಲೂಕಿನ ಪದ್ಮರೋಹಿತ್ ದಂಪತಿಯ ಸ್ನೇಹಿತರು ಹಾಗೂ ಬಂಧು ಮಿತ್ರರು ಶಿಕ್ಷಕ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಹಾಗೂ ಯಶ್ವಂತ್ ಕಲ್ಮನೆರವರು ರಾಷ್ಟ್ರ ಆಗುವ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ