Author: admin

ಮೈಸೂರು:ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿಯಲ್ಲಿ ಸೆಪ್ಟಂಬರ್ 9 ರಿಂದ ಸೆಪ್ಟಂಬರ್ 17ರವರೆಗೆ “ಕೀಟಗಳ ಪ್ರಣಯ ಪ್ರಪಂಚ’’ -ಮ್ಯಾಕ್ರೋ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. 09-09-2023ರ ಶನಿವಾರ ಸಂಜೆ 04 ಗಂಟೆಗೆ ವಿಜಯನಗರ 2ನೇ ಹಂತದ ಅಂಬರೀಷ್ ರಸ್ತೆಯಲ್ಲಿರುವ ನೆರಳು ಬೆಳಕು ಗ್ಯಾಲರಿ – ಕಾಫಿ ಸಿಟಿಯಲ್ಲಿ“ಕೀಟಗಳ ಪ್ರಣಯ ಪ್ರಪಂಚ’’ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಡ್ಯ ನಿವೃತ್ತ ಪ್ರಾಂಶುಪಾಲರು ಹಾಗೂ ಛಾಯಾಗ್ರಾಹಕರಾದ ಲೀಲಾ ಅಪ್ಪಾಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮ್ಯಾಕ್ರೋ ಫೋಟೋಗ್ರಾಫರ್ ಗಿರೀಶ್‌ ಗೌಡ ಆಗಮಿಸಲಿದ್ದಾರೆ ಎಂದು ವಿನೋದ್ ಕುಮಾರ್ ವಿ ಕೆ ತಿಳಿಸಿದ್ದಾರೆ. ಮನುಷ್ಯನು ಚಂದ್ರ ಮತ್ತು ಮಂಗಳಗ್ರಹ ತಲುಪಿದರೂ ಇಲ್ಲಿನ ಕೀಟಲೋಕ ಮಾತ್ರ ಇನ್ನೂ ಪೂರ್ತಿದಕ್ಕಿಲ್ಲ. ಭೂಮಿಯಲ್ಲಿರುವ ಎಲ್ಲ ಕೀಟಗಳ ಪಟ್ಟಿಮಾಡಲು ಸಾದ್ಯವಾಗಿಲ್ಲ. ನಮಗೆ ಗೊತ್ತಿರುವುದು ಕೇವಲ ಶೇಕಡ ಹತ್ತೊ ಇಪ್ಪತ್ತೊ ಅಷ್ಟೆ. ಮನುಷ್ಯನ ಕಡೆಗಣನೆ ಸಹಜವೇ ಆದರೂ ಅಲ್ಲಿನ ಕೌತುಕಗಳು ಬೆರಗು ಮೂಡಿಸುತ್ತವೆ. ಕೀಟಗಳ ಬದುಕಿನ ಹತ್ತಾರು ವಿಷಯಗಳಲ್ಲಿ ಅವುಗಳ ಪ್ರಣಯ ಲೋಕವು…

Read More

ಜಾಗತಿಕವಾಗಿ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕ್ಯಾನ್ಸರ್ ಪ್ರಮಾಣವು 80% ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಈ ಭಾರಿ ಹೆಚ್ಚಳವಾಗಿದೆ ಎಂದೂ ಅಧ್ಯಯನ ಹೇಳುತ್ತದೆ. ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಚೀನಾದ ಝೆಜಿಯಾಂಗ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಈ ಅಧ್ಯಯನವನ್ನು ನಡೆಸಿದರು. ಬಿ.ಎಂ.ಜೆ. ಈ ಅಧ್ಯಯನವನ್ನು ಆಂಕೊಲಾಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. 29 ವಿವಿಧ ಕ್ಯಾನ್ಸರ್‌ಗಳನ್ನು ಆಧರಿಸಿ 204 ದೇಶಗಳಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ. ಸ್ತನ ಕ್ಯಾನ್ಸರ್ ದರಗಳಲ್ಲಿ ಮತ್ತಷ್ಟು ಹೆಚ್ಚಳವನ್ನು ಅಧ್ಯಯನವು ಕಂಡುಹಿಡಿದಿದೆ. ವರದಿಯ ಪ್ರಕಾರ, ಸಾವಿನ ಪ್ರಮಾಣವು ಈ ವರ್ಗದ ಕ್ಯಾನ್ಸರ್ಗಿಂತ ಹೆಚ್ಚಾಗಿದೆ. ಯುವಜನರಲ್ಲಿ ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ಅಧ್ಯಯನ ಹೇಳಿದೆ. 1990 ಮತ್ತು 2019 ರ ನಡುವೆ, ಈ ಕ್ಯಾನ್ಸರ್‌ಗಳ ದರಗಳಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಏತನ್ಮಧ್ಯೆ, ಆರಂಭಿಕ-ಆರಂಭಿಕ ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳಲ್ಲಿ 2.88 ಪ್ರತಿಶತದಷ್ಟು ವಾರ್ಷಿಕ ಕುಸಿತವನ್ನು ದಾಖಲಿಸಲಾಗಿದೆ. ಕ್ಯಾನ್ಸರ್ ಪ್ರಮಾಣ…

Read More

ಫಿನ್‌ಲ್ಯಾಂಡ್ ವಿಶ್ವದ ಮೊದಲ ಡಿಜಿಟಲ್ ಪಾಸ್‌ಪೋರ್ಟ್ ಅನ್ನು ಪರೀಕ್ಷಿಸಲು ತಯಾರಿ ನಡೆಸುತ್ತಿದೆ. ಪಾಸ್‌ಪೋರ್ಟ್ ಸಂಬಂಧಿತ ವಿಷಯಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಾಗರಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸಲು ಡಿಜಿಟಲ್ ಪಾಸ್‌ಪೋರ್ಟ್ ಅನ್ನು ಯುರೋಪಿಯನ್ ಯೂನಿಯನ್ ಪ್ರಾಯೋಗಿಕವಾಗಿ ನಡೆಸುತ್ತಿದೆ. ಇದು ಶೀಘ್ರದಲ್ಲೇ ಯುರೋಪಿನಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ. ಡಿಜಿಟಲ್ ಟ್ರಾವೆಲ್ ರುಜುವಾತುಗಳನ್ನು (DTC), ಪಾಸ್‌ಪೋರ್ಟ್‌ನ ಡಿಜಿಟಲ್ ರೂಪವನ್ನು ಪ್ರಾಯೋಗಿಕ ಆಧಾರದ ಮೇಲೆ ದೇಶದಲ್ಲಿ ಪರಿಚಯಿಸಲಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಪಾಸ್‌ಪೋರ್ಟ್ ಅನ್ನು ಡಿಟಿಸಿ ಎಂದು ಕರೆಯಲಾಗುತ್ತದೆ. ಫಿನ್ನೈರ್ ಮತ್ತು ಫಿನ್ನಿಷ್ ಪೋಲೀಸರ ಸಹಕಾರದೊಂದಿಗೆ ಹೆಲ್ಸಿಂಕಿಯಲ್ಲಿ ಇದನ್ನು ಅಳವಡಿಸಲಾಗಿದೆ. 2023ರ ಅಂತ್ಯದ ವೇಳೆಗೆ ಕ್ರೊಯೇಷಿಯಾದಲ್ಲೂ ಡಿಜಿಟಲ್ ಪಾಸ್‌ಪೋರ್ಟ್ ಜಾರಿಯಾಗಲಿದೆ ಎಂಬ ವರದಿಗಳಿವೆ. 2030 ರ ವೇಳೆಗೆ, ಯುರೋಪಿನ ಜನಸಂಖ್ಯೆಯ 80 ಪ್ರತಿಶತದಷ್ಟು ಜನರು ಡಿಜಿಟಲ್ ಪಾಸ್‌ಪೋರ್ಟ್‌ಗಳಿಗೆ ಬದಲಾಗುವ ನಿರೀಕ್ಷೆಯಿದೆ. ಡಿಜಿಟಲ್ ಪಾಸ್‌ಪೋರ್ಟ್‌ಗಳು ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳದೆ ಅಂತಾರಾಷ್ಟ್ರೀಯ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುತ್ತವೆ.

Read More

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯರು ವಿಕಲಚೇತನ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ಆರೋಪಿಸಿದ್ದಾರೆ. ಹಾಸ್ಟೆಲ್ ಕೊಠಡಿ ಖಾಲಿ ಮಾಡುವ ವಿಚಾರವಾಗಿ ನಡೆದ ವಿವಾದ ಹಲ್ಲೆಗೆ ಕಾರಣವಾಗಿದೆ. ಪಿಎಚ್‌ಡಿ ವಿದ್ಯಾರ್ಥಿ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಕಾರ್ಯಕರ್ತ ಫಾರೂಕ್ ಆಲಂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಎನ್‌ಯು ಕಾವೇರಿ ಹಾಸ್ಟೆಲ್‌ ನಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಫಾರೂಕ್ ವಿರುದ್ಧದ ಹಳೆಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇದನ್ನು ಸೂಚಿಸಿದ ವಿಶ್ವವಿದ್ಯಾಲಯದ ಆಡಳಿತವು ಹಾಸ್ಟೆಲ್‌ಗೆ ತಲುಪಿ ಕೊಠಡಿಯನ್ನು ಖಾಲಿ ಮಾಡುವಂತೆ ಫಾರೂಕ್‌ಗೆ ಕೇಳಿದೆ. ಜೆಎನ್‌ಯು ಅಧಿಕಾರಿಗಳ ಜತೆ ಎಬಿವಿಪಿ ಸದಸ್ಯರೂ ಇದ್ದರು ಎನ್ನಲಾಗಿದೆ. ಪ್ರತಿಭಟನೆ ನಡೆಸಿದ ಫಾರೂಕ್‌ಗೆ ಕಾರ್ಮಿಕರು ಥಳಿಸಿದ್ದಾರೆ. ದಾಳಿಯ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫಾರೂಕ್ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಎಬಿವಿಪಿ ಕಾರ್ಯಕರ್ತರು ದೈಹಿಕ ವಿಕಲಚೇತನ ವಿದ್ಯಾರ್ಥಿಯ ಮೇಲೆ ನಡೆಸಿದ ದಾಳಿಯನ್ನು ಎನ್‌ಎಸ್‌ಯುಐ ಖಂಡಿಸುತ್ತದೆ. ಸಂಘರ್ಷದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಬಗ್ಗೆ ತನಿಖೆಯಾಗಬೇಕು. ಜೆಎನ್‌ಯು…

Read More

ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸಲಾಗಿದೆ. ಇನ್ನು ಮುಂದೆ ನಾಡದೇವಿ “ಭುವನೇಶ್ವರಿ’ಗೆ ನಿತ್ಯ ಅರ್ಚನೆ ನೆರವೇರಲಿದೆ. ಪ್ರತಿಮೆ ಸ್ಥಾಪಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈಗಾಗಲೇ ತಿಂಗಳಲ್ಲಿ ಎರಡು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರತಿಮೆ ನಿರ್ಮಾಣ ಸಂಬಂಧ ತುರ್ತು ಕ್ರಮವಹಿಸುವಂತೆ ಸೂಚಿಸಿದ್ದಾರೆ.

Read More

ವರದಿ: ಟೈಗರ್’ನಾಗ್ ರಾತ್ರಿವರೆಗೂ ಬಾಗಿಲು ತೆರೆದು ಅಕ್ರಮ ಸಕ್ರಮ ಮಾಡಲು  ಗ್ರಾಮ ಪಂಚಾಯತ್ ಮುಂದಾಗಿರುವ ಘಟನೆ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಪಂಚಾಯಿತಿಯ ಹಳೆಯ ಸಾಮಗ್ರಿಗಳು ಬೆಳಿಗ್ಗೆ ಹರಾಜು ಪ್ರಕ್ರಿಯೆ ಇತ್ತು, ಇದರ ಕಾರಣ ಏನೋ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದಲ್ಲದೆ ಈ ಹಿಂದೆ ಲೋಕಾಯುಕ್ತ ದಾಳಿ ಕೂಡ ನಡೆದಿತ್ತು, ದಾಖಲೆ ನಾಶ ಮಾಡಲು ತೆರೆದಿರಬಹುದಾ ಅಥವಾ ನಕಲಿ ಜಾಬ್ ಕಾರ್ಡ್ ಗೆ ಬಿಲ್ ಮಾಡಲು ಪ್ಲಾನ್ ನಡೆದಿರಬಹುದಾ ಎಂಬ ಇನ್ನೂ ಹಲವು ಅನುಮಾನಗಳಿಗೆ ಕಾರಣವಾಗಿದೆ ಕಂಪ್ಯೂಟರ್ ಆಪರೇಟರ್ ಕಮ್ ಬಿಲ್ ಕಲೆಕ್ಟರ್ ಚಿಕ್ಕರಂಗಯ್ಯ ಒಬ್ಬರೇ ಗುರುವಾರ ರಾತ್ರಿ 8 ಗಂಟೆಯವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರ ಗಮನಕ್ಕೂ ತರದೆ  ಅಕ್ರಮವಾಗಿ ಪಂಚಾಯಿತಿ ತೆರೆದಿರುವುದು ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ತನಿಖೆ ನಡೆಸುವಂತೆ ಸಾರ್ವಜನಿಕರ ಆಗ್ರಹವಾಗಿದೆ ನನ್ನ‌ ಗಮನಕ್ಕೆ ಇಲ್ಲ ಎಂದ ಗ್ರಾಪಂ ಪಿಡಿಓ: ರಾತ್ರಿ ಎಂಟು ಗಂಟೆಯವರೆಗೆ…

Read More

ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ. ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ದುರ್ಗ ಹೋಬಳಿಯ ತೋವಿನಕೆರೆಯಲ್ಲಿ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಮಾರ್ಗದರ್ಶನದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನಸಂಪರ್ಕ ಸಭೆಯನ್ನು ಸೆಪ್ಟೆಂಬರ್ 15 ರಂದು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತಾಲ್ಲೂಕು ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಇತ್ತೀಚಿಗೆ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆ, ಗೃಹ ಜ್ಯೋತಿ ಸೇರಿದಂತೆ ಅನೇಕ ಕುಂದು- ಕೊರತೆಗಳನ್ನು ಅರ್ಜಿ ಪಡೆಯುವ ಮುಖಾಂತರ ಸ್ವೀಕರಿಸಿ ಅರ್ಜಿಯ ಸಮಸ್ಯೆಯನ್ನು ಬಗೆ ಹರಿಸುವುದರೊಂದಿಗೆ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 15 ರಂದು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಿದೆ ಎಂದರು. ಈ ಸಭೆಯಲ್ಲಿ ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್, ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಸಿಇಒ ಪ್ರಭು, ಮಧುಗಿರಿ ಉಪ ವಿಭಾಗಾಧಿಕಾರಿ ರಿಷಿ ಆನಂದ್ ಸೇರಿದಂತೆ…

Read More

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ಜತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಸಮಾಜ‌ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು 3 ಗಂಟೆಗಳ ಕಾಲ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಬಳಿಕ ಅಧಿಕಾರಿ ವರ್ಗಕ್ಕೆ ಈ ಸೂಚನೆ ನೀಡಿದರು. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯ ಆಗುವುದಿಲ್ಲ ಎನ್ನುವ ಕಾರಣದಿಂದ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ, ನಾಗರಿಕ ಹಕ್ಕು ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸರ್ಕಾರ ಈ ಕಾಯ್ದೆಗೆ ಹೆಚ್ಚಿನ‌ ಮಹತ್ವ ನೀಡಿ ಗಂಭೀರವಾಗಿ ಪರಿಗಣಿಸುತ್ತದೆ. ಸಂತ್ರಸ್ತರಿಗೆ ರಕ್ಷಣೆ ಸಿಗಬೇಕು. ಈ ಉದ್ದೇಶ ಸಫಲವಾಗಲು ಸಮಾಜ ಕಲ್ಯಾಣ ಇಲಾಖೆ,…

Read More

ಬೆಂಗಳೂರು: ರಾಜ್ಯದಲ್ಲಿ ಆತಂಕ ಸೃಷ್ಟಿಮಾಡಿರುವ ಡೆಂಗ್ಯೂ ಕಳೆದ 2022ರ ಇಡೀ ವರ್ಷಪೂರ್ತಿ ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 5,522 ಪ್ರಕರಣಗಳು ವರದಿಯಾಗಿತ್ತು. ಅದರಲ್ಲಿ ಬಿಬಿಎಂಪಿಯೊಂದರಲ್ಲೇ 1,058 ಪ್ರಕರಣಗಳು ಹಾಗೂ 4464 ಡೆಂಗ್ಯೂ ಪಾಸಿಟಿವ್ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿತ್ತು. ಆದರೆ ಈ ಬಾರಿ ಕೇವಲ 8 ತಿಂಗಳು ಮೂರು ದಿನದಲ್ಲಿ 6,706 ಡೆಂಗ್ಯೂ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 2022ರ ಇಡೀ ವರ್ಷಕ್ಕಿಂತ ಈ ಬಾರಿ, 8 ತಿಂಗಳಲ್ಲಿ ಡೆಂಗ್ಯೂ ಪಾಸಿಟಿವ್ ಬಿಬಿಎಂಪಿಯಲ್ಲಿ ಹೆಚ್ಚಳವಾಗಿರುವುದು ತಿಳಿದು ಬಂದಿದೆ. 2023ರ ಜನವರಿಯಿಂದ ಸೆಪ್ಟೆಂಬರ್ 2ನೇ ತಾರೀಖಿನ ವರೆಗೆ ರಾಜ್ಯದಲ್ಲಿ ಒಟ್ಟಾರೆ 6,706 ಡೆಂಗ್ಯೂ ಜ್ವರ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 3,454 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿ 3,252 ಪ್ರಕರಣಗಳು ಕಂಡು ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ಆರಂಭದಿಂದ ಹೆಚ್ಚಾಗಿರುವುದು ಕಂಡು ಬಂದಿದೆ. ಜೂನ್…

Read More

ಬೆಂಗಳೂರು: ಧರ್ಮಕ್ಕೋಸ್ಕರ ಮನುಷ್ಯ ಅಲ್ಲ. ಮನುಷ್ಯನಿಗಾಗಿ ಧರ್ಮ ಇದೆ. ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೆ ದೈವತ್ವಕ್ಕೆ ಏರಿದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯನ್ನು‌ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ದ್ವೇಷಿಸುವುದು ಅಧರ್ಮ. ಮನುಷ್ಯ ದ್ವೇಷದ ಅಧರ್ಮದ ವಿರುದ್ಧವೇ ಕೃಷ್ಣ ಕೈಯಲ್ಲಿ ಶಸ್ತ್ರ ಹಿಡಿಯದೆ ಹೋರಾಡಿ ಧರ್ಮ ಸ್ಥಾಪನೆ ಮಾಡಿದ ಎಂದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಮನುಷ್ಯ ಪ್ರೀತಿಯ ಸಮಾನತೆಯ ಸಮಾಜ ಸೃಷ್ಟಿ ಆಗಬೇಕು ಎನ್ನುವುದಾಗಿತ್ತು. ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವೂ ಇದೇ ಆಗಿತ್ತು. ಪ್ರತಿಯೊಬ್ಬರಿಗೂ ಅವರವರ ಇಷ್ಟದ ಧರ್ಮವನ್ಮು ಒಪ್ಪಿಕೊಳ್ಳುವ, ಆಚರಿಸುವ ಸ್ವಾತಂತ್ರ್ಯವನ್ನು ನೀಡಿತು. ಜಾತಿ, ಧರ್ಮ ಆಧಾರಿತ ತಾರತಮ್ಯ ಮತ್ತು ಅಸಮಾನತೆಯನ್ನು ಸಂವಿಧಾನಬಾಹಿರ ಎಂದು ಅಂಬೇಡ್ಕರ್ ಘೋಷಿಸಿದರು. ಹೀಗಾಗಿ ಸಂವಿಧಾನವನ್ನು ರಕ್ಷಿಸುವವರ ಕೈಯಲ್ಲಿ…

Read More