Subscribe to Updates
Get the latest creative news from FooBar about art, design and business.
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
- ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
- ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ
- ಸರಗೂರು: ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಆಯ್ಕೆ
- ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಸುರೇಶ್ ಅವರಿಗೆ ಯಶವಂತಪುರ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
- ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!
Author: admin
ಬೆಳಗಾವಿ: ಕರ್ನಾಟಕದಲ್ಲಿ ಭ್ರೂಣ ಮತ್ತೆ ಹಾಗೂ ಹತ್ಯೆ ಪ್ರಕರಣ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಪರಿಷತ್ ನಲ್ಲಿಂದು ಗಮನ ಸೆಳೆಯುವ ಸೂಚನೆ ವೇಳೆ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಸ್ತಾಪಿಸಿದ್ದು, ಕೊಲ್ಲುವಾಗ ಭ್ರೂಣ ಅಮ್ಮಾ ಅಮ್ಮಾ ಎಂದು ಕೂಗುತ್ತೆ. ಮಗು ನನ್ನ ಕಾಪಾಡಿ ಎಂದು ಕೂಗತ್ತೆ. ಆದರೆ ಕೇಳುವುದಕ್ಕೆ ಧ್ವನಿನೇ ಇಲ್ವಲ್ಲಾ ಎಂದು ಹೇಳುತ್ತಾ ಗದ್ಗದಿತರಾದರು. ಗಮನ ಸೆಳೆಯುವ ಸೂಚನೆ ಅಡಿ ಭ್ರೂಣ ಹತ್ಯೆ ವಿಚಾರ ಪ್ರಸ್ತಾಪಿಸಿದ ಉಮಾಶ್ರೀ, ಹೆಣ್ಣು ಬ್ರೂಣ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಕೊಲ್ಲಲು ಮಚ್ಚು ಇನ್ನೊಂದು ಬೇಕಿಲ್ಲ, ಕೇವಲ ಯಂತ್ರದ ಮೂಲಕ ಭ್ರೂಣ ತೆಗೆದು ಹತ್ಯೆ ಮಾಡಲಾಗುತ್ತಿದೆ. ಹೆಣ್ಣು ಇಲ್ಲದೆ ವರ್ತಮಾನ, ಭೂತ, ಭವಿಷ್ಯ ಇಲ್ಲ. ಪರೀಕ್ಷೆ ಮಾಡಿ ಹೆಣ್ಣು ಭ್ರೂಣವನ್ನು ತೆಗೆದಾಗ ಇನ್ನೂ ಹೃದಯ ಮಿಡಿಯುತ್ತಲೇ ಇರುತ್ತೆ. ಆದರೆ ಅದನ್ನ ತೆಗೆದುಕೊಂಡು ಹೋಗಿ ಕಾವೇರಿ ಒಡಲಿಗೆ ಸೇರಿಸುತ್ತಾರೆ. ಇದನ್ನು ತಡೆಗೆ ಕಠಿಣ ಕಾನೂನು ಇಲ್ಲ. ಹಾಗಾಗಿ ಇದು ನಡೆಯುತ್ತಿದೆ ಎಂದು ಕಣ್ಣೀರಿಟ್ಟರು.
ಬೆಂಗಳೂರು: ಆಡುಗೋಡಿಯ ನಂಜಪ್ಪ ಲೇಔಟ್ ನಲ್ಲಿ ಬೈಕ್ ನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡವೊಂದು ಕೇರಳದ 26 ವರ್ಷದ ಉದ್ಯಮಿಯೊಬ್ಬರನ್ನು ಅವರ ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದೆ. ವಿಲ್ಸನ್ ಗಾರ್ಡನ್ ನಿವಾಸಿ ಬೇಸಿಲ್ ಸಿ ಕುರಿಯಾಕೋಸ್ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಸಿಬಿಡಿ ಪ್ರದೇಶದ ಕಾಲೇಜೊಂದರಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದು, ಆತನ ಪತ್ನಿ, ಸಹೋದರಿ ಮತ್ತು ಅವರ ಸ್ನೇಹಿತೆ ಸೇರಿ ಮೂವರು ಮಹಿಳೆಯರೊಂದಿಗೆ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಆರೋಪಿಗಳು ಸಂತ್ರಸ್ತನ ದಾರಿಯನ್ನು ತಡೆಯುತ್ತಿದ್ದರು. ಇದರಿಂದ ಬೇಸರಗೊಂಡ ಆರೋಪಿಗಳು ಕಾರನ್ನು ಓವರ್ ಟೇಕ್ ಮಾಡಿ ನಿಲ್ಲಿಸಿದ್ದಾರೆ. ಸಂತ್ರಸ್ತ ವ್ಯಕ್ತಿ ಕೇರಳ ನೋಂದಾಯಿತ ಕಾರನ್ನು ಓಡಿಸುತ್ತಿದ್ದ. ಆತ ಹೊರಗಿನವ ಎಂಬ ಕಾರಣಕ್ಕಾಗಿ ಜಗಳವಾಡಿದರು. ನಂತರ ಗ್ಯಾಂಗ್ ಅವರ ಮೇಲೆ ಹೆಲ್ಮೆಟ್ನಿಂದ ಹಲ್ಲೆ ಕೂಡ ನಡೆಸಿದೆ. ನಂತರ ಆತನ ನಿವಾಸದವರೆಗೂ ಹಿಂಬಾಲಿಸಿದ್ದಾರೆ. ಈ ಸಂಬಂಧ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಅವರು ಉತ್ತರಿಸಿದರು. ಶಾಲಾ ಮಕ್ಕಳಿಗೆ ಯಾಕೆ ಸೈಕಲ್ ಕೊಡ್ತಿಲ್ಲ? ಬಿಜೆಪಿ ಸರ್ಕಾರ ಸೈಕಲ್ ನಿಲ್ಲಿಸಿತ್ತು ಒಪ್ಪುತ್ತೇನೆ? ಅದಕ್ಕೆ ಜನ ನಮ್ಮನ್ನ ಇಲ್ಲಿಗೆ ಕೂರಿಸಿದ್ದಾರೆ. ಆದ್ರೆ ಈ ಸರ್ಕಾರಕ್ಕೆ ಸೈಕಲ್ ಕೊಡಲು ಹಣದ ಕೊರತೆ ಇದೆಯಾ? ಎಂದು ಪ್ರಶ್ನೆ ಮಾಡಿದರು. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರಕ್ಕೆ 100 ರೂ. ಕೊಡ್ತಿದ್ದಾರೆ. ಖರ್ಚೀಫ್ ಗೆ ಕೊಡುವಷ್ಟು ಹಣ ಕೊಡ್ತಿದ್ದಾರೆ. ಇಷ್ಟು ಹಣ ಶೂ, ಸಾಕ್ಸ್, ಸಮವಸ್ತ್ರಕ್ಕೆ ಸಾಕಾಗುತ್ತದೆಯೇ? ಶೂ, ಸಾಕ್ಸ್ ಹಣ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದರು.
ಈರುಳ್ಳಿ ನಂತರ ಬೆಳ್ಳುಳ್ಳಿ ಬೆಲೆಯಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 300 ರಿಂದ 400 ರೂ.ಗೆ ತಲುಪಿದೆ. ಒಂದು ತಿಂಗಳ ಹಿಂದೆ ಚಿಲ್ಲರೆ ಬೆಲೆ ಕೆಜಿಗೆ 200 ರಿಂದ 250 ರೂಪಾಯಿ ಇತ್ತು. ಈ ವರ್ಷ ಬೆಳ್ಳುಳ್ಳಿ ಬೆಳೆ ಕೈಕೊಟ್ಟಿದ್ದರಿಂದ ಬೆಲೆ ಏರಿಕೆಯಾಗಿದೆ. ಬೆಳ್ಳುಳ್ಳಿ ಬೆಲೆ ಏರಿಕೆಗೆ ಮೊದಲನೆಯ ಕಾರಣ ಹವಾಮಾನ ವೈಪರೀತ್ಯದಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿದೆ. ಎರಡನೆಯ ಕಾರಣ ಬೆಳ್ಳುಳ್ಳಿಯ ಕಡಿಮೆ ಉತ್ಪಾದನೆಯಿಂದಾಗಿ ಬೆಲೆ ಏರಿಕೆಯಾಗಿದೆ.
ತಲೆನೋವು ನಿವಾರಣೆಗೆ ಈ ಚಹಾಗಳನ್ನು ಸೇವಿಸಿ: ತುಳಸಿ ಚಹಾದಲ್ಲಿ ವಿಟಮಿನ್ ಕೆ ಹಾಗೂ ಎ ಸಮೃದ್ಧವಾಗಿದ್ದು, ತಲೆನೋವನ್ನು ಕಡಿಮೆ ಮಾಡಿಲು ಉಪಯುಕ್ತವಾಗಿದೆ. ಶುಂಠಿ ಚಹಾದಲ್ಲಿ ಉರಿಯೂತದ ಗುಣಲಕ್ಷಣಗಳು ಹಾಗೂ ನೋವನ್ನು ನಿವಾರಿಸುವ ರಾಸಾಯನಿಕ ಸಂಯುಕ್ತಗಳಿದ್ದು, ಇದು ತಲೆನೋವನ್ನು ನಿವಾರಿಸುತ್ತದೆ. ಲೆಮನ್ ಟೀಯಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿವೆ. ಈ ಟೀ ಕುಡಿದರೆ ತಲೆನೋವು ನಿವಾರಣೆಯಾಗುತ್ತದೆ. ದಾಲ್ಟಿನಿ, ಪುದೀನಾ, ಲ್ಯಾವೆಂಡರ್ ಚಹಾ ಕೂಡ ತಲೆನೋವು ನಿವಾರಣೆಗೆ ಉತ್ತಮ. ತೂಕ ಇಳಿಸಿಕೊಳ್ಳಲು ಬಯಸುವಿರಾ? ಈ ತರಕಾರಿಯನ್ನು ಮರೆಯದೇ ತಿನ್ನಿ..!! ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ತೂಕ ಇಳಿಸಿಕೊಳ್ಳಲು ಬಯಸುವವರು ತಿನ್ನಲೇಬೇಕಾದ ತರಕಾರಿಗಳಲ್ಲಿ ಈರುಳ್ಳಿಯೂ ಒಂದು. ಈರುಳ್ಳಿಯಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಂಶ ಬಹಳ ಹೆಚ್ಚಾಗಿರುತ್ತದೆ. ಒಂದು ಕಪ್ ಈರುಳ್ಳಿ 31 ಕ್ಯಾಲೋರಿಗಳನ್ನು ಮತ್ತು 0.1 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಇದು ಆಲಿಸಿನ್ ಸಂಯುಕ್ತದಲ್ಲಿ ಸಮೃದ್ಧವಾಗಿದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕರಗಿಸುತ್ತದೆ. ಈರುಳ್ಳಿಯಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಹೂಕೋಸಿನಲ್ಲಿವೆ…
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಸರ್ಕಾರಿ ದತ್ತು ಸ್ವೀಕಾರ ಕೇಂದ್ರದಲ್ಲಿ ಪ್ರಪ್ರಥಮವಾಗಿ ದಾಖಲಾಗಿರುವ 2 ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಮಕರಣ ಮಾಡಿದರು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಭಗವಂತನ ಅನುಗ್ರಹವಿರಲೆಂದು ಒಂದು ಮಗುವಿಗೆ ‘ಶಿವಾ’ ಇನ್ನೊಂದು ಮಗುವಿಗೆ ‘ಗುರು’ ಎಂದು ನಾಮಕರಣ ಮಾಡಲಾಗಿದ್ದು, ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಉಪ ನಿರ್ದೇಶಕರಾದ ನಾಗರಾಜ್ ಆರ್, ಗಂಗಣ್ಣ ಕಲ್ಲೂರ್, ಮಹಾಂತೇಶ ಮತ್ತಿಕೊಪ್ಪ, ಅಡಿವೇಶ ಇಟಗಿ, ಸಚಿನ ಹಿರೇಮಠ, ಸದ್ದಾಂ ಮಾರಿಹಾಳ, ಲೋಕೇಶ್, ಮಹೇಶ್ ಸಂಗಾನಟ್ಟಿ, ಮಲ್ಲಪ್ಪ ಕುಂದರಂಗಿ ಉಪಸ್ಥಿತರಿದ್ದರು.
ನಟಿ ತ್ರಿಷಾ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ನಟ ಮನ್ಸೂರ್ ಅಲಿ ಖಾನ್ ಅವರನ್ನು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ನಿಜವಾಗಿ ತ್ರಿಷಾ ಕೇಸ್ ಹಾಕಬೇಕಿತ್ತು. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬುದನ್ನು ಮನ್ಸೂರ್ ಕಲಿಯಬೇಕು ಎಂದು ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಲಾಯಿತು. ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ತ್ರಿಶಾ ಕೃಷ್ಣನ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಮತ್ತು ನಟ ಚಿರಂಜೀವಿ ಅವರಿಗೆ ಹೈಕೋರ್ಟ್ ಸೂಚಿಸಿದೆ. ಮನ್ಸೂರ್ ಅಲಿ ಖಾನ್ ಅವರು ತಲಾ ರೂ.1 ಕೋಟಿ ಪರಿಹಾರ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಲಿಯೋ ಚಿತ್ರದ ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮನ್ಸೂರ್ ಅಲಿ ಖಾನ್ ದ್ವೇಷದ ಹೇಳಿಕೆಗಳನ್ನು ನೀಡಿದ್ದಾರೆ. ಚಿತ್ರದಲ್ಲಿ ತ್ರಿಷಾ ಬಗ್ಗೆ ಗೊತ್ತಾದಾಗ ಬೆಡ್ ರೂಮ್ ದೃಶ್ಯಗಳು ಮತ್ತು ಅತ್ಯಾಚಾರದ ದೃಶ್ಯಗಳು ಇರುತ್ತವೆ ಎಂದು ಭಾವಿಸಿದ್ದೇನೆ ಎಂದು ಮನ್ಸೂರ್ ಹೇಳಿದರು. ನಟಿಯ ವಿರುದ್ಧ ಲೈಂಗಿಕ ಟೀಕೆ ವಿವಾದದ ನಂತರ, ತಮಿಳು ಚಿತ್ರರಂಗದ…
ಡಿ.13 ಕ್ಕೆ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸುಮಾರ 25ಸಾವಿರಕ್ಕೂ ಹೆಚ್ಚಿನ ಜನ ಸೇರಿ ಬೃಹತ್ ಜನಾಂದೋಲನ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಕರೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ, ರಾಜ್ಯ ರಾಜಕೀಯ ಬದಲಾವಣೆಗೆ ಬೆಳಗಾವಿ ಹೆಸರಾಗಿದ್ದು ಬದಲಾವಣೆಯ ಗಾಳಿ ಬೆಳಗಾವಿಯಿಂದ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ರಾಷ್ಟ್ರ ರಾಜಕೀಯಕ್ಕೆ ಕರ್ನಾಟಕ ಅತ್ಯಂತ ಪ್ರಮುಖ ಸ್ಥಾನ ವಹಿಸಿದರೆ ಕರ್ನಾಟಕ್ಕೆ ಬೆಳಗಾವಿ ಜಿಲ್ಲೆ ಮಹತ್ವ ಹೊಂದಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಿಂದ ಭ್ರಷ್ಟಾಚಾರದಲ್ಲಿ ಮುಳಗಿರುವ ರಾಜ್ಯ ಕಾಂಗ್ರೆಸ್ ಕಿತ್ತೊಗೆಯಲು ಗಂಡು ಮೆಟ್ಟಿನ ಸ್ಥಳ ಬೆಳಗಾವಿಯಿಂದ ಪ್ರತಿಭಟನಾ ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವವರೆಗೆ ವಿಶ್ರಮಿಸದೆ ಕಾರ್ಯಕರ್ತರಾದ ನಾವೆಲ್ಲರೂ ಶ್ರಮಿಸೋಣ. ಭೀಕರ ಬರಗಾಲದಲ್ಲಿ ಎಕರೆಗೆ ಪುಡಿಗಾಸು ನೀಡಲು ಇನ್ನು ಯೋಚಿಸುತ್ತಿರುವ ಹಾಗೂ ಹಿಂದೂ ವಿರೊಧಿ ನೀತಿ ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗುವಂತೆ ರಾಜ್ಯ…
ಉತ್ತರ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮಗಳ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. 22 ವರ್ಷದ ಯುವತಿಗೆ ಮೂವರು ವ್ಯಕ್ತಿಗಳು ನೀಡಿದ ಮಾದಕ ದ್ರವ್ಯ ಸೇವಿಸಿ ಪ್ರಜ್ಞಾಹೀನಳಾಗಿದ್ದರು. ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಡಿಸೆಂಬರ್ 5 ರಂದು ಈ ಘಟನೆ ನಡೆದಿದೆ. ಬಾಲಕಿ ಚಿಕಿತ್ಸೆಗಾಗಿ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗಕ್ಕೆ ಬಂದಿದ್ದಳು. ಬಾಲಕಿ ಆಗಾಗ ಇಲ್ಲಿ ಚಿಕಿತ್ಸೆಗೆ ಬರುತ್ತಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆ ತಲುಪಿದಾಗ ಫೋನ್ ಚಾರ್ಜ್ ಮುಗಿದಿರುವುದನ್ನು ಗಮನಿಸಿದಳು. ನಂತರ ಆಸ್ಪತ್ರೆ ಬಳಿ ಇರುವ ಟೀ ಮಾರುವವರ ಸಹಾಯ ಕೇಳಿದರು. ಸತ್ಯ ಮಿಶ್ರಾ ಅವರ ಅಂಗಡಿಗೆ ಬಾಲಕಿ ಆಸ್ಪತ್ರೆಗೆ ತಲುಪಿದಾಗ ನಿಯಮಿತವಾಗಿ ಭೇಟಿ ನೀಡುತ್ತಿದ್ದಳು ಮತ್ತು ಆತನ ಪರಿಚಯವಿತ್ತು ಎಂದು ಪೊಲೀಸರು ಹೇಳುತ್ತಾರೆ. ನಂತರ ಆಕೆಯ ಮೊಬೈಲ್ ಫೋನ್ ಚಾರ್ಜ್ ಮಾಡಲು ಮಹಿಳೆಯನ್ನು ಹತ್ತಿರ ನಿಲ್ಲಿಸಿದ್ದ ಆಂಬ್ಯುಲೆನ್ಸ್ ಗೆ ಕರೆದೊಯ್ದಿದ್ದಾನೆ. ಸ್ವಲ್ಪ ಸಮಯದ ನಂತರ ಮಹಿಳೆ ಹಿಂತಿರುಗಿದಾಗ ಆಂಬುಲೆನ್ಸ್ ಇರಲಿಲ್ಲ. ಮತ್ತೆ ಸತ್ಯಂ…
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಯುಗ ಅಂತ್ಯವಾಗಿದೆ. ಮೋಹನ್ ಯಾದವ್ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಭೋಪಾಲ್ ನಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಸಭೆ ನಡೆಯಿತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗಾಗಿ ಶ್ರೇಯಾಂಕಗಳು ನಡೆಯುತ್ತಿರುವ ಸಮಯದಲ್ಲಿ ಬಿಜೆಪಿಯ ಅನಿರೀಕ್ಷಿತ ಘೋಷಣೆಯಾಗಿದೆ. ಒಬಿಸಿ ನಾಯಕ ಮೋಹನ್ ಯಾದವ್ ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ಬಂದಿದ್ದಾರೆ. ಅವರು ಹಿಂದಿನ ಸಚಿವ ಸಂಪುಟದ ಭಾಗವಾಗಿದ್ದರು. ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. 58 ವರ್ಷದ ಮೋಹನ್ ಯಾದವ್ ಉಜ್ಜಯಿನಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಘೋಷಣೆಯ ನಂತರ ಮೋಹನ್ ಯಾದವ್ ಪ್ರತಿಕ್ರಿಯಿಸಿ, ತಮ್ಮಂತಹ ವಿನಮ್ರ ಪಕ್ಷದ ಕಾರ್ಯಕರ್ತರಿಗೆ ಈ ಒಂದು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಜಗದೀಶ್ ದೇವ್ಡೇ ಮತ್ತು ರಾಜೇಶ್ ಶುಕ್ಲಾ ಅವರು ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾದರು. 2024ರ ಲೋಕಸಭೆ ಚುನಾವಣೆಗೆ ಮುನ್ನ…