Author: admin

ಮೇ ಬಳಿಕ ಸರ್ಕಾರ ಪತನ ಎಂಬ ಹೆಚ್‌ ಡಿಕೆ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ –ಜೆಡಿಎಸ್ ‌ನವರು ಪಾಪ ನೀರಿನಿಂದ ತೆಗೆದ ಮೀನಿನ ರೀತಿ ವಿಲಿವಿಲಿ ಎಂದು ಒದ್ದಾಡುತ್ತಿದ್ದಾರೆ. ಅವರು ಭ್ರಮಾ ಲೋಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಪ್ರಸ್ತಾಪಿಸಿದರೂ ಉತ್ತರ ಕೊಡೋಕೆ ಸರ್ಕಾರ ತಯಾರಿದೆ. ನಾವು ಯಾವುದಕ್ಕೂ ವಿಳಂಬ ಮಾಡೋದಾಗಲಿ, ಕಾಲಹರಣ ಮಾಡಲ್ಲ. ಇವತ್ತು ಬರಗಾಲದ ಬಗ್ಗೆ ಚರ್ಚೆಯಾಗುತ್ತಿದ್ದು, ಉತ್ತರ ಕೊಡುತ್ತಿದ್ದೇವೆ. ನಾಳೆಯಿಂದ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ವಿಷಯ ಪ್ರಸ್ತಾಪ ಆಗಿದೆ ಎಂದರು. ಬಿಜೆಪಿ ನಾಯಕರ ಸಮನ್ವಯ ಕೊರತೆಯಿಂದ ಕಲಾಪದ ಸಮಯ ವ್ಯರ್ಥ ಆರೋಪ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವತ್ತೂ ಸಮನ್ವಯ ಇಲ್ಲ. ಅವರು ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದವರು. ಬಳಿಕ ಸೋತಿದ್ದಾರೆ, ಜನ ತಿರಸ್ಕರಿಸಿದ್ದಾರೆ. ಇದಾದ ಮೇಲೆ ಸಮನ್ವಯ ಬರಲು ಸಾಧ್ಯವೇ ಇಲ್ಲ. ಅಲ್ಲಿ ಎರಡು ಗುಂಪು, ಮೂರು…

Read More

ತುಮಕೂರು: ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ತುಮಕೂರು ಜಿಲ್ಲೆ ವ್ಯಾಪ್ತಿಯ ಸರ್ಕಾರಿ ವೃತ್ತಿಪರ ಕಾಲೇಜು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ದೀಪಾವಳಿಯ ದಿನದಂದು ಅಶ್ಲೀಲ ಹಾಡುಗಳಿಗೆ ಕುಣಿದ ವಿಚಾರವಾಗಿ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಾಮಾಜಿಕ ಹೊರಾಟಗಾರರಾದ ಹಂದ್ರಾಳ್ ನಾಗಭೂಷಣ್ ರವರು ಸಂಬಂಧಪಟ್ಟವರ ಮೇಲೆ ದಿನಾಂಕ 06– 12 — 2023 ರಂದು ದೂರನ್ನು ದಾಖಲಿಸಿದ್ದರು. ಆದರೆ ದೂರು ದಾಖಲಿಸಿ ಸುಮಾರು 5 ದಿನ ಕಳೆದರೂ FIR ದಾಖಲಿಸದೆ, ಪೊಲೀಸರು ಸುಪ್ರಿ೦ ಕೋರ್ಟ್ ಆದೇಶ ಲಲಿತಕುಮಾರಿ U/S ಯುನಿಯನ್ ಆಫ್ ಇಂಡಿಯಾ ಆದೇಶವನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ. ಆದ್ದರಿಂದ ಇಂದು ಕೋಡಿಗೇನಹಳ್ಳಿ ಪೋಲೀಸ್ ಠಾಣೆಯ ಎದುರು ಇಂದು FIR ದಾಖಲಿಸುವಂತೆ ಹೋರಾಟಗಾರರು ಒತ್ತಾಯಿಸಿದರು.. ಈ ಸಂದರ್ಭದಲ್ಲಿ ಹಂದ್ರಾಳ್ ನಾಗಭೂಷಣ್,  ಮಂಜುನಾಥ್, ಮಧುಗಿರಿ ಮಹೇಶ್, ಸತೀಶ್, ರಫೀಕ್ ಹಾಗೂ ಮಂಜುನಾಥ ತುಮಕೂರು,  ಶಿವಕುಮಾರ್ ಮಾಷ್ಟುಮನೆ ವಕೀಲರು,…

Read More

ತುಮಕೂರು: ಆಹಾರ ಅರಸಿ ಗ್ರಾಮದಲ್ಲಿರುವ ಶ್ವಾನಗಳನ್ನು ಬೇಟೆಯಾಡಿ ತಿಂದು ಹಾಕುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿರುವ ಘಟನೆ ತುಮಕೂರು ತಾಲ್ಲೂಕಿ ಕಸಬಾ ಹೋಬಳಿ ಊರುಕೆರೆಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅನೇಕ ದಿನಗಳಿಂದ ಗ್ರಾಮದ ಸುತ್ತಮುತ್ತ ಜಾನುವಾರುಗಳನ್ನು ಹಾಗೂ ಕುರಿ ಮೇಕೆಗಳನ್ನು ಚಿರತೆಯು ತಿಂದು ಹಾಕುತ್ತಿತ್ತು. ಚಿರತೆಯನ್ನು ಸರಿ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ನಿರಂತರವಾಗಿ ಅರಣ್ಯ ಇಲಾಖೆ, ಸಿಬ್ಬಂದಿಗಳಿಗೆ ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಇರಿಸಿದ್ದರು. ,ಸಂಜೆಯಾಗುತ್ತಿದ್ದಂತೆ ಊರ ಸಮೀಪವೇ ಎರಡು  ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದವು,ಜನರು ಭೀತಿಗೊಂಡಿದ್ದರು. ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸ್ತಳೀಯ ಗ್ರಾಮಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ತರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ,ಅರಣ್ಯ ಇಲಾಖೆ ಸಿಬ್ಬಂದಿ  ಇಟ್ಟಿದ್ದ ಬೋನಿಗೆ ಚಿರತೆ ಸೆರೆಸಿಕ್ಕಿದೆ. ಇನ್ನೂ ಎರಡು ಚಿರತೆಗಳಿದ್ದು ಅವುಗಳನ್ನು ಶೀಘ್ರವಾಗಿ ಸೆರೆ ಹಿಡಿಯುವಂತೆ ಗ್ರಾಮಸ್ತರು ಒತ್ತಾಯಿಸಿದ್ದಾರೆ.

Read More

ಉತ್ತರಪ್ರದೇಶದ ಅಯೋಧ್ಯೆಯಿಂದ ಬಂದಿದ್ದ ಪವಿತ್ರ ಮಂತ್ರಾಕ್ಷತೆಯನ್ನು ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪವಿತ್ರ ಮಂತ್ರಾಕ್ಷತೆಯನ್ನು ತುಮಕೂರು ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ತುಮಕೂರಿನ 10 ತಾಲ್ಲೂಕುಗಳಿಗೆ  ಹಿಂದೂ ಕಾರ್ಯಕರ್ತರ ಮೂಲಕ ಪವಿತ್ರ ಮಂತ್ರಾಕ್ಷತೆ ಕಳುಹಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಶತಶತಮಾನಗಳಿಂದಲೂ ರಾಮಭಕ್ತರು ಕಾತರದಿಂದ ಕಾಯುತ್ತಿರುವಂತಹ ಕ್ಷಣಕ್ಕೆ ಕಾನೂನು ಬದ್ಧವಾಗಿ ರಾಮ ಜನ್ಮ ಭೂಮಿಯಲ್ಲಿ ಭವ್ಯವಾದ ಮಂದಿರವು ಸಂಕ್ರಾಂತಿಯ ನಂತರ ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು. ಲೋಕಾರ್ಪಣೆಗೊಳ್ಳಲಿರುವ ದಿನದಂದು ಭಕ್ತರರೆಲ್ಲರೂ ಅಯೋಧ್ಯೆಗೆ ಬಂದು ಸಂಭ್ರಮಿಸುವ ಅಗತ್ಯವಿಲ್ಲ ಬದಲಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ದೊಡ್ಡ ಪರದೆಯ ಮೂಲಕ ಅದನ್ನು ವೀಕ್ಷಿಸಿ ಭಕ್ತಿ ಪರಾಕಾಷ್ಟೆಯನ್ನು ಮೆರೆಯಬೇಕು ಎಂದು ಹೇಳಿದರು. ಅಲ್ಲದೆ ಅಂದು ಪ್ರತಿ ಗ್ರಾಮಗಳಲ್ಲಿರುವ ದೇವಾಲಯ ದೇವಾಲಯಗಳಲ್ಲಿ ಪೂಜೆ ಹೋಮ ಹವನ ಹಾಗೂ ಭಜನೆಗಳ ಮೂಲಕ ಭಕ್ತಿ ಸಮರ್ಪಣೆ…

Read More

ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಪಿಟ್ ಬುಲ್ ದಾಳಿಯಲ್ಲಿ  70 ವರ್ಷದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ನಂತರ, ವೃದ್ಧೆಯ ಮಗ ನಾಯಿ ಮಾಲೀಕರ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಪ್ರಭಾರಿ ಆರ್.ಕೆ. ಸಕ್ಲಾನಿ ಪ್ರಕಾರ, ಧಂದೇರಾ ನಿವಾಸಿಯಾಗಿರುವ ಮಹಿಳೆ, ನೆರೆಹೊರೆಯಲ್ಲಿ ಯಾರನ್ನೋ  ಭೇಟಿ ಮಾಡಲು ಹೋಗುತ್ತಿದ್ದಾಗ ಪಿಟ್ ಬುಲ್ ದಾಳಿ ಮಾಡಿದೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಮೈಚಾಂಗ್ ಚಂಡಮಾರುತದೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಅಲ್ಲದೇ ಈಶಾನ್ಯ ಮಾನ್ಸೂನ್ ಜೊತೆಗೆ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಕರ್ನಾಟಕದಿಂದ 3,250-3,300 ಕ್ಯೂಸೆಕ್ ನಷ್ಟು ಕಾವೇರಿ ನೀರನ್ನು ಹರಿಸಲಾಗುತ್ತಿದೆ. ಕಾವೇರಿ ನೀರು ಬಿಡುವ ಕುರಿತು ತೀವ್ರ ವಿರೋಧ ವ್ಯಕ್ತವಾಗಿದ್ದರೂ ಉತ್ತಮ ಮಳೆಯಿಂದಾಗಿ ತಮಿಳುನಾಡಿಗೆ ನಿತ್ಯ 3,250-3,300 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳು ಹೇಳುವಂತೆ ಇದನ್ನು ಕಬಿನಿ ಅಥವಾ ಕೆಆರ್ಎಸ್ ಅಣೆಕಟ್ಟುಗಳಿಂದ ಹರಿಸಲಾಗುತ್ತಿಲ್ಲ. ಆದರೆ ಕೆಆರ್ಎಸ್ ಮತ್ತು ಕಬಿನಿ ನಡುವಿನ ವಲಯದಲ್ಲಿ ಬಿಳಿಗುಂಡ್ಲುವಿಗೆ ಹೆಚ್ಚುವರಿ ನೀರು ಹರಿಯುತ್ತಿದೆ. ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸುಮಾರು 200 ಮಿ. ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿದೆ.

Read More

ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ಆಗಸ್ಟ್ 5, 2019 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು ಸೋಮವಾರ ತೀರ್ಪು ಪ್ರಕಟಿಸಿತು. ಅವರು 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ ‘ದುರುದ್ದೇಶಪೂರಿತ’ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ಕೇಂದ್ರವು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 23 ಅರ್ಜಿಗಳ ಮೇಲೆ ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ತನ್ನ ಮಹತ್ವದ ತೀರ್ಪನ್ನು ಇಂದು ಪ್ರಕಟಿಸಿತು. ರಾಷ್ಟ್ರಪತಿ ಆಳ್ವಿಕೆ ಸಮಯದಲ್ಲಿ ಕೇಂದ್ರದಿಂದ ಯಾವುದೇ ಬದಲಾಯಿಸಲಾಗದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನೂ ಈ ಸಂದರ್ಭದಲ್ಲಿ ಸಿಜೆಐ ತಿರಸ್ಕರಿಸಿದರು. ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ರಾಜ್ಯದ ಪರವಾಗಿ ಕೇಂದ್ರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು…

Read More

ನವದೆಹಲಿ: ನಾವು ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕು. ದೇಶಕ್ಕೆ ನಾಯಕತ್ವ ನೀಡುವ, ಎಲ್ಲಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವ ರೀತಿಯಲ್ಲಿ ಯುವ ಪೀಳಿಗೆಯನ್ನು ತಯಾರು ಮಾಡಬೇಕು ಎಂದು ಪ್ರಧಾನಿ ನರೇಂದ್ರ  ಮೋದಿ ಕರೆ ನೀಡಿದ್ದಾರೆ. ಭಾರತ್@2047: ಯುವ ಧ್ವನಿ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ,  ಪ್ರಸಕ್ತ ಅವಧಿಯಲ್ಲಿ ಭಾರತ ಎತ್ತರಕ್ಕೆ ಏರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಭಾರತದ ಯುವಜನತೆಯ ಶಕ್ತಿ ಬದಲಾವಣೆಯ ಪ್ರತಿನಿಧಿ ಹಾಗೂ ಬದಲಾವಣೆಯ ಫಲಾನುಭವಿ ಎರಡೂ ಆಗಿದೆ . ಯಾವುದೇ ರಾಷ್ಟ್ರದ ಜೀವಿತದಲ್ಲಿ, ಇತಿಹಾಸ ಅದರ ಅಭಿವೃದ್ಧಿ ಪಯಣದಲ್ಲಿ ಅತ್ಯುತ್ತಮ ಹೆಜ್ಜೆ ಇಡುವುದಕ್ಕೆ ಸಮಯವನ್ನು ಒದಗಿಸುತ್ತದೆ. ಭಾರತ ಈಗ ಅಮೃತಕಾಲದಲ್ಲಿದೆ ಹಾಗೂ ಈ ಅವಧಿ ಭಾರತಕ್ಕೆ ಅಭೂತಪೂರ್ವವಾದ ಜಿಗಿತಕ್ಕೆ ಸೂಕ್ತವಾಗಿದೆ. ಆದ್ದರಿಂದ ಅಮೃತಕಾಲದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮೋದಿ ಕರೆ ನೀಡಿದ್ದಾರೆ.

Read More

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವೃದ್ಧ ದಂಪತಿಯನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು 70 ವರ್ಷದ ರಾಮಕೃಷ್ಣಪ್ಪ ಮತ್ತು ಅವರ 65 ವರ್ಷದ ಪತ್ನಿ ಮುನಿರಾಮಕ್ಕ ಎಂದು ಗುರುತಿಸಲಾಗಿದೆ. ಆಸ್ತಿಯನ್ನು ತಮ್ಮ ಹೆಣ್ಣುಮಕ್ಕಳಿಗೂ ಹಂಚಲು ನಿರ್ಧರಿಸಿದ ನಂತರ ದಂಪತಿಯನ್ನು ಅವರ ಮಗ ನರಸಿಂಹನು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ ಎಂದು ವರದಿ ಮಾಡಿದೆ. ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದನು. 17 ವರ್ಷಗಳ ಹಿಂದೆ ಮಗ ಮದುವೆಯಾದ ಹಿನ್ನೆಲೆಯಲ್ಲಿ ಸೂಲಿಬೆಲೆಯ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಭಾನುವಾರ ಸಂಜೆ ವೃದ್ಧ ದಂಪತಿಯನ್ನು ಕಡಿದು ಹತ್ಯೆ ಮಾಡಲಾಗಿತ್ತು. ಮನೆಗೆ ಹೊರಗಿನಿಂದ ಬೀಗ ಹಾಕಿ ದಂಪತಿಯನ್ನು ಕೊಲೆ ಮಾಡಿ ಶಂಕಿತ ಆರೋಪಿ ಮನೆ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ದಂಪತಿಗೆ ಅವರ ಪುತ್ರಿಯೊಬ್ಬರು ಕರೆ ಮಾಡಿದಾಗ ಫೋನ್ ಸ್ವೀಕರಿಸದಿದ್ದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ದಂಪತಿಯ ಪುತ್ರಿಯೊಬ್ಬರು ನೀಡಿದ ದೂರಿನ…

Read More

ರಾಷ್ಟ್ರೀಯ ಹೆದ್ದಾರಿಗೆ ಸಮಾನಾಂತರವಾಗಿ ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ವಂಚನೆ. ಗುಜರಾತ್ ನಲ್ಲಿ ಈ ಘಟನೆ ನಡೆದಿದೆ. ನಕಲಿ ಟೋಲ್ ಪ್ಲಾಜಾ ಮೂಲಕ ವಂಚಕರು ಒಂದೂವರೆ ವರ್ಷದಲ್ಲಿ 75 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ವೈಟ್ ಹೌಸ್ ಟೈಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಂಚಿನ ಕಾರ್ಖಾನೆ ಸ್ಥಗಿತಗೊಂಡ ಜಾಗದಲ್ಲಿ ನಕಲಿ ಟೋಲ್ ಗೇಟ್ ನಿರ್ಮಿಸಲಾಗಿದೆ. ಅಹಮದಾಬಾದ್ – ಮಾಂಡವಿ ರಾಷ್ಟ್ರೀಯ ಹೆದ್ದಾರಿ NH8A ನಲ್ಲಿ ಮೋರ್ಬಿ ಜಿಲ್ಲೆಯ ವಂಕನೇರ್ ಪಟ್ಟಣದ ಬಳಿ ವಘಾಸಿಯಾದಲ್ಲಿ ನಕಲಿ ಟೋಲ್‌ ಗೇಟ್ ಕಾರ್ಯ ನಿರ್ವಹಿಸುತ್ತಿದೆ. ಮೋರ್ಬಿಯಿಂದ ವಾಂಕನೇರ್‌ ಗೆ ಬರುವ ವಾಹನಗಳಿಗೆ ಅರ್ಧದಷ್ಟು ಟೋಲ್ ವಿಧಿಸಿ ಅನುಮತಿಸುತ್ತಿದ್ದರು. 20-200 ದರದಲ್ಲಿ ನಕಲಿ ಟೋಲ್ ‌ಗಳ ಮೂಲಕ ವಾಹನಗಳನ್ನು ಹಾದು ಹೋಗಲು ಅನುಮತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳು ಕೂಲಿಕಾರರ ನೆರವಿನಿಂದ ಟೋಲ್ ಗೆ ಆಕರ್ಷಿತವಾಗಿದ್ದು, ಘಟನೆಯಲ್ಲಿ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಘಾಸಿಯಾದಲ್ಲಿ ಅಧಿಕೃತ ಟೋಲ್ ಗೇಟ್ 110-600 ರೂ. ವೈಟ್ ಹೌಸ್ ಟೈಲ್ಸ್…

Read More