Subscribe to Updates
Get the latest creative news from FooBar about art, design and business.
- ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾದರೆ ಕ್ರಮ: ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಶಾಸಕ ಎಚ್.ವಿ.ವೆಂಕಟೇಶ್ ಎಚ್ಚರಿಕೆ
- ನವೆಂಬರ್ ಕ್ರಾಂತಿ, ಡಿಸೆಂಬರ್ ಶಾಂತಿ, ಜನವರಿ ವಾಂತಿ: ಸರ್ಕಾರದ ವಿರುದ್ಧ ಶಾಸಕ ಬಿ.ಸುರೇಶ್ ಗೌಡ ಕಿಡಿ
- ಮೂರು ವರ್ಷಗಳ ರಸ್ತೆ ಸಮಸ್ಯೆಗೆ ಅಂತ್ಯ ಹಾಡಿದ ನಮ್ಮತುಮಕೂರು ವರದಿ!: ಕೊಟ್ಟ ಮಾತಿನಂತೆ ನಡೆದ ಅಧಿಕಾರಿಗಳು
- ವೀರೇಂದ್ರ ಹೆಗ್ಗಡೆ ಜನತೆಯ ನೆಮ್ಮದಿಗಾಗಿ ಹಗಲಿರಲು ಶ್ರಮಿಸುತ್ತಿದ್ದಾರೆ: ನರಸಿಂಹಮೂರ್ತಿ
- ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಭಾರತದ ಸಂವಿಧಾನ: ವೈ.ಡಿ.ರಾಜಣ್ಣ
- ರಾಜ್ಯದಲ್ಲಿ ಮುಚ್ಚುತ್ತಿರುವ 40,000 ಹಾಗೂ ತುಮಕೂರು ಜಿಲ್ಲೆಯ 1,802 ಸರ್ಕಾರಿ ಶಾಲೆಗಳ ಪಟ್ಟಿ ಬಿಡುಗಡೆ: ಎಐಡಿಎಸ್ ಓ
- ಸಂವಿಧಾನ ಯಥಾವತ್ತಾಗಿ ಜಾರಿಯಾಗಿದ್ದರೆ, ಭಾರತ ಶ್ರೀಮಂತವಾಗುತ್ತಿತ್ತು: ಎಸ್.ಡಿ.ಸಣ್ಣಸ್ವಾಮಿ
- ನ.27: ಬೆಳ್ಳಾವಿಯಲ್ಲಿ ಶ್ರೀ ಕನಕದಾಸರ ಜಯಂತಿ: ಕನ್ನಡ ರಾಜ್ಯೋತ್ಸವ
Author: admin
ಜಮ್ಮು ಕಾಶ್ಮೀರ: 4 ವರ್ಷದ ಬಾಲಕಿಯನ್ನು ಚಿರತೆಯೊಂದು ಎತ್ತಿಕೊಂಡು ಹೋಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್ ಪುರದಲ್ಲಿ ನಡೆದಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಚಿರತೆ ಬಾಲಕಿಯನ್ನು ಎಳೆದುಕೊಂಡು ಹೋಗಿದೆ. ಈ ಅವಘಡದ ಬಗ್ಗೆ ಮಾಹಿತಿ ಪಡೆದ ತಕ್ಷಣ ಆ ಪ್ರದೇಶದ ರೇಂಜ್ ಆಫೀಸರ್ ಉಧಮ್‌ಪುರ ಕಂಟ್ರೋಲ್ ರೂಮ್ ನಿಂದ ಶೋಧ ತಂಡಗಳನ್ನು ಕಳುಹಿಸಿದ್ದಾರೆ. ಆದರೆ ಇನ್ನೂ ಆ ಬಾಲಕಿಯ ಪತ್ತೆಯಾಗಿಲ್ಲ. ನಾವು ಉಧಮ್ ಪುರ ನಿಯಂತ್ರಣ ಕೊಠಡಿಯಿಂದ ಶೋಧ ತಂಡಗಳನ್ನು ಕಳುಹಿಸಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ ಎಂದಿದ್ದಾರೆ.
ಬೆಳಗಾವಿ: ಸಾಮಾನ್ಯವಾಗಿ ಒಂದು ಹೆಣ್ಣು ತಾಯ್ತನ ಅನುಭವ ಪಡೆಯಲು ಅದೆಷ್ಟೋ ಜನ್ಮ ಪುಣ್ಯದ ಫಲ ಹೊಂದಿರಬೇಕು. ಆದರೆ ತಾಯಿಯೊಬ್ಬಳು ಹೆತ್ತ ಗಂಡು ಮಗುವನ್ನು ರಸ್ತೆಯ ಪಕ್ಕದ ಕಸದ ತೊಟ್ಟಿಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿ 24 ಗಂಟೆ ಒಳಗೆ ಹುಟ್ಟಿದ್ದ ನವಜಾತ ಶಿಶುವನ್ನು ಎಸೆದಿರುವ ಘಟನೆ ಜರುಗಿದೆ. ಶಿಶು ಗಂಡಾಗಿದ್ದು ಪ್ರಾಣ ಬಿಟ್ಟಿದೆ. ಸಾರ್ವಜನಿಕರು ರಸ್ತೆ ಪಕ್ಕದ ಕಸದಲ್ಲಿದ್ದ ಶಿಶುವನ್ನು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸೊಸೆಯೊಬ್ಬಳು ತನ್ನ ಅತ್ತೆಯನ್ನೇ ಕೊಲೆಗೈದಿದ್ದಾಳೆ. ಮಹಾರಾಷ್ಟ್ರದ ನಾಗುರದಲ್ಲಿರುವ ತಮ್ಮ ಮನೆಯಲ್ಲಿ ಲೇಔಟ್ ನಿವಾಸಿ 36 ವರ್ಷದ ಪೂನಂ ಆನಂದ ಶಿಖರವಾ ಎಂಬಾಕೆ 80 ವರ್ಷದ ಅತ್ತೆಯ ಮೇಲೆ ಹಲ್ಲೆ ನಡೆಸಿ, ಕತ್ತು ಸೀಳಿ ಅವರನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂನಂ ಕಳೆದ ಕೆಲವು ವಾರಗಳಿಂದ ಔಷಧಿ ಸೇವಿಸುವುದನ್ನು ನಿಲ್ಲಿಸಿ, ತನ್ನ ಕುಟುಂಬದ ಸದಸ್ಯರೊಂದಿಗೆ ಜಗಳವಾಡುತ್ತಿದ್ದಳು. ಜಗಳವಾಡುವಾಗ ಕೋಪದ ಭರದಲ್ಲಿ ಆಕೆ ತನ್ನ ಅತ್ತೆ ತಾರಾದೇವಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕತ್ತು ಸೀಳಿದ್ದಾಳೆ. ಹಲವು ಬಾರಿ ಅತ್ತೆಗೆ ಇರಿದು ಕೊಲೆ ಮಾಡಿದ್ದಾಳೆ. ಹತ್ಯೆಗೆ ಸಂಬಂಧಿಸಿದಂತೆ ಪೂನಂಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾರಿ ಮಳೆಗೆ ಒಡಿಶಾದ ಆರು ಜಿಲ್ಲೆಗಳಲ್ಲಿ ಸಿಡಿಲಾಘಾತಕ್ಕೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗಿರ್ ನಲ್ಲಿ ಇಬ್ಬರು ಸೇರಿದಂತೆ ಅಂಗುಲ್, ಬೌದ್, ಜಗತ್ ಸಿಂಗ್ ಪುರ ಮತ್ತು ಧೆಂಕನಾಲ್ ಎಂಬಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಖುರ್ದಾದಲ್ಲಿ ಮೂವರು ಗಾಯಗೊಂಡಿದ್ದಾರೆ. ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿದಂತೆ ಒಡಿಶಾದ ಕರಾವಳಿ ಪ್ರದೇಶದಲ್ಲಿ ನಿನ್ನೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ. ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ತುಮಕೂರು: ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ನಿರಂತರ ಅಪಘಾತ. ಹೆದ್ದಾರಿ ಸಿಬ್ಬಂದಿಗಳಿಗೆ ಎಎಸ್ ಪಿ ಮರಿಯಪ್ಪ ಕ್ಲಾಸ್ ತೆಗೆದುಕೊಂಡರು. ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ನಿರಂತರ ಅಪಘಾತ ವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪರಿಣಾಮ ಪದೇ ಪದೇ ಅಪಘಾತ ಸಂಭವಿಸುತ್ತಿದೆ. ಕಳೆದ ರಾತ್ರಿ ನಡೆದ ಸರಣಿ ಅಪಘಾತಕ್ಕೆ ದಂಪತಿಗಳು ಸಾವನಪ್ಪಿದ್ರು. ಡೆಡ್ಲಿ ಆಕ್ಸಿಡೆಂಟ್ ಸ್ಪಾಟ್ ಆದ ಚಿಕ್ಕನಹಳ್ಳಿ ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅಪಘಾತ ಪ್ರಕರಣ ಹೆಚ್ಚುತ್ತಿದೆ. ಮೇಲುಸೇತುವೆ ನಿರ್ಮಾಣದ ಹಿನ್ನಲೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮಾಡಲಾಗಿದೆ. ವಾಹನ ಸಂಚಾರ ದಟ್ಟಣೆಯಿಂದ ಗುಂಡಿಗಳಿಂದ ತುಂಬಿದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚರಿಸುತ್ತಿದೆ. ಹಾಗಾಗಿ ಸೂಕ್ತ ಸೂಚನಾ ಫಲಕ ಆಳವಡಿಸುವಂತೆ ಅವರು ನಿರ್ದೇಶನ ನೀಡಿದರು. ಎಎಸ್ಪಿ ಮರಿಯಪ್ಪ ಭೇಟಿ ವೇಳೆ ಕಳಂಬೆಳ್ಳ ಪೊಲೀಸರು ಸಾಥ್ ನೀಡಿದರು.
ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡ ಹೊಸಹಳ್ಳಿಯಲ್ಲಿ ಅಶೋಕ್ ಲೈಲ್ಯಾಂಡ್ ಟೆಂಪೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ವಾಹನ ಸವಾರರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಟೆಂಪೋ ಚಾಲಕನ ಸೊಂಟ ಮುರಿತಕ್ಕೊಳಗಾಗಿದ್ದು, ಗಾಯಾಳುಗಳನ್ನ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ನಡೆದ ತಕ್ಷಣ ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ, ತಕ್ಷಣದಲ್ಲಿ ಆ್ಯಂಬುಲೆನ್ಸ್ ಆಗಮಿಸಿಲ್ಲ, ಕರೆ ಮಾಡಿ 30 ನಿಮಿಷಗಳ ಬಳಿಕ ಆ್ಯಂಬುಲೆನ್ಸ್ ಆಗಮಿಸಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಈ ಭಾಗದಲ್ಲಿ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಠಾಣೆ ಪಿಎಸ್ ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಿಂದಾಗಿ ಸೃಷ್ಟಿಯಾಗಿದ್ದ ಟ್ರಾಫಿಕ್ ಜಾಮ್ ನ್ನು ಪೊಲೀಸರು ಇದೇ ವೇಳೆ ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು. ವರದಿ: ಅಬೀದ್ ಮಧುಗಿರಿ
ದೇವಸ್ಥಾನವೊಂದರಲ್ಲಿ ನಿಧಿಗಾಗಿ ಕಳ್ಳರು ಮೂರ್ತಿಯಿರುವ ಸ್ಥಳ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗದಗದ ಕದಾಂಪೂರ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಈ ಘಟನೆ ನಡೆದಿದೆ. ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ. ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಕಳ್ಳರು ನಿಧಿ ಶೋಧಕ್ಕಾಗಿ ವಾಮಾಚಾರ, ದಿಗ್ಧಂಧನ ಪೂಜೆ ನಡೆಸಿದ್ದಾರೆ. ಗುಂಡಿ ತೋಡಿ ನಿಂಬೆಹಣ್ಣು, ಅರಿಶಿಣ, ಕುಂಕುಮ ಚೆಲ್ಲಿ ದುಷ್ಕರ್ಮಿಗಳು ನಿಧಿಗಾಗಿ ತೀವ್ರವಾಗಿ ಶೋಧಿಸಿದ್ದಾರೆ. ನಿಧಿಗಾಗಿ ನಡೆಸಿರುವ ವಾಮಾಚಾರ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದು, ದೇವಾಲಯದ ಬಳಿ ತೆರಳಲು ಹೆದರುತ್ತಿದ್ದಾರೆ.
ಚಾಕುವಿನಿಂದ ಕತ್ತು ಸೀಳಿ ಭಾವನನ್ನೇ ಬಾಮೈದ ಹತ್ಯೆಗೈದಿರುವಂತಹ ಘಟನೆ ಚಿಕ್ಕೋಡಿಯ ವಿದ್ಯಾನಗರದಲ್ಲಿ ಮನೆಯಲ್ಲಿ ನಡೆದಿದೆ. ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರಗೌಡ ಟೋಪಗೋಳ, ಸೇನೆಯಿಂದ ನಿವೃತ್ತಿ ಬಳಿಕ ಕ್ರಷರ್ ನಡೆಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈರಗೌಡ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಈರಗೌಡ ಶವ ಸ್ಥಳಾಂತರ ಮಾಡಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳ ಮೂಲದ ತಾಯಿಯೊಬ್ಬರು ಜಾರ್ಖಂಡ್ ನ ಜೆಮ್ ಶೆಡ್ ಪುರದಲ್ಲಿ ತನ್ನ ನವಜಾತ ಶಿಶುವನ್ನು 6 ಸಾವಿರ ರೂ.ಗೆ ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಮಗುವನ್ನು ಖರೀದಿಸುವ ನಾಟಕವಾಡಿದ ವ್ಯಕ್ತಿಯೊಬ್ಬರು ಆ ಮಗುವನ್ನು ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದಾರೆ. ಬಳಿಕ ಆ ತಾಯಿಯನ್ನು ಬಂಧಿಸಲಾಗಿದೆ. ಹಣದಾಸೆಗೆ ಹೆತ್ತ ಕೂಡಲೇ ಮಗುವನ್ನು ಬೇರೆಯವರಿಗೆ ಮಾರಲು ಹೊರಟಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮೆಡ್ ಪುರ ಎಸ್‌ಡಿಒ ಪಿಯೂಷ್ ಮಿಶ್ರಾ ಹೇಳಿದ್ದಾರೆ.
ಹೊರ ರಾಜ್ಯದಿಂದ ಬರುವ ಬಸ್ ಗಳಲ್ಲಿ ಡ್ರಗ್ಸ್ ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಸಿಸಿಬಿ ಪೊಲೀಸರು ಶನಿವಾರ ಶೋಧ ನಡೆಸಿದರು. ಮೆಜೆಸ್ಟಿಕ್ ಬಸ್ ನಿಲ್ದಾಣ, ಯಶವಂತಪುರ, ಗಾಂಧಿನಗರ, ಕೆ. ಆರ್. ಮಾರುಕಟ್ಟೆ ಹಾಗೂ ಹಲವು ಪ್ರದೇಶಗಳಲ್ಲಿ ಬಸ್ ಏರಿದ್ದ ಪೊಲೀಸರು, ಪಾರ್ಸೆಲ್‌ಗಳನ್ನು ತಪಾಸಣೆಗೆ ಒಳಪಡಿಸಿದರು. ಶ್ವಾನದಳದ ಸಿಬ್ಬಂದಿ, ಬಸ್ ಗಳ ಪ್ರತಿಯೊಂದು ಭಾಗಗಳಲ್ಲಿ ಶೋಧ ನಡೆಸಿದರು. ಬಸ್ ಗಳ ಲಗೇಜ್ ಜಾಗದಲ್ಲೂ ಪರಿಶೀಲನೆ ನಡೆಸಲಾಯಿತು.