Subscribe to Updates
Get the latest creative news from FooBar about art, design and business.
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
- ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
- ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ
- ಸರಗೂರು: ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಆಯ್ಕೆ
- ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಸುರೇಶ್ ಅವರಿಗೆ ಯಶವಂತಪುರ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
- ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!
Author: admin
ಬಿಹಾರ: ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ. ಇತ್ತೀಚೆಗೆ, ಬಲ್ಗೇರಿಯಾದಲ್ಲಿ ವಧು ಮಾರುಕಟ್ಟೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗಿತ್ತು. ವಧುಗಳನ್ನು ಖರೀದಿಸಲು ಜನರು ಈ ಮಾರುಕಟ್ಟೆಗೆ ಬರುತ್ತಾರೆ ಎನ್ನಲಾಗುತಿತ್ತು. ಆದರೆ ವರರನ್ನು ಮಾರಾಟ ಮಾಡುವ ಮಾರುಕಟ್ಟೆಯೂ ಇದೆ. ಬಿಹಾರದ ಮಧುಬನಿಯಲ್ಲಿ ಪ್ರತಿ ವರ್ಷ ವರ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ. ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಯುವಕರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ. ಇಲ್ಲಿ ಹುಡುಗರ ವಿದ್ಯಾರ್ಹತೆಗೆ ಅನುಗುಣವಾಗಿ ಅವರ ವಯಸ್ಸು 35 ವರ್ಷಕ್ಕಿಂತ ಹೆಚ್ಚಿದ್ದರೆ ಅವರ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ ಆರಂಭವಾಗುತ್ತದೆ. ವರನನ್ನು ಕುಟುಂಬದ ಪರಂಪರೆಯ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಅತ್ಯಂತ ಪ್ರಮುಖ ವಿಷಯವೆಂದರೆ ಈ ಮಾರುಕಟ್ಟೆ ಇರುವುದು ನಮ್ಮದೇ ದೇಶದಲ್ಲಿ. ಈ ಮಾರುಕಟ್ಟೆಯಲ್ಲಿ ವರನ ಅರ್ಹತೆಯ ಆಧಾರದ ಮೇಲೆ ವರರನ್ನು ಮಾರಾಟ ಮಾಡಲಾಗುತ್ತದೆ. ವರದಕ್ಷಿಣೆ ಪದ್ಧತಿಯನ್ನು…
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ, ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಯಾವ ‘ಜೀ” ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ಧ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ ಎಂದು ಲೇವಡಿ ಮಾಡಿದರು.
ಬೆಂಗಳೂರು: ಆಸ್ತಿ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಮಂಜುನಾಥ್ ಅಲಿಯಾಸ್ ದಾಸನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ದಾಸ, ಇನ್ ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ವಿಡಿಯೊ ಮಾಡುತ್ತಿದ್ದ. ಈತನ ವಿಡಿಯೊವನ್ನು ಹಲವರು ಲೈಕ್ ಮಾಡುತ್ತಿದ್ದರು. ಅಲ್ಲಾಳಸಂದ್ರದ ನಿವಾಸಿಯಾಗಿರುವ 45 ವರ್ಷದ ಮಹಿಳೆ ನೀಡಿರುವ ದೂರು ಆಧರಿಸಿ ದಾಸನನ್ನು ಸೆರೆ ಹಿಡಿಯಲಾಗಿದೆ. ಜಾಗದ ವಿಚಾರಕ್ಕೆ ದಲಿತ ಕುಟುಂಬಕ್ಕೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ದಾಸ ನನ್ನಹ ಅರೆಸ್ಟ್ ಮಾಡಲಾಗಿದೆ. ಜಾಗದ ವಿಚಾರಕ್ಕೆ ರಾಮಮೂರ್ತಿ ಎಂಬಾತ ರೌಡಿ ಆಕ್ಟಿವಿಟಿಯಲ್ಲಿರೋ ದಾಸನ ಸಹಾಯ ಪಡೆದಿದ್ದ. ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲು ದಾಸನ ಹುಡುಗರನ್ನ ಕರೆಸಿಕೊಂಡಿದ್ದ. ಸದ್ಯ ದಾಸ ಎಂಬಾತನನ್ನು ಅರೆಸ್ಟ್ ಮಾಡಿದ್ದೇವೆ. ಆತನ ವಿರುದ್ಧ ರೌಡಿಶೀಟರ್ ಹಾಕುವ ಪ್ರಕ್ರಿಯೆ ನಡೀತಿದೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.
ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಗ್ರಾಮೀಣ ಮತ್ತು ಸಣ್ಣ ಉದ್ಯೋಗ ಇಲಾಖೆ ಕೃಷಿ ಇಲಾಖೆ ಜಿಲ್ಲಾ ತೋಟಗಾರಿಕಾ ಸಂಘ ಮತ್ತು ಜಿಲ್ಲಾ ಕೃಷಿಕ ಸಮಾಜ ವತಿಯಿಂದ 2023/ 24 ನೇ ಸಾಲಿನ ಜಿಲ್ಲಾ ಮಟ್ಟದ 64ನೇ ಫಲ ಪುಷ್ಪ ಪ್ರದರ್ಶನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಿದರು. ಪ್ರದರ್ಶನ ಡಿಸೆಂಬರ್ 10ರವರೆಗೆ ಫಲ ಪುಷ್ಪ ಪ್ರದರ್ಶನ ಹಾಗೂ ಮಾರಾಟಗೊಳ್ಳಲಿದೆ. ವಿವಿಧ ಆಕರ್ಷಿಕ ವಸ್ತು ಪ್ರದರ್ಶನ ವಿವಿಧ ಅಲಂಕೃತಕ್ಕೆ ಸಸ್ಯಗಳು ಹಾಗೂ ಪುಷ್ಪಗಳು ಪ್ರದರ್ಶನಕ್ಕೆ ಇಡಲಾಗಿದೆ. ಅದರಂತೆ ವಿವಿಧ ಬಗೆಯ ಪುಷ್ಪಾಲಂಕರ ದಿಂದ ತಯಾರಿಸಲ್ಪಟ್ಟಿರುವ ಬೆಳಗಾವಿ ಸುಪ್ರಸಿದ್ಧ ಕಮಲ ಬಸತಿ, ಗುಡಿಸಿಲಿನ ಆಕೃತಿ ,ಹೂಗಳಿಂದ ಸುಂದರವಾದ ಕರ್ನಾಟಕ ನಕ್ಷೆ ಮತ್ತು ಶಾವಿಗೆ ಮತ್ತು ವಿವಿಧ ಪದಾರ್ಥಗಳಿಂದ ತಯಾರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮಿಗಳ ವಿಗ್ರಹ ಮತ್ತು ವೀರಾಣಿ ಕಿತ್ತೂರು ಚೆನ್ನಮ್ಮ ಕಲಾಕೃತಿಗಳು ಜನರನ್ನು ಆಕರ್ಷಣೆ ಮಾಡುತ್ತಾ ಇದೆ. ತೋಟಗಾರಿಕೆ ಇಲಾಖೆ ವಿವಿಧ…
ಧಾರವಾಡ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಕಾರ್ಯಕ್ರಮ ನಿಮಿತ್ಯ ಧಾರವಾಡ ಜಿಲ್ಲಾಡಳಿತ ಆವರಣದಲ್ಲಿ ಸ್ಥಾಪಿಸಿರುವ ಮತದಾನ ಪ್ರಾತ್ಯಕ್ಷಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಉದ್ಘಾಟಿಸಿದರು. ಮತದಾರರಿಗೆ ವಿದ್ಯುನ್ಮಾನ ಮತ ಯಂತ್ರಗಳ ಹಾಗೂ ಮತದಾನ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಪಾಲಿಕೆ ಆವರಣದಲ್ಲಿ ಮತದಾನ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು. ಇವಿಎಮ್ ಗಳು ಸತ್ಯದ ಕನ್ನಡಿ ಇದ್ದ ಹಾಗೆ. ಯಾವುದೇ ರೀತಿಯಲ್ಲಿ ತಿರುಚಲು ಸಾಧ್ಯವಿಲ್ಲ. ಮತದಾರರು ತಾವು ಹಾಕಿದ ಮತವನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆಯೆಂದರು. ಜಿಲ್ಲೆಯ 1652 ಮತದಾನ ಕೇಂದ್ರಗಳಲ್ಲಿ 142 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ, ಅವರಿಂದ ಇವಿಎಂ ಪ್ರಾತ್ಯಕ್ಷಿಕೆ ಮಾಡಲಾಗುತ್ತದೆ. ಬಹಳಷ್ಟು ಜನರು ಸೇರುವ ಸ್ಥಳಗಳಲ್ಲಿ ಮೊಬೈಲ್ ವಾಹನ ಮುಖಾಂತರವು ಸಹ ಪ್ರಾತ್ಯಕ್ಷಿಕೆ ಹಾಗೂ ಅರಿವು ಮೂಡಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹಾಗೂ ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ವರ್ಷದ ಅಂತ್ಯದ ವೇಳೆಗೆ ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ ಸಿದ್ಧವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. “ಅಯೋಧ್ಯೆ ವಿಮಾನ ನಿಲ್ದಾಣವು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ನಾನು ಅದನ್ನು ಪ್ರತಿದಿನವೂ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಅದು ಸಿದ್ಧವಾದ ನಂತರ ಪ್ರಧಾನಿ ಮೋದಿ ಅದನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ವಿಮಾನ ಕಾರ್ಯಾಚರಣೆಗಳು ಸಹ ಪ್ರಾರಂಭವಾಗುತ್ತವೆ” ಎಂದು ಸಿಂಧಿಯಾ ಹೇಳಿದರು. ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಸಭೆಯ ಅಧ್ಯಕ್ಷತೆ ವಹಿಸಿ ಅಯೋಧ್ಯೆಯ ‘ಮರ್ಯಾದಾ ಪುರುಷೋತ್ತಮ ಶ್ರೀ ರಾಮ್’ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲಸದ ಬಗ್ಗೆ ನವೀಕರಣಗಳನ್ನು ಕೋರಿದ ಒಂದೆರಡು ದಿನಗಳ ನಂತರ ಸಿಂಧಿಯಾ ಅವರ ಹೇಳಿಕೆ ಬಂದಿದೆ. ಕಳೆದ ಶನಿವಾರ, ಸಿಂಧಿಯಾ ಅವರು ಕೇಂದ್ರ ಸಚಿವ ವಿಕೆ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವಿಮಾನ ನಿಲ್ದಾಣದ…
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 85 ವರ್ಷದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪುತ್ರ ವಿನೋದ್ ರಾಜ್ ಅವರನ್ನು ಲೀಲಾವತಿ ಅಗಲಿದ್ದಾರೆ. 1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕನ್ನಡ ದಿಗ್ಗಜ ನಟರಾಟ ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದವರ ಜೊತೆ ಅಭಿನಯಿಸಿದ್ದರು. ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ವರಹಸಂದ್ರ ಗೊಲ್ಲರಟ್ಟಿಯಲ್ಲಿ ಮೂಢನಂಬಿಕೆಗಳ ಕಾರಣದಿಂದ ಊರಿನಿಂದ ಹೊರಗೆ ಇಟ್ಟಿದ್ದ, ಮೂವರು ಹೆಣ್ಣು ಮಕ್ಕಳು, ಒಂದು ಪುಟ್ಟ ಮಗುವನ್ನು, ಜೊತೆಗೆ ಪೂಜಾರಿ ಕುಟುಂಬದ ಹೆಣ್ಣು ಮಗಳನ್ನು ತಾಲೂಕು ದಂಡಾಧಿಕಾರಿ ವೈ.ಎಂ. ರೇಣು ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಮನೆಗೆ ಸೇರಿಸಿದೆ. ತಹಶೀಲ್ದಾರ್ ವೈ.ಎಂ. ರೇಣು ಕುಮಾರ್ ಹಾಗೂ ಹಲವು ಮೇಲಾಧಿಕಾರಿಗಳ ತಂಡ ತಾಲೂಕಿನ ಪ್ರತಿಯೊಂದು ಗೊಲ್ಲರಹಟ್ಟಿಗೆ ಭೇಟಿಕೊಟ್ಟು, ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೂಡ ಮಾಡಿದ್ದರು, ಆದರೆ ವರಹಸಂದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಗಳ ವಿರುದ್ಧ ಅಧಿಕಾರಿಗಳು ಮಾಡಿದ ಕಾರ್ಯಕ್ರಮಕ್ಕೂ ಜಗ್ಗದೆ ತಮ್ಮ ಮೂಢನಂಬಿಕೆಗಳನ್ನೇ ಮುಂದುವರಿಸಿಕೊಂಡು ಹೆಣ್ಣು ಮಕ್ಕಳನ್ನು ಊರಿನಿಂದ ಆಚೆ ಇಡುವ ಪದ್ಧತಿಯನ್ನೇ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವರಹಸಂದ್ರ ಗೊಲ್ಲರಟ್ಟಿ ಗ್ರಾಮಕ್ಕೆ ಬೆಳಿಗ್ಗೆ 5:45 ಕ್ಕೆ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ಕೊಟ್ಟ ತಹಶೀಲ್ದಾರ್, ಹೆಣ್ಣು ಮಕ್ಕಳನ್ನು ಮನೆಗೆ ಸೇರಿಸುವ ಕಾರ್ಯ ಮಾಡಿದ್ದಾರೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.
ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ತಿಪಟೂರಿನಲ್ಲಿ ಪ್ರಾರಂಭವಾಗಿರುವ ನಮ್ಮ ಆರೋಗ್ಯ ಕೇಂದ್ರಗಳಿಗೆ ಯಶಸ್ವಿ ಮೊದಲ ವರ್ಷದ ಹರ್ಷ. ನಮ್ಮ ಆರೋಗ್ಯ ಕೇಂದ್ರಗಳು ಆರಂಭವಾಗಿ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ನಾವು ನಿಜಕ್ಕೂ ಹೆಮ್ಮೆಪಡುತ್ತೇವೆ. ತಿಪಟೂರಿನ ಹಾಲ್ಕುರಿಕೆ ಗ್ರಾಮದಲ್ಲಿ ಮೊದಲ ಬಾರಿಗೆ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಯಿತು. ನಂತರ ಕೆ.ಬಿ ಕ್ರಾಸ್ ನಲ್ಲಿ ಇನ್ನೊಂದು ಆರೋಗ್ಯ ಕೇಂದ್ರದ ಘಟಕವನ್ನು ಆರಂಭಿಸಲಾಯಿತು. ಈ ಎರಡು ಘಟಕಗಳು ನೂರಾರು ಮಹಿಳೆಯರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಇಂದು ವರ್ಷದಿಂದ ಯಶಸ್ವಿಯಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ತುಮಕೂರು ಜಿಲ್ಲೆಯಲ್ಲಿಯೇ ಮೊದಲ ಖಾಸಗಿ ಯೋಜನೆಯಾಗಿದೆ ಎಂಬುದು ನಮ್ಮ ಹೆಮ್ಮೆ. ‘ನಮ್ಮ ಆರೋಗ್ಯ ಕೇಂದ್ರ’ ಸ್ಥಾಪಿಸಿದ ಕೀರ್ತಿ ಜನಸ್ಪಂದನ ಟ್ರಸ್ಟ್ ಗೆ ಸಲ್ಲುತ್ತದೆ. ಜನಸ್ಪಂದನ ಟ್ರಸ್ಟ್ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ. ಶಶಿಧರ್ ಟುಡ, ನಮ್ಮ ಆರೋಗ್ಯ ಕೇಂದ್ರದ ಸಹ ಸಂಸ್ಥಾಪಕರು ಮತ್ತು ಆರ್ಟಿಸ್ಟ್…
ಕೊರಟಗೆರೆ ತಾಲೂಕಿನ ನವಿಲುಕುರಿಕೆ ಗ್ರಾಮಸ್ಥರು ನಿವೇಶನ ಹಾಗೂ ಸ್ಮಶಾನಕ್ಕಾಗಿ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ. ನಿರಾಶ್ರಿತರಿಗೆ ಮೀಸಲಿಟ್ಟ ನಿವೇಶನ ಜಾಗವನ್ನು ಖಾಸಗಿಯವರು ಅತಿಕ್ರಮ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಮಶಾನಕ್ಕೆ ಜಾಗವಿಲ್ಲದೆ ಸಾರ್ವಜನಿಕರು, ಪರಿತಪಿಸುತ್ತಿದ್ದಾರೆ. ಇದೇ ವೇಳೆ, ತಹಶೀಲ್ದಾರ್ ಮಂಜುನಾಥ್ ನಿವೇಶನ ಹಾಗೂ ಸ್ಮಶಾನ ಜಾಗ ತ್ವರಿತವಾಗಿ ನೀಡುವ ಭರವಸೆ ನೀಡಿದ ಬಳಿಕ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವನಿಕರು ಗ್ರಾಮಕ್ಕೆ ಹಿಂದುರುಗಿದರು. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ