Author: admin

ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 19.29 ಲಕ್ಷ ಹೆಣ್ಣು ಮಕ್ಕಳಿಗೆ ‘ಶುಚಿ ಯೋಜನೆ’ ಅಡಿ 2024ರ ಜನವರಿಯಿಂದ ಉಚಿತ ಸ್ಯಾನಿಟರಿ ನ್ಯಾಪ್‌ ಕಿನ್‌ಗಳನ್ನು ವಿತರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೊರೊನಾ ಸೇರಿ ವಿವಿಧ ಕಾರಣಗಳಿಂದ 2019-20ರಿಂದ ಸ್ಯಾನಿಟರಿ ನ್ಯಾಪ್‌ ಕಿನ್ ವಿತರಣೆ ಸ್ಥಗಿತಗೊಂಡಿದ್ದು, ಆ ಯೋಜನೆಗೆ ಇದೀಗ ಮರು ಚಾಲನೆ ನೀಡಲಾಗುತ್ತಿದೆ. ಜನವರಿಯಿಂದ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದಿದ್ದಾರೆ. 10 ವರ್ಷದಿಂದ 18 ವರ್ಷದ ಒಳಗಿನ ಸುಮಾರು 19 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು  ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗೂ ನ್ಯಾಪ್‌ ಕಿನ್‌ ಗಳನ್ನು ವಿತರಿಸಲಾಗುವುದು.  ಪ್ರಾಯೋಗಿಕವಾಗಿ ಮೆನ್‌ ಸ್ಟ್ರುವಲ್ ಮುಟ್ಟಿನ ಕಪ್ ‌ಗಳನ್ನು ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ.

Read More

ಬೆಂಗಳೂರು: ರಾಕೇಶ್ ಹಾಗೂ ಅವನ ಪ್ರೇಯಸಿ ಸುಮಾರು 5 – 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಹುಡುಗಿ ಮನೆಯಲ್ಲಿ ಇವರ ಪ್ರೀತಿ ಒಪ್ಪಿಗೆ ನೀಡದ ಕಾರಣ, ರಾಕೇಶ್  ತನ್ನ ಗೆಳತಿ ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು ಬೇಸತ್ತ ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಘಟನೆ ನಡೆದಿದೆ. ರಾಕೇಶ್ ಎಂಬಾತನೇ ಮೃತನಾಗಿದ್ದು, ಯುವತಿಯ ಮನೆ ಮುಂದೆ ಆತ್ಮಹತ್ಯೆಗೆ ಈತ ಯತ್ನಿಸಿದ್ದಾನೆ. ಕೂಡಲೇ ರಾಕೇಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದೇಹದ ಬಹುತೇಕ ಭಾಗ ಸುಟ್ಟು ಹೋದ ಹಿನ್ನೆಲೆಯಲ್ಲಿ ರಾಕೇಶ್ ಮೃತಪಟ್ಟಿದ್ದಾನೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಕೇಶ್ ನ ಕುಟುಂಬದವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಹುಡುಗಿಯ ಚಿಕ್ಕಪ್ಪ ರಾಕೇಶ್ ಅನ್ನು ಹುಡುಗಿಯ ಮುಖಾಂತರ ಕರೆಸಿಕೊಂಡು ಈ ರೀತಿ ಘಟನೆ ಸಂಭವಿಸಿದೆ ಎಂದು ರಾಕೇಶ್ ಕುಟುಂಬ ಸಂಶಯ ವ್ಯಕ್ತ ಪಡಿಸಿ ಆರೋಪ ಮಾಡಿದ್ದಾರೆ. ಇದು ಆತ್ಮಹತ್ಯೆಯೋ ಕೊಲೆಯೋ ಪೋಲೀಸರ…

Read More

ಕೇರಳ: ಕೇರಳದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ತಿರುವನಂತಪುರಂ ಮೆಡಿಕಲ್‌ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿನಿಯಾಗಿದ್ದ ಶಹಾನಾ ಮಂಗಳವಾರ ಬೆಳಗ್ಗೆ ಸಂಸ್ಥೆಯ ಬಳಿಯ ಬಾಡಿಗೆ ಅಪಾರ್ಟಮೆಂಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ವರನ ಮನೆಯವರು ವರದಕ್ಷಿಣೆಯಾಗಿ 150 ಚಿನ್ನದ ನಾಣ್ಯಗಳು, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದರು. ವರದಕ್ಷಿಣೆ ನೀಡದ ಕಾರಣ ಮದುವೆ ರದ್ದುಪಡಿಸಿದ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಹನಾ ಕುಟುಂಬ ಆರೋಪಿಸಿದೆ. ಪೊಲೀಸರು ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಡಾ. ಶಿವಮೂರ್ತಿ ಮುರುಘಾ ಶರಣರ ಕೈಗೆ ಮತ್ತೆ ಮುರುಘಾಮಠದ ಅಧಿಕಾರ ದೊರೆತಿದೆ. 2022ರ ಸೆ.1ರಂದು ಪೋಕ್ಸೋ ಕೇಸ್ ನಲ್ಲಿ ಮುರುಘಾ ಶ್ರೀ ಬಂಧನವಾದ ಬಳಿಕ ರಾಜ್ಯ ಸರ್ಕಾರವೇ ಮಠಕ್ಕೆ ಆಡಳಿತಾಧಿಕಾರಿಯನ್ನ ನೇಮಿಸಿತ್ತು. ನವೆಂಬ‌ರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಅಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಚಿತ್ರದುರ್ಗ ಪಿಡಿಜೆಯಿಂದ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರಿಸಿ ಎಂದು ಹೈಕೋರ್ಟ್ ಆದೇಶಿಸಿದೆ.

Read More

ಜೂನಿಯ‌ರ್ ಮೆಹಮೂದ್ ಎಂದೇ ಖ್ಯಾತರಾಗಿದ್ದ ನಟ ನಯೀಮ್ ಸಯ್ಯದ್(67) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ತಡರಾತ್ರಿ 2 ಗಂಟೆಗೆ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಸಾಂತಾಕ್ರೂಜ್ ಸಮಾಧಿ ಮೈದಾನದಲ್ಲಿ ನಯೀಮ್ ಸಯ್ಯದ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸ್ನೇಹಿತರು ತಿಳಿಸಿದ್ದಾರೆ. ತಮ್ಮ ನಟನೆಯಿಂದಲೇ ಇವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು.

Read More

ರಾಜ್ಯ ಸರಕಾರಕ್ಕೆ ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕೊಡಬೇಕು ಎನ್ನುವುದು ಪ್ರಾಮಾಣಿಕ‌ ಕಳಕಳಿ ಇಲ್ಲ. ಆದರೆ ಅಲ್ಪ ಸಂಖ್ಯಾತರಿಗೆ 10 ಸಾವಿರ ರೂ.‌ ಕೋಟಿ ನೀಡುವುದಾಗಿ ಸಿಎಂ ಘೋಷಣೆ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಪರಿಹಾರ ಕೊಡಲು ಸರಕಾರದ ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ ಹಣ ಕೊಡುತ್ತೇವೆ ಎಂದು ಸಿಎಂ ಹೇಳುತ್ತಾರೆ. ರಾಜ್ಯ ಸರಕಾರದ ಆದ್ಯತೆ ಸಂಕಷ್ಟದಲ್ಲಿರುವ ರೈತರಲ್ಲ. ಇವರ ಸಮಸ್ಯೆಗಳಿಗೆ ರಾಜ್ಯ ಸರಕಾರ ಸ್ಪಂದನೆ ಮಾಡುತ್ತಿಲ್ಲ. ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಅಧಿವೇಶನ ಸಂದರ್ಭದಲ್ಲಿಯೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ರೈತರ ಬಗ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ಕುರಿತು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದರು. ಪೃಥ್ವಿ ಸಿಂಗ್ ಮೇಲೆ ಹಲ್ಲೆ ವಿಚಾರಕ್ಕೆ ಉತ್ತರಿಸಿ, ಬಿಜೆಪಿಯ ದಲಿತ ಮುಖಂಡನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಆಗಿದೆ. ಪೊಲೀಸ್ ಅಧಿಕಾರಿಗಳು…

Read More

ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆದ ಅನುಭವ ನನಗೂ ಆಗಿದೆ. ನಾನೂ ಬಿಜೆಪಿಯಲ್ಲಿ ಇದ್ದು ಬಂದವನು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಗುರುವಾರ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಜಾತಿ ಕಾರಣಕ್ಕೆ ನಾಗ್ಪುರದ ಆರ್ ಎಸ್‌ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದೊಳಗೆ ಬಿಡಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಆಪ್ ನಾಯಕ, ಜಾತಿ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದರೆ ಖಂಡನೀಯ ಎಂದರು. ಆರ್ ಎಸ್‌ಎಸ್ ಗರ್ಭಗುಡಿಗೆ ದಲಿತರಿಗೆ ಪ್ರವೇಶ ಇಲ್ಲ. ಇದಕ್ಕೆ ಗೂಳಿಹಟ್ಟಿ ಆಡಿಯೋ ಸಾಕ್ಷಿ. ಸಿಎಂ ಸಿದ್ದರಾಮಯ್ಯ ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ಆಹ್ವಾನವೇ ನೀಡುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರುವಿಡುತ್ತಿದ್ದರು. ಆದರೆ ಗೂಳಿಹಟ್ಟಿ ಶೇಖರ್ ಹೇಳಿಕೆ ನಂತರ ಮನವರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಇದೇ ವೇಳೆ, ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷರು ಆಗ್ರಹಿಸಿದರು.

Read More

ಕಿವಿಯ ಮೇಣವನ್ನು ತೆಗೆದು ಹಾಕುವುದರ ವಿರುದ್ಧ ವೈದ್ಯರು ಎಚ್ಚರಿಸುತ್ತಾರೆ, ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳುತ್ತಾರೆ. ಕಿವಿಯ ಮೇಣವನ್ನು ತೆಗೆದು ಹಾಕಲು ಹತ್ತಿ ಸ್ವ್ಯಾಬ್ ‌ಗಳು, ಇಯರ್ ಪಿಕ್ಸ್, ಪೆನ್ನುಗಳು ಅಥವಾ ಬೆರಳುಗಳನ್ನು ಬಳಸದಂತೆ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ ಏಕೆಂದರೆ ಇದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಅಸೋಸಿಯೇಷನ್ ಆಫ್ ಓಟೋಲರಿಂಗೋಲಜಿಸ್ಟ್ಸ್ (AOIENT ಶಸ್ತ್ರಚಿಕಿತ್ಸಕರು) ಆಯೋಜಿಸಿದ್ದ ನಾಲ್ಕನೇ ವಾಯ್ಸ್-ಕಾನ್ ಮತ್ತು ಏರ್‌ವೇ ಕಾನ್ಫರೆನ್ಸ್ ‌ನಲ್ಲಿ ತಜ್ಞರು ಹೇಳಿದರು, ನಗರದಲ್ಲಿ ಪ್ರತಿ ತಿಂಗಳು ನೂರಾರು ಪ್ರಕರಣಗಳು ವರದಿಯಾಗುತ್ತವೆ, ಅಲ್ಲಿ ವ್ಯಕ್ತಿಗಳು ಉದ್ದೇಶ ಪೂರ್ವಕವಾಗಿ ತಮ್ಮ ಕಿವಿಗಳಿಗೆ ಹಾನಿಯನ್ನುಂಟು ಮಾಡುತ್ತಾರೆ. ಅಸೋಸಿಯೇಶನ್ ಆಫ್ ಓಟೋಲರಿಂಗೋಲಜಿಸ್ಟ್ಸ್, ಲಕ್ನೋ ಅಧ್ಯಾಯದ ಅಧ್ಯಕ್ಷ ಡಾ. ರಾಕೇಶ್ ಶ್ರೀವಾಸ್ತವ ಮಾತನಾಡಿ, ಮಾನವನ ಕಿವಿಯು ಸ್ವಯಂ-ಶುಚಿಗೊಳಿಸುವ ಕಾರ್ಯ ವಿಧಾನವನ್ನು ಹೊಂದಿದೆ ಮತ್ತು ಯಾವುದೇ ದಿನನಿತ್ಯದ ನಿರ್ವಹಣೆ ಅಗತ್ಯವಿಲ್ಲ. “ಇಯರ್‌ ವಾಕ್ಸ್, ಅಥವಾ ಸೆರುಮೆನ್, ಧೂಳು ಮತ್ತು ಕೊಳಕು ವಿರುದ್ಧ ಕಿವಿಯೋಲೆಗಳು ಮತ್ತು ಒಳಗಿನ ಕಿವಿಗೆ ನೈಸರ್ಗಿಕ ರಕ್ಷಕವಾಗಿ ಕಾರ್ಯ ನಿರ್ವಹಿಸುತ್ತದೆ. ಅಸಮರ್ಪಕ ಶುಚಿಗೊಳಿಸುವಿಕೆಯು…

Read More

ಬೆಂಗಳೂರು ಗ್ರಾಮಾಂತರ: ಕುಡಿದ ಮತ್ತಿನಲ್ಲಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದ ಮಗನನ್ನ ತಂದೆಯೇ ಚಾಕುವಿನಿಂದ ಚುಚ್ಚಿ ಹತ್ಯೆಗೈದಿರುವ ಘಟನೆ ನಡೆದಿದೆ. ಸುರೇಶ ಕೊಲೆಯಾದ ವ್ಯಕ್ತಿ. ನಾರಾಯಣಪುರದಲ್ಲಿ ತಂದೆ ತಾಯಿ ಹಾಗೂ ಎರಡನೇ ಪತ್ನಿ ಮತ್ತು ಮಕ್ಕಳ ಜೊತೆ ವಾಸವಿದ್ದ ಸುರೇಶ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುವುದು ಈತನ ಹವ್ಯಾಸವಾಗಿತ್ತು. ಅಂದೂ ಕೂಡ ಕುಡಿದು ಬಂದು ತಂದೆ ಹಾಗೂ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಕೋಪದಲ್ಲಿ ಚಾಕುವಿನಿಂದ ಯಲ್ಲಪ್ಪ ಮಗನ ಕುತ್ತಿಗೆಗೆ ಚುಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಮನೆಯಿಂದ ಹೊರಗೆ ಓಡಿಬಂದ ಸುರೇಶ್ ‌ನನ್ನು ಹೆಂಡತಿ ಮತ್ತು ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿ ಯಲ್ಲಪ್ಪನನ್ನು ಬಂಧಿಸಲಾಗಿದೆ.

Read More

ತುಮಕೂರು: ತಮ್ಮದೇ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಲು ಆಸಕ್ತಿಯ ಜೊತೆ ಶ್ರದ್ಧೆಯೂ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಲಾ ಕುಂಚ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಾಳಿಕಾಯಿ ಸಲಹೆ ನೀಡಿದರು. ಸೋಮವಾರ ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಲಿತಕಲೆಗಳಲ್ಲಿರುವ ಎಲ್ಲಾ ಕಲೆಗಳು ಶ್ರೇಷ್ಟವಾದವುಗಳೇ ಚಿತ್ರಕಲೆ ಹಾಗೂ ಶಿಲ್ಪಕಲೆಗೆ ತನ್ನದೇ ಅದ ಮೌಲ್ಯವಿದ್ದು, ಆಳುವ ಸರ್ಕಾರಗಳು ಈ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಚಿತ್ರಕಲಾ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಪ್ರತಿದಿನ ರೇಖಾಚಿತ್ರಗಳ ರಚನೆ ಅತ್ಯಾವಶ್ಯಕ. ವಿದ್ಯಾರ್ಥಿಗಳು ಚಿತ್ರಕೃತಿಗಳನ್ನು ರಚಿಸುವುದರ ಜೊತೆಗೆ ಇತರೆ ಕಲಾವಿದರ ಚಿತ್ರಗಳನ್ನು ನೋಡುವ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು. ಚಿತ್ರ ಹಾಗೂ ಶಿಲ್ಪಕೃತಿಗಳ ಕುರಿತು ಚರ್ಚೆ ನಡೆಸಿ ವಿಷಯ ತಿಳಿದುಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು. ಹಿರಿಯ ಚಿತ್ರಕಲಾವಿದ ರಮೇಶ್ ಸಾಸನೂರು ಮಾತನಾಡಿ, ಕಲೆಗೆ ಮೂಲವಾಗಿರುವುದು ರೇಖೆ, ಚಿತ್ರಕಲೆಯೂ ಆರಂಭವಾಗುವುದೂ ಕೂಡ ರೇಖೆಗಳಿಂದಲೇ ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ರೇಖಾ ಚಿತ್ರಗಳನ್ನು ರಚಿಸುವ ಕಾಯಕವನ್ನು ರೂಢಿ…

Read More