nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

    April 19, 2026

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026
    Facebook Twitter Instagram
    ಟ್ರೆಂಡಿಂಗ್
    • ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ
    • ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!
    • ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ
    • ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ
    • ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ
    • ತಿಪಟೂರು: ಬೆಡ್‌ ಶೀಟ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಪಕ್ಕದ ಪೊರಕೆ ತಯಾರಿಕಾ ಘಟಕಕ್ಕೂ ಬೆಂಕಿ ಕೆನ್ನಾಲಿಗೆ
    • ಅವೈಜ್ಞಾನಿಕ ಅಂಡರ್‌ ಪಾಸ್; ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಜಯಂತಿ ಗ್ರಾಮಸ್ಥರಿಂದ ಧರಣಿ
    • ಸಿಂಗಾಪುರ ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಲು ಮಹಿಳೆಯರ ಆಗ್ರಹ: ಕೆಎಸ್‌ ಆರ್‌ ಟಿಸಿ ಅಧಿಕಾರಿಗೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಾಧನೆಯ ಶಿಖರವೇರಲು ಆಸಕ್ತಿ, ಶ್ರದ್ಧೆ ಬಹುಮುಖ್ಯ: ರಾಷ್ಟ್ರೀಯ ಕಲಾ ಕುಂಚ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಾಳಿಕಾಯಿ ಸಲಹೆ
    ತುಮಕೂರು December 7, 2023

    ಸಾಧನೆಯ ಶಿಖರವೇರಲು ಆಸಕ್ತಿ, ಶ್ರದ್ಧೆ ಬಹುಮುಖ್ಯ: ರಾಷ್ಟ್ರೀಯ ಕಲಾ ಕುಂಚ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಾಳಿಕಾಯಿ ಸಲಹೆ

    By adminDecember 7, 2023No Comments1 Min Read
    tumakuru art

    ತುಮಕೂರು: ತಮ್ಮದೇ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಲು ಆಸಕ್ತಿಯ ಜೊತೆ ಶ್ರದ್ಧೆಯೂ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕಲಾ ಕುಂಚ ಪ್ರಶಸ್ತಿ ಪುರಸ್ಕೃತ ಎಂ.ಆರ್.ಬಾಳಿಕಾಯಿ ಸಲಹೆ ನೀಡಿದರು.

    ಸೋಮವಾರ ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಲಿತಕಲೆಗಳಲ್ಲಿರುವ ಎಲ್ಲಾ ಕಲೆಗಳು ಶ್ರೇಷ್ಟವಾದವುಗಳೇ ಚಿತ್ರಕಲೆ ಹಾಗೂ ಶಿಲ್ಪಕಲೆಗೆ ತನ್ನದೇ ಅದ ಮೌಲ್ಯವಿದ್ದು, ಆಳುವ ಸರ್ಕಾರಗಳು ಈ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.


    Provided by
    Provided by

    ಚಿತ್ರಕಲಾ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಪ್ರತಿದಿನ ರೇಖಾಚಿತ್ರಗಳ ರಚನೆ ಅತ್ಯಾವಶ್ಯಕ. ವಿದ್ಯಾರ್ಥಿಗಳು ಚಿತ್ರಕೃತಿಗಳನ್ನು ರಚಿಸುವುದರ ಜೊತೆಗೆ ಇತರೆ ಕಲಾವಿದರ ಚಿತ್ರಗಳನ್ನು ನೋಡುವ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು. ಚಿತ್ರ ಹಾಗೂ ಶಿಲ್ಪಕೃತಿಗಳ ಕುರಿತು ಚರ್ಚೆ ನಡೆಸಿ ವಿಷಯ ತಿಳಿದುಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.

    ಹಿರಿಯ ಚಿತ್ರಕಲಾವಿದ ರಮೇಶ್ ಸಾಸನೂರು ಮಾತನಾಡಿ, ಕಲೆಗೆ ಮೂಲವಾಗಿರುವುದು ರೇಖೆ, ಚಿತ್ರಕಲೆಯೂ ಆರಂಭವಾಗುವುದೂ ಕೂಡ ರೇಖೆಗಳಿಂದಲೇ ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ರೇಖಾ ಚಿತ್ರಗಳನ್ನು ರಚಿಸುವ ಕಾಯಕವನ್ನು ರೂಢಿ ಮಾಡಿಕೊಳ್ಳಬೇಕು. ಕಲೆ ಯಾರ ಸ್ವತ್ತಲ್ಲ ಅದು ಪಡೆದವನ ಸ್ವತ್ತು. ರವೀಂದ್ರನಾಥ್ ಠಾಗೋರ್ ಅವರು ತಮ್ಮ ೬೦ನೇ ವಯಸ್ಸಿನಲ್ಲಿ ಕುಂಚವನ್ನು ಹಿಡಿದು ಯಶಸ್ವಿ ಚಿತ್ರಕಲಾವಿದರಾಗಿ ಹೆಸರು ಮಾಡಿದವರು. ಕಲೆಗೆ ವಯಸ್ಸಿಲ್ಲ ಆಸಕ್ತಿ, ಶ್ರದ್ಧೆ ಇದ್ದರೆ ಸಾಕು ಎಂದರು.

    ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಮಾತನಾಡಿ, ವಿದ್ಯಾರ್ಥಿಗಳು ಹಿರಿಯ ಕಲಾವಿದರ ಕೃತಿಗಳನ್ನು ನೋಡುವುದರ ಜೊತೆಯಲ್ಲಿ ಮುಕ್ತವಾಗಿ ಕಲಾಕೃತಿ ಬಗ್ಗೆ ಚರ್ಚೆ ನಡೆಸಬೇಕು. ನಾವು ನೋಡುವ ಭಿನ್ನತೆಯಲ್ಲಿ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಗುರು-ಹಿರಿಯ ಮಾರ್ಗದರ್ಶನ ಪಡೆದು ಸಮಾಜದಲ್ಲಿ ಒಬ್ಬ ಕಲಾವಿದ ಅಥವಾ ಕಲಾ ಶಿಕ್ಷಕನಾಗುವ ಗುರಿ ಇಟ್ಟುಕೊಳ್ಳಬೇಕು. ನನ್ನ ಗುರುಗಳಾದ ಎಂ.ಆರ್.ಬಾಳಿಕಾಯಿ ಅವರಿಂದ ಕಲಿತ ವಿದ್ಯೆಯಿಂದ ನಾನಿಂದು ಗೌರವ ಸ್ಥಾನದಲ್ಲಿದ್ದೇನೆ ಅದು ನನಗೆ ಹೆಮ್ಮೆಯ ವಿಷಯವಾಗಿದ್ದು, ತಾವುಗಳು ಕೂಡ ಇಂತಹ ಉತ್ತಮ ಮಾರ್ಗದಲ್ಲಿ ಸಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಂಗಸ್ವಾಮಿ ಆರ್, ಸತ್ಯನಾರಾಯಣ ಟಿ.ಎಸ್, ಡಾ.ಸುರೇಂದ್ರನಾಥ್, ಡಾ.ಸಂತೋಷ ಕುಮಾರ್ ನಾಗರಾಳ, ಡಾ.ಶ್ವೇತ.ಡಿ.ಎಸ್, ಸತ್ಯನಾರಾಯಣ ಟಿ.ಎಸ್ ಹಾಗು ವಿದ್ಯಾರ್ಥಿಗಳು ಇದ್ದರು.

    admin
    • Website

    Related Posts

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

    April 19, 2026

    ಮೈಸೂರು: ಇಲ್ಲಿನ ಸಿದ್ಧಾರ್ಥನಗರದಲ್ಲಿ ನಡೆದ ರೋಚಕ ಘಟನೆಯೊಂದರಲ್ಲಿ, ಮನೆಯೊಳಗೆ ನುಗ್ಗಿದ್ದ ಚಿರತೆಯಿಂದ ತನ್ನ ಅತ್ತೆಯನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ…

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.