Subscribe to Updates
Get the latest creative news from FooBar about art, design and business.
- 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
- ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
- ತುಮಕೂರು: ಜು.12ರಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ
- ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಘೋಡಂಪಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭಕ್ತಿಭಾವದ ಪೂಜೆ
- ಸರಗೂರು: ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ಉಸ್ತುವಾರಿಯಾಗಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಆಯ್ಕೆ
- ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಸುರೇಶ್ ಅವರಿಗೆ ಯಶವಂತಪುರ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
- ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!
Author: admin
ಬೆಂಗಳೂರು: ರಾಷ್ಟ್ರದ ಭವಿಷ್ಯ ಯುವಸಮೂಹದ ಕೈಯಲ್ಲಿದ್ದು, ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು. ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುವ ಮತದಾರರ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಉಳಿಸಲು ನೀವೆಲ್ಲರೂ ನಿಮ್ಮ ಶಕ್ತಿ ಉಪಯೋಗಿಸಬೇಕು. ಬದಲಾವಣೆ ತರುವ ಶಕ್ತಿ ಯುವಸಮೂಹದಲ್ಲಿದೆ ಎಂದರು.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ವೇಳೆ ಹೋಟೆಲ್ ಸೇವೆಗೆ ಅವಕಾಶವಿಲ್ಲ. ನಿಮ್ಮ ಹೋಟೆಲ್ ಮುಚ್ಚಿ ಎಂದು ಹೇಳಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆಯೇ ಹೋಟೆಲ್ ಮಾಲೀಕ 50 ಸಾವಿರ ರೂ. ಲಂಚ ಕೇಳಿದ್ದಾಗಿ ದೂರು ಕೊಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ಪಿಎಸ್ ಐ ದೂರು ದಾಖಲಿಸಿಕೊಂಡು ಹೋಟೆಲ್ ಮಾಲೀಕನನ್ನು ಜೈಲಿಗಟ್ಟಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಪಿಎಸ್ ಐ ಪ್ರತಿಮಾ ಅವರೊಂದಿಗೆ ಹೋಟೆಲ್ ಮಾಲೀಕ ಅನುಚಿತವಾಗಿ ನಡೆದು ಕೊಂಡಿದ್ದಾರೆ.
ಐಪಿಎಲ್ ನನ್ನ ಇಡೀ ವೃತ್ತಿ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ ಟೂರ್ನಿ ಎಂದು ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಐಪಿಎಲ್ ನಿಂದಾಗಿ ನಾನು ಅನೇಕ ಶ್ರೇಷ್ಠ ಆಟಗಾರರು ಮತ್ತು ತರಬೇತುದಾರರೊಂದಿಗೆ ಆಡಲು ಸಾಧ್ಯವಾಯಿತು. ನಾನು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿತು. ಆಸ್ಟ್ರೇಲಿಯಾದ ಹೆಚ್ಚು ಆಟಗಾರರು ಐಪಿಎಲ್ ನಲ್ಲಿ ಭಾಗವಾಗಬೇಕೆಂದು ಬಯಸುತ್ತಾರೆ. ಏಕೆಂದರೆ ಅವರು ಸಾಕಷ್ಟು ಅನುಭವವನ್ನು ಪಡೆಯುತ್ತಾರೆ ಎಂದು ಮ್ಯಾಕ್ಸಿ ಹೇಳಿದ್ದಾರೆ. ನಾನು ಕೊನೆಯವರೆಗೂ ಆಡಲು ಬಯಸುವ ಏಕೈಕ ಪಂದ್ಯಾವಳಿ ಐಪಿಎಲ್ ಎಂದು ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಯಾವಾಗ ನನಗೆ ನಡೆಯಲು ಆಗುವುದಿಲ್ಲ ಅನಿಸುತ್ತದೆಯೊ ಅಲ್ಲಿಯವರೆಗೆ ನಾನು ಐಪಿಎಲ್ ಆಡುತ್ತಲೇ ಇರುತ್ತೇನೆ. ಐಪಿಎಲ್ ನನ್ನ ಇಡೀ ವೃತ್ತಿ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ ಟೂರ್ನಿಯಾಗಿದೆ.
ಬೆಂಗಳೂರು: ‘ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ’ ರಚಿಸುವಂತೆ ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ ಆಗ್ರಹಿಸಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕರಾದ ಪ್ರಕಾಶರಾಜ್, ಸಮೀರ್ ಬಾಗಲಕೋಟೆ, ಅಬೀದಾ ಬೇಗಂ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ’ ಸ್ಥಾಪಿಸುವ ಭರವಸೆ ನೀಡಿತ್ತು. ಆದರೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಕೋಲ್ಕತ್ತಾದಲ್ಲಿ ಯುವತಿಯೊಬ್ಬಳ ಮೇಲೆ ದೌರ್ಜನ್ಯ ನಡೆದಿದೆ. ಟಾಲಿವುಡ್ ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ಯುವತಿಯನ್ನು ಆಕೆಯ ಸ್ನೇಹಿತರು ಕಾರಿನಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ಕೆಲವು ವರ್ಷಗಳ ಹಿಂದೆ ಕೋಲ್ಕತ್ತಾದ ಬೆಹಾಲಾ ಮೂಲದ ಯುವಕನೊಬ್ಬನನ್ನು ಭೇಟಿಯಾಗಿದ್ದಳು. ಆತ ತಾನು ಬಂಗಾಳಿ ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿ ಎಂದು ಪರಿಚಯಿಸಿಕೊಂಡಿದ್ದ. ಘಟನೆ ಕುರಿತು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪ ಗಲಾಟೆ, ಗದ್ದಲಕ್ಕೆ ಸಾಕ್ಷಿಯಾಗಿದೆ. ಬ್ರ್ಯಾಂಡ್ ಬೆಂಗಳೂರು ಗಲಾಟೆಯೊಂದಿಗೆ ಆರಂಭವಾದ ಕಲಾಪ ಕದನ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧದ ಕೇಸ್ವರೆಗೂ ತಲುಪಿತ್ತು. ಹಲವು ಬಾರಿ ಸದನದ ಬಾವಿಗಿಳಿದ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಹೋರಾಟ ಮಾಡಿದರು. ವಿಧಾನಸಭಾ ಅಧಿವೇಶನದ ಎರಡನೇ ದಿನ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬಿಸಿಬಿಸಿ ಚರ್ಚೆಯಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಬಗ್ಗೆ ಶಾಂತಿನಗರ ಶಾಸಕ ಹ್ಯಾರಿಸ್ ಪ್ರಸ್ತಾಪ ಮಾಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಬ್ರ್ಯಾಂಡ್ ಸಿಟಿ ಈಗ ಬಾಂಬ್ ಸಿಟಿ ಆಗಿದೆ ಎಂದು ಕಿಚಾಯಿಸಿದ್ದಾರೆ. ಈ ಹೇಳಿಕೆಯಿಂದ ಸದನದಲ್ಲಿ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇತ್ತ ಪ್ರಶ್ನೋತ್ತರ ವೇಳೆಯಲ್ಲಿ ಬ್ರಾಂಡ್ ಬೆಂಗಳೂರು ಕುರಿತ ಪ್ರಶ್ನೆ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಸಚಿವ…
ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಕಡ್ಡಾಯ ಗ್ರಾಮೀಣ ಸೇವಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ. ಮಸೂದೆಯಲ್ಲಿ ‘ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ’ ಎಂಬ ಪದಗಳ ಮೊದಲಿಗೆ ‘ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಲ್ಲಿ‘ ಎಂಬ ಪದಗಳನ್ನ ಸೇರಿಸುವ ಮೂಲಕ ತಿದ್ದುಪಡಿ ತರಲಾಗುತ್ತಿದೆ. ಈ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವೈದ್ಯರ ಕಡ್ಡಾಯ ಸೇವೆಯನ್ನ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಹಿಂದೆ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇತ್ತು. ಹೀಗಾಗಿ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದವರು. ಒಂದು ವರ್ಷ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಸರ್ಟಿಫಿಕೇಟ್ ಪಡೆಯಬೇಕು ಎಂಬ ನೀತಿಯನ್ನ ಸರ್ಕಾರ ಅನುಸರಿಸಿತ್ತು. ಆದರೆ, ಇತ್ತೀಚಿಗೆ ವೈದ್ಯಕೀಯ ಸ್ನಾತಕೋತ್ತರ…
ಉತ್ತರ ಪ್ರದೇಶ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯರೊಬ್ಬರು ಪತ್ನಿ, ತನ್ನಿಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿ ರೈಲ್ವೇ ಕಾಲೊನಿಯಲ್ಲಿ ನಡೆದಿದೆ. ರೈಲ್ವೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನೇತ್ರ ತಜ್ಞ, 45 ವರ್ಷದ ಡಾ. ಅರುಣ್ ಕುಮಾರ್ ಈ ಕೃತ್ಯ ಎಸಗಿದ್ದಾರೆ. ಅವರನ್ನು ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ನಿಯೋಜಿಸಲಾಗಿತ್ತು. ಡಾ. ಅರುಣ್ ಕುಮಾರ್ ಡಿಪ್ರೆಶನ್ ನಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ . ಡಾ. ಅರುಣ್ ಕುಮಾರ್, ಪತ್ನಿ ಅರ್ಚನಾ, ಪುತ್ರಿ ಆದಿವಾ (12) ಮತ್ತು ಪುತ್ರ ಆರವ್ (12) ಮೃತದೇಹ ಮನೆಯೊಳಗೆ ರಕ್ತಸಿಕ್ತವಾಗಿ ಕಂಡು ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮನೆಯೊಳಗೆ ರಕ್ತಸಿಕ್ತವಾದ ಸುತ್ತಿಗೆ ಮತ್ತು ರಾಸಾಯನಿಕ ತುಂಬಿದ ಇಂಜೆಕ್ಷನ್ ಕಂಡು ಬಂದಿದೆ. ಡಾ. ಅರುಣ್ ಕುಮಾರ್ ಮೊದಲು ಮಕ್ಕಳು ಮತ್ತು ಪತ್ನಿಗೆ ಇಂಜೆಕ್ಷನ್ ಚುಚ್ಚಿ ಪ್ರಜ್ಞೆ ತಪ್ಪಿಸಿ…
ಲಾರಿ ಡ್ರೈವರ್ ಆಗಿದ್ದವ ಬೆಂಗಳೂರಿನಲ್ಲಿ ಕೆಲ್ಸ ಮಾಡಿಕೊಂಡಿದ್ದ. ಅವನಿಗೆ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತಿದ್ದ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಆತ, ನಾನು ಹೇಗಿದ್ದರೂ ಸಾಯುತ್ತೇನೆ, ಆದರೆ ನನಗಿಂತ ಮೊದಲು ನನ್ನ ಹೆಂಡತಿ ಸಾಯಲಿ ಅಂತಾ ಹತಾಶೆಯಿಂದ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ರಸೂಲ್ ಸಾಬ್ ಎಂಬ ವ್ಯಕ್ತಿಯು ತನಗೆ ಎರಡು ಕಿಡ್ನಿ ವೈಫಲ್ಯ ಆಗಿದೆ, ತನ್ನ ಹೆಂಡತಿ ಮೈಬುನಾ ಬಿ. (35) ತನಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾನು ದುಡಿಯುವಾಗ ಎಲ್ಲಾ ಚೆನ್ನಾಗಿತ್ತು. ಈಗ ಹಾಸಿಗೆ ಹಿಡಿದಿದ್ದೇನೆ ಅಂತಾ ನನ್ನ ಆರೈಕೆ ಮಾಡುತ್ತಿಲ್ಲ ಎಂದು, ಕೋಪಗೊಂಡು ಆಕೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಲೆಗೆ, ಕುತ್ತಿಗೆಗೆ ಕೊಡಲಿಯಿಂದ ಜೋರಾಗಿ ಹೊಡೆದು ಕೊಲೆ ಮಾಡಿದ್ದಾನೆ. ನಡು ರಾತ್ರಿ ಕೊಲೆ ಮಾಡಿ ತನ್ನ ಎರಡು ಮಕ್ಕಳನ್ನ ಕರೆದುಕೊಂಡು ತೆಕ್ಕಲಕೋಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತುಮಕೂರು: ಡಿಸೆಂಬರ್ 6ಕ್ಕೆ ನಿರ್ಧಾರ ಹೇಳ್ತೇನೆ ಎಂದಿದ್ದ ಮಾಜಿ ಸಚಿವ ವಿ ಸೋಮಣ್ಣ ಈಗ ಉಲ್ಟಾ ಹೊಡೆದಿದ್ದಾರೆ, ತುಮಕೂರಿಗೆ ಆಗಮಿಸಿದ್ದ ಅವರು ಪಕ್ಷ ಸೇರ್ಪಡೆ ನಿರ್ಧಾರದ ಬಗ್ಗೆ ಗುಟ್ಟು ಬಿಟ್ಟು ಕೊಡದೇ ಮತ್ತೆ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡುತ್ತಾ ತಮ್ಮ ನಿರ್ಧಾರ ತಿಳಿಸದೇ ಹೈಕಮಾಂಡ್ ಪ್ರತಿಕ್ರಿಯೆಗೆ ಕಾಯುತ್ತೇನೆ ಎಂದರು, ಇದರ ಜೊತೆ ಶಾಸಕ ಯತ್ನಾಳ್ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನೂ ಹೇಳಿದರು. ಶಾಸಕ ಯತ್ನಾಳ್ ಸುಸಂಸ್ಕೃತ ರಾಜಕಾರಣಿ, ಅವರ ನೋವನ್ನು ನೇರವಾಗಿ ಹೇಳಿಕೊಂಡಿದ್ದಾರೆ , ಯತ್ನಾಳ್ ಅವರು ಇತ್ತೀಚೆಗೆ ಭೇಟಿಯಾಗಿಲ್ಲ, ಕಾಲ ಬಂದಾಗ ಎಲ್ಲಾ ಸರಿ ಹೋಗುತ್ತೆ.ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ಹೇಳಿದರು. ಇನ್ನೂ 2-3 ದಿನ ಕಾಯುತ್ತೇನೆ ಡಿಸೆಂಬರ್ 6ಕ್ಕೆ ಅಲ್ಲ, 6ರ ನಂತರ ನಿರ್ಧಾರ ಹೇಳ್ತೇನೆ, ಇನ್ನೂ 2-3 ದಿನ ಹೈಕಮಾಂಡ್ ಪ್ರತಿಕ್ರಿಯೆಗೆ ಕಾಯುತ್ತೇನೆ ಎಂದು ಮಾಜಿ ಸಚಿವ ಸೋಮಣ್ಣ ಹೇಳಿದರು. 14-15 ವರ್ಷ ಮಂತ್ರಿ ಆಗಿದ್ದೆ…