Author: admin

ಸೈಬರ್ ವಂಚನೆ ಪ್ರಕರಣಗಳ ವಿರುದ್ಧ ಅರಿವು ಮೂಡಿಸುವುದರಿಂದ ಸೈಬರ್ ಅಪರಾಧ ಪ್ರಕರಣ ತಡೆಗಟ್ಟಲು ಸಾಧ್ಯವಿದೆ’ ಎಂದು ರಾಜ್ಯಪಾಲ ಥಾವರಚಂದ್  ಗೆಹಲೋತ್ ಸಲಹೆ ನೀಡಿದರು.  ಕೆಂಗೇರಿಯ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಎರಡು ದಿನ ನಡೆದ ಸೈಬರ್ ಭದ್ರತೆ ಕುರಿತ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಐಸಿಟಿ ಸಿಇಒ ಹರಿ ಬಾಲಚಂದ್ರನ್, ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಅಶ್ವಿನ್‌ ಗೌಡ ಇದ್ದರು.

Read More

ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಬಿ) ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ಸಂತೋಷ್ ಕೊಪ್ಪದ (25) ಅವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸಂತೋಷ್, ಎಸ್ಸೆಸ್ಸೆಲ್ಸಿವರೆಗೆ ಓದಿದ್ದ. ಎಸಿಬಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಡಿವೈಎಸ್ಪಿ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಆರೋಪಿ ವಿಶಾಲ್ ಪಾಟೀಲ ಜತೆ ಸೇರಿ ಕೃತ್ಯ ಎಸಗುತ್ತಿದ್ದ. ವಿಶಾಲ್ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Read More

ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ ಎಂಬುವವರೇ ರಾಜುನಾಯ್ಕ್ ಅವರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಮಾಯಗೊಂಡ ಗ್ರಾಮ ಪಂಚಾಯತ್ ಟೆಂಡರ್ ಕೊಡಿಸುತ್ತೇನೆ ಎಂದು ಹೇಳಿ 30 ಕೋಟಿ ರೂ. ವೆಚ್ಚದ ಟೆಂಡರ್ ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದರು ಎನ್ನಲಾಗಿದೆ. ಅಡ್ವಾನ್ಸ್ ಆಗಿ  10 ಲಕ್ಷ ರೂಪಾಯಿಯನ್ನ ಗನ್ ಮ್ಯಾನ್ ರಾಘವೇಂದ್ರಗೆ  ಹೆಚ್. ರಾಜುನಾಯ್ಕ್ ನೀಡಿದ್ದರು ಎನ್ನಲಾಗಿದೆ. ಆದರೆ ರಾಘವೇಂದ್ರ ಟೆಂಡರ್ ಕೊಡಿಸದೇ ಸತಾಯಿಸಿದ್ದು ಕೊಟ್ಟ 10 ಲಕ್ಷ ರೂ. ಹಣದಲ್ಲಿ 4 ಲಕ್ಷ ಮಾತ್ರ ವಾಪಸ್ ನೀಡಿದ್ದಾರಂತೆ. ಉಳಿದ 6 ಲಕ್ಷ ರೂ. ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ರಾಜುನಾಯ್ಕ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.

Read More

ಕಾಂಗ್ರೆಸ್​ ಸರ್ಕಾರದಿಂದ  ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು, ಇಂದು 10 ಜನ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪೃಥ್ವಿಕ್ ಶಂಕರ್ ಹಾಗೂ ಕನಿಕಾ ಸಿಕ್ರಿವಾಲ್ ಅವರನ್ನು ನೇಮಿಸಲಾಗಿದೆ. ಗುಪ್ತಚರ ಇಲಾಖೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ, ಕುಶಾಲ್ ಚೌಕ್ಸೆ. ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್ ನೇಮಕ ಮಾಡಲಾಗಿದೆ.  ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ರೋಹನ್ ಜಗದೀಶ್ ಅವರು ನೇಮಕಗೊಂಡಿದ್ದಾರೆ. ಬೆಂಗಳೂರು ಉಗ್ರರ ನಿಗ್ರಹ ದಳ ಎಸ್​ ಪಿಯಾಗಿ ಶಿವಾನ್ಷು ರಜಪೂತ್, ಉಡುಪಿ ಎಎನ್‌ ಎಫ್ ಎಸ್​ ಪಿ ಆಗಿ ಜಿತೇಂದ್ರ ಕುಮಾರ್ ದಯಾಮ, ಕೆಎಸ್​ ಆರ್ ​ಪಿ ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ ಎಂ.ಎನ್.ದೀಪನ್ ಹಾಗೂ ಬೆಂಗಳೂರು ವೈರ್ ​ಲೆಸ್ ವಿಭಾಗದ ಎಸ್​ಪಿಯಾಗಿ ಹೆಚ್.ಎನ್.ಮಿಥುನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

Read More

ಬೆಂಗಳೂರು: ಚಂದ್ರಯಾನ-3 ಯೋಜನೆಯೂ ಸಕ್ಸಸ್ ಆಗಿದ್ದು, ಭಾರತದ ಕೀರ್ತಿ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ಅತ್ತ ಚಂದ್ರನ ದಕ್ಷಿಣ ಧ್ರುವದಲ್ಲಿ ಓಡಾಟ ನಡೆಸಿರುವ ಪ್ರಜ್ಞಾನ್ ರೋವರ್ ದಿನಕ್ಕೊಂದು ಕೌತುಕ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿದೆ.  ಅದೇ ರೀತಿಯಾಗಿ ಇದೀಗ ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಮತ್ತೊಂದು ಅಪ್‌ ಡೇಟ್ ಬಂದಿದೆ. ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ರೋವರ್‌ ನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಎಂದು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪ್ರಜ್ಞಾನ್‌ ರೋವರ್‌ನ್ನು ಸ್ಲೀಪ್ ಮೋಡ್‌ ನಲ್ಲಿ ಇಡಲಾಗಿದೆ. APXS ಮತ್ತು LIBS ಪೇಲೋಡ್‌ ಗಳನ್ನು ಆಫ್ ಮಾಡಲಾಗಿದೆ. ಪೇಲೋಡ್‌ ಗಳಿಂದ ದತ್ತಾಂಶ ಲ್ಯಾಂಡರ್ ಮೂಲಕ ರವಾನೆ ಆಗುತ್ತೆ. ಪ್ರಸ್ತುತ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ.  ಸೆ.22ರಂದು ಮುಂದಿನ ಸೂರ್ಯೋದಯದಲ್ಲಿ ಬೆಳಕು ನಿರೀಕ್ಷಿಸಲಾಗಿದೆ. ಬೆಳಕು ಸ್ವೀಕರಿಸಲು ಸೌರಫಲಕದ ರಿಸೀವರ್‌ ನ್ನು ಆನ್‌ ನಲ್ಲಿ ಇರಿಸಲಾಗಿದೆ. ಮುಂದಿನ ಸೂರ್ಯೋದಯದಂದು ಕಾರ್ಯ ಮುಂದುವರಿಸುವ ವಿಶ್ವಾಸವಿದ್ದು, ಮತ್ತೊಂದು ಸುತ್ತಿನ ಅಸೈನ್‌ ಮೆಂಟ್‌ ಗೆ ರೋವರ್‌ ಸಿದ್ಧವಾಗುವ ಭರವಸೆ…

Read More

ವಿಶ್ವದ ಅತ್ಯಂತ ವಿಧ್ವಂಸಕ ಪರಮಾಣು ಕ್ಷಿಪಣಿ ಎಂದೇ ಖ್ಯಾತಿ ಪಡೆದಿರುವ ಆರ್ ಎಸ್-28 ಸರ್ಮತ್ (ಸೈತಾನ್-2) ಕ್ಷಿಪಣಿಗಳನ್ನು ರಷ್ಯಾ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಿರುವುದು ಭಾರೀ ಗೊಂದಲಕ್ಕೆ ಕಾರಣವಾಗುತ್ತಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಪ್ರಮುಖ ಸ್ಥಳಗಳಲ್ಲಿ ರಷ್ಯಾ ಖಂಡಾಂತರ ಪರಮಾಣು ಕ್ಷಿಪಣಿಗಳನ್ನು ನಿಯೋಜಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಖಂಡಾಂತರ ಬ್ಯಾಲಿಸ್ಟಿಕ್ ಶ್ರೇಣಿಯ ಸರ್ಮತ್ ಕ್ಷಿಪಣಿಯು 15 ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅದು ಸೃಷ್ಟಿಸುವ ವಿನಾಶ ಊಹೆಗೂ ನಿಲುಕದ್ದು ಎನ್ನಲಾಗಿದೆ.

Read More

ಹೈದರಾಬಾದ್ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ. ಲಾವೋಸ್‌ ನಿಂದ ಹೈದರಾಬಾದ್‌ ಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಯರ ಕೈಚೀಲದ ಕೆಳಭಾಗದಲ್ಲಿ ಕೊಕೇನ್ ಅನ್ನು ಬಚ್ಚಿಟ್ಟು ಡ್ರಗ್ಸ್ ಸಾಗಿಸುತ್ತಿದ್ದ. ಇದನ್ನು ಪರಿಶೀಲಿಸಿದ  ಡಿಆರ್ ಐ ಅಧಿಕಾರಿಗಳು,  ಐದು ಕೆ.ಜಿ.ಕೊಕೇನ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಕೊಕೇನ್ ನ ಮಾರುಕಟ್ಟೆ ಮೌಲ್ಯ ರೂ.50 ಕೋಟಿ ಎಂದು ಅಂದಾಜಿಸಲಾಗಿದೆ.

Read More

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ (ಸಿದ್ದರಬೆಟ್ಟ) ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮೇಕೆ ಆಹಾರ ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ತಂತಿಯು ನೆಲ ಭಾಗಕ್ಕೆ ಬಾಗಿದ್ದು ಮೇಕೆಗೆ ತಗಲಿ ಮೇಕೆ ಸಾವನಪ್ಪಿನ ಘಟನೆ ನಡೆದಿದೆ. ಶ್ರೀ ಕ್ಷೇತ್ರದ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನದ ಅವರಣದಲ್ಲಿ ಇರುವ ಐ ಮಸ್ಕ್ ಲೈಟ್ ಕಂಬದಿಂದ ಮೋಟರ್ ಪಂಪಿಗೆ ವೈರ್ ಅಳವಡಿಸಿಕೊಂಡಿದ್ದು, ಯಾವುದೇ ಮಂಜಾಗ್ರತೆ ವಹಿಸದ ಕಾರಣ ಈ ದುರ್ಘಟನೆ ಕಾರಣವಾಗಿದೆ. ಈ ಹಿಂದೆಯೂ ಸಹ ಇಂತಹ ಘಟನೆಗಳು ನಡೆದಿರುವುದಾಗಿ ಸ್ಥಳೀಯರು ಆರೋಪ ಮಾಡಿದ್ದಾರೆ. ಹಿಂದೆ ಹಲವು ಬಾರಿ ಅಲ್ಲಿನ ಜನುವಾರುಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಜಾನುವಾರುಗಳು ಪಾರಾಗಿರುವ ಘಟನೆ ಗೊತ್ತಿದ್ದರೂ ಸಹ ಯಾವುದೇ ಕ್ರಮ ವಹಿಸದೆ ಅಲ್ಲಿನ ಆದಾಯ ಕಷ್ಟ ಸೀಮಿತ ಎಂಬುವಂತೆ ವರ್ತಿಸುತ್ತಾರೆ ಎಂದು ಅಲ್ಲಿನ ಗ್ರಾಮಸ್ಥರು ಮಾತಗಿದೆ. ಶನಿವಾರ ಸಂಜೆ ನಡೆದ ಘಟನೆಯ ವಿಚಾರವಾಗಿ ದೇವಸ್ಥಾನದ ಅಧಿಕಾರಿಯದ ಸೌಭಾಗ್ಯಮ್ಮಗೆ…

Read More

ತುರುವೇಕೆರೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು  ಬೇಗ ಗುಣಮುಖರಾಗಲಿ ಎಂದು, ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ,  ತುರುವೇಕೆರೆ ಪಟ್ಟಣದ ಭೇಟರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಡಗಿಹಳ್ಳಿ ವಿಶ್ವನಾಥ್ , ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ದೊಡ್ಡೇಗೌಡ , ವಿಜಯೇಂದ್ರ , ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಸೊಪ್ಪನಹಳ್ಳಿ ಮಧು , ಬಿಎಸ್ ದೇವರಾಜು , ಎಸ್.ಆರ್.ರಂಗನಾಥ್, ವಿಠಲ ದೇವರಹಳ್ಳಿ ಹರೀಶ್, ಬಡಗರಹಳ್ಳಿ ತ್ಯಾಗರಾಜ್, ಹರಿದಾಸನಹಳ್ಳಿ ಹರೀಶ್, ಲಂಕೇಶ , ಶಶಿ  ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮಾಜಿ ಮುಖ್ಯಮಂತ್ರಿಗಳ ಅಭಿಮಾನಿಗಳು ಇದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ

Read More

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಇಂದು ಬೆಳಗಿನ ಜಾವ ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ. ಟಾಟಾ ಏಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳು ಕಲ್ಬುರ್ಗಿ ಜಿಲ್ಲೆ ಅರಳಗುಡಿ ಗ್ರಾಮದ ಭೀಮಾಬಾಯಿ (70), ಮಹಾಂತಪ್ಪ (50) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ಇವರ ಕುಟುಂಬ ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ಮನೆಯ ಸಾಮಾನು ಸಾಗಿಸುವ ವೇಳೆ ಅಪಘಾತ ಸಂಭವಿಸಿದೆ. ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಈ ವೇಳೆ ಮುಂದೆ ಹೋಗುತ್ತಿದ್ದ ಕ್ಯಾಂಟರ್ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಟಾಟಾ ಏಸ್ಗೆ ಖಾಸಗಿ ಬಸ್ ಬಂದು ಡಿಕ್ಕಿಯಾಗಿದೆ.  ಏಸ್ನಲ್ಲಿದ್ದವರು ಕ್ಯಾಂಟರ್ ಹಾಗೂ ಬಸ್ ನಡುವೆ…

Read More