Subscribe to Updates
Get the latest creative news from FooBar about art, design and business.
- ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
- ಸಾರ್ವಜನಿಕರಿಗೆ ತಲೆನೋವಾಗಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಜನ
- ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ
- ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ
- ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ
- ಸಹಾಯಧನ ಸೌಲಭ್ಯಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನ
- ಕೊಳೆಗೇರಿಗಳು ನವನಗರ ಆಗಬೇಕು: ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಎಂ. ಶೇಟ್
- ನವೆಂಬರ್ 30ರಂದು ಕನ್ನಡ ರಾಜ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಅಪಘಾತ ವಿಮಾ ಸೌಲಭ್ಯ
Author: admin
ಮಧುಗಿರಿ: ಪ್ರತಿಫಲಾಕ್ಷೆ ಇಲ್ಲದೆ ಸಮಾಜಕ್ಕೆ ಕೊಡುಗೆ ನೀಡುವ ದಾನಿಗಳು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಕಾಯ ಅಳಿದರೂ ಕೀರ್ತಿ ಉಳಿದಿದೆ ಎನ್ನುವಂತೆ, ಕೊಟ್ಟ ಕೊಡುಗೆಗಳೆಲ್ಲಾ ಸಾರ್ಥಕತೆ ಕಾಣುತ್ತವೆ’ ಎಂದು ಮಧುಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎನ್. ಹನುಮಂತರಾಯಪ್ಪ ತಿಳಿಸಿದರು. ಪಟ್ಟಣದ ಕರಡಿಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದನೇ ತರಗತಿಯ ನಲಿ-ಕಲಿ ಮಕ್ಕಳಿಗೆ ಶಾಲೆ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ, ಸರಕಾರಿ ಶಾಲೆಗಳು ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸುವುದರ ಜೊತೆಗೆ ಮಕ್ಕಳನ್ನು ಆಕರ್ಷಿಸಲು ಸುಂದರ ವಾತಾವರಣ ಅಗತ್ಯ. ಅದಕ್ಕೆ ಸರಕಾರಿ ಅನುದಾನಕ್ಕೆ ಕಾಯದೆ ದಾನಿಗಳ ಮನವೊಲಿಸಿ ಅಭಿವೃದ್ಧಿಪಡಿಸಲು ಮುಂದಾದ ನಮ್ಮ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕಿ ಶೋಭಾರವರು ದಾನಿಗಳ ಸಹಾಯದಿಂದ ಕರಡಿಪುರ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನಲಿಕಲಿ ಮಕ್ಕಳು ಹಾಸನದ ಮೇಲೆ ಕೂತು ಬೋಧನೆ ಮಾಡಲು ಹಾಸನದ ವ್ಯವಸ್ಥೆಯನ್ನು ಮಾಡಿದ್ದಾರೆ. ಇವರ ಈ ಕಾರ್ಯ ಮೊದಲನೆಯದಲ್ಲ ಶೋಭಾ ರವರು ಸರಕಾರಿ ಶಾಲೆಗಳ ಕೊರತೆಗಳನ್ನು ನೀಗಿಸುವುದಕ್ಕಾಗಿ…
ತುಮಕೂರು: ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಿದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರ ಸ್ಥಿತಿ ಗಂಭೀರವಾಗಿರೋ ಘಟನೆ ತುಮಕೂರು ನಗರದ ಕ್ಯಾತ್ಸಂದ್ರ ವೃತ್ತದ ಬಳಿ ನಡೆದಿದೆ. ಡಿಕ್ಕಿ ಹೊಡೆಯುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತುಮಕೂರಿನ ಕ್ಯಾತಸಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದ್ದು ಕ್ಯಾತಸಂದ್ರ ಸರ್ಕಲ್ ಬಳಿ ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ಸವಾರರು, ಒಂದೇ ಬೈಕ್ ನಲ್ಲಿ ಮೂವರು ಬರ್ತಿದ್ರು. ಈ ವೇಳೆ ಏಕಾಏಕಿಯಾಗಿ ಕಾರು, ಬೈಕ್ ಗೆ ಡಿಕ್ಕಿ ಹೊಡೆದಿದ್ದಿಂದ ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಿಂದ ಮೂವರು ಬೈಕ್ ನಿಂಡ ಹಾರಿ ಬಿದ್ದಿದ್ದಾರೆ. ಕ್ಯಾತಸಂದ್ರದ ಸಂತೋಷ್, ನಾಗೇಶ್, ವಿಜಯ್ ಕುಮಾರ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಎಸಗಿದ ಕಾರು ಚಾಲಕ ಹಾಗೂ ಕಾರನ್ನ ವಶಕ್ಕೆ…
ತಿಪಟೂರು: ರಾಜ್ಯ ಸರ್ಕಾರ ಪ್ರಾರಂಭಿಸಿರುವ ಗೃಹಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು 5 ವರ್ಷಗಳ ಕಾಲ ನೀಡಲಿದ್ದು ಯಾವುದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲುವುದಿಲ್ಲ ಎಂದು ಶಾಸಕ ಷಡಕ್ಷರಿ ಅವರು ತಿಳಿಸಿದರು. ತಾಲೂಕು ಆಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ತಿಪಟೂರು ಕಲ್ಪತರು ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದ ಗೃಹಲಕ್ಷ್ಮಿ ಯೋಜನೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಕೆ.ಷಡಕ್ಷರಿ ಯವರು ಕೆಲವರು ಯುವ ಜನಗಳು ಲೋಕಸಭಾ ಚುನಾವಣೆ ಆದಮೇಲೆ ನಿಲ್ಲುತ್ತವೆ ಎಂದು ಪ್ರತಿಪಕ್ಷದವರು ಮಾತನಾಡುತ್ತಿದ್ದಾರೆ. ಇವರ ಮಾತಿಗೆ ಯಾರು ಕಿವಿ ಕೊಡಬೇಡಿ, ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ನೀಡಿದ ಪ್ರಣಾಳಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇವೆ. ನೀಡಿದ ಆಶ್ವಾಸನೆಗಳನ್ನು ಕಾರ್ಯಕ್ರಮ ರೂಪದಲ್ಲಿ ಸರ್ಕಾರ ಪ್ರಾರಂಭಿಸಿದೆ. ಈ ತಾಲೂಕಿನಲ್ಲಿ ಯೋಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ 49,000 ಕುಟುಂಬಗಳ ಯಜಮಾನರಿಗೆ ಖಾತೆಗೆ 2,000 ಇಂದು ವರ್ಗಾವಣೆ ಆಗಲಿದೆ. ಇದಕ್ಕೇನು ಕೊನೆಯ ದಿನಾಂಕವಿಲ್ಲ, ನೋಂದಣಿ ಮಾಡಿದ ಎಲ್ಲಾ ಪಲಾನುಭವಿಗಳಿಗೂ ಈ ಯೋಜನೆ ದೊರಕಲಿದೆ. ಈ…
ತುಮಕೂರಲ್ಲಿ ಅನುಮಾನಸ್ಪಾದವಾಗಿ ಮೃತಪಟ್ಟಿದ್ದು, ಪತ್ನಿ ಅಂತ್ಯಸಂಸ್ಕಾರಕ್ಕೆ ಪತಿ ಬಾರದ ಹಿನ್ನೆಲೆ ಮನೆ ಎದುರೇ ಶವ ಇಟ್ಟು ಗ್ರಾಮಸ್ಥರು ಹೊರಟು ಹೊಗಿರೋ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ. ಗೃಹಿಣಿಯೊಬ್ಬಳು ಅನುಮಾನಸ್ಪಾದವಾಗಿ ಮೃತಪಟ್ಟಿದ್ದಾಳೆ. ಇತ್ತ ಪತ್ನಿ ಮೃತಪಟ್ಟಿದ್ದರೂ ಪತಿರಾಯ ಅಂತ್ಯಸಂಸ್ಕಾರಕ್ಕೆ ಬಾರದ ಹಿನ್ನೆಲೆ ಗ್ರಾಮಸ್ಥರು ಮನೆಯ ಎದುರೇ ಶವ ಇಟ್ಟು, ಮನೆ ಕಡೆ ನಡೆದಿದ್ದಾರೆ. ಕಲಾವತಿ (26) ಮೃತ ದುರ್ದೈವಿಯಾಗಿದ್ದಾರೆ. ಸೋಮಶೇಖರ್ ಎಂಬಾತನೊಂದಿಗೆ ಕಲಾವತಿ ಮದುವೆ ಆಗಿದ್ದರು. ಆದರೆ ಇವರಿಬ್ಬರ ನಡುವೆ ಅನ್ಯೋನ್ಯತೆ ಅಷ್ಟಕಷ್ಟೇ ಇತ್ತು. ಇತ್ತೀಚೆಗೆ ಪತಿ ಸೋಮಶೇಖರ್ ಪರಸ್ತ್ರೀ ಸಹವಾಸ ಮಾಡಿದ್ದ. ಇದನ್ನೂ ಪ್ರಶ್ನಿಸಿದ್ದಕ್ಕೆ ಮನೆಯ ಪಕ್ಕದ ಶೆಡ್ ನಲ್ಲಿ ಮತ್ತೊಬ್ಬಳನ್ನು ತಂದಿಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪದೇ ಪದೇ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ವಿಚಾರಕ್ಕೆ ಮತ್ತೆ ಗಲಾಟೆ ನಡೆದು ಪತಿ ಸೋಮಶೇಖರ್ ಕಲಾವತಿಯನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಪತಿಯೇ ಪತ್ನಿ…
ಕಾಂಗ್ರೆಸ್ ವಾಗ್ದಾನ ಮಾಡಿದನ್ನು ಪೂರೈಸಿದೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಅದನ್ನೇ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಈಗಾಗಲೇ 4 ಗ್ಯಾರಂಟಿ ಘೋಷಣೆಯಾಗಿದೆ. ಒಂದು ಮಾತ್ರ ಬಾಕಿ ಇದೆ. ಯಾವ ಸರ್ಕಾರವೂ ಈ ರೀತಿಯ ಯೋಜನೆಗಳನ್ನು ಮಾಡಿಲ್ಲ. ಇಡೀ ಭಾರತದಲ್ಲಿ ಒಪ್ಪುವಂತಹ ಗ್ಯಾರಂಟಿಗಳಿವು. ಚುನಾವಣೆ ಮುಂಚೆ ನಾವು ಗ್ಯಾರಂಟಿ ಘೋಷಣೆ ಮಾಡಿದಾಗ, ಕೇಂದ್ರ ನಾಯಕರು ಟೀಕೆ ಮಾಡಿದರು. ಇದರಿಂದ ಆರ್ಥಿಕತೆ ಕುಸಿಯುತ್ತೆ. ಬೋಗಸ್ ಎಂದಿದ್ದರು. ಆದ್ರೆ ನಾವು ಇದನ್ನು ಮಾಡಿ ತೊರಿಸಿದ್ದೇವೆ ಎಂದರು. ಕೇಂದ್ರ ನಾಯಕರು ಹೇಳುತ್ತಾರೆ 50 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು. ಆದ್ರೆ ನಾವು ವಿಮಾನ ನಿಲ್ದಾಣ, ಅನೇಕ ಸಂಸ್ಥೆಗಳನ್ನು ಮಾಡಿದ್ದೇವೆ. ನಾವು ಮಾಡಿದ ಕೆಲಸಗಳಲ್ಲಿ ಹುಡುಕಾಡಿ ಸುಟ್ಟ ಬಣ್ಣ ಬಳಿದು ತಮ್ಮದೆನ್ನುತ್ತಾರೆ. ನಮ್ಮ ಬಳಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬ ರಿಪೋರ್ಟ್ ಕಾರ್ಡ್ ಇದೆ. ನೆಹರು, ಇಂದಿರಾ ಗಾಂದಿ, ಸೋನಿಯಾ ಗಾಂದಿ…
ಕರ್ನಾಟಕ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ನಮ್ಮ ಗ್ಯಾರಂಟಿ ಘೋಷಣೆ ವೇಳೆ ಕೇಂದ್ರ ಸರ್ಕಾರ ಟೀಕೆ ಮಾಡಿತ್ತು. ಆದ್ರೆ ನಾವಿಂದು ನುಡಿದಂತೆ ನಡೆದಿದ್ದೇವೆ. ಕರ್ನಾಟಕರ ನಮ್ಮ ತಾಯಂದಿರು, ಅಕ್ಕ-ತಂಗಿಯರು ಉಚಿತವಾಗಿ ಕರ್ನಾಟಕ ಸುತ್ತಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡಲಾಗಿದೆ, ಇಂದು ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಯಲ್ಲಿ ಎರಡು ಸಾವಿರ ಹಣ ಇದೆ. ಭಾರತ ದೇಶದ ಅತಿ ದೊಡ್ಡ ಹಣ ವರ್ಗಾವಣೆಯನ್ನು ನಮ್ಮ ಸರ್ಕಾರ ಮಾಡಿದೆ. 2 ಸಾವಿರ ಖಾತೆಗೆ ಹಣ ಹಾಗುವ ಯೋಜನೆ ಚಿಕ್ಕ ಯೋಜನೆ ಅಲ್ಲ. ಇದರಿಂದ ಮಹಿಳೆಯರು ಹಣ ಸೇವ್ ಮಾಡಬಹುದು, ಮಕ್ಕಳಿಗೆ ಪುಸ್ತಕ ಕೊಡಿಸಬಹುದು. ಇದರ ಸಂಪೂರ್ಣ ಉಪಯೋಗ ಮಹಿಳೆಯರ ಮೇಲಿದೆ. ನಾನಿವತ್ತು ತುಂಬಾ ಖುಷಿಯಾಗಿದ್ದೇನೆ. ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದೆ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನನಗಿವತ್ತು ನನ್ನ ತಂಗಿ ರಾಕಿ ಕಟ್ಟಿದ್ದಾಳೆ. ಈ ಶುಭ ದಿನದಂದು ನಾವು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದೇವೆ. ಮನೆಯ ಯಜಮಾನಿ ಮಹಿಳೆಯರ ಖಾತೆಗೆ 2 ಸಾವಿರ ಹಣ ಜಮೆ…
ಕಳೆದ ಒಂದು ವಾರದಿಂದ ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತಿರುವ ರೋವರ್ ಪ್ರಗ್ಯಾನ್ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ ಲ್ಯಾಂಡರ್ ನ ಚಿತ್ರವನ್ನು ಕ್ಲಿಕ್ ಮಾಡಿದೆ. ಇಸ್ರೋ ಸ್ವಲ್ಪ ಸಮಯದ ಹಿಂದೆ ಟ್ವೀಟ್ ಮಾಡುವ ಮೂಲಕ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ.ಇಸ್ರೋ ಟ್ವೀಟ್ ಮಾಡಿ, ರೋವರ್ ಪ್ರಗ್ಯಾನ್ ಇಂದು ಬೆಳಗ್ಗೆ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಕ್ಲಿಕ್ಕಿಸಿದೆ. ಪ್ರಗ್ಯಾನ್‌ನಲ್ಲಿ ಅಳವಡಿಸಲಾಗಿರುವ ರೋವರ್ ಕ್ಯಾಮೆರಾದಿಂದ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ. ದಕ್ಷಿಣ ಧ್ರುವದಲ್ಲಿರುವ ಚಂದ್ರನ ಮೇಲ್ಮೈಯಲ್ಲಿ ರೋವರ್ ಆಮ್ಲಜನಕವನ್ನು ಕಂಡುಹಿಡಿದಿದೆ ಮತ್ತು ಹೈಡ್ರೋಜನ್ ಅನ್ನು ಹುಡುಕುತ್ತಿದೆ ಎಂದು ಇಸ್ರೋ ಈ ಹಿಂದೆ ಹೇಳಿಕೊಂಡಿತ್ತು. ಹೈಡ್ರೋಜನ್ ಪತ್ತೆಯಾದ ತಕ್ಷಣ, ಚಂದ್ರನ ಮೇಲೆ ನೀರಿನ ಉಪಸ್ಥಿತಿಯು ತಿಳಿಯುತ್ತದೆ, ಇದು ಸಾಧ್ಯವಾದರೆ ಈ ದಿಕ್ಕಿನಲ್ಲಿ ಇದು ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಆಮ್ಲಜನಕದ ಹೊರತಾಗಿ ಏನನ್ನು ಹುಡುಕುತ್ತಿದೆ ವೈಜ್ಞಾನಿಕ ಪ್ರಯೋಗಗಳು ಮುಂದುವರಿದಿದ್ದು, ರೋವರ್ ನಲ್ಲಿ ಅಳವಡಿಸಲಾಗಿರುವ ಲೇಸರ್ ಆಪರೇಟೆಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್‌ಬಿಎಸ್) ಚಂದ್ರನ ದಕ್ಷಿಣ ಧ್ರುವದ ಬಳಿ ಮೇಲ್ಮೈಯಲ್ಲಿ…
ಚುನಾವಣೆ ವೇಳೆ ಜನರಿಗೆ ನೀಡಿದ ಮಾತನ್ನು ಪಾಲಿಸುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಿ, ಜನರ ಮನಸ್ಸಿನಲ್ಲಿ ಸುಳ್ಳಿನ ಗೋಪುರ ಕಟ್ಟಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನವಿರೋಧಿ ಆಡಳಿತದಲ್ಲಿ ತೊಡಗಿದೆ ಎಂದು ದೂರಿದರು. ಕಬ್ಬಿಣ, ಸಿಮೆಂಟ್, ಇಂಧನ ಸೇರಿ ಅಗತ್ಯ ವಸ್ತುಗಳು ಬಿಜೆಪಿ ಆಡಳಿತದಲ್ಲಿ ಗಗನಕ್ಕೆ ಏರಿವೆ. ನಿರುದ್ಯೋಗ ಹೆಚ್ಚಾಗಿದೆ. ನಮಗೆ ಅಧಿಕಾರ ಕೊಟ್ಟರೆ ಎಲ್ಲ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ, ಪ್ರತಿ ವ್ಯಕ್ತಿ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೆವೆ. ಪೆಟ್ರೋಲ್, ಡಿಸೇಲ್ ಜನ ಸಾಮಾನ್ಯರ ಕೈಗೆಟುಕುವ ರೀತಿ ಬೆಲೆ ಇಳಿಸುತ್ತೇವೆ ಎಂದು ಅವರು ಹೇಳಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಎಂಟು ವರ್ಷದಲ್ಲಿ ತಾನು ಹೇಳಿದ್ದ ಭರವಸೆಗಳಲ್ಲಿ ಒಂದನ್ನು…
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಬುಧವಾರ ಶಂಕಿತ ವಿಷಾನಿಲವನ್ನು ಉಸಿರಾಡಿ ಮೂವರು ಸಹೋದರರು ಸೇರಿದಂತೆ ಐವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ರಾಮಾವತಾರ್ ಗುರ್ಜರ್ (35), ರಾಮನರೇಶ್ ಗುರ್ಜರ್ (40) ಮತ್ತು ವೀರಸಿಂಗ್ ಗುರ್ಜರ್ (30) ಮತ್ತು ಗಣೇಶ್ ಗುರ್ಜರ್ (40) ಮತ್ತು ಗಿರ್ರಾಜ್ ಗುರ್ಜರ್ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಜಿಲ್ಲೆಯ ಧನೇಲಾ ಪ್ರದೇಶದಲ್ಲಿರುವ ಸಾಕ್ಷಿ ಆಹಾರ ಉತ್ಪನ್ನಗಳ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಖಾನೆಯೊಳಗಿನ ಟ್ಯಾಂಕ್ ನಿಂದ ಅನಿಲ ಸೋರಿಕೆಯಾಗಿದೆ. ಅದನ್ನು ಸರಿಪಡಿಸಲು ತೆರಳಿದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಶಾನಿಲ ಉಸಿರಾಡಿ ಅಸ್ವಸ್ಥಗೊಂಡಿದ್ದ ಕಾರ್ಮಿಕರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ನಗರದ ಸಿಟಿ ಬಸ್ ನ ಕಂಡಕ್ಟರ್ ಬಸ್ಸಿನ ಎದುರು ಬಾಗಿಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸಿಟಿ ಬಸ್ ಪದುವದಿಂದ ಶಿವಭಾಗ್ ಕಡೆ ಹೋಗುವ ವೇಳೆ ನಂತೂರು ವೃತ್ತ ಬಳಿ ಈ ಘಟನೆ ನಡೆದಿದೆ. ಬಸ್ಸಿನ ಎದುರು ಬಾಗಿಲ ಬಳಿ ನಿಂತಿದ್ದ ಈರಯ್ಯ( 23) ಎಂಬುವವರು ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಹೀರಯ್ಯ ಅವರನ್ನು ಸಂಚಾರ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.