Author: admin

ಬೆಂಗಳೂರು: ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿ ಜಗತ್ತಿಗೆ ಸಾಧ್ಯವಾಗದ ಸಾಧನೆಯನ್ನು ಇದೀಗ ಇಸ್ರೋ ಮಾಡಿ ತೋರಿಸಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಇಸ್ರೋ ಕೇಂದ್ರ ಕಚೇರಿಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ನರೇಂದ್ರ ಮೋದಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸದಲ್ಲಿದ್ದಾರೆ. ಸಭೆಯ ನಡುವೆಯೂ ಮೋದಿ ಚಂದ್ರಯಾನ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಿದ್ದರು. ಯಶಸ್ವಿ ಲ್ಯಾಂಡಿಂಗ್ ಬಳಿಕ ವಿಜ್ಞಾನಿಗಳನ್ನು ಅಭಿನಂದಿಸಿದ್ದರು. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ಇಸ್ರೋ ಅಧ್ಯಕ್ಷ ಸೋಮನಾಥ್ ಜೊತೆ ಮೋದಿ ದೂರವಾಣಿ ಮೂಲಕ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದರು. ಆದರೂ ಮೋದಿ ಇದೀಗ ಬೆಂಗಳೂರಿಗೆ ಬರಲಿದ್ದು, ಇಸ್ರೋ ಕಚೇರಿಗೆ ತೆರಳಿ ಅಭಿನಂದನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಅತ್ಯುನ್ನತ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಗೌರವ ನೀಡಲಿದ್ದಾರೆ. ಬುಧವಾರ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ…

Read More

ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇತ್ತೀಚೆಗೆ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತಿದ್ದು ಇದನ್ನು ತಡೆಯಲು ನಮ್ಮ ಜೊತೆ ಸಹಕರಿಸಿ ಎಂದು ವೃತ್ತ ನಿರೀಕ್ಷಕ ಶಬೀರ್ ಹುಸೇನ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಟ್ಟಣದ ಪ್ರಮುಖ ವಾರ್ಡ್ ಗಳಿಗೆ ಅಪರಾಧ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿ ನಿರ್ವಹಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಲು ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಆಟೋ ಮೂಲಕ ಮಾಹಿತಿ ನೀಡಲು ಚಾಲನೆ ನೀಡಿದರು. ಶಬೀರ್ ಹುಸೇನ್ ರವರು ಸಾರ್ವಜನಿಕರಿಗೆ ಕರಪತ್ರವನ್ನು ನೀಡಿ ಅಪರಾಧಗಳು ನಡೆಯದಂತೆ ಕಾಪಾಡಲು ನಮ್ಮ ಇಲಾಖೆಯ ಜೊತೆ ನಿಮ್ಮ ಸಹಕಾರ ಅತೀ ಮುಖ್ಯ ಎಂದು ಹೇಳಿದರು. ನಿಮ್ಮ ವಾರ್ಡ್ ಗಳಲ್ಲಿ ಮತ್ತು ನಿಮ್ಮ ಗ್ರಾಮದಲ್ಲಿ ಯಾರಾದರು ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ನಮ್ಮ ಇಲಾಖೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಶಬೀರ್ ಹುಸೇನ್, ಉಪನಿರೀಕಗಷಕರಾದ ಸುರೇಶ್, ಪ್ರಕಾಶ್, ರಾಮು, ಪೇದೆಗಳಾದ ಯೊಗೇಶ್, ಸುಭಾನ್, ಮೋಹನ್, ಕಬೀರ್, ಶಕೀಲವತಿ, ಭೂಮಿಕ ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.…

Read More

ತುಮಕೂರು: ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಟ್ರಾಮಾ ಕೇರ್ ಸೆಂಟರ್ ಗೆ ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗೆ ನೇರ ನೇಮಕಾತಿ ಪ್ರಕ್ರಿಯೆ . ದಿಢೀರ್ ಸ್ಥಗಿತಗೊಂಡು ಮುಂದೂಡಿಕೆ ಮಾಡಿರುವುದರಿಂದ ಆಕಾಂಕ್ಷಿಗಳು ಬೇಸರಗೊಂಡು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 68 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಜಿಲ್ಲಾಡಳಿತದ ವತಿಯಿಂದ ಆಹ್ವಾನ ನೀಡಲಾಗಿತ್ತು. ಆದರೆ ನಿನ್ನೆ ಸಂಜೆ ನೇರ ಸಂದರ್ಶನ ಮುಂದೂಡಿ ಸೂಚನಾ ಪತ್ರ ಜಿಲ್ಲಾಸ್ಪತ್ರೆ ಅಧಿಕಾರಿಗಳು ಹೊರಡಿಸಿದ್ದರು. ಸೂಚನಾ ಪತ್ರ ತಲುಪುವ ಮೊದಲೇ ನೇರ ಸಂದರ್ಶನಕ್ಕೆ ಹಾಜರಿದ್ದ ಅಭ್ಯರ್ಥಿಗಳು, ನಮಗೆ ರದ್ದಾಗಿರುವ ವಿಚಾರ ಗೊತ್ತಿಲ್ಲ ಸಂದರ್ಶನ ಮಾಡಿ ಎಂದು ಪಟ್ಟು ಇಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಉಳಿದವರಿಗೆ ಅನ್ಯಾಯವಾಗಲಿದೆ ನಾವು ಸೂಚನಾ ಪತ್ರ ಹೊರಡಿಸಿದ್ದೇವೆ ಎಂದ ಇಲಾಖಾ ಸಿಬ್ಬಂದಿ ಸ್ಪಷ್ಟನೆ ಕೊಡುತ್ತಿದ್ದಾರೆ. ಕಳೆದ ಅರ್ಧ ಗಂಟೆಯಿಂದ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

Read More

ಮಧುಗಿರಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಅಹವಾಲುಗಳನ್ನು ಇತ್ಯರ್ಥ ಪಡಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಐ.ಡಿ. ಹಳ್ಳಿ ಹೋಬಳಿಯಲ್ಲಿ ಮೊದಲ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಮಧುಗಿರಿ ತಾಲ್ಲೂಕು.ಐಡಿ.ಹಳ್ಳಿ ಹೋಬಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆ ಗಳಿಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಎಲ್ಲಾ ಇಲಾಖೆಗಳಿಗೆ ಸಾರ್ವಜನಿಕರು ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಿವೇಶನ ಇರುವರಿಗೆ ಗೃಹ ನಿರ್ಮಾಣ ಸೌಲಭ್ಯ ಹಾಗೂ ನಿವೇಶನ ಇಲ್ಲದವರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು, ಆಗಸ್ಟ್ 30ರಂದು ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ, ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸೌಲಭ್ಯಗಳನ್ನು ತಲುಪುಸುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿ ಪಂಚಾಯತ್ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುತ್ತದೆ…

Read More

ಕೊರಟಗೆರೆ: ಶಿರಾದ ಗುತ್ತಿಗೆದಾರ ಮತ್ತು ತೋವಿನಕೆರೆಯ ರೈತನಿಂದ ಹನುಮೇನಹಳ್ಳಿಯ ಎಲೆಕ್ಟ್ರಿಕಲ್ ಗುತ್ತಿಗೆದಾರನ ಮೂಲಕ 3 ಲಕ್ಷಕ್ಕೆ ಬೇಡಿಕೆಯಿಟ್ಟು 50 ಸಾವಿರ ಲಂಚ ಪಡೆಯುವಾಗ ಕೊರಟಗೆರೆ ಬೆಸ್ಕಾಂ ಎಇಇ ತುಮಕೂರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಕೊರಟಗೆರೆ ಪಟ್ಟಣದ ಬೆಸ್ಕಾಂ ಇಲಾಖೆಯ ಮೇಲೆ ತುಮಕೂರು ಲೋಕಾಯುಕ್ತ ಇಲಾಖೆಯ ಎಸ್ಪಿ ವಲೀಬಾಷ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಎಇಇ ಬಿ.ಜಿ.ಅರಸರಾಜು ಮತ್ತು ಕೊರಟಗೆರೆ ತಾಲೂಕು ಹನುಮೇಹಳ್ಳಿ ಗ್ರಾಮದ ಎಲೆಕ್ಟ್ರಿಕಲ್ ಗುತ್ತಿಗೆದಾರ ಅಂಬರೀಶ ಎಂಬಾತನ ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮದ ಸತ್ಯನಾರಾಯಣಚಾರ್ ಎಂಬಾತನ ಜಮೀನಿಗೆ ವಿದ್ಯುತ್ ಸಂಪರ್ಕ ಮತ್ತು ಟ್ರಾನ್ಸ್’ಫಾರಂ ಅಳವಡಿಕೆಗೆ ಶಿರಾ ಮೂಲದ ಗುತ್ತಿಗೆದಾರ ಹರೀಶ್ ಎಂಬಾತನಿಗೆ 3 ಲಕ್ಷ ಬೇಡಿಕೆ ಇಟ್ಟು 50 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಗುತ್ತಿಗೆದಾರ ಅಲೆದಾಟ: ಕುರಂಕೋಟೆಯ ರೈತ ಸತ್ಯನಾರಾಯಣಚಾರ್ ಮತ್ತು ಶಿರಾ…

Read More

ತುಮಕೂರು: ಪುಂಡರ ಗುಂಪೊಂದು ಗ್ರಾಮಕ್ಕೆ ನುಗ್ಗಿ ಹಲ್ಲೆ ನಡೆಸಲು ರಾತ್ರೋರಾತ್ರಿ ಬಂದಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಹೊಸ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮಾಡಲು ಮಾರಕಾಸ್ತ್ರಗಳ ಸಹಿತ ಬಂದ ಪುಂಡರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಸಪಾಳ್ಯ ಯುವಕರಿಗೆ ಥಳಿಸಲು ಸ್ಕೆಚ್ ಹಾಕಿದ್ದ ಪುಂಡರ ಗುಂಪು. ತುಮಕೂರು ಮೂಲದವ ರೆಂದು ಅಂದಾಜಿಸಲಾಗಿದೆ. ಮಾರಕಾಸ್ತ್ರಗಳ ಸಹಿತ ಲಾಂಗು, ಮಚ್ಚು ಹಿಡಿದು ಹಲ್ಲೆ ನಡೆಸಲು ಹೊಂಚು ಹಾಕ್ತಿದ್ರು. ಇದನ್ನ ಗಮನಿಸಿ ಪುಂಡರನ್ನ ಮಾರಕಾಸ್ತ್ರಗಳ ಸಹಿತ ರೇಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ. ಹಲ್ಲೆ ಮಾಡಲು ಯತ್ನಿಸಿದ 6 ಜನ ಪುಂಡರನ್ನ ವಶಕ್ಕೆ ಪಡೆದ ಚಿಕ್ಕನಾಯಕನಹಳ್ಳಿ ಪೊಲೀಸರು, ಪುಂಡರ ಬಳಿಯಿದ್ದ ಮಚ್ಚು, ಲಾಂಗು, ಸೇರಿದಂತೆ ಹಲವು ಮಾರಕಾಸ್ತ್ರಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹುಡುಗಿ ವಿಚಾರಕ್ಕೆ ಹೊಸಪಾಳ್ಯ ಯುವಕರಿಗೆ ಹಲ್ಲೆ ನಡೆಸಲು ಬಂದಿದ್ದರು. ಘಟನೆ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ…

Read More

16 ವರ್ಷದ ಬಾಲಕಿಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಹೈದರಾಬಾದ್‌ ನಲ್ಲಿ (Hyderabad) ನಡೆದಿದೆ. ಹೈದರಾಬಾದ್‌ ನ ನಂದನವನಂ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಾಚಕೊಂಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. POCSO ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಅಬೇದ್ ಬಿನ್ ಖಲೀದ್, ತಹಸೀನ್, ಮಂಕಾಳ ಮಹೇಶ್, ಎಂ ನರಸಿಂಗ್, ಅಶ್ರಫ್, ಫೈಝಲ್ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ.

Read More

ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ. ಒಂದು ಚಂದ್ರನ ದಿನಕ್ಕೆ ಅಂದರೆ 14 ದಿನಗಳ ರೋವರ್ ಕಾರ್ಯಾಚರಣೆಗಳ ತಿಳಿಯುವ ಪ್ಲಾನ್ ವಿಜ್ಞಾನಿಗಳು ಮಾಡಿದ್ದಾರೆ. ವಿಕ್ರಮ್ ಲ್ಯಾಂಡರ್‌ ನಲ್ಲಿ ಡೇಟಾವನ್ನು ಒದಗಿಸುವ ಐದು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿದ್ದು, ಲ್ಯಾಂಡಿಂಗ್ ನಂತರ ಪ್ರಗ್ಯಾನ್ ರೋವರ್‌ ಗಾಗಿ ರಾಂಪ್ ಅನ್ನು ರಚಿಸುತ್ತದೆ. ಆರು ಚಕ್ರಗಳ ಪ್ರಗ್ಯಾನ್ ರೋವರ್‌ ನಲ್ಲಿ ಎರಡು ಚಕ್ರಗಳಲ್ಲಿ ಒಂದರಲ್ಲಿ ಅಶೋಕ ಚಕ್ರದ ಚಿಹ್ನೆಯಿದ್ದು, ಮತ್ತೊಂದರಲ್ಲಿ ಇಸ್ರೋ ಲಾಂಛನವಿದ್ದು, ಇವುಗಳು ಚಂದ್ರನ ಮೇಲ್ಮೈ ಮೇಲೆ ಭಾರತದ ಮುದ್ರೆಯನ್ನು ಅಚ್ಚು ಒತ್ತುತ್ತವೆ. ಈ ಮುದ್ರೆ ಸಾವಿರಾರು ವರ್ಷಗಳ ಕಾಲ ಹಾಗೆ ಇರಲಿದೆ. ಈ ರೋವರ್ ಚಂದ್ರನ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ರೋವರ್‌ ನ ವೈಜ್ಞಾನಿಕ ಪೇಲೋಡ್‍ ಗಳು ಚಂದ್ರನ ಅಂಶಗಳು, ವಾತಾವರಣ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡುತ್ತದೆ. ಇದು ಚಂದ್ರಯಾನದ ವಸ್ತು, ಸ್ಯಾಂಪಲ್ ಗಳನ್ನು ನೀಡಲಿದೆ. ಚಂದ್ರನ ಮೇಲಿನ ಕಂಪನಗಳು,ಚಂದ್ರನ ಒಳರಚನೆ ಬಗ್ಗೆ…

Read More

ಬಿರು ಬೇಸಿಗೆಯಲ್ಲಿ ನಡುರಸ್ತೆಯಿಂದಲೇ ಟ್ರಾಫಿಕ್ ನಿಯಂತ್ರಿಸುವ ಸಂಚಾರಿ ಪೊಲೀಸರಿಗೆ ‘ಎಸಿ’ ಹೆಲ್ಮೆಟ್ ಸಮಾಧಾನ ತಂದಿದೆ. ಅಹಮದಾಬಾದ್‌ ನ ಆರು ಟ್ರಾಫಿಕ್ ಪೊಲೀಸರಿಗೆ ಪ್ರಾಯೋಗಿಕವಾಗಿ ಎಸಿ ಹೆಲ್ಮೆಟ್‌ ಗಳನ್ನು ನೀಡಿ ಬಿಸಿಲಿನಿಂದ ರಕ್ಷಿಸಲಾಗಿದೆ. ಸಂಪೂರ್ಣ ಎಂಟು-ಗಂಟೆಗಳ ಶುಲ್ಕವು ಸಂಪೂರ್ಣ ಕರ್ತವ್ಯದ ಶಿಫ್ಟ್‌ ಗೆ ಹೆಲ್ಮೆಟ್‌ ಗೆ ಶಕ್ತಿಯನ್ನು ನೀಡುತ್ತದೆ. ಈ ಹೆಲ್ಮೆಟ್ ಸಾಮಾನ್ಯವಾಗಿ ಸಂಚಾರಿ ಪೊಲೀಸರು ಧರಿಸುವ ಹೆಲ್ಮೆಟ್ ಗಿಂತ ಅರ್ಧ ಕಿಲೋ ಭಾರವಿದೆ. ಎಸಿ ಹೆಲ್ಮೆಟ್ ತಲೆಯನ್ನು ತಂಪಾಗಿಸುವುದಲ್ಲದೆ, ವಾತಾವರಣದಲ್ಲಿರುವ ಧೂಳು ಮತ್ತು ಇತರ ರಾಸಾಯನಿಕ ಅನಿಲಗಳಿಂದ ರಕ್ಷಣೆ ನೀಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹಮದಾಬಾದ್ ಆಗಸ್ಟ್ 10 ರಿಂದ ಈ ಪ್ರಯೋಗವನ್ನು ಪ್ರಾರಂಭಿಸಿತು. ಎಸಿ ಹೆಲ್ಮೆಟ್ ಧರಿಸಲು ಪ್ರಾರಂಭಿಸಿದ ನಂತರ ಸನ್ ಗ್ಲಾಸ್ ಮತ್ತು ಟವೆಲ್ ಅನ್ನು ತಪ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳುತ್ತಾರೆ. ಹೆಲ್ಮೆಟ್‌ ನ ವಿನ್ಯಾಸವು ವಾತಾವರಣದಿಂದ ಗಾಳಿಯನ್ನು ಎಳೆದು ಮುಖದ ಮೇಲೆ ಬೀಸುವ ಮೂಲಕ ಶಾಖ ಮತ್ತು ಧೂಳನ್ನು ತೆಗೆದುಹಾಕುತ್ತದೆ. ಇದನ್ನೂ ಪ್ಲಾಸ್ಟಿಕ್‌ ನಿಂದ ತಯಾರಿಸಲಾಗುತ್ತದೆ.…

Read More

WWE ಸ್ಟಾರ್ ಮತ್ತು ನಟ ಜಾನ್ ಸೆನಾ ಭಾರತೀಯ ಧ್ವಜವನ್ನು ಪೋಸ್ಟ್ ಮಾಡುತ್ತಿದ್ದಾರೆ. ಚಂದ್ರಯಾನ 3 ಲ್ಯಾಂಡಿಂಗ್‌ ಗೆ ಗಂಟೆಗಳ ಮೊದಲು, ನಟ ತನ್ನ ಇನ್‌ ಸ್ಟಾಗ್ರಾಮ್‌ ನಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಶೀರ್ಷಿಕೆಯನ್ನೂ ನೀಡದೆ ಪೋಸ್ಟ್ ಮಾಡಿದ್ದು ಏಕೆ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರು ಧ್ವಜವನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಕಾಮೆಂಟ್ ಬಾಕ್ಸ್ ಅನ್ನು ತುಂಬಿದರು. ಚಂದ್ರಯಾನ 3ಗೆ ಶುಭಕೋರಲು ಅವರು ಪೋಸ್ಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಕೂಡ ಕಾಮೆಂಟ್ ಮಾಡಿದ್ದಾರೆ. ಸೆಪ್ಟೆಂಬರ್ 8 ರಂದು ಹೈದರಾಬಾದ್‌ ನಲ್ಲಿ WWE ಸೂಪರ್‌ ಸ್ಟಾರ್ ಸ್ಪೆಕ್ಟಾಕಲ್ ಈವೆಂಟ್‌ ನೊಂದಿಗೆ 17 ವರ್ಷಗಳ ನಂತರ ಜಾನ್ ಸೆನಾ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ. ಸೇನೆಯ ಹೊರತಾಗಿ, ವಿಶ್ವದ ವಿವಿಧ ಭಾಗಗಳಿಂದ ಜನರು ಭಾರತದ ಧ್ಯೇಯೋದ್ದೇಶಕ್ಕಾಗಿ ಶುಭಾಶಯಗಳು ಮತ್ತು ಅಭಿನಂದನೆಗಳೊಂದಿಗೆ ಮುಂದೆ ಬಂದಿದ್ದಾರೆ. ಜಾನ್ ಸೆನಾ ಕುಸ್ತಿ ರಿಂಗ್ ಮತ್ತು ದೊಡ್ಡ ಪರದೆಯ ಮೇಲೆ ಅತ್ಯಂತ ಜನಪ್ರಿಯ ತಾರೆ. ಅವನ ಕುಸ್ತಿಯ…

Read More