Subscribe to Updates
Get the latest creative news from FooBar about art, design and business.
- ಬಳ್ಳಾರಿ: ಮೃತರಿಗೆ ಗೃಹಲಕ್ಷ್ಮೀ ಹಣ ಜಮೆ; ಫಲಾನುಭವಿಗಳ ಮರು ಪರಿಶೀಲನೆಗೆ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಾಕೀತು
- “ನಿಮ್ಮ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಿ”: ಕ್ಷಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಪಡೆಯೋದು ಹೇಗೆ? | ಪ್ರತಿ ತಿಂಗಳು ರೂ.1,000 ನೆರವು
- ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
- ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
- ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
- ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
- ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
- ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
Author: admin
ವಿಶ್ವದ ಅತಿ ಉದ್ದ ಕೂದಲು ಎಂಬ ಗಿನ್ನಿಸ್ ದಾಖಲೆಯನ್ನು ಭಾರತೀಯ ಮಹಿಳೆಯೊಬ್ಬರು ಬರೆದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಅಂದಾಜು 7 ಅಡಿ 9 ಇಂಚು ಉದ್ದವಾಗಿದೆ. ಉತ್ತರ ಪ್ರದೇಶದ 46 ವರ್ಷದ ಸ್ಮಿತಾ ಶ್ರೀವಾಸ್ತವ ವಿಶ್ವ ದಾಖಲೆ ಬರೆಸಿದ್ದಾರೆ. ಕುತೂಹಲ ಮತ್ತು ಪ್ರೀತಿಯಿಂದ ಕೂದಲನ್ನು ಬೆಳೆಸಲು ಪ್ರಾರಂಭಿಸಿದೆ ಎಂದು ಅವರು ಹೇಳುತ್ತಾರೆ, ಆದರೆ ಈಗ ಅದು ತನ್ನ ಜೀವನದ ದೊಡ್ಡ ಲಾಭವಾಗಿದೆ. ಉದ್ದ ಕೂದಲು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ವಿಶ್ವದಾಖಲೆ ಮಾಡಿದ ಖುಷಿಯಲ್ಲಿ ಪುರಾಣದಲ್ಲಿ ಉಲ್ಲೇಖಿಸಿರುವ ಎಲ್ಲ ದೇವತೆಗಳಿಗೂ ಉದ್ದ ಕೂದಲು ಇತ್ತು ಎಂದು ಸ್ಮಿತಾ ಹೇಳಿದ್ದಾರೆ. 1980ರ ದಶಕದಲ್ಲಿ ಹಿಂದಿ ಚಿತ್ರಗಳಲ್ಲಿನ ನಾಯಕಿಯರ ಉದ್ದನೆಯ ಕೂದಲಿನಿಂದ ಪ್ರೇರಿತರಾದ ಸ್ಮಿತಾ ತಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು ಪ್ರಾರಂಭಿಸಿದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಸ್ಮಿತಾ ಸಾಮಾನ್ಯವಾಗಿ ತನ್ನ ಕೂದಲನ್ನು ವಾರಕ್ಕೆ ಎರಡು ಬಾರಿ ಮಾತ್ರ ತೊಳೆಯುತ್ತಾರೆ, ಅವರು ತೊಳೆಯುವುದು, ಒಣಗಿಸುವುದು ಮತ್ತು ಸ್ಟೈಲಿಂಗ್ ಸೇರಿದಂತೆ ಕೂದಲಿನ ಆರೈಕೆಗಾಗಿ ಪ್ರತಿ ಬಾರಿ…
ಬೆಳಗಾವಿ: ಇದೇ ಡಿಸೆಂಬರ್ 4 ರಿಂದ 15 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇನ್ನು ರಾಜ್ಯ ವಿಧಾನಮಂಡಲ ಚಳಿಗಾಲ ಅಧಿವೇಶನದ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಮಾಹಿತಿ ನೀಡಿದ್ದಾರೆ. ಇನ್ನು ಇಷ್ಟೊಂದು ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕೆ ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ನೊಂದಿಗೆ ಬೃಹತ್ ಟೌನ್ ಶಿಪ್ ನಿರ್ಮಿಸಲಾಗಿದೆ. ಅಧಿವೇಶನ ಬಂದೋಬಸ್ತ್ ಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ ಬೃಹತ್ ಟೌನ್ ಶೀಫ್ ನಿರ್ಮಿಸಿ ವಾಸ್ತವ್ಯಕ್ಕೆ ಸುವರ್ಣ ವಿಧಾನ ಸೌಧದ ಅಲಾರವಾಡ ಬಳಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಟೌನ್ ಶಿಪ್ ನಿರ್ಮಾಣವಾಗಿದೆ. ಈ ಟೌನ್ ಶಿಪ್ ನಿರ್ಮಾಣ ಕೆಲಸವನ್ನು ಮೈಸೂರಿನ ಕೆ.ಎಂ ಶರೀಫ್ ಎನ್ನುವರು ತೆಗೆದುಕೊಂಡಿದ್ದು, ಹದಿಮೂರು ದಿನಗಳಿಂದ 100 ಜನ ಕಾರ್ಮಿಕರು ಈ ಟೆಂಟ್ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದೀಗ ಬಹುತೇಕ ಮುಗಿದಿದ್ದು, ಕೊನೆಯ ಹಂತದ ಕೆಲಸಗಳನ್ನು…
ಬೆಂಗಳೂರು: ಆಸ್ತಿ ವಿವರ ಸಲ್ಲಿಸದ ಕರ್ನಾಟಕದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಲೋಕಾಯುಕ್ತ ಬಹಿರಂಗಡಿಸಿದೆ. ಆಯ್ಕೆಯಾದ ಮೂರು ತಿಂಗಳೊಳಗೆ ಸದಸ್ಯರು ತಮ್ಮ ಆಸ್ತಿ ವಿವರನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಇದೆ. ಆದ್ರೆ, ಶಾಸಕರು ಹಾಗೂ ಪರಿಷತ್ ಸದಸ್ಯರು ಇದುವರೆಗೂ ಲೋಕಾಯುಕ್ತ ಕಚೇರಿಗೆ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಇದೀಗ ಅಂತಿಮವಾಗಿ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ಶಾಸಕರುಗಳ ಹೆಸರುಗಳ ಪಟ್ಟಿಯನ್ನು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಕಳೆದ ಬಾರಿ ಸಚಿವರಾಗಿದ್ದ ಶ್ರೀರಾಮುಲು, ಕೆಸಿ ನಾರಾಯಣಗೌಡ, ಎಸ್ ಅಂಗಾರ ಆಸ್ತಿ ವಿವರ ಸಲ್ಲಿಸದೇ ನಿಮಯ ಉಲ್ಲಂಘಿಸಿದ್ದರು. ಈ ಬಾರಿ ರಹೀಂ ಖಾನ್, ಕೆ ಎನ್ ರಾಜಣ್ಣ, ಜಮೀರ್ ಅಹಮದ್ ಖಾನ್, ರಾಮಲಿಂಗ ರೆಡ್ಡಿ, ಕೆ ಎಚ್ ಮುನಿಯಪ್ಪ ಅವರು ಸಹ ಆಸ್ತಿ ವಿವರ ಸಲ್ಲಿಸಿಲ್ಲ. ಹೀಗೆ ಕಳೆದ ವಿಧಾನಸಭೆ ಅವಧಿಯ 81 ಮಂದಿ ಶಾಸಕರಿಂದ ಆಸ್ತಿ ವಿವರ ಸಲ್ಲಿಸದೇ ಲೋಪ ಎಸಗಿದ್ದಾರೆ. ಈ ಬಾರಿ ಅಂದರೆ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಅವಧಿಯ 51…
ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಮೂಲದ ವಿದ್ಯಾಶ್ರೀ (32) ಮೃತ ದುರ್ದೈವಿ. ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ ಪಕ್ಕದಲ್ಲಿ ದಿನಸಿ ಹೊತ್ತು ಹೊರಟಿದ್ದ ವೃದ್ಧನಿಗೆ ಬೈಕ್ ಡಿಕ್ಕಿಯಾಗಿತ್ತು. ಈ ವೇಳೆ ಬೈಕ್ ನ ಸಮೀಪದಲ್ಲಿ ಸಂಚರಿಸುತ್ತಿದ್ದ ಬಸ್ಸಿನ ಚಕ್ರದಡಿಗೆ ವಿದ್ಯಾಶ್ರೀ ಬಿದ್ದಿದ್ದು, ಬಸ್ ನ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ವೇಳೆ ಬೈಕ್ ಸವಾರ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಬಸ್ ನ ಚಕ್ರ ತಲೆಯ ಮೇಲೆ ಹರಿದರೂ ಅವರು ಬದುಕುಳಿದಿದ್ದಾರೆ.
ಬೆಂಗಳೂರು: ಹಸುಗೂಸು ಮಾರಾಟದ ಪ್ರಕರಣ ಸಂಬಂಧ ಆರೋಪಿಗಳು ಇದುವರೆಗೆ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ವಿಚಾರ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಮಾರಾಟ ಮಾಡಿದ ಮಕ್ಕಳ ಪೈಕಿ 50–60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಹಸುಗೂಸು ಮಾರಾಟ ಪ್ರಕರಣ ಸಂಬಂಧ ಬಂಧಿತ ಎಂಟು ಆರೋಪಿಗಳನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಂತೆ, ಆರೋಪಿಗಳು ಕಳೆದ 6 ವರ್ಷಗಳಲ್ಲಿ 250 ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ ವಿಚಾರವನ್ನು ಬಾಯಿಬಿಟ್ಟಿದ್ದಾರೆ. ಈ ಪೈಕಿ ಕೇವಲ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದರೆ, ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರೆ. ಸಿಸಿಬಿ ಪೊಲೀಸರು ಕರ್ನಾಟಕದಲ್ಲಿ ಮಾರಾಟ ಆಗಿರುವ ಮಕ್ಕಳ ಬಗ್ಗೆ ಆರೋಪಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ 10 ಮಕ್ಕಳ ಸುಳಿವು ಸಿಕ್ಕಿದ್ದು, ಉಳಿದ ಮಕ್ಕಳನ್ನು ಎಲ್ಲಿ, ಯಾರಿಗೆ ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ: ವಿಧಾನ ಮಂಡಳದ ಅಧಿವೇಶನದ ಸಂದರ್ಭದಲ್ಲಿ ನಡೆಯಲಿರುವ ವಿವಿಧ ಪ್ರತಿಭಟನೆಗಳಿಗೆ ಬಳಸಲಾಗುವ ರೈತರ ಜಮೀನಿನ ಬಾಡಿಗೆಯನ್ನು ಹೆಚ್ಚಳ ಮಾಡಲಾಗಿದೆ. ರೈತರ ಮನವಿಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಳೆದ ವರ್ಷ ಪ್ರತಿಭಟನೆಯ ಟೆಂಟ್ ನಿರ್ಮಾಣಕ್ಕೆ ಬಳಸಲಾಗಿದ್ದ ರೈತರ ಜಮೀನಿಗೆ ಪ್ರತಿ ಗುಂಟೆಗೆ ರೂ. 1200 ನೀಡಲಾಗಿತ್ತು. ಆ ಜಮೀನಿನಲ್ಲಿ ಯಾವುದೇ ಫಸಲು ಬೆಳೆದಿರಲಿಲ್ಲ. ಈ ಬಾರಿ ಹಲಗಾ ಗ್ರಾಮದ ರೈತರ 3.28 ಎಕರೆ ಜಮೀನನ್ನು ಪ್ರತಿಭಟನಾ ಟೆಂಟ್ ಗಾಗಿ ಬಳಸಲಾಗುತ್ತಿದೆ. ಈ ಜಮೀನಿನಲ್ಲಿ ರೈತರು ಫಸಲು ಬೆಳೆದಿದ್ದರಿಂದ ಪ್ರತಿ ಗುಂಟೆಗೆ ರೂ. 3,000 ನೀಡುವಂತೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ರೈತರಿಗೆ ಪ್ರತಿ ಗುಂಟೆಗೆ ರೂ. 3000 ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ರೈತರು ಜಮೀನಿನ ಬಾಡಿಗೆ ಹೆಚ್ಚಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ ಮನವಿ ಮಾಡಿದ್ದರು.…
ಬೆಂಗಳೂರು ವಿಶ್ವವಿದ್ಯಾಲಯ ಎಂಸಿಎ, ಎಂ. ಟೆಕ್ ಕೋರ್ಸ್‌ಗಳ ಬೋಧನೆಗೆ ಅವಶ್ಯವಿರುವ 7 ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಪಿಎಚ್. ಡಿ, ನೆಟ್ ಮತ್ತು ಪ್ಲೆಟ್ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಿದೆ. ಗೌರವ ಧನ ಕೂಡ ಮಾಸಿಕ 43,520 ರೂ. ಗಳಿಂದ 49,920 ರೂ. ಗಳವರೆಗೆ ನಿಗದಿ ಮಾಡಿದೆ. ಅರ್ಜಿಗಳನ್ನು ಡಿ.4ರೊಳಗೆ ಸಮನ್ವಯಾಧಿಕಾರಿ, ಎಂಸಿಎ ವಿಭಾಗ, ಸೈಕಾಲಜಿ ಕಟ್ಟಡ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056 ಈ ವಿಳಾಸಕ್ಕೆ ಕಳುಹಿಸಬಹುದು.
1931 ರಲ್ಲಿ ಮನೋವಿಜ್ಞಾನಿಯೊಬ್ಬರಿಗೆ ಗೋರಿಲ್ಲಾದ ಮರಿ ಹಾಗೂ ತನ್ನ ಮಗುವನ್ನು ಒಂದೇ ಮನೆಯಲ್ಲಿ ಸಾಕಿ ಬೆಳಸಿದರೆ ಗೋರಿಲ್ಲಾ ಮನುಷ್ಯರಂತೆ ವರ್ತಿಸಬಹುದು ಎಂಬ ಯೋಚನೆ ಬರುತ್ತದೆ. ಇದನ್ನು ಪರೀಕ್ಷಿಸಲು ಗೋರಿಲ್ಲಾ ಮರಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ನಂತರ ತನ್ನ ಮಗುವಿಗೆ ನೀಡುತ್ತಿದ್ದ ಆಹಾರ ಹಾಗೂ ಬಟ್ಟೆಯನ್ನು ಗೋರಿಲ್ಲಾ ಮರಿಗೂ ನೀಡುತ್ತಾರೆ. ಆದರೆ ಕೆಲವು ದಿನಗಳ ನಂತರ ಗೋರಿಲ್ಲಾ ಮರಿಯನ್ನು ಸಾಕುವುದೇ ನಿಲ್ಲಿಸುತ್ತಾರೆ. ಕಾರಣ ಗೋರಿಲ್ಲಾ ಮನುಷ್ಯರ ರೀತಿ ವರ್ತಿಸದೆ ಅವರ ಮಗುವೇ ಗೋರಿಲ್ಲಾದ ರೀತಿ ವರ್ತಿಸಲು ಆರಂಭಿಸಿರುತ್ತದೆ.
ತುಪ್ಪದ ಕಾಫಿ ಎಂಬ ಹೆಸರು ಕೇಳಲು ನಿಮಗೆ ವಿಚಿತ್ರ ಎನಿಸಬಹುದು. ಆದರೆ ಈ ಕಾಫಿ ಈಗ ಜನರಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ತುಪ್ಪದ ಕಾಫಿ ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ತುಪ್ಪದ ಕಾಫಿಯ ಪ್ರಯೋಜನಗಳು: ಕಾಫಿ ಚಯಾಪಚಯವನ್ನು ಹೆಚ್ಚಿಸಲು ತುಪ್ಪ ಸಹಾಯ ಮಾಡುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತುಪ್ಪವು ಕಾಫಿ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ತುಪ್ಪದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು ಅದರ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಪ್ಪದ ಕಾಫಿ ಸೇವನೆಯೂ ಜೀರ್ಣಕ್ರಿಯೆಗೆ ಸಹಕಾರಿ. ತುಪ್ಪವು ಕಾಫಿ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ತುಪ್ಪ ಮತ್ತು ಕಾಫಿಯ ಸೇವನೆಯು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಕರುಳಿನ ಒಳಪದರವನ್ನು ಬಲಪಡಿಸುತ್ತದೆ. ತುಪ್ಪವು ಕಾಫಿ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ನಿಮ್ಮ ಮನಸ್ಥಿತಿ ಉತ್ತಮ ಮತ್ತು ತಾಜಾವಾಗಿರುತ್ತದೆ. ತುಪ್ಪ ಮತ್ತು ಕಾಫಿಯ ಸೇವನೆಯು ಶಕ್ತಿಯನ್ನು ನೀಡುತ್ತದೆ ಮತ್ತು ಏಕಾಗ್ರತೆಗೆ ಸಹಾಯ…
ಟೆಕ್ ದೈತ್ಯ, ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ತಮ್ಮ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಎಚ್ಚರವಾದಾಗ ಫೋನ್ ನೋಡುವುದರೊಂದಿಗೆ ತನ್ನ ದಿನ ಆರಂಭವಾಗುತ್ತದೆ ಎಂದು ಹೇಳಿರುವ ಅವರು, ಬೆಳಿಗ್ಗೆ ಎದ್ದ ತಕ್ಷಣ ನಾನು ಮಾಡುವ ಮೊದಲ ಕೆಲಸ ನನ್ನ ಫೋನ್ ನಲ್ಲಿ ಫೇಸ್ ಬುಕ್ ತೆರೆಯುವುದು. ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿಯುವುದು ಎಂದಿದ್ದಾರೆ. ನಿಜ ಹೇಳಬೇಕೆಂದರೆ, ಲೆನ್ಸ್ ಇಲ್ಲದೆ ನನಗೆ ಸರಿಯಾಗಿ ಕಾಣುವುದಿಲ್ಲ. ಹೀಗೆ ಮಾಡುವುದು ತಪ್ಪು ಎಂದು ಗೊತ್ತಿದ್ದರೂ. ನಾನು ಫೋನ್ ನೋಡುತ್ತೇನೆ ಎಂದು ಬರ್ಗ್ ಹೇಳಿದ್ದಾರೆ.