Author: admin

ಕನ್ನಡ ಇಂಡಸ್ಟ್ರಿ ನನಗೆ ಅನ್ನ ಕೊಟ್ಟಿದೆ, ಒಂದ್ ಹಿಟ್ ಆದ ಬಳಿಕ ಇಂಡಸ್ಟ್ರಿಯನ್ನು ಬಿಡಲಾರೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್‌ʼನ್ಯಾಷನಲ್ ಫಿಲ್ಡ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನೂ ಎಲ್ಲೂ ಹೋಗಲ್ಲ. ಬೇರೆ ಇಂಡಸ್ಟ್ರಿಗಳ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸುವ ಆಫರ್‌ ಗಳು ಬಂದರೂ ಅವುಗಳು ತಿರಸ್ಕರಿಸಿದ್ದೇನೆ ಎಂದರು. ಬೇರೆಯವರ ಹಾಗೆ ಒಂದು ಹಿಟ್ ಬಂದ ಕೂಡಲೇ ಚಿತ್ರರಂಗ ಬಿಟ್ಟು ಹೋಗುವಂತೆ ನಾನು ಮಾಡಲಾರೆ ಎಂದರು. ರಿಷಬ್‌ ಶೆಟ್ಟಿ ಈ ಮಾತನ್ನು ಯಾರಿಗೆ ಹೇಳಿದರು ಎಂದು ಈಗ ಚರ್ಚೆ ಶುರುವಾಗಿದೆ.

Read More

ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ನಟ ಧನ್ನೀ‌ರ್ ಅಭಿನಯದ “ಕೈವ” ಚಿತ್ರದ ಟ್ರೈಲ‌ರ್ ಬಿಡುಗಡೆ ವೇಳೆ ಮಾತನಾಡಿದ ದರ್ಶನ್, ಯಾರಾದರೂ ನಮ್ಮ ತಾಯಿ ವಿಷಯಕ್ಕೆ ಬಂದರೆ ಬಿಡ್ತೀವಾ ಇಲ್ಲ ತಾನೆ. ಹಾಗೆ ಕೂಡ ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೂ ಅಷ್ಟೇ. ಇದು ಪ್ರೀತಿಯೋ ಸ್ವಾರ್ಥನೋ ಮೊದಲು ಕನ್ನಡ ಚಿತ್ರಗಳನ್ನು ಪ್ರೀತಿಸಿ, ಅವುಗಳನ್ನು ಪ್ರೋತ್ಸಾಹ ಮಾಡಿ, ಇಲ್ಲದಿದ್ದರೆ ಪರಭಾಷಿಕರ ಹಾವಳಿ ಹೆಚ್ಚಾಗಿ ಬಿಡುತ್ತದೆ ಹುಷಾರು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಯುವ ನಟರಿಗೆ ಕಿವಿಮಾತು ಹೇಳಿದರು. ನಟ ಧನ್ನೀರ್ ಅಭಿನಯದ ‘ಕೈವ್’ ಚಿತ್ರದ ಟ್ರೈಲ‌ರ್ ಬಿಡುಗಡೆಗೆ ದರ್ಶನ್ ಬಂದಿದ್ದರು. ಈ ವೇಳೆ ಮಾತನಾಡಿ, ಅಭಿಷೇಕ್ ಅಂಬರೀಷ್, ಧನ್ನೀ‌ರ್ ಚಿಕ್ಕಣ್ಣ ಸೇರಿದಂತೆ ಬಹುತೇಕ ಸ್ನೇಹಿತರು, ನಟರ ಪೋನ್ ನಂಬರ್ ಎಲ್ಲರ ಬಳಿಯೂ ಇರುತ್ತೆ. ಯಾರೇ ಏನೇ ಅಂದರೂ ಹಿತ್ತಾಳೆ ಕಿವಿಯಾಗಬೇಡಿ. ಒಬ್ಬರಿಗೊಬ್ಬರು ಪೋನ್‌ಮಾಡಿಕೊಳ್ಳಿ, ಒಂದೇ ದಿನ ತಮ್ಮ ಚಿತ್ರ…

Read More

ಆದಿವಾಸಿಗಳಿಗಾಗಿ 24,104 ಕೋಟಿ ರೂಪಾಯಿಗಳ ಪ್ರಧಾನ ಮಂತ್ರಿ ಜಂಜಾಟಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಗೆ ಕೇಂದ್ರವು ತನ್ನ ಅನುಮೋದನೆಯ ಮುದ್ರೆಯನ್ನು ನೀಡಿದೆ. ಇದರಲ್ಲಿ ಕೇಂದ್ರ ಪಾಲು 15,336 ಕೋಟಿ ರೂ. ಹಾಗೂ ರಾಜ್ಯಗಳ ಪಾಲು 8,768 ಕೋಟಿ ರೂ. ಇರಲಿದೆ. ಈ ಯೋಜನೆಯಡಿ, 18 ರಾಜ್ಯಗಳಲ್ಲಿ ಅತ್ಯಂತ ಹಿಂದುಳಿದ ಬುಡಕಟ್ಟು ಗುಂಪುಗಳೆಂದು ಗುರುತಿಸಲಾದ 75 ಬುಡಕಟ್ಟುಗಳಿಗೆ ಸೇರಿದ 18.16 ಲಕ್ಷ ಜನರಿಗೆ ಮನೆ, ರಸ್ತೆ, ನಲ್ಲಿ ನೀರು, ಸಂಚಾರಿ ವೈದ್ಯಕೀಯ ಘಟಕಗಳು, ವೃತ್ತಿಪರ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.

Read More

ಬೆಂಗಳೂರಿನಲ್ಲಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಾಜ್ಯದಲ್ಲಿ ಸುಧಾರಿತ 108 ಆಂಬುಲೆನ್ಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌ಗಳಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ರಾಜ್ಯದಲ್ಲಿ ಹೊಸ ಆಂಬುಲೆನ್ಸ್‌ಗಳು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಉಚಿತ ಸೇವೆ ಲಭ್ಯವಾಗುವುದರ ಜೊತೆಗೆ ಹೊಸ ಆಂಬುಲೆನ್ಸ್‌ಗಳು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ. 108 ಅಂಬ್ಯುಲೆನ್ಸ್‌ ಸೇವೆಯನ್ನು ಬಲಪಡಿಸುವತ್ತ ಇದು ನಮ್ಮ ಮೊದಲ ಹೆಜ್ಜೆ ಎಂದು ಹೇಳಿದರು. ರಾಜ್ಯದಲ್ಲಿನ 262 ಅತ್ಯಾಧುನಿಕ ಆಂಬುಲೆನ್ಸ್‌ ವಿಶೇಷತೆ ಏನು ಎಂಬುದರ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟ್ರಾನ್ಸ್ ಪೋರ್ಟ್ ವೆಂಟಿಲೇಟ‌ರ್, ಡಿಫಿಬ್ರಿಲೇಟರ್‌ಗಳನ್ನು ಒಳಗೊಂಡ 105 ಸುಧಾರಿತ ಲೈಫ್ ಸಪೋರ್ಟ್…

Read More

ನರೇಂದ್ರ ಮೋದಿ ಅವರು ಬಂದ ಕಡೆಗಳಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದಿದ್ದ ಸಿಎಂ ಸಿದ್ಧರಾಮಯ್ಯರ ಹೇಳಿಕೆಗೆ ಮಾಜಿ ಡಿಸಿಎಂ ಅಶ್ವತ್ಥನಾರಾಯಣ್‌ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇವರೇ ಸಮ್ಮಿಶ್ರ ಸರ್ಕಾರವೇ ಅಧಿಕಾರದಲ್ಲಿತ್ತು. ಲೋಕಸಭಾ ಚುನಾವಣೆ ಫಲಿತಾಂಶ ಏನು ಬಂದಿದೆ? ಎಂದು ಪ್ರಶ್ನಿಸಿದರು. ಈಗಲೂ ಅಷ್ಟೇ 2024 ರಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಆಗ ಫಲಿತಾಂಶ ನೋಡಲಿ ಎಂದು ಅಶ್ವತ್ಥನಾರಾಯಣ್ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂಗೆ ರಾಜ್ಯದಲ್ಲಿರುವ ಬರ ಪರಿಸ್ಥಿತಿ ನೆನಪಾಗಲಿಲ್ಲ. ಅವರ ಸಂಪುಟದಲ್ಲಿನ ಮಂತ್ರಿಗಳು ಮನೆ ನವೀಕರಣಕ್ಕೆ ಇಳಿದಿರುವುದು ಕಣ್ಣಿಗೆ ಬೀಳಲಿಲ್ಲ. ನಮ್ಮ ನಾಯಕ ನರೇಂದ್ರ ಮೋದಿ ಮಾತ್ರ ಕಣ್ಣಿಗೆ ಕಾಣುತ್ತಾರೆ ಎಂದು ಕಿಡಿಕಾರಿದ್ದಾರೆ.

Read More

ಮಕ್ಕಳ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಆರೋಪಿಗಳು ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಹಾಲಕ್ಷ್ಮಿ, ನಕಲಿ ವೈದ್ಯ ಕೆವಿನ್, ಆರ್. ಟಿ. ನಗರದ ನಿವಾಸಿ ರಮ್ಯಾ, ತಮಿಳುನಾಡಿನ ಈರೋಡ್ ಕಣ್ಣನ್ ರಾಮಸ್ವಾಮಿ, ಆತನ ಸಹಚರರಾದ ಗೋಮತಿ, ಹೇಮಲತಾ, ರಾಧಾ, ಸುಹಾಸಿನಿ, ಶರಣ್ಯ, ಮುರುಗೇಶ್ವರಿ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಹಸುಗೂಸುಗಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 10 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ ಎಂಬಾಕೆ ತರಕಾರಿ ಮಾರಾಟ ಮಾಡುತ್ತಲೇ ಮಕ್ಕಳ ಡೀಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಮಹಾಲಕ್ಷ್ಮಿ ತರಕಾರಿ ಮಾರುತ್ತಿದ್ದ ಈಕೆ ಹಲವರನ್ನು ಪರಿಚಯ ಮಾಡಿಕೊಂಡು ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು. ಬಳಿಕ ಅವರ ನಂಬ‌ರ್ ಪಡೆದು…

Read More

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಪರಿಶೀಲಿಸಿ ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತ ಪಲ್ಲವಿ ಅವರನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಕೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ ಒ) ಮನವಿ ಮಾಡಿದೆ. ನಗರದಲ್ಲಿ ಇದೇ ರೀತಿಯ ಹಲವು ಶಾಲೆಗಳು ಕುಸಿದು ಬೀಳುವ ಹಂತದಲ್ಲಿವೆ. ಅಂತಹ ಶಾಲೆಗಳನ್ನು ಗುರುತಿಸಬೇಕು. ಎಲ್ಲ ಸರ್ಕಾರಿ, ಬಿಬಿಎಂಪಿ ಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದೆ.

Read More

ಬೆಂಗಳೂರು : ಕ್ಯಾಂಟ‌ರ್ ವಾಹನವೊಂದು ಹಿಂದಿನಿಂದ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಗುರುವಾರ ಮಧ್ಯಾಹ್ನ ಬೆಂಗಳೂರಿನ ನೈಸ್‌ ರಸ್ತೆಯ ವಜ್ರಮುನೇಶ್ವರ ಕೆಳಸೇತುವೆಯ ಬಳಿ ನಡೆಯಿತು. ವಿಜಯನಗರದ ಹೊಸಹಳ್ಳಿ ನಿವಾಸಿಗಳಾದ ಬೈಯಣ್ಣ(55) ಮತ್ತು ನಿರ್ಮಲ (44) ಮೃತ ದುರ್ದೈವಿಗಳು. ಗೃಹಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ ಮಾರ್ಗಮಧ್ಯೆ ದುರ್ಘಟನೆ ನಡೆದಿದೆ. ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತಮಿಳುನಾಡು ಸಚಿವ ಹಾಗೂ ಚಿತ್ರನಟ ಉದಯನಿಧಿ ಸ್ಟಾಲಿನ್ ಮಾತನಾಡಿ, ಪ್ರಗತಿಪರ ಚಿಂತನೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಕೇರಳ ಮತ್ತು ತಮಿಳುನಾಡು ಸಮಾನವಾಗಿವೆ. ಕಣ್ಣೂರು ವಿಶ್ವವಿದ್ಯಾನಿಲಯದ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದಯನಿಧಿ ಸ್ಟಾಲಿನ್ ಅವರು ತಮ್ಮ ಫೇಸ್‌ ಬುಕ್ ಪುಟದಲ್ಲಿ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕೇರಳ ಮತ್ತು ತಮಿಳುನಾಡು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿವೆ. ಎರಡು ರಾಜ್ಯಗಳ ರಾಜಕೀಯ ನಾಯಕತ್ವ ದಶಕಗಳಿಂದ ಆತ್ಮೀಯ ಗೆಳೆಯರು. ಹಾಲಿ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್ ಮತ್ತು ಎಂ.ಕೆ.ಸ್ಟಾಲಿನ್ ನಡುವೆ ಬಲವಾದ ಬಾಂಧವ್ಯವಿದೆ. ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಕೇರಳ ಮತ್ತು ತಮಿಳುನಾಡು ಒಂದಾಗಿವೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ತಮಿಳು ಜನರು ಹಿಂದಿ ಭಾಷೆಯ ವಿರುದ್ಧ ಅಲ್ಲ ಹಿಂದಿ ಹೇರಿಕೆಯ ವಿರುದ್ಧ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ರಾಜಕೀಯ ವಿರೋಧಿಗಳನ್ನು ತೊಡೆದುಹಾಕಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಲಾಗುತ್ತದೆ. ಆಡಳಿತ ಬಿಕ್ಕಟ್ಟು ಸೃಷ್ಟಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುವುದು. ಇಂತಹ ನಡೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು…

Read More

ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೋಗೋದಲ್ಲಿ ಬದಲಾವಣೆಯಾಗಿದ್ದು, ಹಲವು ವಿವಾದಗಳಿಗೆ ಕಾರಣವಾಗಿದೆ. ಅಶೋಕ ಸ್ತಂಭವಿದ್ದ ಲಾಂಛನದ ಮಧ್ಯಭಾಗದಲ್ಲಿ ಧನ್ವಂತರಿಯ ಬಣ್ಣದ ಚಿತ್ರವನ್ನು ಸೇರಿಸಲಾಗಿತ್ತು. ಇಂಡಿಯಾ ಎಂದು ಎಲ್ಲಿ ಬರೆಯಲಾಗುತ್ತದೆಯೋ ಅಲ್ಲಿ ಭಾರತ ಎಂದು ಬದಲಿಸಲಾಗಿದೆ. ಈ ಬಗ್ಗೆ ವ್ಯಾಪಕ  ಟೀಕೆಗಳು ವ್ಯಕ್ತವಾಗಿವೆ. ಭಾರತ ಆಯೋಜಿಸಿದ್ದ ಜಿ 20 ಶೃಂಗಸಭೆಯಲ್ಲಿ ಅಧ್ಯಕ್ಷರು ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನ ಭಾರತವನ್ನು ಸೇರಿಸಿದಾಗ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಪ್ರಾರಂಭವಾದವು. ವೈದ್ಯಕೀಯ ಆಯೋಗದ ಸೈಟ್‌ ನಲ್ಲಿ ಹೊಸ ಲೋಗೋ ಕಾಣಿಸಿಕೊಂಡಿದೆ. ಆದರೆ, ಈ ಬದಲಾವಣೆಗೆ ಸಂಬಂಧಿಸಿದಂತೆ ವೈದ್ಯಕೀಯ ಆಯೋಗದ ವಿವರಣೆ ಇನ್ನಷ್ಟೇ ಹೊರಬರಬೇಕಿದೆ. ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸುವ ಚರ್ಚೆಗಳು ದೇಶದಲ್ಲಿ ಸಕ್ರಿಯವಾಗಿರುವ ಸಮಯದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

Read More