Author: admin

97.26 ರಷ್ಟು 2000 ರೂಪಾಯಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. 9,760 ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ಠೇವಣಿಯಾಗಿಲ್ಲ ಅಥವಾ ವಿನಿಮಯವಾಗಿಲ್ಲ ಎಂದು ಆರ್‌ಬಿಐ ಹೇಳಿದೆ. ಮೇ 19 ರಂದು ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. 3.56 ಲಕ್ಷ ಕೋಟಿ ಮೌಲ್ಯದ ಒಟ್ಟು 2000 ರೂಪಾಯಿ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು. ನೋಟು ಅಮಾನ್ಯೀಕರಣದ ನಂತರ 30 ನವೆಂಬರ್ 2023 ರ ಹೊತ್ತಿಗೆ, ಶೇಕಡಾ 97.26 ರಷ್ಟು ಜನರು ಹಿಂತಿರುಗಿದ್ದಾರೆ. ಆರ್ ಬಿಐ ಪತ್ರಿಕಾ ಹೇಳಿಕೆ ಪ್ರಕಾರ ಇನ್ನು ಕೇವಲ 9,760 ಕೋಟಿ ರೂ. 2000 ರೂಪಾಯಿ ನೋಟುಗಳು ಇನ್ನೂ ಚಾಲ್ತಿಯಲ್ಲಿವೆ. ಈ ಹಿಂದೆ, ಆರ್‌ ಬಿಐ 2000 ರೂಪಾಯಿ ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಮತ್ತು ಸಂಸ್ಥೆಗಳಿಗೆ ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ಬದಲಾಯಿಸಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಕೇಳಿಕೊಂಡಿತ್ತು. ನಂತರ ಗಡುವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು.…

Read More

ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು ಮಹಿಳಾ ಹಾಸ್ಟೆಲ್ ನಲ್ಲಿ ತಡರಾತ್ರಿ ಅಶ್ಲೀಲ ಸಾಹಿತ್ಯದ ಹಾಡಿಗೆ ಡಾನ್ಸ್ ಮಾಡಿ, ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಜಿಲ್ಲೆಯಲ್ಲಿ  ಎಸ್ ಸಿ– ಎಸ್ ಟಿ ಹಾಸ್ಟೆಲ್ ಗಳು ಎಷ್ಟೊಂದು ಸುರಕ್ಷಿತ ಎನ್ನುವ  ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿದೆ. ತಡ ರಾತ್ರಿ ಹಾಸ್ಟೆಲ್ ಗಳಿಗೆ ಪ್ರವೇಶಿಸಿ ದೀಪಾವಳಿ ನೆಪದಲ್ಲಿ  ಸ್ವತಃ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಜವಾಬ್ದಾರಿಯುತ ಅಧಿಕಾರಿಗಳೇ ವಿದ್ಯಾರ್ಥಿನಿಯರ ಕೈ ಹಿಡಿದುಕೊಂಡು, ಡಾನ್ಸ್ ಮಾಡೋದು, ಅಧಿಕಾರಿಗಳನ್ನು ಹೆಣ್ಣು ಮಕ್ಕಳಿಂದ ಎತ್ತಿ ಹಿಡಿಸಿ  ಕುಣಿಸುವಂತೆ ಮಾಡಿಸಿರುವುದು  ಹೆಣ್ಣು ಹೆತ್ತವರನ್ನು ಆತಂಕಕ್ಕೆ ದೂಡಿದೆ. ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀನಿವಾಸ ಕೆ., ತಹಶೀಲ್ದಾರ್ ಸಿದ್ದಪ್ಪ, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ  ಜಿಲ್ಲೆಯ ಇತರ ಅಧಿಕಾರಿಗಳ ದುರ್ವರ್ತನೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯನ್ನು ಜಿಲ್ಲೆಯ ಜನರು ನೆನಪಿಸಿಕೊಳ್ಳುವಂತೆ ಮಾಡಿದೆ. ಇತ್ತೀಚೆಗೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೋರ್ವಳು ರಾತ್ರಿ 11 ಗಂಟೆಗೆ…

Read More

ಬಾಳೆ ಹಣ್ಣನ್ನು ಫ್ರಿಡ್ಜ್ ‌ನಲ್ಲಿಟ್ಟರೆ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ. ಇದರಿಂದ ಇತರೆ ಹಣ್ಣುಗಳು ಬೇಗನೇ ಹಾಳಗುವ ಸಾಧ್ಯತೆ ಹೆಚ್ಚು. ಕಲ್ಲಂಗಡಿಯನ್ನು ಫ್ರಿಡ್ಜ್ ‌ನಲ್ಲಿಡುವುದರಿಂದ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ‌ಗಳು ನಾಶವಾಗುತ್ತವೆ. ಸೇಬುಗಳನ್ನುಗಳನ್ನು ಫ್ರಿಡ್ಜ್‌ ನಲ್ಲಿಡುವುದರಿಂದ ಅವು ಬೇಗನೇ ಕೊಳೆತು ಹೋಗುತ್ತವೆ. ಮಾವಿನ ಹಣ್ಣುಗಳನ್ನು ರೆಫ್ರಿಜರೇಟರ್‌ ನಲ್ಲಿಡಬೇಡಿ. ಏಕೆಂದರೆ, ಇದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಲೀಚಿ ಹಣ್ಣನ್ನು ಫ್ರಿಡ್ಜ್‌ ನಲ್ಲಿಟ್ಟರೆ ಅದರ ತಿರುಳು ಹಾಳಾಗುತ್ತದೆ.

Read More

ಚುನಾವಣಾ ಆಯೋಗ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕ ಬದಲಾಗಿದೆ. ಮೊದಲು ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು. ಇದೀಗ ದಿನಂಕವನ್ನು ಒಂದು ದಿನ ಮುಂದೂಡಲಾಗಿದ್ದು, ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಲಾಗಿದೆ. ಇನ್ನು, ಮೊದಲೇ ಘೋಷಿಸಿದಂತೆ ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣಾ ಫಲಿತಾಂಶ 3ನೇ ಭಾನುವಾರ ಪ್ರಕಟವಾಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

Read More

ಬಿಹಾರ್: ವ್ಯಕ್ತಿಯೊಬ್ಬ ಯುವಕನನ್ನು ಅಪಹರಿಸಿ, ಬಳಿಕ ಆತನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿಸಿದ ವಿಚಿತ್ರ ಘಟನೆ ನಡೆದಿರುವುದು ಬಿಹಾರದಲ್ಲಿ. ವೈಶಾಲಿ ಜಿಲ್ಲೆಯವರಾದ ಗೌತಮ್ ಕುಮಾರ್ ಅವರು ಫತೇಪುರ್ ಜಿಲ್ಲಿಯ ರೇಪುರದ ಉತ್ಮಮಿಟ್ ಮಧ್ಯ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದಾರೆ. ರಾಜೇಶ್ ರಾಯ್ ಎಂಬ ವ್ಯಕ್ತಿ ಆತನನ್ನು ಅಲ್ಲಿಂದ ಅಪಹರಿಸಿದ್ದು ಬಳಿಕ ತಮ್ಮ ಮಗಳು ಚಾಂದಿನಿಯನ್ನು ಕೊಟ್ಟು ಮದುವೆ ಮಾಡಿದ್ದಾರೆ. ಆದರೆ ಗೌತಮ್ ಬಲವಂತದ ಮದುವೆಯನ್ನು ನಿರಾಕರಿಸಿದ್ದು, ಪೊಲೀಸರಿಗೆ ದೂರು ನೀಡಿ ಅಪಹರಣಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read More

ಇಂದಿನಿಂದ, ದೂರಸಂಪರ್ಕ ಇಲಾಖೆ (DoT) ಆನ್‌ ಲೈನ್ ಹಣಕಾಸು ವಂಚನೆಯನ್ನು ನಿಭಾಯಿಸಲು SIM ಕಾರ್ಡ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಡೀಲರ್ ‌ಗಳು 10 ಲಕ್ಷ ರೂಪಾಯಿ ದಂಡವನ್ನು ಎದುರಿಸಬೇಕಾಗುತ್ತದೆ. ಹೊಸ ಸಿಮ್ ಕಾರ್ಡ್‌ಗಳಿಗಾಗಿ ಗ್ರಾಹಕ KYC ಪ್ರಕ್ರಿಯೆ, ಸಿಮ್ ಕಾರ್ಡ್‌ಗಳ ಬೃಹತ್ ಖರೀದಿಗಳನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ. ವಂಚನೆಯನ್ನು ತಡೆಯಲು ಡೀಲರ್ ‌ಗಳಿಗೆ ಕಡ್ಡಾಯ ಪರಿಶೀಲನೆ ಮುಂತಾದ ನಿಯಮ ಜಾರಿಗೆ ತಂದಿದೆ ಎನ್ನಲಾಗಿದೆ.

Read More

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರು ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರು ದಿನಕ್ಕೆ 3 ಪಾಳಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಲಸೌಕರ್ಯ ನೌಕರರು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಕೆಲಸ ಮಾಡುವ ಅಭ್ಯಾಸವನ್ನು ಬಿಡಬೇಕು. ಅಭಿವೃದ್ಧಿಯಲ್ಲಿ ಚೀನಾವನ್ನು ಮೀರಿಸಲು 3-ಶಿಫ್ಟ್ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು. ನಾರಾಯಣಮೂರ್ತಿ ಅವರ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

Read More

ಮಣಿಪುರದಲ್ಲಿ ಭಾರಿ ಬ್ಯಾಂಕ್ ದರೋಡೆ. 10 ಅಪರಿಚಿತ ಶಸ್ತ್ರಧಾರಿಗಳು 18.85 ಕೋಟಿ ರೂ. ಗುರುವಾರ ಸಂಜೆ ಉಖ್ರುಲ್ ಜಿಲ್ಲೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ (ಪಿಎನ್ ಬಿ) ದರೋಡೆ ನಡೆದಿದೆ. ಮೇ 3 ರಂದು ಕೋಮುಗಲಭೆಗಳು ಭುಗಿಲೆದ್ದ ನಂತರ ಮಣಿಪುರದಲ್ಲಿ ನಡೆದ ಮೂರನೇ ಬ್ಯಾಂಕ್ ದರೋಡೆ ಇದಾಗಿದೆ. ಬ್ಯಾಂಕ್ ಕೆಲಸ ಮುಗಿದ ನಂತರ ದರೋಡೆ ನಡೆದಿದೆ. ದಿನದ ವಹಿವಾಟು ಮತ್ತು ಹೂಡಿಕೆ ಚಟುವಟಿಕೆಗಳನ್ನು ಮುಗಿಸಿ ಮುಖ್ಯ ಗೇಟಿನ ಶಟರ್ ಮುಚ್ಚಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಒಳಗೆ ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಿ ಶಸ್ತ್ರಸಜ್ಜಿತ ಹತ್ತು ಮಂದಿ ಏಕಾಏಕಿ ಒಳಗೆ ನುಗ್ಗಿ ಸ್ಟ್ರಾಂಗ್ ರೂಂ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಮ್ಯಾನೇಜರ್ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಗ್ಗು ಬಡಿದಿದ್ದಾರೆ. ಬಳಿಕ ಬ್ಯಾಂಕಿನಲ್ಲಿದ್ದ 18.85 ಕೋಟಿ ರೂ.ಗಳನ್ನು ಈ ತಂಡ ದೋಚಿತ್ತು. ಬ್ಯಾಂಕಿನ ಒಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಎಕೆ ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಮತ್ತು ಆಲಿವ್ ಹಸಿರು, ಖಾಕಿ ಸಮವಸ್ತ್ರ ಮತ್ತು ಟ್ರ್ಯಾಕ್‌ಸೂಟ್‌ಗಳನ್ನು ಧರಿಸಿ ಬಂದಿರುವುದು…

Read More

ಭಾರತ ಮತ್ತ ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ ಓವರ್‌ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸಿಸ್ ಪಡೆ ಕೇವಲ 154 ರನ್ ಗಳಿಸಿ ಭಾರತದ ಎದುರು ಸೋಲು ಒಪ್ಪಿಕೊಂಡಿದೆ. ಅಲ್ಲದೇ 3-1 ಅಂತರದಿಂದ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಟೀಂ ಇಂಡಿಯಾ ಭರ್ಜರಿ ಸೇಡು ತೀರಿಸಿಕೊಂಡಿದೆ. ಆಸಿಸ್ ಪರ ಟ್ರಾವಿಸ್ ಹೆಡ್ 31, ಟಿಮ್ ಡೇವಿಡ್ 19, ಬೆನ್ ಮೆಕ್‌ಡೆರ್ಮೋಟ್ 19, ಮ್ಯಾಥ್ ಶಾರ್ಟ್ 22 ಮತ್ತು ಮ್ಯಾಥ್ಯ ವೇಡ್ 36 ರನ್ ಗಳಿಸಿದರು. ಭಾರತದ ಪರ ಅಕ್ಷರ್ ಪಟೇಲ್ 3, ಚಹರ್ 2, ಬಿಫ್ಲೋಯ್ ಮತ್ತು ಆವೇಶ್ ತಲಾ 1 ವಿಕೆಟ್ ಪಡೆದರು.

Read More

ಡಿ.4 ರಿಂದ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ರೆಡಿಯಾಗುತ್ತಿದೆ. ಸರ್ಕಾರ ಕಳೆದ ನಾಲೈದು ತಿಂಗಳಲ್ಲಿ ನಡೆಸಿರುವ ಆಡಳಿತ, ಗ್ಯಾರೆಂಟಿಗಳ ಘೋಷಣೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಶ್ನಿಸಲು ಬಿಜೆಪಿ ಸಿದ್ಧವಾಗಿದ್ದು, ಸೋಮವಾರ ಅಥವಾ ಮಂಗಳವಾರ ಆ‌ರ್. ಅಶೋಕ್ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದೊಂದಿಗೆ ಬಿಜೆಪಿ ಸರ್ಕಾರವನ್ನು ಎದುರಿಸಲಿದೆ. ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಷ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿಯೇ ವಿಪಕ್ಷ ಬಿಜೆಪಿ ಮುಖ್ಯ ಸಚೇತನ ಆಯ್ಕೆ ಮಾಡಲಿದೆ ಎಂದು ಆ‌ರ್. ಅಶೋಕ್ ತಿಳಿಸಿದ್ದಾರೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ವಿಪಕ್ಷದ ಮುಖ್ಯ ಸಚೇತರ ಆಯ್ಕೆಯಾಗಬೇಕಾಗಿದೆ. ಸುವರ್ಣ ವಿಧಾನಸೌಧದಲ್ಲಿ ಈ ಪ್ರಕ್ರಿಯೆ ಮಾಡುತ್ತೇವೆ. ಕಿತ್ತೂರು ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಶಾಸಕರೊಬ್ಬರು ಮುಖ್ಯ ಸಚೇತಕರಾಗಲಿದ್ದಾರೆ ಎಂದಿದ್ದಾರೆ.

Read More