Subscribe to Updates
Get the latest creative news from FooBar about art, design and business.
- ಪುತ್ತೂರಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಿ.ಸುರೇಶ್ ಅವರಿಗೆ ಯಶವಂತಪುರ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ
- ಬೀದರ್: ಸ್ನಾನದ ಗೃಹಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ!
- ಬಳ್ಳಾರಿ: ಮೃತರಿಗೆ ಗೃಹಲಕ್ಷ್ಮೀ ಹಣ ಜಮೆ; ಫಲಾನುಭವಿಗಳ ಮರು ಪರಿಶೀಲನೆಗೆ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಾಕೀತು
- “ನಿಮ್ಮ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಿ”: ಕ್ಷಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಪಡೆಯೋದು ಹೇಗೆ? | ಪ್ರತಿ ತಿಂಗಳು ರೂ.1,000 ನೆರವು
- ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
- ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
- ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
- ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
Author: admin
ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೊಮ್ಮನಹಳ್ಳಿಯ ವಿವೇಕಾನಂದ ವೃತ್ತದಲ್ಲಿ ಶನಿವಾರ ಸ್ಥಳೀಯ ಬಿಜೆಪಿ ಘಟಕ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಎಂ. ಸತೀಶ್ ರೆಡ್ಡಿ, ಉಮಾಪತಿ ಶ್ರೀನಿವಾಸ್ ಗೌಡ ವರ್ಗಾವಣೆ ದಂಧೆ ನಡೆಸಿರುವುದು ಆಡಿಯೊ ಸಂಭಾಷಣೆಯಲ್ಲಿ ಸ್ಪಷ್ಟವಾಗಿದೆ. ಸರ್ಕಾರ ನೇರವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ ಎಂದರು.
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಈ ತಿಂಗಳ 9ರಿಂದ 11ರ ವರೆಗೆ ಮೂರು ದಿನ ಜಾಗತಿಕ ಮಟ್ಟದ ‘ಸಿರಿಧಾನ್ಯ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಆಧಾರಿತ ಕೃಷಿ ಮೇಳ ಹಾಗೂ ವಿಚಾರ ಸಂಕಿರಣ’ವನ್ನು ಆಯೋಜಿಸಲಾಗಿದೆ. ಬೆಂಗಳೂರು ಕೃಷಿ ವಿವಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ ಆವರಣದಲ್ಲಿ ಸಂಘಟಿಸಿರುವ ಈ ಕೃಷಿ ಮೇಳದಲ್ಲಿ ವಿವಿಧ ದೇಶಗಳ ಕೃಷಿ ವಿಜ್ಞಾನಿಗಳು ಸಾವಯವ ಪರಿಣಿತರು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಬೀದರ್: ಮಾಜಿ ಸಚಿವ , ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷರಾಗಿರುವ ಭೀಮಣ್ಣ ಖಂಡ್ರೆ ಅವರ 100ನೇ ಜನ್ಮ ಶತಮಾನೋತ್ಸವ ಸಮಾರಂಭ ಭಾಲ್ಕಿಯಲ್ಲಿ ಬಿ. ಕೆ. ಐ. ಟಿ ಆವರಣದಲ್ಲಿ ಜರುಗಿತು. ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆ, ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುತ್ತೂರು, ಶ್ರೀಶೈಲ, ಸಿದ್ದಗಂಗಾ, ಸಿರಿಗೆರೆ, ಕಾಗಿನೆಲೆ, ಕೂಡಲಸಂಗಮ, ಹರಿಹರ ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಹಾಲಿ ಹಾಗೂ ಮಾಜಿ ಶಾಸಕರು, ವೀರಶೈವ ಮಹಾಸಭೆಯ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ವೇಳೆ ನಿಜಾಮರ ವಿರುದ್ಧ ಹೋರಾಟ, ಕರ್ನಾಟಕದ ಏಕೀಕರಣ, ಬಸವತತ್ವದ ಪ್ರಸಾರಕ್ಕಾಗಿ ಖಂಡ್ರೆಯವರು ಮಾಡಿದ ಕೆಲಸಗಳನ್ನು ಸ್ಮರಿಸಿ ಗುಣಗಾನ ಮಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಲೋಕನಾಯಕ’ಅಭಿನಂದನ ಗ್ರಂಥ ಬಿಡುಗಡೆಗೊಳಿಸಿದರು. ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಭೀಮಣ್ಣ ಖಂಡ್ರೆ ಹಾಗೂ ನಮ್ಮ…
ತುರುವೇಕೆರೆ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಡ್ಡೇನಹಳ್ಳಿ ಹಾಗೂ ಹಾಲಪ್ಪ ಪ್ರತಿಷ್ಠಾನ ಇವರ ವತಿಯಿಂದ ಯುವ ಸಬಲೀಕರಣದ ಅಂಗವಾಗಿ ಕೌಶಲ್ಯ ಪಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ವೇದಿಕೆಯ ಮೇಲಿದ್ದ ಗಣ್ಯರು ಗಿಡಕ್ಕೆ ನೀರರೆಯುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳ ಕುರಿತಂತೆ ಮಾಹಿತಿಯನ್ನು ನೀಡಿ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಕೌಶಲ್ಯಾಧಾರಿತ ತರಬೇತಿಗಳು ಸ್ವಯಂ ಉದ್ಯೋಗ ಮಾರ್ಗದರ್ಶನಂತಹ ಲಭ್ಯವಿರುವ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ್ ಹಾಲಪ್ಪ ನೀಡಿದರು. ನಿಮ್ಮ ಕಾಲೇಜಿಗೆ ಉನ್ನತ ಶಿಕ್ಷಣ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡುವಂತಾಗಬೇಕು, ಅವರನ್ನು ಕರೆಸಿ ಕಾಲೇಜಿನ ಮೂಲಭೂತ ಸೌಕರ್ಯ ಒಳಗೊಂಡಂತೆ ಬೇಕಾಗಿರುವ ಕಟ್ಟಡ ಸೌಕರ್ಯ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಇದರಲ್ಲಿ ಸುಸಜ್ಜಿತ ಗ್ರಂಥಾಲಯ ಕಂಪ್ಯೂಟರ್ ಲ್ಯಾಬ್ ಇತರೆ ಸೌಲಭ್ಯಗಳು ಕಾಲೇಜಿನಲ್ಲಿ ಸಿಗುವಂತಾಗಬೇಕು. ಬೇರೆ ತಾಲೂಕಿಗಿಂತ ಇಲ್ಲಿಉತ್ತಮ ರೀತಿಯ ವ್ಯವಸ್ಥೆ ಮಾಡಲು ನೀವುಗಳು ಮನವಿ ಪತ್ರವನ್ನು ಬರೆಯಬೇಕು. ಖಾಸಗಿ ಕಾಲೇಜುಗಳಿಗಿಂತ…
ಬೆಂಗಳೂರು: ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದ ಹಣ ದುರುಪಯೋಗ ಪಡಿಸಿಕೊಂಡ ಸಂಬಂಧ ಹಾಲಿ ಅಧ್ಯಕ್ಷ ಶಾಂತರಾಮ್ ವಿರುದ್ಧ ನಗರದ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್ ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಎ. ನಾಗನಗೌಡ ದೂರು ನೀಡಿದ್ದಾರೆ. ‘2017ರಿಂದ 2020ರ ಅವಧಿಯಲ್ಲಿ ಶಾಂತಾರಾಮ್ ಅವರು ಖರ್ಚು, ವೆಚ್ಚಗಳ ಬಿಲ್ ಗಳಿಗೆ ನನ್ನ ಸಹಿ ನಕಲು ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಮಧುಗಿರಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ತೀವ್ರ ಅಸ್ವಸ್ಥನಾಗಿರುವ ಗಾಯಾಳು ವ್ಯಕ್ತಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಮಿಡಿಗೇಶಿ ಹೋಬಳಿ ಗಂಪಲಹಳ್ಳಿ ಗ್ರಾಮದ ನಿವಾಸಿ ನಾಗಭೂಷಣ್ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಗಾಯಾಳು ವ್ಯಕ್ತಿ, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಇದೇ ಗ್ರಾಮದ ರಮೇಶ್ ಬಿನ ಕರಿಯಪ್ಪ ಹಾಗೂ ಹಲ್ಲೆಗೆ ಒಳಗಾದ ನಾಗಭೂಷಣ್ ರವರ ಮಧ್ಯೆ ಕುಲ್ಲಕ್ಷ ಕಾರಣಕ್ಕೆ ಜಗಳವಾಗಿ ವೈಮನಸ್ಸಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ರಮೇಶ್ ಅವರು ನಾಗಭೂಷಣ್ ರವರ ಮನೆಗೆ ಏಕಾಏಕಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ನಾಗಭೂಷಣ್ ಕೈಕಾಲುಗಳಿಗೆ ರಕ್ತ ಬರುವಂತೆ ಹೊಡೆದು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ನಾಗಭೂಷಣ್ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಿಡಿಗೇಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಪ್ರಸ್ತುತ ರಾಜ್ಯಾದ್ಯಂತ ಇಂಟರ್ನೆಟ್ ನಿಷೇಧವನ್ನು ಮುಂದುವರಿಸಲು ಸಾಧ್ಯವಿಲ್ಲ. ಇಂಟರ್ನೆಟ್ ಸೇವೆಗಳು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ಹಿಂಸಾಚಾರ ಮುಕ್ತ ವಲಯಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಲು ಹಿಂದಿನ ಆದೇಶಗಳನ್ನು ಜಾರಿಗೊಳಿಸದಿರುವುದನ್ನು ನ್ಯಾಯಾಲಯ ಪ್ರಶ್ನಿಸಿದೆ. ರಾಜ್ಯಾದ್ಯಂತ ಇಂಟರ್ನೆಟ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ಗೋಲ್ಮಿ ಗೈಫುಲ್ಶಿಲ್ಲು ಕಬುಯಿ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಕೆಲವು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯವು ಸಾಮಾನ್ಯವಾಗಿ ಶಾಂತಿಯುತವಾಗಿದೆ. ಹಾಗಾದರೆ ಸೇವೆಗಳನ್ನು ಏಕೆ ಮರುಸ್ಥಾಪಿಸಬಾರದು? ಪರಿಸ್ಥಿತಿ ಸಹಜವಾಗಿಲ್ಲ ಎಂದು ರಾಜ್ಯ ಏಕೆ ಹೇಳಬೇಕು ಎಂದು ಪೀಠ ಪ್ರಶ್ನಿಸಿತು. ಹಿಂಸಾಚಾರ-ಪೀಡಿತ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸದಿರುವುದು ರಾಷ್ಟ್ರೀಯ ಭದ್ರತೆಯ ಪರಿಣಾಮಗಳನ್ನು ಗಮನಿಸಿದರೆ ಅರ್ಥವಾಗುವಂತಹದ್ದಾಗಿದೆ. ಆದರೆ ರಾಜ್ಯದ ಇತರ ಪ್ರದೇಶಗಳ ನಿವಾಸಿಗಳ ಹಕ್ಕುಗಳನ್ನೂ ಪರಿಗಣಿಸಬೇಕು ಎಂದು ಪೀಠವು ಗಮನಿಸಿದೆ. ನಿರ್ಬಂಧಗಳಿದ್ದರೂ ಇಂದು…
ಬೆಂಗಳೂರು: ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಸಂಜಯನಗರ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಆರೋಪ ಕೇಳಿ ಬಂದಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮುಂದೆ ಯುವತಿ ಕಾರ್ ಪಾರ್ಕಿಂಗ್ ಮಾಡಿದ್ದರು. ಈ ಸಂಬಂಧ ಮನೆಯ ಸದಸ್ಯ ಯುವತಿಗೆ ಮನಬಂದಂತೆ ನಿಂದಿಸಿದ್ದಾನೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಲು ಠಾಣೆಗೆ ಪೊಲೀಸ್ ಹೋದರೆ ದೂರು ಸ್ವೀಕರಿಸಿಲ್ಲ. ಪೊಲೀಸರ ಕಾರ್ಯವೈಕರಿಗೆ ಯುವತಿ ಸ್ನೇಹಿತರು ಅಸಮಾಧಾನ ಹೊರಹಾಕಿದ್ದಾರೆ.
ನಿವೃತ್ತ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಡೌನ್ ಲೋಡ್ ಮಾಡಿಕೊಂಡು, ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರುವ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ‘ಯಾರೂ ಹಣ ನೀಡಬಾರದು. ಸೈಬರ್ ವಂಚಕರು ಈ ರೀತಿ ನಕಲಿ ಖಾತೆಗಳ ಸೃಷ್ಟಿಸಿ ಮೋಸ ಎಸಗುತ್ತಿದ್ದಾರೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ’ ಪೊಲೀಸರು ಮನವಿ ಮಾಡಿದ್ದಾರೆ.
ನೀರಿನ ಉಪವಾಸ ಮಾಡುವುದರಿಂದ ಇವೆ ಅನೇಕ ಆರೋಗ್ಯ ಪ್ರಯೋಜನಗಳು: ನೀರಿನ ಉಪವಾಸವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಘನ ಆಹಾರ ಸೇವಿಸದೆ ಕೇವಲ ನೀರನ್ನು ಮಾತ್ರ ಕುಡಿದು ಉಪವಾಸ ಮಾಡುವ ಕ್ರಮ ಇದಾಗಿದೆ. ಕೆಲವರು 24 ಗಂಟೆಯಿಂದ 72 ಗಂಟೆಗಳ ಕಾಲ ನೀರಿನ ಉಪವಾಸ ಮಾಡುತ್ತಾರೆ. ನೀರಿನ ಉಪವಾಸವು ಇನ್ಸುಲಿನ್ ಮತ್ತು ಲೆಪ್ಟಿನ್ ಕಾರ್ಯವನ್ನು ಸುಧಾರಿಸುತ್ತದೆ. ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಹೊಸ ಜೀವಕೋಶಗಳು ಪುನರುತ್ಪಾದನೆಗೆ ಇದು ಸಹಕರಿಸುತ್ತದೆ. ಈ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ.. ಸಂಧಿವಾತ ನೋವು ಕಡಿಮೆಯಾಗುತ್ತದೆ..! ನೋನಿ ಹಣ್ಣನ್ನು ವಾಂತಿ ಹಣ್ಣು ಎಂದೂ ಕರೆಯುತ್ತಾರೆ. ನೋನಿ ಹಣ್ಣು ಆಲೂಗೆಡ್ಡೆ ಆಕಾರದಲ್ಲಿರುತ್ತದೆ, ಹಳದಿ ಮತ್ತು ತಿಳಿ ಹಸಿರು ಬಣ್ಣದಲ್ಲಿರುತ್ತದೆ. ಇದು ಸಣ್ಣ ಬೀಜಗಳನ್ನು ಹೊಂದಿರುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಬಯೋಟಿನ್, ಫೋಲೇಟ್, ವಿಟಮಿನ್ ಇ, ಸಸ್ಯ ಆಧಾರಿತ ಪ್ಲೇವನಾಯ್‌ಗಳು ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳೊಂದಿಗೆ ಸಾವಯವ ಆಮ್ಲಗಳು ಸಮೃದ್ಧವಾಗಿದ್ದು, ಇದು ಚಯಾಪಚಯವನ್ನು ಸುಧಾರಿಸುತ್ತದೆ. ಆದರೆ ಯಾವುದೇ…