Author: admin

ಕಾಂಗ್ರೆಸ್ ನಾಯಕ ರಾಹುಲ್  ಗಾಂಧಿಗೆ ಕೋರ್ಟ್ ಸಮನ್ಸ್ ಉತ್ತರ ಪ್ರದೇಶದ ಸುಲ್ತಾನ್‌ಪುರದ ಸಂಸದ-ಶಾಸಕ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 16 ರಂದು ಹಾಜರಾಗಲು ನಿರ್ದೇಶಿಸಲಾಗಿದೆ. 2018ರಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಕೆಟ್ಟ ಹೇಳಿಕೆ ನೀಡಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. 2018 ರಲ್ಲಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಅಮಿತ್ ಶಾ ಅವರನ್ನು ಕೊಲೆಗಾರ ಎಂದು ಆರೋಪಿಸಿದರು. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ರಾಹುಲ್ ಹೇಳಿಕೆ. ದೂರು ನೀಡಿದವರು ಬಿಜೆಪಿ ಮುಖಂಡ ವಿಜಯ್ ಮಿಶ್ರಾ. ಮಿಶ್ರಾ ಪರ ವಾದ ಮಂಡಿಸಿದ ವಕೀಲರು, ರಾಹುಲ್ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಅಪರಾಧ ಎಸಗಿದ್ದಾರೆ.

Read More

ಭಾರತದಲ್ಲಿ ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿದಾರರು ಅಷ್ಟು ಸಂಕುಚಿತ ಮನೋಭಾವ ಹೊಂದಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ. ಈ ಹಿಂದೆ ಇದೇ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ನಂತರ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದೆ. ಮೇಲ್ಮನವಿಯನ್ನು ಮುಂದುವರಿಸಬೇಡಿ ಮತ್ತು ಸಂಕುಚಿತ ಮನೋಭಾವವನ್ನು ಹೊಂದಿರಬಾರದು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ. ಅರ್ಜಿದಾರರ ವಿರುದ್ಧ ಹೈಕೋರ್ಟ್ ಮಾಡಿರುವ ಟೀಕೆಗಳನ್ನು ಹೊರಗಿಡುವ ಮನವಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿದಾರರು ಫೈಜ್ ಅನ್ವರ್ ಖುರೇಷಿ, ಅವರು ಚಲನಚಿತ್ರ ನಿರ್ಮಾಪಕ ಮತ್ತು ಕಲಾವಿದ ಎಂದು ಹೇಳಿಕೊಳ್ಳುತ್ತಾರೆ. ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಪ್ರದರ್ಶನ ನೀಡುವುದನ್ನು ಮತ್ತು ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

Read More

ವಿಜಯಪುರ: ಮೈಸೂರು ಹಾಗೂ ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ. ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯದ ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಅಸಹಾಯಕ ಮಾತುಗಳನ್ನು ನಿರೀಕ್ಷಿಸರಲಿಲ್ಲ. ಗೃಹ, ಪೊಲೀಸ್ ಹಾಗೂ ಬೇಹುಗಾರಿಕೆ ಇಲಾಖೆಯ ಸಾಮೂಹಿಕ ವೈಫಲ್ಯವೇ ಭ್ರೂಣ ಹತ್ಯೆಗೆ ಕಾರಣವಾಗಿದೆ. ಈ ಇಲಾಖೆಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಭ್ರೂಣ ಹತ್ಯೆ ತಡೆಯಬಹುದಿತ್ತು ಎಂದು ಅವರು ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ.

Read More

ಬೆಂಗಳೂರು: ಕೋರ್ಟ್ ಆದೇಶದ ಬಗ್ಗೆ ನನ್ನ ಲಾಯರ್ ಗಳು ತಿಳಿಸಬೇಕು. ಅವರು ನನಗೆ ತಿಳಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೋರ್ಟ್ ಆದೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ಯಾರು ಯಾರು ಏನು ಮಾತನಾಡಿದ್ದಾರೆ ಎಲ್ಲ ನಮ್ರತೆಯಿಂದ ನೋಡ್ತಿದ್ದೇನೆ, ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡ್ತೇನೆ. ನಾನೇನು ತಪ್ಪು ಮಾಡಿಲ್ಲ. ನಾನು ಮಾಡಿದ್ದೆಲ್ಲ ಪಾರ್ಟಿ ಸಲುವಾಗಿ ಮಾಡಿದ ಕೆಲಸ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು. ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ಕೂಡ ತೊಂದರೆ ಕೊಡ್ತೀನಿ ಅಂದ್ರೆ ಅದನ್ನು ನೋಡಲು ಭಗವಂತ ಇದ್ದಾನೆ. ನನಗೆ ತೊಂದರೆ ಕೊಟ್ಟಿದ್ದಕ್ಕೆ ಏನಾಯ್ತು ಅಂತ ರಾಜ್ಯದ ಜನರೇ ನೋಡಿದ್ದಾರೆ. ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೋಟಿ ವಂದನೆ ಅಂತ ತಿಳಿಸಿದರು.

Read More

ಕಲಬುರಗಿ: ಸದನದಲ್ಲಿ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಚಿವ ಕೃಷ್ಣ ಭೈರೇಗೌಡ ಅವರು ನಾನು ಹಣ ಪಡೆದು ಕೆಲಸ ಕೊಟ್ಟಿರುವುದಾಗಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆ ಆಗಬೇಕು. ಈ ತನಿಖೆ ಮುಗಿಯುವವರೆಗೂ ನಾನು ಸದನಕ್ಕೆ ಹೋಗುವುದಿಲ್ಲ ಎಂದು ಶಾಸಕ ಬಿ. ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ನಾನು ಪ್ರತಿಭಟನೆ ಮಾಡಿದ್ದೆ. ಆಗ ಯಾರೊಬ್ಬ ಶಾಸಕರೂ ನನ್ನ ಬೆಂಬಲಕ್ಕೆ ಬರಲಿಲ್ಲ. ನಮ್ಮ ಜಿಲ್ಲೆಯ ಶಾಸಕರು ಸಹ ನನ್ನ ಬೆಂಬಲಕ್ಕೆ ಬರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ  ಪಾಟೀಲ್ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಹೇಳಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಷಯ ನಾನು ಪ್ರಸ್ತಾವನೆ ಮಾಡಿರಲಿಲ್ಲ. ಇದೀಗ ಈ ವಿಚಾರದ ಬಗ್ಗೆ ನಾನು ಮತ್ತೆ ಪತ್ರ ಬರೆದಿದ್ದೇನೆ. ನನ್ನ ಜೀವಮಾನದಲ್ಲಿ ಸ್ವಾಭಿಮಾನದಿಂದ ಬದುಕಿದವನು, ಇಲ್ಲದಿದ್ದರೆ ನಾನು ಸತ್ತಂತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Read More

ವಿಜಯಪುರ: ಸಿಎಂಗೆ ಬಿಆರ್ ಪಾಟೀಲ್ ಅವರು ಪತ್ರ ಬರೆದಿದ್ದಾರೆ. ಸಿಎಂ ಅದರ ಬಗ್ಗೆ ನಿರ್ಣಯ ಮಾಡುತ್ತಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸದನದಲ್ಲಿ ಏನು ಹೇಳಿದ್ದೇನೆ ಎಂಬುದರ ಬಗ್ಗೆ ಮಾಹಿತಿ ಇದೆ. ನಿಮಗೆ ಕೊಡುತ್ತೇನೆ. ಅದನ್ನು ನೀವು ನೋಡಿ. ನಂತರ ನೀವೇ ನಿರ್ಧರಿಸಿ ಎಂದರು. ನಾನು ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ನನ್ನನ್ನು ಸಿಎಂ ಅವರು ಸಂಪರ್ಕಿಸಿಲ್ಲ. ಬಿಆರ್ ಪಾಟೀಲ್ ಪತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೇ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.

Read More

ಬೆಂಗಳೂರಿನ ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ವಿದ್ಯಾರ್ಥಿಯ ಕುಟುಂಬ ವಿಶ್ವವಿದ್ಯಾಲಯದ ವಿರುದ್ಧ ಗಂಭೀರ ಆರೋಪ ಮಾಡಿದೆ. ನವೆಂಬರ್ 10 ರಂದು ಆತ್ಮಹತ್ಯೆ ಮಾಡಿಕೊಂಡ 21 ವರ್ಷದ ಎಂ ಅಶ್ವಿನ್ ನಂಬಿಯಾರ್ ಅವರ ಸಹೋದರ ವಿಶ್ವವಿದ್ಯಾಲಯದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ತನ್ನ ಸಹೋದರ ಸಾವನ್ನಪ್ಪಿ 17 ದಿನಗಳಾದರೂ ವಿಶ್ವವಿದ್ಯಾಲಯವು ಕುಟುಂಬವನ್ನು ಸಂಪರ್ಕಿಸಿಲ್ಲ ಅಥವಾ ಸಾಂತ್ವನ ಹೇಳಿಲ್ಲ ಎಂದು ಅಶ್ವಿನ್ ಸಹೋದರ ಆಶಿಶ್ ಹೇಳುತ್ತಾರೆ. ಸಿಗರೇಟ್ ಪ್ಯಾಕೆಟ್ ಪತ್ತೆಗೆ ಸಂಬಂಧಿಸಿದಂತೆ ಕಾಲೇಜಿನಿಂದ ಅಮಾನತುಗೊಂಡ ನಂತರ ಅಶ್ವಿನ್ ಸಾಕಷ್ಟು ಭಾವನಾತ್ಮಕ ನೋವನ್ನು ಅನುಭವಿಸಿದ್ದಾರೆ ಎಂದು ಸ್ನೇಹಿತರು ಬಹಿರಂಗಪಡಿಸುವ ಸಂದರ್ಭದಲ್ಲೂ ವಿಶ್ವವಿದ್ಯಾಲಯದ ವಿರುದ್ಧ ಆಶಿಶ್ ಆರೋಪಗಳು ಬಂದಿವೆ. ಸಿಗರೇಟ್ ಪ್ಯಾಕೆಟ್ ಅಶ್ವಿನ್ ಅವರದ್ದು ಎಂದು ದೃಢಪಡಿಸುವ ಮುನ್ನವೇ ಅಧಿಕಾರಿಗಳು ವಿದ್ಯಾರ್ಥಿಯನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಶ್ವಿನ್ ಇದೇ ತಿಂಗಳ 20ರಂದು ವಿಶ್ವವಿದ್ಯಾಲಯದ ಕಟ್ಟಡದ 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಶ್ವಿನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಆ ದಿನ…

Read More

ಭಾರತ್ ಗೌರವ್ ವಿಶೇಷ ರೈಲಿನ ಸುಮಾರು 80 ಪ್ರಯಾಣಿಕರಿಗೆ ಆಹಾರ ವಿಷವಾಗಿದೆ. ಚೆನ್ನೈನಿಂದ ಹೊರಟಿದ್ದ ಪ್ರಯಾಣಿಕರು ಹೊಟ್ಟೆನೋವು ಮತ್ತು ಬೇಧಿಯಿಂದ ಬಳಲುತ್ತಿದ್ದರು. ವೈದ್ಯಕೀಯ ನೆರವು ನೀಡಲು ರೈಲ್ವೆ ಆಸ್ಪತ್ರೆಯ ವೈದ್ಯರು, ರೂಬಿ ಹಾಲ್‌ ನ ವೈದ್ಯರು ಮತ್ತು ಇತರ ರೈಲ್ವೆ ಅಧಿಕಾರಿಗಳನ್ನು ಪುಣೆ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಪಿಆರ್‌ಒ ರಾಮದಾಸ್ ಭಿಸೆ ತಿಳಿಸಿದ್ದಾರೆ. ಸುಮಾರು 1,000 ಪ್ರಯಾಣಿಕರಿದ್ದರು. ಅನೇಕ ಪ್ರಯಾಣಿಕರು ತಲೆತಿರುಗುವಿಕೆ, ಹೊಟ್ಟೆ ನೋವು, ವಾಂತಿ ಮತ್ತು ಭೇದಿ ಅನುಭವಿಸಿದರು. ರೈಲು ಪುಣೆ ನಿಲ್ದಾಣಕ್ಕೆ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಯಾರೂ ಆಸ್ಪತ್ರೆಗೆ ದಾಖಲಾಗಬೇಕಾಗಿಲ್ಲ. ಹೊರಡುವ ಮುನ್ನ ರೈಲನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನಲ್ಲಿ ಅಡುಗೆ ಕೋಣೆ ಇರಲಿಲ್ಲ. ಸೋಲಾಪುರದಿಂದ ಸುಮಾರು 180 ಕಿಮೀ ದೂರದಲ್ಲಿರುವ ವಾಡಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಊಟ ಸೇವಿಸಿದ್ದಾರೆ ಎಂದು ವರದಿಯಾಗಿದೆ. ರೈಲ್ವೆ ಅಧಿಕಾರಿಗಳು ಆಹಾರವನ್ನು ನೀಡಿಲ್ಲ ಮತ್ತು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು…

Read More

ಕೋಲಾರ: ಕಾಲೇಜ್ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನಗರದ ಹೊರವಲಯದ ಟಮಕ ಬಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಅಪೀನ್ ರಾಯ್ ಎಂದು ಗುರುತಿಸಲಾಗಿದೆ. ಆರೋಪಿ ನಗರದ ಮೆಡಿಕಲ್ ಕಾಲೇಜ್ ಸೇರಿದಂತೆ ಇತರ ಕಾಲೇಜ್ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಕಾಳಹಸ್ತಿಪುರದ ಗೋಲ್ಡನ್ ಸಿಟಿ ಲೇಔಟ್ ‍ನಲ್ಲಿ ಆರೋಪಿ ಮನೆ ಮಾಡಿಕೊಂಡಿದ್ದ. ಬಂಧಿತನಿಂದ ಸುಮಾರು 70 ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ರಾಜಸ್ಥಾನದಲ್ಲಿ ತಂದೆ ಮಗಳ ಕತ್ತು ಕೊಯ್ದು ಸುಟ್ಟು ಕೊಂದಿದ್ದಾರೆ. ಪಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿ ಶಿವಲಾಲ್ ಮೇಘವಾಲ್‌ ಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಆರೋಪಿಯಿಂದ ಬೇರ್ಪಟ್ಟ ನಂತರ ಆತನ ಪತ್ನಿ ಮತ್ತು ಮಗಳು ಗುಜರಾತ್ ನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹಕ್ಕೆ ತಂದೆಯ ಅಮಾನುಷ ಕೃತ್ಯವೇ ಕಾರಣ ಎಂದು ಭಾವಿಸಲಾಗಿದೆ. ಆರೋಪಿ ಶಿವಲಾಲ್ ಮೇಘವಾಲ್ ತನ್ನ ಕುಟುಂಬದಿಂದ 12 ವರ್ಷಗಳಿಂದ ಬೇರ್ಪಟ್ಟು ಪಾಲಿ ಜಿಲ್ಲೆಯಲ್ಲಿ ವಾಸವಾಗಿದ್ದಾನೆ. ಅವರ ಪತ್ನಿ ಮತ್ತು ಮಕ್ಕಳು ಗುಜರಾತ್‌ ನಲ್ಲಿ ವಾಸಿಸುತ್ತಿದ್ದಾರೆ. ಪತ್ನಿಯಿಂದ ಬೇರ್ಪಟ್ಟು ಕುಟುಂಬ ಛಿದ್ರವಾಗುತ್ತಿರುವುದಕ್ಕೆ ಹಿರಿಯ ಮಗಳ ಕೈವಾಡವಿದೆ ಎಂದು ಆರೋಪಿ ಹಾಗೂ ತಂದೆ ಶಿವಲಾಲ್ ನಂಬಿದ್ದರು. ಸೋಮವಾರ ಆರೋಪಿಯ ಇಬ್ಬರು ಪುತ್ರಿಯರು ಮದುವೆಯಲ್ಲಿ ಪಾಲ್ಗೊಳ್ಳಲು ಪಾಲಿನ ಗ್ರಾಮಕ್ಕೆ ಆಗಮಿಸಿದ್ದರು. ನಿರ್ಮಾ ಅವರನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದ ಬಳಿಕ ಈ ಕೃತ್ಯ ಎಸಗಲಾಗಿದೆ. ಮಗಳ ಕತ್ತು ಸೀಳಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ವಿಧಿವಿಧಾನ ಮುಗಿಸಿ ವಾಪಸಾಗುತ್ತಿದ್ದಾಗ ಕಿರಿಯ…

Read More