Subscribe to Updates
Get the latest creative news from FooBar about art, design and business.
- ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
- ಸಾರ್ವಜನಿಕರಿಗೆ ತಲೆನೋವಾಗಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಜನ
- ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ
- ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ
- ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ
- ಸಹಾಯಧನ ಸೌಲಭ್ಯಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನ
- ಕೊಳೆಗೇರಿಗಳು ನವನಗರ ಆಗಬೇಕು: ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಎಂ. ಶೇಟ್
- ನವೆಂಬರ್ 30ರಂದು ಕನ್ನಡ ರಾಜ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಅಪಘಾತ ವಿಮಾ ಸೌಲಭ್ಯ
Author: admin
ಬೆಂಗಳೂರು:ಬಾಹ್ಯಾಕಾಶ ಲೋಕದಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ -3 ಯೋಜನೆಯ ಲ್ಯಾಂಡರ್ ಶಶಿಯ ಸ್ಪರ್ಶಕ್ಕೆ ರೆಡಿಯಾಗಿದೆ. ಇಂದು (ಆಗಸ್ಟ್ 23) ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ಲ್ಯಾಂಡರ್ ಲ್ಯಾಂಡ್ ಆಗಲು ಸಮಯ ನಿಗದಿ ಮಾಡಲಾಗಿದೆ. ಆದ್ರೆ ಸಂಜೆ 5.45 ಕ್ಕೆ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭವಾಗಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಸೂರ್ಯ ರಶ್ಮಿ ಬಿದ್ದ ಬಳಿಕವಷ್ಟೇ ಲ್ಯಾಂಡಿಂಗ್ ಸಾಧ್ಯವಾಗಲಿದೆ. ಬರೋಬ್ಬರಿ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್ ಲ್ಯಾಂಡರ್ ಮೂರು ಲಕ್ಷ 84 ಸಾವಿರ ಕಿಲೋ ಮೀಟರ್ ದೂರ ಇರುವ ಚಂದ್ರನ ಸಮೀಪಕ್ಕೆ ತಲುಪಿದೆ. ಇನ್ನು ಚಂದ್ರನ ಕಕ್ಷೆಗೆ ಸೇರಿದ ಬಳಿಕ ನೌಕೆ ಈವರೆಗೂ ಐದು ಬಾರಿ ಪ್ರದಕ್ಷಿಣೆ ಹಾಕಿದೆ. ಇದೀಗ ಲ್ಯಾಂಡರ್ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತಿದ್ದು, ಲ್ಯಾಂಡರ್ನಿಂದ ಪ್ರಗ್ಯಾನ್ ರೋವರ್ ಹೊರಬರುವ ಕ್ಷಣಗಣನೆ ಶುರುವಾಗಿದೆ. ಬರೋಬ್ಬರಿ 45 ದಿನಗಳ ಪ್ರಯಾಣದ ಮೂಲಕ ವಿಕ್ರಮ್ ಲ್ಯಾಂಡರ್ ಮೂರು ಲಕ್ಷ…
ಬಹು ನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಚಂದ್ರಯಾನ 3 ಈಗ ಚಂದ್ರನಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿದೆ ಎಂದು ಇಸ್ರೋ ಹೇಳಿದ್ದು ಯಶಸ್ವಿ ಲ್ಯಾಂಡಿಂಗ್ ನಡೆಯಲಿ ಎಂದು ದೇಶಾದ್ಯಂತ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಉತ್ತರಾಖಂಡದ ಋಷಿಕೇಶದಲ್ಲಿ ಗಂಗಾರತಿ ಮಾಡಲಾಯ್ತು. ಋಷಿಕೇಶದ ಪರಮಾರ್ಥ ನಿಕೇತನ ಘಾಟ್ ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ ಮಾಡಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಲಿ, ದೇಶದ ಕೀರ್ತಿ ಪತಾಕೆ ಮೇಲಕ್ಕೆ ಹಾರಲಿ ಅಂತಾ ಪ್ರಾರ್ಥಿಸಲಾಯ್ತು. ಮೈಸೂರು ಬಿಜೆಪಿ ಮುಖಂಡರು ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆ ಸಲ್ಲಿಸುವ ಸಲುವಾಗಿ ನಿನ್ನೆ(ಆ.22) ರಂದೇ 82 ಬಿಜೆಪಿ ಕಾರ್ಯಕರ್ತರು ಮೈಸೂರಿನಿಂದ ಮಂತ್ರಾಲಯಕ್ಕೆ ಹೋಗಿದ್ದಾರೆ. ಇಂದು ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಶಾಸಕ ಶ್ರೀವತ್ಸ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮತ್ತೊಂದೆಡೆ ಕೊಪ್ಪಳ ಜಿಲ್ಲೆ ಗಂಗಾವತಿಯ ಸೇಂಟ್ ಪಾಲ್ಸ್ ಶಾಲೆಯ ಮಕ್ಕಳು ಚಂದ್ರಯಾನ-3…
ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ಹೃದಯಾಘಾತ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಟೀ ಕುಡಿಯಲು ಆಟೋ ನಿಲ್ಲಿಸಿ ತೆರಳುತ್ತಿದ್ದ ಚಾಲಕ ತಿಮ್ಮೇಶ್, ಆಟೋದಿಂದಲೇ ಇಳಿಯುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಎದೆಯನ್ನು ಸಾವರಿಸಿಕೊಳ್ಳುತ್ತ ಆಟೋದಿಂದ ತಿಮ್ಮೇಶ್ ಇಳಿದು ಹೋಗುವ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂಲತಃ ಮಂಡ್ಯ ಜಿಲ್ಲೆಯ ತಿಮ್ಮೇಶ್, ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಈ ಸಂಬಂಧ ಸಂಪಂಗಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ಮೇಲೆ ಕಳ್ಳತನ ಆರೋಪ ಹೊರಿಸಿದ್ದರಿಂದ ನೊಂದಿದ್ದರು ಎನ್ನಲಾದ ಜಿಮೋನ್ ವರ್ಗಿಸ್ (43)ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದ ಜಿಮೋನ್ ವರ್ಗಿಸ್, ಕೆಲಸ ಹುಡುಕಿಕೊಂಡು ವರ್ಷದ ಹಿಂದೆ ನಗರಕ್ಕೆ ಬಂದಿದ್ದರು. ಮಹಿಳಾ ಉದ್ಯಮಿಯೊಬ್ಬರ ಮನೆಯಲ್ಲಿ ಚಾಲಕರಾಗಿ ಕೆಲಸಕ್ಕೆ ಸೇರಿದ್ದರು. ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಶೌಚಾಲಯದ ಕಿಟಕಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಲಿದೆ. ರಾಜ್ಯವನ್ನು ಕಗ್ಗತ್ತಲಲ್ಲಿ ಮುಳುಗಿಸುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಮಂಡ್ಯದಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಮಧ್ಯಮ ವರ್ಗದವರ ಕರೆಂಟ್ ಬಿಲ್ ಡಬಲ್ ಬರುತ್ತಿದೆ. ಇದರಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಒಬ್ಬರಿಂದ ಕಿತ್ತುಕೊಂಡು ಮತ್ತೊಬ್ಬರಿಗೆ ಕೊಡುವ ಕೆಲಸ ಆಗ್ತಿದೆ. ಉಚಿತ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವಸ್ತುಗಳ ಬೆಲೆ ಏರಿಕೆಯಾಗಿ ಸಂಕಷ್ಟ ಎದುರಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ನೇಣು ಹಾಕಿಕೊಂಡು ಕಾಲೇಜು ಪ್ರಿನ್ಸಿಪಾಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಾಗರಾಜ ಮುದಗಲ್(56) ಆತ್ಮಹತ್ಯೆ ಮಾಡಿಕೊಂಡ ಪ್ರಿನ್ಸಿಪಾಲ್. ಇಂದು “ಜಾನಪದ ಜಾತ್ರೆ ಹೊನ್ನ ಸಂಭ್ರಮ ಎಂಬ ಕಾರ್ಯಕ್ರಮ ಇತ್ತು. ನಿನ್ನೆ ವಿವಿಧ ಕಡೆ ತೆರಳಿ ಆಮಂತ್ರಣ ಕೊಟ್ಟು ಬಂದಿದ್ದ ಪ್ರಿನ್ಸಿಪಾಲ್, ಇಂದು ಬೆಳಿಗ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಾಲೀಮು ನಡೆಸುತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರ ಗೆಲ್ಲಲು ಡಿಸಿಎಂ ಡಿಕೆ ಶಿವಕುಮಾರ್ ತಂತ್ರ ರೂಪಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, ಈ ಪೈಕಿ 3 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್, 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಆದರೆ ಬಿಜೆಪಿಯ ಮೂವರು ಶಾಸಕರಾದ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜು, ಕೆ.ಗೋಪಾಲಯ್ಯಗೆ ಕಾಂಗ್ರೆಸ್ ಗಾಳ ಹಾಕಿದ್ದು, ಘರ್ ವಾಪ್ಸಿ ಮಾಡಿಕೊಳ್ಳಲು ಕಾಂಗ್ರೆಸ್ ಸ್ಕೆಚ್ ಹಾಕಿದೆ. ಮೂವರು ಶಾಸಕರು ಕಾಂಗ್ರೆಸ್‍ಗೆ ಮರಳಿದರೆ ಕಾಂಗ್ರೆಸ್ ಬಲ ವೃದ್ಧಿಯಾಗಲಿದೆ. ಉಪಚುನಾವಣೆ ಮೂಲಕ ಹಾಲಿ 3:5 ಬಲವನ್ನು, 5:3 ಮಾಡಿಕೊಳ್ಳಲು ತಂತ್ರ ರೂಪಿಸಿದ್ದು, ಮೂವರ ಬಲದಿಂದ ಸುಲಭ ಜಯದ ಲೆಕ್ಕಾಚಾರವನ್ನು ಡಿಕೆಶಿ ಹೆಣೆದಿದ್ದಾರೆ ಎನ್ನಲಾಗಿದೆ. ಮಧ್ಯೆ ಈ ಬಾರಿ ಬಿಜೆಪಿಯಲ್ಲಿ ಹಾಲಿ ಸಂಸದ ಡಿವಿ ಸದಾನಂದ ಗೌಡ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಎಂಬ ಚರ್ಚೆಯೂ ಇದೆ. ಇದು ನಿಜವಾದರೆ, ಕಾಂಗ್ರೆಸ್‍ನಿಂದ ಸಮರ್ಥ ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲುವ…
ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2021-22ರ ಅವಧಿಯಲ್ಲಿ 63 ಕಿಮೀ ರಾಜಕಾಲುವೆಗೆ ಬಾಕ್ಸ್ ಮತ್ತು ಯೂ ಟೈಪ್ ಕಾಮಗಾರಿ ನಿರ್ವಹಿಸಲು 7454 ಕೋಟಿ ವೆಚ್ಚವಾಗಿದೆ ಎಂದು ತೋರಿಸಲಾಗಿದೆ. ವಾಸ್ತವದಲ್ಲಿ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಸರ್ಕಾರ ರಚಿಸಿರುವ ಎಸ್‌ಐಟಿಗೆ ದೂರು ನೀಡಲಾಗಿದೆ. ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎನ್, ಅಮರೇಶ್ ಅವರು ಎಸ್‌ಐಟಿಯ ಅಧ್ಯಕ್ಷ ಪಿ. ಸಿ. ಜಾಫರ್ ಅವರಿಗೆ ದಾಖಲೆಗಳ ಸಹಿತ ಪತ್ರ ಸಲ್ಲಿಸಿದ್ದಾರೆ.
ನಮ್ಮತುಮಕೂರು/ಗುಬ್ಬಿ: ಇತ್ತೀಚೆಗಷ್ಟೇ ತುಮಕೂರು ತಾಲೂಕು ಮಲ್ಲೇನಹಳ್ಳಿಯಲ್ಲಿ ಊರಿನ ಹೊರಗಡೆ ಇಡಲಾಗಿದ್ದ ಬಾಣಂತಿಯ ಮಗು ಅನಾರೋಗ್ಯ ಪೀಡಿತವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದರೂ ಇನ್ನೂ ಕೂಡ ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಲ್ಲ, ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಗುಬ್ಬಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ವರದೇವನಹಳ್ಳಿ ಹಟ್ಟಿ ಗ್ರಾಮದಲ್ಲಿ ಬಾಣಂತಿ ಮತ್ತು ಮಗುವನ್ನು ಗ್ರಾಮದ ಹೊರಗೆ ಗುಡಿಸಲಿನಲ್ಲಿ ಅಮಾನವೀಯ ಸ್ಥಿತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದ ಗೂಡಿನಂತಹ ಗುಡಿಸಲಿನಲ್ಲಿಟ್ಟ ಘಟನೆ ನಡೆದಿದೆ. ಈ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಗುಬ್ಬಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿ, ಆರಕ್ಷಕರು, ವಕೀಲರುಗಳ ಸಹಯೋಗದೊಂದಿಗೆ ಸ್ಥಳಕ್ಕೆ ತೆರಳಿ ಮಗು ಮತ್ತು ಬಾಣಂತಿಯನ್ನು ಸುರಕ್ಷಿತವಾಗಿ ಅವರ ಮನೆಗೆ ಕರೆತಂದು ಬಿಟ್ಟು ಅನಿಷ್ಠ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇನ್ನು ಯಾರು ಕೂಡ ಈ ತರಹದ ಅನಿಷ್ಠ ಪದ್ಧತಿಯನ್ನು ಆಚರಿಸದಂತೆ ತಿಳಿಹೇಳಿದ ನ್ಯಾಯಾಧೀಶರು, ಸಂವಿಧಾನಾತ್ಮಕವಾಗಿ ಮಗು ಹಾಗೂ ಬಾಣಂತಿ ಬದುಕಬೇಕು ಎಂದು ಗ್ರಾಮಸ್ಥರಿಗೆ…
ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಜಲಾಶಯಗಳು ಭರ್ತಿಯಾಗದಿದ್ದರೂ ಸಹ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿದ್ದನ್ನ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಸರ್ಕಾರದ ನಡೆಯನ್ನ ಖಂಡಿಸಿ ಮಂಡ್ಯದ ಸಂಜಯ್ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿವಿಯ ಮೇಲೆ ಹೂವಿಟ್ಟುಕೊಂಡು ರಸ್ತೆಯಲ್ಲಿ ಉರುಳಿ ಧರಣಿ ನಡೆಸಿದ್ದಾರೆ. ರೈತರ ಕಿವಿ ಮೇಲೆ ಕಾಂಗ್ರೆಸ್ ಸರ್ಕಾರ ಹೂವು ಇಡುತ್ತಿದೆ ಎಂದು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಬಾಯಿಬಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದು ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಪ್ರತಿಭಟನೆಗೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್, ಸಂಸದ ಪಿಸಿ ಮೋಹನ್ ಸೇರಿ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.