Subscribe to Updates
Get the latest creative news from FooBar about art, design and business.
- ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
- ಸಾರ್ವಜನಿಕರಿಗೆ ತಲೆನೋವಾಗಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಜನ
- ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ
- ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ
- ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ
- ಸಹಾಯಧನ ಸೌಲಭ್ಯಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನ
- ಕೊಳೆಗೇರಿಗಳು ನವನಗರ ಆಗಬೇಕು: ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಎಂ. ಶೇಟ್
- ನವೆಂಬರ್ 30ರಂದು ಕನ್ನಡ ರಾಜ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಅಪಘಾತ ವಿಮಾ ಸೌಲಭ್ಯ
Author: admin
ಪೊಲೀಸ್ ಹಾಗೂ RAW ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡಿದ ಆರೋಪದ ಮೇಲೆ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಬೆನೆಡಿಕ್ಟ್ ಸಾಬು ಬಂಧಿತ ಆರೋಪಿ. ಬೆನೆಡಿಕ್ಟ್ ಕೇರಳದ ಇಡುಕಿ ಮೂಲದವನಾಗಿದ್ದು, 6 ತಿಂಗಳ ಹಿಂದೆ ಜಿಎನ್ ಎಂ ಕೋರ್ಸ್ಗೆ ಸೇರಿದ್ದ ಬೆನೆಡಿಕ್ಟ್ ಸಾಬು ತಾನು ಕೇರಳದ ಕೃಷಿ ಅಧಿಕಾರಿ ಎಂದು ಪ್ರಿನ್ಸಿಪಾಲ್ ಬಳಿ ಹೇಳಿದ್ದ. ಬಳಿಕ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡಿದ್ದ. ಸದ್ಯ RAW ಫೀಲ್ಡ್ ಏಜೆಂಟ್ ಆಗಿರುವುದಾಗಿ ಹೇಳಿಕೊಂಡಿದ್ದ. ಕಾಲೇಜಿನಲ್ಲಿ ಡ್ರಗ್ಸ್ ಅವೇರ್ ನೆಸ್ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯ ಕಳ್ಳಾಟ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಬೆನೆಡಿಕ್ಟ್ ಪೊಲೀಸ್ ಸಮವಸ್ತ್ರವನ್ನು ಹೊಲಿಸಿಕೊಂಡಿದ್ದ. ಅನುಮಾನಗೊಂಡು ಉರ್ವಾ ಠಾಣಾ ಪೊಲೀಸರು ವಿದ್ಯಾರ್ಥಿ ಬೆನೆಡಿಕ್ಟ್ ನನ್ನು ವಶಕ್ಕೆ ಪಡೆದಿದ್ದರು. ಇದೀಗ ನಕಲಿ RAW ಅಧಿಕಾರಿಯನ್ನ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತನಿಂದ ನಕಲಿ ಐಡಿ ಕಾರ್ಡ್ ಗಳು ಪೊಲೀಸ್ ಸಮವಸ್ತ್ರ, ಮೊಬೈಲ್ ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ.
ಅಮೆರಿಕದಲ್ಲಿ ಕರ್ನಾಟಕ ಮೂಲದ ದಂಪತಿ ಹಾಗೂ ಪುತ್ರ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಈ ಘಟನೆ ನಡೆದಿದ್ದು, ಯೋಗೇಶ್ ಹೊನ್ನಾಳ(37), ಪ್ರತಿಭಾ(35), ಪುತ್ರ ಯಶ್(6) ಮೃತಪಟ್ಟವರು. ಮೃತರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ನಿವಾಸಿಗಳಾಗಿದ್ದಾರೆ. ಕಳೆದ 9 ವರ್ಷಗಳಿಂದ ಯೋಗೇಶ್, ಪ್ರತಿಭಾ ಇಬ್ಬರೂ ಅಮೆರಿಕದಲ್ಲಿ ವಾಸವಾಗಿದ್ದರು. ವೃತ್ತಿಯಲ್ಲಿ ಇಬ್ಬರೂ ಇಂಜಿನಿಯರ್ ಆಗಿದ್ದರು. ಇದೀಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿಸಿ ಮೃತದೇಹ ತರಿಸಿಕೊಡುವಂತೆ ಮೃತ ಯೋಗೇಶ್ ತಾಯಿ ಶೋಭಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರು: ಮದ್ಯದ ಅಮಲಿನಲ್ಲಿ ಬಿದ್ದು ಗಾಯಗೊಂಡಿದ್ದ ದಿನೇಶ್ ಸುಬ್ಬಾ (31), ತಮ್ಮ ಮೇಲೆ ಹಲ್ಲೆಯಾಗಿರುವುದಾಗಿ ಸುಳ್ಳು ದೂರು ನೀಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ‘ಸಿಕ್ಕಿಂನ ದಿನೇಶ್, ನಗರದ ರೆಸ್ಟೋರೆಂಟ್ ವೊಂದರ ಕೆಲಸಗಾರ, ಚೀನಾ ಪ್ರಜೆಯೆಂದು ತಿಳಿದು ದುಷ್ಕರ್ಮಿಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ದಿನೇಶ್ ಅವರೇ ಸುಳ್ಳು ದೂರು ನೀಡಿರುವುದು ಗೊತ್ತಾಗಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸ್ ಮೂಲಗಳು ಹೇಳಿವೆ.
ಬೆಂಗಳೂರು: ವ್ಯಾಪಾರಿ ಸೋಗಿನಲ್ಲಿ ಸುತ್ತಾಡಿ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಶೇಖರ್‌ನನ್ನು (50) ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಶ್ರೀರಾಮಪುರ ದಯಾನಂದನಗರದ ನಿವಾಸಿ ಶೇಖರ್, ಹಲವು ದಿನಗಳಿಂದ ಸೈಕಲ್ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿ ಗೆ 5 ಲಕ್ಷ ಮೌಲ್ಯದ 19 ಸೈಕಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರ ನಿವಾಸಿಯೊಬ್ಬರ 65 ಸಾವಿರ ಮೌಲ್ಯದ ಸೈಕಲ್ ಇತ್ತೀಚೆಗೆ ಕಳ್ಳತನವಾಗಿತ್ತು.
ಮಡಿಕೇರಿ: ಕೆಎಸ್ ಆರ್ ಟಿಸಿ ಬಸ್ಸೊಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಡಿಕ್ಕಿ ಹೊಡೆದ ಪರಿಣಾಮ ವೃತ್ತಕ್ಕೆ ಹಾನಿಯಾಗಿದ್ದು, ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿದೆ ಎನ್ನಲಾಗಿದೆ. ಇಂದು ಮುಂಜಾನೆ ಮಂಜು ಮುಸುಕಿದ ವಾತಾವರಣದಿಂದಾಗಿ ರಸ್ತೆ ಸರಿಯಾಗಿ ಗೋಚರಿಸದೇ ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಜನರಲ್ ತಿಮ್ಮಯ್ಯ ವೃತ್ತಕ್ಕೆ ಡಿಕ್ಕಿ ಹೊಡೆದಿದೆ. ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಇದೇ ಮೊದಲ ಬಾರಿ ಭಾರೀ ಹಾನಿ ಸಂಭವಿಸಿದೆ. ಜೊತೆಗೆ ಕೆಎಸ್ ಆರ್ ಟಿಸಿ ಬಸ್ ಕೂಡ ಜಖಂಗೊಂಡಿದೆ. ವರದಿ: ಮಂಜು, ಶ್ರವಣೂರು
ರಾಜ್ಯ ರಾಜಕಾರಣದಲ್ಲಿ ಮತ್ತೆ ಪಕ್ಷಾಂತರ ಪರ್ವ ಆರಂಭವಾಗುತ್ತಿದೆಯೇ ಅನ್ನುವ ಅನುಮಾನ ಆರಂಭಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಆಪರೇಷನ್ ಕಮಲ ನಡೆದಿದ್ದರೆ, ಈ ಬಾರಿ ಆಪರೇಷನ್ ಹಸ್ತ ಸದ್ದು ಮಾಡ್ತಿದೆ. ಇದೀಗ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದು, ಒಟ್ಟು 20 ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರಿಂದ ನಮಗೆ ಭಯ ಇದೆ 24 ಗಂಟೆಯೂ ನಾವು ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ರು. ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಬರುವವರು ಖಂಡಿತ ಬರಬಹುದು. ಸಹೋದರ ರಮೇಶ್ ಜಾರಕಿಹೊಳಿಯನ್ನ ಮತ್ತೆ ಪಾಪಸ್ಸು ಕಾಂಗ್ರೆಸ್ಗೆ ಕರೆತರುವ ವಿಚಾರವಾಗಿ ಮಾತನಾಡಿದ ಅವರು ನನಗೆ ಆ ಕುರಿತು ತಿಳಿದಿಲ್ಲ ಪಕ್ಷದ ಹಿರಿಯರು ಏನು ಹೇಳುತ್ತಾರೆ ಅದಕ್ಕೆ ನಾವು ಬದ್ಧ ಎಂದರು.
ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದ್ದು, ಸರ್ಕಾರ ಅಂದೇ ಮಹಿಳೆಯರ ಖಾತೆಗೆ 2 ಸಾವಿರ ರೂ. ಹಣ ಹಾಕಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು 4 ಜಿಲ್ಲೆಗಳಲ್ಲಿ 13,81,430 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ತುರುವೇಕೆರೆ : ದೇವರಾಜ್ ಅರಸು ಅವರ ಬಗ್ಗೆ ಮಾತನಾಡಲು ಐದರಿಂದ ಹತ್ತು ನಿಮಿಷ ಸಾಕಾಗುವುದಿಲ್ಲ ವಿಸ್ತೃತವಾಗಿ ವಿಚಾರಗಳನ್ನು ಮಾತನಾಡಬೇಕು ಎಂದು ತಾಲೂಕಿನ ತಹಶೀಲ್ದಾರ್ ರೇಣು ಕುಮಾರ್ ಅಭಿಪ್ರಾಯ ಪಟ್ಟರು . ಅವರು ತಾಲೂಕು ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇವತ್ತಿನ ಪರಿಸ್ಥಿತಿ ಅನುಗುಣವಾಗಿ ರಾಜ್ಯ ಸರ್ಕಾರ ಏನೇನು ಸೂಚನೆ ನೀಡಿದೆ ಅದನ್ನು ಸಾರ್ವಜನಿಕರಿಗೆ ತಲೆಪಿಸುವುದು ನಮ್ಮೆಲ್ಲರ ಜವಾಬ್ದಾರಿ ನಾವೆಲ್ಲ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು ಸರ್ಕಾರದ ಯೋಜನೆಗಳನ್ನು ಸರ್ಕಾರದ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದೇ ನಮ್ಮ ಆದ್ಯ ಕರ್ತವ್ಯ ಹಾಗೂ ಜನಸೇವೆಯನ್ನು ನಾವು ಮಾಡುತ್ತಿದ್ದೇವೆ ಇದೇ ರೀತಿ ಅರಸು ಅವರ ಹಾದಿಯಲ್ಲಿ ನಡೆಯೋಣ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಅವರ ಜಯಂತಿಯನ್ನು ಸರ್ಕಾರ ದಿನವನ್ನಾಗಿ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ, ಎಲ್ಲ ವರ್ಗದ ಎಲ್ಲ ಧರ್ಮದ…
ಕೊರಟಗೆರೆ: ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ತಣ್ಣೇನಹಳ್ಳಿ ಸಮೀಪ ನಡೆದಿದೆ. ಕೊರಟಗೆರೆ ಕಡೆಯಿಂದ ಅತೀ ವೇಗವಾಗಿ ಬಂದ ಕಾರು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 11 ಕೆ.ವಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ತಣ್ಣೇನಹಳ್ಳಿ ಗ್ರಾಮದ ಸಮೀಪ ಅತೀವೇಗವಾಗಿ ಬಂದ ಕಾರಣ ಹೈ ಪವರ್ ( 11 K.V ) ಲೈನ್ ಹೊಂದಿದ್ದ ಕಂಬ ರಾಜ್ಯ ಹೆದ್ದಾರಿ ಮಧ್ಯಭಾಗಕ್ಕೆ ಉರುಳಿ ಬಿದ್ದಿದೆ. ಘಟನೆ ಬಗ್ಗೆ ತಕ್ಷಣವೇ ಸಾರ್ವಜನಿಕರಿಂದ ಬೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು ನಂತರ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದರು. ಅಲ್ಲಿಯವರೆಗೂ ಕೆಲವು ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಉಂಟಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ರಸ್ತೆಯಲ್ಲಿ ವಾಹನಗಳು ಅತೀ ವೇಗದಿಂದ ಚಲಿಸುತ್ತಿವೆ, ಇದರಿಂದಾಗಿ ಅಪಾಯ ಸೃಷ್ಟಿಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ವರದಿ : ಮಂಜುಸ್ವಾಮಿ…
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ. ಕೊರಟಗೆರೆ : ಪಟ್ಟಣದ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಡಾಬಾ ಮತ್ತು ಲಾಡ್ಜ್ ಗಳಿಂದ ಹೊರಬರುವ ಕಲುಷಿತ ನೀರನ್ನು ಪ.ಪಂ ಮುಖ್ಯಾಧಿಕಾರಿ ಭಾಗ್ಯಮ್ಮ ತಡೆಗಟ್ಟಿದ ಘಟನೆ ನಡೆದಿದೆ. ಕೊರಟಗೆರೆ ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಡಾಬಗಳ ತ್ಯಾಜ್ಯ, ಕಲುಶಿತ ನೀರು ಬಿಡಲಾಗುತ್ತಿದ್ದು, ಇದನ್ನು ತಡೆಗಟ್ಟುವ ಕಾರ್ಯಾಚರಣೆ ವೇಳೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಡಾಬಾ ಮಾಲೀಕರ ನಡುವೆ ಸುರಿವ ಮಳೆಯಲ್ಲೇ ವಾಗ್ವಾದ, ಕಾಮಗಾರಿಗೆ ತಡೆ ನಡೆಸಿದ ಘಟನೆ ನಡೆದಿದೆ. ಜಂಪೇನಹಳ್ಳಿ ಕೆರೆಯ ದಂಡೆಯ ಮೇಲಿರುವ ಕೆಲವು ಡಾಬಾಗಳು ಮತ್ತು ಲಾಡ್ಜ್ ಗಳಿಂದ ಹೊರಬರುವ ಕಲುಶಿತ ನೀರು ಮತ್ತು ಮಲೀನ ತ್ಯಾಜ್ಯ ಬಿಡುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಭಾಗ್ಯಮ್ಮ, ಆರೋಗ್ಯಾಧಿಕಾರಿ ಮಹಮದ್ ಹುಸೇನ್ ಸೇರಿದಂತೆ ಸಿಬ್ಬಂದಿಗಳು ಸಾರ್ವಜನಿಕರ ದೂರಿನ ಮೇಲೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾದರು, ಆಗ ಡಾಬಾಗಳ ಮಾಲೀಕರು ಈ ಕೆರೆಯ ಜಾಗ ನಮ್ಮದು ಇದಕ್ಕೆ ಸರ್ಕಾರದಿಂದ ಪರಿಹಾರ…