Subscribe to Updates
Get the latest creative news from FooBar about art, design and business.
- “ತಂಬಾಕು ಸೇವನೆಯಿಂದ ಯುವ ಜನತೆ ದೂರವಿರಿ”: ತಂಬಾಕು ಮುಕ್ತ ಯುವ ಅಭಿಯಾನ
- ಸಂವಿಧಾನ ದಿನಾಚರಣೆ, ಅಂಬೇಡ್ಕರ್ ಅವರ ಪರಿನಿರ್ವಾಣ ದಿನ: ಪೂರ್ವಭಾವಿ ಸಭೆ | ಅಧಿಕಾರಿಗಳ ವಿರುದ್ಧ ಪ್ರತಿಭಟನೆ
- ತುಮಕೂರು | ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ
- ತುಮಕೂರು | ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ
- ರೈತರಿಗೆ ಹಳ್ಳಿಗಳಲ್ಲೇ ಕೆಲಸ ನಿರ್ವಹಿಸುವ ವಾತಾವರಣ ಕಲ್ಪಿಸಬೇಕು: ಶಾಸಕ ಜಿ.ಬಿ.ಜ್ಯೋತಿಗಣೇಶ್
- ತಿಪಟೂರು | ಅದ್ದೂರಿಯಾಗಿ ನಡೆದ ಸತ್ಯಗಣಪತಿ ವಿಸರ್ಜನಾ ಮಹೋತ್ಸವ
- ಕೊರಟಗೆರೆ | ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸರ್ಕಾರ ಸೂಚನೆ
- ಡಾ.ಇಂಪನಾ ಬಿ. ವರ್ಧನ್ ಅವರಿಗೆ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿ
Author: admin
ಭಗವಂತ ಖೂಬಾಗೆ ನನ್ನ ಮೇಲೆ ಕೋಪವಿದ್ರೆ ಗುಂಡಿಕ್ಕಿ ಹತ್ಯೆಮಾಡಲಿ. ಆದರೆ ನಮ್ಮ ಪಕ್ಷ, ಕಾರ್ಯಕರ್ತರಿಗೆ ಖೂಬಾ ದ್ರೋಹ ಮಾಡದಿರಲಿ, ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚೌಹಾಣ್ ವಾಗ್ದಾಳಿ ನಡೆಸಿದರು. ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ವಿಫಲವಾಗಿ ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ. ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡ್ತಿದ್ದಾರೆ. ರಸ್ತೆ ಮಧ್ಯೆ ಗುಂಡುಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚೌಹಾಣ್ ಆರೋಪ ಮಾಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಬಾಗಲಕೋಟೆ: ದುಶ್ಚಟದಿಂದ ಯುವಜನತೆ ದೂರವಿರಬೇಕು. ಆಲಸ್ಯತನವು ಸರ್ವರೋಗಗಳ ಸೂತ್ರವಾಗಿದ್ದು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು. ಸಮತೋಲನ ಆಹಾರ ಸೇವನೆ ದೈಹಿಕ ವ್ಯಾಯಾಮದಿಂದ ಸದೃಡ ವ್ಯಕ್ತಿತ್ವ ಬೆಳಸಿಕೊಳ್ಳಲು ಸಾಧ್ಯ ಎಂದು ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಎಸ್.ಬಿರಾದರ ಹೇಳಿದರು. ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರಿಂದ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ 2ನೇ ದಿನದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಇಂದಿನ ದಿನ ಮಾನಗಳಲ್ಲಿ ಆಹಾರದ ಪ್ರಮಾಣದಲ್ಲಿ ಪೌಷ್ಟಿಕಾಂಶ ಕೊರತೆ ತಲೆದೋರುತ್ತಿದೆ. ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಇವುಗಳಿಗೆ ಒಳಗಾಗದೆ ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಬೇಕು. ಧನಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಐಕ್ಯೂಎಸಿ ಸಂಯೋಜಕರಾದ ಡಾ. ಅಪ್ಪು ರಾಠೋಡ ಅವರು ಮಾತನಾಡಿ ದೇಶದ ಭವಿಷ್ಯ ಯುವಕರ ಆರೋಗ್ಯದ ಮೇಲೆ ನಿಂತಿದೆ. ವ್ಯಾಯಾಮ, ಯೋಗಾಭ್ಯಾಸಕ್ಕೆ ಒತ್ತು ನೀಡುವುದು ಅವಶ್ಯ. ಅತಿಯಾದ ಮೊಬೈಲ್…
ಧಾರವಾಡ: ಮತ್ತೇ ಮಹದಾಯಿ ಹೋರಾಟ ಮುನ್ನಲೆಗೆ ಬಂದ ವಿಚಾರವಾಗಿ ಮಾತನಾಡಿದ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ರೈತರಿಗೆ ನಮ್ಮ ವಿರುದ್ಧ ಹೋರಾಟ ಮಾಡಲು ಬೇಡ ಎಂದಿಲ್ಲ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಡಬೇಕು. ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭ ಆಗುತ್ತದೆ. ನಾವೇ ರೈತರ ಪರ ಹೋರಾಟ ಮಾಡುತ್ತೇವೆ. ನಾವು ಯೋಜನೆ ಜಾರಿ ಆಗಲಿ ಎನ್ನುವವರು, ನನ್ನ ಹೋರಾಟ ಇರುವುದೇ ಇದಕ್ಕಾಗಿ. ನಾನು ಟೀಕೆ ಟಿಪ್ಪಣಿ ಮಾಡುವುದಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿಗೆ ಆತ್ಮೀಯರು. ಈ ಅನುಮತಿ ಕೊಡಿಸುವುದು ಅವರಿಗೆ ದೊಡ್ಡ ಕೆಲಸವಲ್ಲ. ರಾಜ್ಯದ ಹಿತಕ್ಕಾಗಿ ಅನುಮತಿ ಕೊಡಿಸಬೇಕು. ಇದಕ್ಕಿಂತ ದೊಡ್ಡ ಮಾತು ಏನಿಲ್ಲ. ಅದರ ಕ್ರೆಡಿಟ್ ಬೇಕಾದರೆ ನೀವೇ ತೆಗೆದುಕೊಳ್ಳಿ. ಆದರೆ ಲೋಕಸಭಾ ಚುನಾವಣೆ ಮೊದಲು ಇದನ್ನು ಮಾಡಲಿ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್…
ರಾಜ್ಯದ 28 ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿದೆ. ಪಿ. ಎಂ. ಹರೀಶ್ ಕುಮಾರ್, ಎಚ್‌ಎಸ್ಆರ್ ಲೇಔಟ್ ಸಲೀಂ ಸಿ. ನದಾಫ್, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ; ಎಸ್. ಪ್ರಶಾಂತ್, ಹಲಸೂರು ಸಂಚಾರ ಪೊಲೀಸ್ ಠಾಣೆ: ಎ. ಡಿ. ಪ್ರೀತಂ, ಬೊಮ್ಮನಹಳ್ಳಿ; ಎಂ. ಎಸ್. ರವಿ, ಜ್ಞಾನಭಾರತಿ; ಐ. ರಹೀಂ, ಕೆ. ಜಿ. ಹಳ್ಳಿ: ಬಿ. ಚಿದಾನಂದ, ಯಶವಂತಪುರ ಸಂಚಾರ ಪೊಲೀಸ್ ಠಾಣೆ; ಎ. ಕೆ. ರಕ್ಷಿತ್, ಕೆಂಪೇಗೌಡ ನಗರ; ಎಚ್. ಸಂದೀಪ್, ಸಿಟಿ ಮಾರುಕಟ್ಟೆ; ಜಿ. ಪಿ. ರಾಜು, ಮಾಗಡಿ ರಸ್ತೆ, ಎಂ. ಎಸ್. ಅನಿಲ್‌ಕುಮಾರ್, ಪೀಣ್ಯ ಎಸ್. ಶ್ರೀಧರ್, ಕೆ. ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣೆ; ಹನುಮಂತ ಕೆ. ಭಜಂತ್ರಿ, ಹಲಸೂರು ಗೇಟ್;ಎಸ್. ಲಕ್ಷ್ಮಣಗೌಡ, ರಾಜಾಜಿನಗರ; ಸಿ. ಜೆ. ಚೈತನ್ಯ, ಕೆ. ಆರ್. ಪುರ ಸಂಚಾರ ಪೊಲೀಸ್ ಠಾಣೆ; ಬಿ. ಎಸ್. ಮಂಜುನಾಥ್, ಜಿಗಣಿ; ಎಂ. ಎಲ್. ಕೃಷ್ಣಮೂರ್ತಿ, ಯಲಹಂಕ, ಟಿ.…
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ಕುತ್ತಿಗೆಗೆ ವೇಲ್ ನಿಂದ ಬಿಗಿದು ಪತಿಯಿಂದಲೇ ಪತ್ನಿಯ ಹತ್ಯೆಯಾಗಿದೆ. ಪತ್ನಿ ಪೂಜಾ(28) ಕೊಲೆಯಾದ ಮಹಿಳೆಯಾಗಿದ್ದಾರೆ. ಕೊಲೆ ಮಾಡಿ ಮೃತದೇಹವನ್ನು ನಾಲೆಗೆ ಎಸೆದು ಪತಿ ಶ್ರೀನಾಥ್(32) ಪರಾರಿಯಾಗಿದ್ದಾನೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಮರದಲ್ಲಿ ಗೂಡು ಕಟ್ಟಿಕೊಂಡಿದ್ದ ಕಾರ್ಮೋರೆಂಟ್ ಹಾಗೂ ಈಗ್ರೆಟ್ ಜಾತಿಯ ಪಕ್ಷಿಗಳನ್ನ ಕೊಂದಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಇದೇ ಗ್ರಾಮದ ರವಿ ಬಂಧಿತ ಆರೋಪಿ. ಸಿಂದುವಳ್ಳಿ ಗ್ರಾಮದ ಸಮೀಪ ಮರದಲ್ಲಿ ಕಾರ್ಮೋರೆಂಟ್ ಮತ್ತು ಈಗ್ರೆಟ್ ಪಕ್ಷಿಗಳು ಗೂಡು ಕಟ್ಟಿದ್ದವು. ಈ ವೇಳೆ ಅದೇ ಗ್ರಾಮದ ಬಂಧಿತ ಆರೋಪಿ ರವಿ ಗೂಡನ್ನ ಕಿತ್ತು ಹಾಕಿ. 24ಮರಿಗಳನ್ನ ಸಾಯಿಸಿ, 7 ಮರಿಗಳಿಗೆ ಗಾಯಗೊಳಿಸಿದ್ದ. ಗಾಯಗೊಂಡಿದ್ದ ಮರಿಗಳಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಅರಣ್ಯಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ RFO ಸುರೇಂದ್ರ, DRFO ಮೋಹನ್ ಕುಮಾರ್, ಗಸ್ತುಪಾಲಕ ರಾಜೇಗೌಡ, ಚಾಲಕ ಗಣೇಶ್ ಭಾಗಿಯಾಗಿದ್ದರು. ಈ ಕುರಿತು ನಂಜನಗೂಡು ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್…
ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಕಾನೂನು ಪದವಿ ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ತೃತೀಯ ಲಿಂಗಿಗಳಿಗೆ) ಮೀಸಲಾತಿ ನೀಡದಿರಲು ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು, ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್ಎಲ್‌ಎಸ್‌ಯು) ಕರ್ನಾಟಕ ರಾಜ್ಯ ಹೈಕೋರ್ಟ್‌ಗೆ ತಿಳಿಸಿದೆ. ತಮಗೆ ಕಾನೂನು ಪದವಿ ಪ್ರವೇಶ ನಿರಾಕರಿಸಿರುವ ಎನ್‌ಎಲ್‌ಎಸ್‌ಯು ಕ್ರಮವನ್ನು ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಯಾದ ಮುಗಿಲ್ ಅನ್ನು ವಸಂತ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಹೀಗೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಆರೋಗ್ಯ ಇಲಾಖೆಯು ಪ್ರಾಯೋಗಿಕವಾಗಿ ಶೇಕಡ 25 ರಷ್ಟು ‘ನಮ್ಮ ಕ್ಲಿನಿಕ್’ ಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ಸೇವೆ ಒದಗಿಸಲು ಮುಂದಾಗಿದೆ. ಸದ್ಯ ನಮ್ಮ ಕ್ಲಿನಿಕ್ ಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12. 30 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4. 30 ರವರೆಗೆ ಸೇವೆ ನೀಡುತ್ತಿವೆ. ಇದರಿಂದಾಗಿ ಕೂಲಿ ಕಾರ್ಮಿಕರು ಹಾಗೂ ಉದ್ಯೋಗಸ್ಥರಿಗೆ ಸಮರ್ಪಕವಾಗಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಇಲಾಖೆಗೆ ಬಂದಿದ್ದವು. ಹೀಗಾಗಿ, ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಿರುವ ಸಚಿವ ದಿನೇಶ್ ಗುಂಡೂರಾವ್, ಸಂಜೆ ಸೇವೆ ಒದಗಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ವಾರಣಾಸಿ, ಅಯೋಧ್ಯೆ, ಗಯಾ ಟೂರ್ ಪ್ಯಾಕೇಜ್ ಸಂಬಂಧ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆದು ಕೋರಲಾಗುವುದು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆಯವರು ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಇಸ್ಲಾಮಾಬಾದ್: ರಾಷ್ಟ್ರೀಯ ಪ್ರಕ್ಷುಬ್ಧತೆ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಶಿಫಾರಸಿನ ಮೇರೆಗೆ ಸಂಸತ್ತನ್ನು ಬುಧವಾರ ತಡರಾತ್ರಿ ವಿಸರ್ಜಿಸಲಾಗಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ವೇದಿಗೆ ಸಜ್ಜಾಗಿದೆ. ಪಾಕ್ ಸಂಸತ್ತಿನ 5 ವರ್ಷಗಳ ಅವಧಿ ಪೂರ್ಣಗೊಳ್ಳಲು 3 ದಿನಗಳ ಮುಂಚಿತವಾಗಿ ಸಂಸತ್ತನ್ನು ವಿಸರ್ಜಿಸಲಾಗಿದೆ. ಆಗಸ್ಟ್ 12 ಸಂಸತ್ತಿನ ಅವಧಿ ಮುಕ್ತಾಯಗೊಳ್ಳುವ ದಿನವಾಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಸರ್ಕಾರದ ಅವಧಿ ಪೂರೈಸಿದ 60 ದಿನಗಳಲ್ಲಿ ಚುನಾವಣೆ ನಡೆಯಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನಗಳ ಕಾಲಾವಕಾಶ ಇರಲಿದೆ. ಇದೀಗ ಸಂಸತ್ತನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜನೆ ಮಾಡಿರುವುದರಿಂದ ಹೊಸ ಚುನಾವಣೆ ನಡೆಸಲು 90 ದಿನಗಳ ಕಾಲಾವಕಾಶ ಸಿಗಲಿದೆ. ಸಂಸತ್ತನ್ನು ವಿಸರ್ಜಿಸುವಂತೆ ನಾನು ಇಂದು ರಾತ್ರಿ ಅಧ್ಯಕ್ಷರಿಗೆ ಸಲಹೆ ನೀಡುತ್ತೇನೆ ಎಂದು ಷರೀಫ್ ಈ ಹಿಂದೆ ಸಂಸತ್ತಿಗೆ ತಿಳಿಸಿದ್ದರು. ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಲು ಎರಡೂ ಕಡೆಯಿಂದ ಶಿಫಾರಸು ಮಾಡಲಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗುರುವಾರ ವಿರೋಧ ಪಕ್ಷಗಳ ನಾಯಕರೊಂದಿಗೆ…