Author: admin

ರಾಜ್ಯದ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಆರ್. ಆಶೋಕ್ ಮಾತಾಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ವರಿಷ್ಠರಿಗೆ ಧನ್ಯವಾದ ತಿಳಿಸಿದರು. ಬಿಜೆಪಿಯನ್ನ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಿಮ್ಮ ಸಹಕಾರ ಕೊಡಿ ಎಂದು ಜನರಲ್ಲಿ ಮನವಿ ಮಾಡಿದರು. ಇದೇ ವೇಳೆ ನನ್ನ ಮೇಲೆ ನಂಬಿಕೆ ಇಟ್ಟು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದಕ್ಕೆ ಪಕ್ಷದ ವರಿಷ್ಠರಿಗೆ ಧನ್ಯವಾದ ಹೇಳಿದರು. ರಾಜ್ಯ ಸರ್ಕಾರದ ದುರಾಡಳಿತವನ್ನ ಜನರ ಮುಂದೆ ಇಡವುದೇ ಮೊದಲ ಗುರಿ ಎಂದು ನೂತನ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕನಾಗಿ ಮಾಜಿ ಸಚಿವ ಆರ್. ಅಶೋಕ್ ಆಯ್ಕೆಯಾದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಮೊದಲ ಗುರಿ ಸರ್ಕಾರದ ದುರಾಡಳಿತವನ್ನ ಜನರ ಮುಂದೆ ಇಡಬೇಕು. ಈ ಸರ್ಕಾರ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

Read More

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಜೀವನ ಚರಿತ್ರೆ ಇರುವ ಶಾಲಾ ಪಠ್ಯ ಪುಸ್ತಕದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ನಂತರ ಭಾರತೀಯ ನಾಯಕನ ಪಠ್ಯಪುಸ್ತಕ ಚಿತ್ರ ವೈರಲ್ ಆಗುತ್ತಿದೆ. 8ನೇ ತರಗತಿ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಪಠ್ಯಪುಸ್ತಕದಲ್ಲಿ ಈ ಪಾಠವಿದೆ ಎಂಬ ವದಂತಿ ಹಬ್ಬಿದೆ. ಇಂಡಿಯನ್ ಎಕ್ಸ್ ಪ್ರೆಸ್ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಜನಪ್ರಿಯ ಸಾಮಾಜಿಕ ಮಾಧ್ಯಮದ ಪ್ರಭಾವಿ ಮುಫದಲ್ ವೋಹ್ರಾ ಮೊದಲು X ಮೂಲಕ ಭಾರತೀಯ ಅಭಿಮಾನಿಗಳಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕವು ರೋಹಿತ್ ಅವರ ಸಂಕ್ಷಿಪ್ತ ಮತ್ತು ಲಘು ಜೀವನ ಚರಿತ್ರೆಯನ್ನು ನೀಡುತ್ತದೆ. ರೋಹಿತ್ ಭಾರತ ಕಂಡ ಅತ್ಯುತ್ತಮ ಪ್ರತಿಭಾವಂತ ಯುವ ಬ್ಯಾಟ್ಸ್‌ ಮನ್ ‌ಗಳಲ್ಲಿ ಒಬ್ಬರು ಮತ್ತು ಪುಸ್ತಕವು ತಾರೆಯ ಬಾಲ್ಯ ಮತ್ತು ಪಾಲನೆಯನ್ನು ಪರಿಚಯಿಸುತ್ತದೆ. ಇದು ಇಂಗ್ಲಿಷ್ ಪಾಠ. ಏಪ್ರಿಲ್ 30, 1987 ರಂದು ನಾಗ್ಪುರದ ಬನ್ಸೋಡ್ನಲ್ಲಿ…

Read More

ಖ್ಯಾತ ಕಲಾ ಇತಿಹಾಸಕಾರ ಮತ್ತು ಬರಹಗಾರ ಬ್ರಿಜೇಂದರ್ ನಾಥ್ ಗೋಸ್ವಾಮಿ(90) ಚಂಡೀಘಡದಲ್ಲಿ ನಿಧನರಾಗಿದ್ದಾರೆ. ಕಲಾ ರಂಗದಲ್ಲಿ ಬಿಎನ್‌ಜಿ ಎಂದೇ ಪ್ರಸಿದ್ಧರಾಗಿದ್ದ ಅವರು, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಗೋಸ್ವಾಮಿ ಅವರು 1933ರ ಆಗಸ್ಟ್ 15 ರಂದು ಜನಿಸಿದ್ದರು. ಪಹರಿ ಶೈಲಿಯ ಚಿತ್ರಕಲೆಗೆ ಹೆಸರುವಾಸಿಯಾಗಿದ್ದ ಇವರು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಪಹರಿ ಪೈಂಟಿಂಗ್ ಬಗ್ಗೆ 26 ಪುಸ್ತಕಗಳನ್ನೂ ಬರೆದಿದ್ದ ಗೋಸ್ವಾಮಿ, ಕಲಾಸೇವೆಗೆಂದೇ 1958ರಲ್ಲಿ ಐಎಸ್ ತೊರೆದಿದ್ದರು.

Read More

ಕೇಂದ್ರ ಚುನಾವಣಾ ಆಯೋಗದ ವತಿಯಿಂದ ಇಂದು ಮತ್ತು ನಾಳೆ(ನ. 18 ಮತ್ತು19) ದೇಶದಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಮಿಂಚಿನ ನೋಂದಾವಣೆ) ನಡೆಯಲಿದೆ. ರಾಜ್ಯದ ಪ್ರತಿ ಮತಗಟ್ಟೆಗಳಲ್ಲಿ ಇಂದು ಮತ್ತು ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ. ಅಧಿಕಾರಿಗಳು ಮತಗಟ್ಟೆಗಳಲ್ಲಿ ಇದ್ದು ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಮತದಾರರು ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.

Read More

ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹವನ್ನು ನಿಯಂತ್ರಿಸುವ ಉದ್ದೇಶದಿಂದ, ವೈದ್ಯರು ರೋಗದ ಕಾರಣಗಳು ಮತ್ತು ಅದನ್ನು ತ್ವರಿತವಾಗಿ ನಿಭಾಯಿಸುವ ವಿಧಾನಗಳ ಬಗ್ಗೆ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಕರ್ನಾಟಕ ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ ಅಧ್ಯಕ್ಷ ಡಾ. ಮನೋಹರ್ ನಾಗೇಶಪ್ಪ, ವಿಶೇಷವಾಗಿ ಸಾಂಕ್ರಾಮಿಕ ಯುಗದಲ್ಲಿ ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ.

Read More

ತುಮಕೂರು ಜಿಲ್ಲೆಯ ದುಂಡ ಗ್ರಾಮದಲ್ಲಿ ದಶಕದ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದ ಹೈಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂ. ಗಳ ದಂಡ ವಿಧಿಸಿದೆ. ಜತೆಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ವಿವಿಧ ಹಂತದ ಶಿಕ್ಷೆ ವಿಧಿಸಿ ಒಟ್ಟು 85 ಸಾವಿರ ರೂ. ಗಳ ದಂಡ ವಿಧಿಸಿ ಆದೇಶಿಸಿದೆ.

Read More

ಬೆಂಗಳೂರು: “ಬರಗಾಲವಿರುವ ಕಾರಣ ನರೇಗಾ ಯೋಜನೆಯ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ನಗರದ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳ- 2023 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು; “ಕನಕಪುರ ತಾಲ್ಲೂಕಿನಲ್ಲಿ ಪ್ರತಿ ರೈತರಿಗೂ ನರೇಗಾ ಯೋಜನೆಯ ಲಾಭ ದೊರೆಯುವಂತೆ ಮಾಡಿದ್ದೇನೆ. ಸಾಕಷ್ಟು ಜನ ರೈತರು ಕೊಟ್ಟಿಗೆ ಸೇರಿದಂತೆ ಸಾಕಷ್ಟು ಅನುಕೂಲ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ನಮ್ಮ ತಾಲ್ಲೂಕಿಗೆ ಉತ್ತಮವಾಗಿ ʼನರೇಗಾ ಯೋಜನೆ ಬಳಸಿಕೊಂಡ ತಾಲ್ಲೂಕುʼ ಎಂದು ವಿಧಿಯಿಲ್ಲದೆ ಪ್ರಶಸ್ತಿ ನೀಡಬೇಕಾಯಿತು. ಹೊಸದಾಗಿ ಬಿಜೆಪಿ ಸೇರಿರುವ ನಾವು ʼರೈತರ ಮಕ್ಕಳುʼ ಹಾಗೂ ರಾಜ್ಯದ ಎಲ್ಲಾ ಸಂಸದರ ಬಳಿ ಕೈ ಮುಗಿದು ಕೇಳುತ್ತೇನೆ, ಇಡೀ ರಾಜ್ಯದ ಇತಿಹಾಸದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಕ್ಕೆ ತುತ್ತಾಗಿವೆ. ನರೇಗಾ ಯೋಜನೆ ಪ್ರಕಾರ ಬರಗಾಲ ಬಂದಾಗ ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಎನ್ನುವ ಕಾನೂನಿದೆ.…

Read More

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಶುಕ್ರವಾರ ಉಗ್ರರು ಮತ್ತು ಭದ್ರತಾ ಪಡೆಗಳ ಜಂಟಿ ತಂಡದ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧಾಲ್ ತೆಹ್ಸಿಲ್‌ ನ ಗುಲ್ಲರ್-ಬೆಹ್ರೋಟ್ ಪ್ರದೇಶದಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್‌ ಪಿಎಫ್ ಜಂಟಿ ತಂಡವು ಕಾರ್ಡನ್ ಮತ್ತು ಸರ್ಚ್ ಆಪರೇಷನ್ (ಸಿಎಎಸ್‌ಒ) ಸಮಯದಲ್ಲಿ ಬೆಳಿಗ್ಗೆ ಎನ್‌ ಕೌಂಟರ್ ನಡೆಯಿತು ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನದ ಒಳಹರಿವಿನ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಎನ್‌ ಕೌಂಟರ್ ನಡೆಯುತ್ತಿದೆ ಎಂದು ಅವರು ಹೇಳಿದರು.

Read More

ಶಬರಿಮಲೆ: ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶುಕ್ರವಾರ ತೆರೆದಿದ್ದು, ಅಪಾರ ಸಂಖ್ಯೆಯ ಭಕ್ತ ಸಾಗರವೇ ದೇಗಲುದತ್ತ ಹರಿದು ಬಂದಿದೆ. ಶುಕ್ರವಾರ ನಸುಕಿನ 3ಕ್ಕೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಯಿತು. ದೇವಾಲಯದ ಮುಖ್ಯ ಅರ್ಚಕ ತಂತ್ರಿ ಮಹೇಶ್ ಮೊಹನಾರು ಅವರು ಗರ್ಭಗುಡಿಯ ಬಾಗಿಲುಗಳನ್ನು ತೆರೆದರು. ಪರ್ವತ ಶ್ರೇಣಿಯಲ್ಲಿರುವ ದೇಗುಲದ ಬಾಗಿಲು ಎರಡು ತಿಂಗಳ ಅವಧಿಗೆ ತೆರೆದಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇರಳದ ದೇವಸಂ ಸಚಿವ ಕೆ.ರಾಧಾಕೃಷ್ಣನ್‌, ಶಾಸಕರಾದ ಪ್ರಮೋದ್ ನಾರಾಯಣ್ ಹಾಗೂ ಕೆ.ಯು.ಜಿನೀಶ್ ಕುಮಾರ್ ಇದ್ದರು. ತಿರುವಾಂಕೂರು ದೇವಸ್ಥಾನಂ ಮಂಡಳಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎಸ್. ಪ್ರಶಾಂತ್ ಅವರು ಹಾಜರಿದ್ದು, ವಿಶೇಷ ಪೂಜೆ ಸಲ್ಲಿಸಿದರು.

Read More

ತಮಿಳುನಾಡಿನಲ್ಲಿ ರಾಜ್ಯಪಾಲರು-ಸರ್ಕಾರದ ನಡುವಿನ ಸಮರ ತೀವ್ರಗೊಳ್ಳುತ್ತಿದೆ. ತಮಿಳುನಾಡು ವಿಧಾನಸಭೆ ಅಂಗೀಕರಿಸಿದ 10 ವಿಧೇಯಕಗಳನ್ನು ರಾಜ್ಯಪಾಲ ಆರ್.ಎನ್.ರವಿ ತಮ್ಮ ಸಹಿ ಇಲ್ಲದೆ ವಾಪಸ್ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಮರುದಿನ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದೆ. ವಾಪಸಾದ ಮಸೂದೆಗಳನ್ನು ಅಂಗೀಕರಿಸಿ ಮತ್ತೆ ರಾಜ್ಯಪಾಲರಿಗೆ ಕಳುಹಿಸಲು ಡಿಎಂಕೆ ಸರ್ಕಾರ ನಿರ್ಧರಿಸಿದೆ. ಮಸೂದೆಗಳಿಗೆ ಅಂಕಿತ ಹಾಕದ ರಾಜ್ಯಪಾಲರ ಕ್ರಮದ ವಿರುದ್ಧ ಎಂ.ಕೆ.ಸ್ಟಾಲಿನ್ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ ಕೋರ್ಟ್ ರಾಜ್ಯಪಾಲರನ್ನು ಟೀಕಿಸಿದೆ. ಕೂಡಲೇ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲರಿಗೆ ನ್ಯಾಯಾಲಯ ಸೂಚಿಸಿತ್ತು. ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳು ಅಂಗೀಕಾರಕ್ಕೆ ಬಂದಾಗ ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ಸಂವಿಧಾನವು ಕಡ್ಡಾಯಗೊಳಿಸಿದೆ ಎಂದು ನ್ಯಾಯಾಲಯ ಸೂಚಿಸಿದೆ. ತಮಿಳುನಾಡು ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನವೆಂಬರ್ 20ಕ್ಕೆ ಮುಂದೂಡಿದೆ.

Read More