Author: admin

ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪೆಮ್ಮನಹಳ್ಳಿ ಬಳಿ ಪಿಕೋರಿಯಸ್ ಬಯೋ ಫರ್ಟಿಲೈಸರ್ಸ್ ಕಂಪನಿ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಅಧಿಕಾರಿಗಳು ಕಂಪನಿಗೆ ನೋಟಿಸ್ ನೀಡಿ ಬೀಗ ಹಾಕಿದ್ದಾರೆ. ಕಂಪನಿಯಿಂದ ಹೊರ ಬರುತ್ತಿರುವ ತ್ಯಾಜ್ಯದ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರ ದೂರು ಶಾಸಕರ ಸೂಚನೆ ಮೇರೆಗೆ, ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಒಂದು ವರ್ಷದಿಂದ ಈ ಕಂಪನಿ ರಾತ್ರಿ ವೇಳೆ ಕೋಳಿ ತ್ಯಾಜ್ಯವನ್ನು ಸಂಸ್ಕರಿಸಿ, ಮೀನಿನ ಆಹಾರ ತಯಾರಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಹೊರಬರುತ್ತಿದ್ದ ತ್ಯಾಜ್ಯದ ನೀರನ್ನು ಸಂಸ್ಕರಿಸದೆ ಹೊರಬಿಡಲಾಗುತ್ತಿತ್ತು. ಇದರಿಂದ ಪೆಮ್ಮನಹಳ್ಳಿ, ನಿಡವಂದ, ತಿಮ್ಮನಾಯಕನಹಳ್ಳಿ, ನಿಡವಂದ ಕಾಲೊನಿ ಹಾಗೂ ದಾಬಸ್‌ ಪೇಟೆ ಸುತ್ತಮುತ್ತ ದುರ್ವಾಸನೆ ಬೀರುತ್ತಿತ್ತು. ಜನರು ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ನಿರ್ಮಾಣವಾಗಿತ್ತು ಎಂದು ಇಲ್ಲಿನ ಜನರು ದೂರಿದ್ದರು. ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಇತ್ತೀಚೆಗೆ ಕಾಮಗಾರಿ ಶಂಕುಸ್ಥಾಪನೆಗಾಗಿ ಪೆಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ತ್ಯಾಜ್ಯ ದುರ್ವಾಸನೆ ಬೀರುತ್ತಿರುವ ವಿಚಾರವನ್ನು ಅವರ…

Read More

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಮೋಹನ್‌ ಕುಮಾರ್(53) ಅವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಿವಾಸಿ ಮೋಹನ್ ಕುಮಾರ್, ಹಲವರಿಂದ ಹಣ ಪಡೆದು ಮೋಜು- ಮಸ್ತಿಗೆಂದು ಬ್ಯಾಂಕಾಕ್‌ ಗೆ ಹೋಗಿದ್ದ. ಬೆಂಗಳೂರಿಗೆ ವಾಪಸು ಬರುತ್ತಿದ್ದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

Read More

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಲು ಮುಂದಿನ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ರಾಗಿ ಮಾಲ್ಟ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಡಿಡಿಪಿಐ, ಬಿಇಒಗಳು, ನೋಡಲ್ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮೊದಲ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದರು. ಮುಂದಿನ ಮೂರು ವರ್ಷಗಳಲ್ಲಿ 3,000 ಕರ್ನಾಟಕ ಸಾರ್ವಜನಿಕ ಶಾಲೆಗಳನ್ನು (ಕೆಪಿಎಸ್) ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು. ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಇದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ನಿಧಿ ಬಳಸಲಾಗುವುದು ಮತ್ತು ಇಲಾಖೆಯು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಶಾಲೆಗಳ ಮೂಲಸೌಕರ್ಯಕ್ಕಾಗಿ 600 ಕೋಟಿ ರೂಪಾಯಿ ವೆಚ್ಚವನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

Read More

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಸಂಚಲನ ಮೂಡಿಸುತ್ತಿದೆ. ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡ ಈ ಪ್ರಕರಣದಲ್ಲಿ ಇಬ್ಬರು ನಕಲಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ನೀರಜ್ ಅಗರ್ವಾಲ್ ಎಂಬ ವೈದ್ಯರು ಗ್ರೇಟರ್ ಕೈಲಾಶ್‌ನಲ್ಲಿ ಅಗರ್ವಾಲ್ ವೈದ್ಯಕೀಯ ಕೇಂದ್ರವನ್ನು ನಡೆಸುತ್ತಿದ್ದಾರೆ. ನೀರಜ್ ಅವರು ಮಾಜಿ ಲ್ಯಾಬ್ ಟೆಕ್ನಿಷಿಯನ್ ಮಹೇಂದರ್ ಅವರ ಸಹಾಯದಿಂದ ಅಕ್ರಮವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಬೆಂಗಳೂರು: ಮನುಷ್ಯನ ಎಲ್ಲ ಪ್ರಶ್ನೆಗಳಿಗೂ ವಚನದಲ್ಲಿ ಉತ್ತರ ಇದೆ. ಕಳಬೇಡ ಕೊಲಬೇಡ ಎನ್ನುವುದು ನಮ್ಮ ಧ್ಯೇಯವಾಗಬೇಕು. ಅದನ್ನು ಪಾಲಿಸಿದರೆ ಮನುಷ್ಯ ಸಂತೋಷ ಮತ್ತು ಸಮಾಧಾನದಿಂದ ಸರಳ ಜೀವನ ನಡೆಸಬಹುದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹದಿನೆಂಟನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಎಸ್.ಷಡಕ್ಷರಿ ಅವರ “ಕ್ಷಣ ಹೊತ್ತು ಅಣಿಮುತ್ತು” ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶರಣ ಸಾಹಿತ್ಯ ವಚನದ ರೂಪದಲ್ಲಿ ಬರದೇ ಇದ್ದರೆ ಕನ್ನಡ ಸಾಹಿತ್ಯ ಎಷ್ಟು ಬಡವಾಗುತ್ತಿತ್ತು ಎಂದು ಎಲ್ಲರೂ ಯೋಚನೆ ಮಾಡಬೇಕಿದೆ. ಮಾತಿಗೆ ಅರ್ಥ ಬರಬೇಕಾದರೆ ನಡೆ ನುಡಿ ಬಹಳ ಮುಖ್ಯ, ಜ್ಞಾನ, ವಿಜ್ಞಾನ ತಂತ್ರಜ್ಞಾನ ಎಲ್ಲವೂ ಇದೆ. ಅದರಲ್ಲಿ ನಮ್ಮ ತನದ ಭಾವ ಮೂಡಬೇಕಿರುವುದು ಮುಖ್ಯವಾಗಿದೆ. ವಚನಗಳು ಶುದ್ದ ಕನ್ನಡದಲ್ಲಿ ಶರಣರು ಕರ್ನಾಟಕಕ್ಕೆ  ಕೊಟ್ಟಿರುವ ಶಾಸ್ವತ ಕೊಡುಗೆಯಾಗಿದೆ ಎಂದು ಹೇಳಿದರು. ಇವನಾರವ ಇವನಾರವ…

Read More

ತಮಿಳುನಾಡು: ತಮಿಳುನಾಡಿನ ಜಾವಡಿ ಬೆಟ್ಟದಲ್ಲಿ ಭಾರೀ ದುರಂತವೊಂದು ನಡೆದಿದೆ. ದೀಪಾವಳಿ ಹಬ್ಬದಂದು ಬೇಟೆಗೆ ಹೋಗಿ ಜಿಂಕೆಯನ್ನು ಹೊಡೆಯುವ ಬದಲು ಗುರಿ ತಪ್ಪಿ ತನ್ನ ಸ್ನೇಹಿತನಿಗೆ ಗುಂಡು ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಜಮುನಾಮರತೂರಿನ ಶಕ್ತಿವೇಲ್, ಪ್ರಕಾಶ್ ಮತ್ತು ಶಕ್ತಿವಾಸನ್ ಬೇಟೆಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Read More

ಬೆಂಗಳೂರು: ರೈಲ್ವೆಯ ಮಹತ್ವದ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ ಆರ್‌ ಪಿ) ಕಾರಿಡಾರ್-2ರಲ್ಲಿ ಎತ್ತರಿಸಿದ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪಿಯರ್ (ಪಿಲ್ಲರ್) ನಿರ್ಮಾಣ ಕಾರ್ಯ ಆರಂಭವಾಗಿದೆ. ಚಿಕ್ಕಬಾಣಾವರ-ಬೈಯಪ್ಪನಹಳ್ಳಿ ಮಾರ್ಗವು ಕಾರಿಡಾರ್-2 (ಮಲ್ಲಿಗೆ ಮಾರ್ಗ) ಆಗಿದ್ದು, 25 ಕಿ. ಮೀ. ದೂರವನ್ನು ಹೊಂದಿದೆ. ಅದರಲ್ಲಿ 16.5 ಕಿ. ಮೀ. ನೆಲಮಟ್ಟದಲ್ಲಿ ಇರಲಿದೆ. ಹೆಬ್ಬಾಳದಿಂದ ಯಶವಂತಪುರದವರೆಗೆ 8.5 ಕಿ. ಮೀ. ನಷ್ಟು ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ಮಾಣಗೊಳ್ಳಲಿದೆ.

Read More

ಬೆಂಗಳೂರು: ಗೊಂಬೆ ಮಾಸ್ಕ್ ಧರಿಸಿಕೊಂಡು ರಸ್ತೆ ಬದಿ ಪಾರ್ಕ್‌ ಮಾಡಿದ್ದ ಕಾರು ಮತ್ತು ಬೈಕ್‌ಗಳನ್ನು ಧ್ವಂಸ ಮಾಡಿದ್ದ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏರಿಯಾದಲ್ಲಿ ಹವಾ ಇಡಲು ಲಗ್ಗೆರೆ ಬಳಿ ಬೈಕ್‌ ನಲ್ಲಿ ಬಂದಿದ್ದ ಪುಂಡರ ಗ್ಯಾಂಗ್, 15 ಕಾರು ಹಾಗೂ ಬೈಕ್ ‌ಗಳನ್ನು ಪುಡಿಗೈದಿದ್ದರು. ಕಂಠ ಪೂರ್ತಿ ಕುಡಿದು ಬೈಕ್‌ ಗಳಲ್ಲಿ ಬಂದು ತೂರಾಡುತ್ತಾ ಮನಬಂದಂತೆ ರಾಡ್ ಮತ್ತು ಲಾಂಗ್‌ಗಳಿಂದ ಕಾರುಗಳ ಗ್ಲಾಸ್ ಪುಡಿ ಮಾಡಿ ಪರಾರಿಯಾಗಿದ್ದರು.

Read More

ಬಿ.ವೈ. ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಮಿತ್ ಶಾರನ್ನು ಕರೆಸಿ ದೊಡ್ಡ ಸಮಾವೇಶಕ್ಕೆ ಚಿಂತನೆ ಮಾಡಿದ್ದೇವೆ ಎಂದು ಬಿ.ವೈ. ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಒಂದು ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಅಪೇಕ್ಷೆ ಇದೆ. ಮೋದಿ, ಶಾ, ನಡ್ಡಾ ಆದೇಶದಂತೆ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಕಾಣ್ತಿದೆ. ಎಲ್ಲಾ ನಾಯಕರು ವಿಜಯೇಂದ್ರಗೆ ಆಶೀರ್ವಾದ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದರು.

Read More

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ ನ ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಇಬ್ಬರು ಉಗ್ರರು ಹತರಾಗಿದ್ದಾರೆ. ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕಳಪೆ ಗೋಚರತೆ ಮತ್ತು ಕೆಟ್ಟ ಹವಾಮಾನದ ಲಾಭವನ್ನು ಭಯೋತ್ಪಾದಕರು ಒಳನುಸುಳಲು ಬಳಸಿಕೊಂಡರು ಎಂದು ಭಾರತೀಯ ಸೇನೆ ಹೇಳಿದೆ. ಅಕ್ಟೋಬರ್‌ ನಲ್ಲಿಯೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ಉರಿ ಸೆಕ್ಟರ್ ‌ನಲ್ಲಿ ಎಲ್ ‌ಒಸಿ ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದವು. ಇಬ್ಬರು ಭಯೋತ್ಪಾದಕರನ್ನು ಕೊಂದ ನಂತರ, ಸೇನೆಯು ಅವರಿಂದ ಎರಡು ಎಕೆ ಸರಣಿ ರೈಫಲ್‌ಗಳು, 6 ಪಿಸ್ತೂಲ್‌ ಗಳು ಮತ್ತು 4 ಚೈನೀಸ್ ಹ್ಯಾಂಡ್ ಗ್ರೆನೇಡ್‌ ಗಳನ್ನು ವಶಪಡಿಸಿಕೊಂಡಿದೆ.

Read More