Author: admin

ತುಮಕೂರು: ಲಂಚದ ಹಣ ಸ್ವೀಕರಿಸುವಾಗಲೇ ಕೆಪಿಟಿಸಿಎಲ್ ಚೀಫ್ ಎಂಜಿನಿಯರ್‌ ನಾಗರಾಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಬಿ.ಎಚ್ ರಸ್ತೆ ಸಮೀಪದ ಕೆಪಿಟಿಸಿಎಲ್ ಕಚೇರಿಯಲ್ಲಿ ವ್ಯಕ್ತಿಯೊಬ್ಬರಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ನಾಗರಾಜನ್‌’ರನ್ನು ವಶಕ್ಕೆ ಪಡೆಯಲಾಗಿದೆ. ಪವರ್ ಲೈನ್ ಎಳೆಯಲು ಅನುಮತಿ ನೀಡಲು ಗುತ್ತಿಗೆದಾರರೊಬ್ಬರಿಂದ ನಾಗರಾಜನ್ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗಸ್ಟ್ 4ರಂದು 50 ಸಾವಿರ ಮುಂಗಡ ನೀಡಿದ್ದ ಗುತ್ತಿಗೆದಾರ ಉಳಿದ 50 ಸಾವಿರ ರೂ.ಗಳನ್ನು ನೀಡುವಾಗ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು ಲೋಕಾಯುಕ್ತ ಎಸ್.ಪಿ.ಬಾಷಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಚೀಫ್ ಎಂಜಿನಿಯರ್ ನಾಗರಾಜನ್ ರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಸಂಸ್ಕಾರ ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರಘಾಟ್ ನಲ್ಲಿ ನೆರವೇರಿತು. ಬಿಲ್ಲವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಪತಿ ವಿಜಯ ರಾಘವೇಂದ್ರ ಹಾಗೂ ಪುತ್ರ ಶೌರ್ಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸ್ಪಂದನಾ ಅವರಿಗೆ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತ ವರ್ಗ, ಸಿನಿಮಾ ರಂಗದ ತಾರೆಯರು ಅಂತಿಮ ವಿದಾಯ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ಆಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬದಿಗಿಟ್ಟು ತಮ್ಮ ಭಾಷೆಯ, ಮಾನಸಿಕ ಸ್ಥಿತಿಯ ಬಗ್ಗೆ ಟೀಕೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದ್ದಾರೆ. ಗುತ್ತಿಗೆದಾರರಿಂದ ಕಾಂಗ್ರೆಸ್ ಟ್ಯಾಕ್ಸ್ ಹಾಗೂ ವೈಎಸ್ ಟಿ ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂದು ಪುನರುಚ್ಚರಿಸಿರುವ ಅವರು, ವೈಎಸ್ ಟಿ ಟ್ಯಾಕ್ಸ್ ಜತೆಗೆ ಕಾಂಗ್ರೆಸ್ ಟ್ಯಾಕ್ಸ್ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ‘ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ!’ ಇದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೊಸ ಹೇಳಿಕೆ. ಇದೇ ಕೆಂಪಣ್ಣನವರ 40% ಆರೋಪವನ್ನೇ ಅಸ್ತ್ರ ಮಾಡಿಕೊಂಡು,ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಃಸ್ಥಿತಿ? ಇದಕ್ಕೆ ಚಿಕಿತ್ಸೆ ಬೇಡವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈಗ ವಿಷಯಾಂತರ ಮಾಡಿ, ಕುಮಾರಸ್ವಾಮಿಯ ಟೀಕೆ, ಭಾಷೆ, ಅರೋಪ ಇಟ್ಟುಕೊಂಡು ಅನುಕಂಪ ಗಿಟ್ಟಿಸಲು ಹೊರಟಿದ್ದೀರಿ! ಆದರೆ; ಅನುದಿನವೂ ವರ್ಗಾವಣೆ, ಕಮೀಷನ್ ದಂಧೆಯಲ್ಲಿ ಬೇಯುತ್ತಿರುವವರ ಕರುಣಾಜನಕ ಕಥೆಗಳಿಗೆ…

Read More

ಬೆಂಗಳೂರು:“ಏಕೆ ಈ ಅನ್ಯಾಯ ಎಂದು ಭಗವಂತನನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಆದರೂ ಸ್ಪಂದನಾ ಅವರ ಸಾವು ಘೋರ ಅನ್ಯಾಯ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸ್ಪಂದನಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಅವರು ಮಾಧ್ಯಮದವರ ಜತೆ ಮಾನಾಡಿದರು. ವಾರದ ಹಿಂದೆಯಷ್ಟೇ ವಿಜಯ ರಾಘವೇಂದ್ರ ದಂಪತಿಗಳು ನನ್ನ ಭೇಟಿಯಾಗಿದ್ದರು. ರಾಜ್ಯ ಪ್ರಶಸ್ತಿ ಬಂದ ಕಲಾವಿದರಿಗೆ ನೀಡುವ ಸೈಟಿನ ಕುರಿತು ಮನವಿ ಸಲ್ಲಿಸಿದ್ದರು. ಆದರೆ ಇಷ್ಟು ಬೇಗ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಪಂದನಾ ಅವರು ಮೃತಪಟ್ಟಿರುವುದು ಆಘಾತಕಾರಿ ಮತ್ತು ನೋವಿನ ಸಂಗತಿ. ಸ್ಪಂದನಾ ಅವರ ಹಠಾತ್‌ ಸಾವಿನ ಆಘಾತ ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ. ಕುಟುಂಬದವರ ದುಃಖದಲ್ಲಿ ನಾವು ಪಾಲುದಾರರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್…

Read More

ಹಾಸನ: ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ ಅಪ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆಬ್ಬಸಾಲೆ ಗ್ರಾಮದ ಬಳಿ ನಡೆದಿದೆ. ಸಕಲೇಶಪುರ ಪಟ್ಟಣದ ಸಮೀಪವಿರುವ ಕುಡಗರಗಳ್ಳಿ, ಆಚಂಗಿ, ಗ್ರಾಮದಿಂದ ಮಹಿಳಾ ಕಾರ್ಮಿಕರನ್ನು ಹಾರ್ಲೆ ಕಾಫಿ ತೋಟದ ಕೆಲಸಕ್ಕೆ ಪಿಕ್‌ ಅಪ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಹೆಬ್ಬಸಾಲೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಹನ ಪಲ್ಟಿಯಾಗಿದೆ. ಪಿಕ್‌ ಅಪ್ ವಾಹನದಲ್ಲಿ 20ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿದ್ದು, ಐವರು ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC…

Read More

ಮೈಸೂರು: ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸುವ ಗಜ ಪಡೆಯ ಮೊದಲ ಪಟ್ಟಿ ತಯಾರಾಗಿದೆ. ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನು ಅರಣ್ಯಾಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಸೆಪ್ಟೆಂಬರ್ 1 ರ ಗಜ ಪಯಣದಲ್ಲಿ 9 ಆನೆಗಳು ವೀರನಹೊಸಹಳ್ಳಿಯಿಂದ ಅರಮನೆಗೆ ಆಗಮಿಸಲಿವೆ. 9 ಆನೆಗಳ ಹೆಸರು ಇಂತಿವೆ: ನಾಗರಹೊಳೆ ಆನೆ ಶಿಬಿರದಿಂದ – 1) ಅಭಿಮನ್ಯು 2) ಭೀಮ 3) ಮಹೇಂದ್ರ ನಾಗರಹೊಳೆಯ ಬಳ್ಳೆ ಆನೆ ಶಿಬಿರದಿಂದ – 4) ಅರ್ಜುನ ದುಬಾರೆ ಆನೆ ಶಿಬಿರದಿಂದ – 5) ಧನಂಜಯ 6) ಗೋಪಿ ಬಂಡೀಪುರದ ರಾಮಪುರ ಶಿಬಿರದಿಂದ – 7) ಪಾರ್ಥ ಸಾರಥಿ ದುಬಾರೆ ಆನೆ ಶಿಬಿರದಿಂದ – 8) ವಿಜಯ ಭೀಮನಕಟ್ಟೆ ಆನೆ ಶಿಬಿರದಿಂದ – 9) ವರಲಕ್ಷಿ ಆನೆಗಳು ಬರಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA…

Read More

ಬೆಂಗಳೂರಿನ ಶ್ರೀರಾಂಪುರಂದ ಹರಿಶ್ಚಂದ್ರ ಘಾಟ್ ​ನಲ್ಲಿ ನಡೆಯಲಿರುವ ಅಂತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ​ನಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡುತ್ತಿದ್ದಾರೆ. 15 ಪೌರ ಕಾರ್ಮಿಕರಿಂದ ಕ್ಲೀನಿಂಗ್ ಕಾರ್ಯ ನಡೆಯುತ್ತಿದೆ. ಬರ್ನಿಂಗ್ ಮಾಡುವ ಮೆಷಿನ್ ಮತ್ತು ಕೊಠಡಿಯನ್ನು ಕಾರ್ಮಿಕರು ಪೈಂಟಿಂಗ್ ಮಾಡುತ್ತಿದ್ದಾರೆ. ಮೃತದೇಹ ಬರ್ನಿಂಗ್ ಮೆಷಿನ್ ಒಳಗೆ ಹೋಗುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಇಂದು ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರ ಘಾಟ್ ​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಟೊಮೇಟೊ ಕಳ್ಳತನವೂ ಹೆಚ್ಚುತ್ತಿದೆ. ಹೆಚ್ಚಿನ ಬೆಲೆಗಳ ಜೊತೆಗೆ, ಕಳ್ಳತನದ ಅನೇಕ ವರದಿಗಳು ವರದಿಯಾಗುತ್ತವೆ. ಹೀಗಾಗಿ ಕಳ್ಳತನಕ್ಕೆ ಹೆದರಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ರೈತರೊಬ್ಬರು ತಮ್ಮ ಹೊಲದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಹಣ್ಣಿನ ಬೆಲೆ ಹೆಚ್ಚಿರುವುದರಿಂದ ಜಮೀನಿನಲ್ಲಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಯಿತು. ಮಹಾರಾಷ್ಟ್ರದಲ್ಲಿ ಟೊಮೆಟೊ ಬೆಲೆ ಕೆಜಿಗೆ 160 ರೂ. ಟೊಮ್ಯಾಟೋ ಭಾರತೀಯ ಕುಟುಂಬದ ಆಹಾರದ ಅತ್ಯಗತ್ಯ ಭಾಗವಾಗಿದೆ. ಹೀಗಾಗಿ ಟೊಮೇಟೊ ಬೆಲೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ರೈತ ತನ್ನ ಜಮೀನಿನಲ್ಲಿ 22 ಸಾವಿರ ರೂ.ವೆಚ್ಚದಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ಇದು ಇಂದಿನ ಅಗತ್ಯವಾಗಿದೆ ಎಂದು ರೈತ ಶರದ್ ರಾವಟೆ ಹೇಳಿದರು. ಟೊಮೇಟೊ ಬೆಲೆ ಏರಿಕೆಯ ನಡುವೆಯೇ ಹಲವಾರು ಟೊಮೆಟೊ ಕಳ್ಳತನದ ಘಟನೆಗಳು ವರದಿಯಾಗಿವೆ. ಕರ್ನಾಟಕದ ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಸೋಮವಾರ 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಟ್ರಕ್ ನಾಪತ್ತೆಯಾಗಿದೆ ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್‌ ನ ತರಕಾರಿ ಮಾರುಕಟ್ಟೆಯಲ್ಲಿನ ಅಂಗಡಿಗಳಿಂದ ಸುಮಾರು 40…

Read More

ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ಕ್ವಿಟ್ ಇಂಡಿಯಾ ಪ್ರತಿಭಟನೆ ಇಂದು ಆರಂಭವಾಗಲಿದೆ. ನಿನ್ನೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನೆಯನ್ನು ಘೋಷಿಸಿದರು. ಭಾರತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ರಾಜಕೀಯವನ್ನು ಕೊನೆಗೊಳಿಸಬೇಕೆಂದು ಪ್ರತಿಭಟನೆಯು ಕರೆ ನೀಡುತ್ತದೆ. ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಹಳ್ಳಿ ಹಳ್ಳಿಗಳಲ್ಲಿ ಅಮೃತ ಕಲಾಯಾತ್ರೆ ಆಯೋಜಿಸಲಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಎಲ್ಲಾ ನಾಗರಿಕರು ಪ್ರತಿಜ್ಞೆ ಮಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ಜತೆಯಲ್ಲಿ ಬಿಜೆಪಿ ನನ್ನ ನಾಡು, ನನ್ನ ನಾಡು ಅಭಿಯಾನವನ್ನೂ ಆಯೋಜಿಸಲಿದೆ. ಮನ್ ಕಿ ಬಾತ್ ನಲ್ಲಿ ಪ್ರಧಾನಿಯವರು ಈ ಅಭಿಯಾನಕ್ಕೆ ಕರೆ ನೀಡಿದ್ದರು. ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್…

Read More

ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ, ದೆಹಲಿಯಲ್ಲಿ ಮತ್ತೊಂದು ಹಿಂಸಾಚಾರದ ಸರಣಿ. ದೆಹಲಿಯಲ್ಲಿ 10 ನಿಮಿಷಗಳಲ್ಲಿ ಮೂರು ದರೋಡೆ ಯತ್ನಗಳು ನಡೆದಿವೆ. ಬೈಕ್ ನಲ್ಲಿ ಬಂದ ಮೂವರ ತಂಡ ನಡೆಸಿದ ದಾಳಿಯಲ್ಲಿ ಹಿರಿಯ ನಾಗರಿಕರೊಬ್ಬರು ಚಾಕುವಿನಿಂದ ಇರಿದು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು 42 ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಕುಖ್ಯಾತ ಕ್ರಿಮಿನಲ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನೈಋತ್ಯ ದೆಹಲಿಯ ಸಾಗರ್‌ ಪುರ ಪ್ರದೇಶದಲ್ಲಿ ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಮೂವರು ಆರೋಪಿಗಳು ಮೊದಲು 74 ವರ್ಷದ ಮೋಹನ್ ಲಾಲ್ ಛಾಬ್ರಾ ಮೇಲೆ ಹಲ್ಲೆ ನಡೆಸಿದ್ದಾರೆ. ವೃದ್ಧನಿಗೆ ಚಾಕುವಿನಿಂದ ಇರಿದ ಬಳಿಕ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ. ವಯೋವೃದ್ಧನನ್ನು ಸಾಯಿಸುವವರೆಗೂ ನಿರಂತರವಾಗಿ ಇರಿದಿದ್ದಾನೆ ಎಂದು ವರದಿಯಾಗಿದೆ. ಮುಂದಿನ 10 ನಿಮಿಷಗಳಲ್ಲಿ ಆರೋಪಿಗಳು 54 ವರ್ಷದ ಅಶೋಕ್ ಮತ್ತು 70 ವರ್ಷದ ಓಂ ದತ್ ಮೇಲೆ ಹಲ್ಲೆ ನಡೆಸಿದ್ದಾರೆ.…

Read More