Author: admin

ಬೆಂಗಳೂರು: ಬಿಜೆಪಿಯವರು ಕೇವಲ ಸ್ವಾತಂತ್ರ್ಯದ ಫಲಾನುಭವಿಗಳು ಅಷ್ಟೇ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ. ಬಿಜೆಪಿಯ ಒಬ್ಬ ನಾಯಕರಾದರೂ ಜೈಲಿಗೆ ಹೋಗಿದ್ದಾರಾ? ನೆಹರು ಟೀಕೆ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಬಿಜೆಪಿಗರು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರೋಧವಾಗಿದ್ದವರು. ನನ್ನ ಪ್ರಕಾರ ದೇಶ ಆಳುವುದಕ್ಕೆ ಬಿಜೆಪಿಗೆ ಅರ್ಹತೆಯೇ ಇಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

Read More

ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್ ಮೆಹ್ರಾ ಅವರು 191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು. ಇದರಲ್ಲಿ ಆಯ್ದ ಮತ್ತು ಬೆಲೆ ಬಾಳುವ 6,426 ವಜ್ರಗಳಿವೆ ಹಾಗೂ 24 ಕ್ಯಾರೆಟ್ ಚಿನ್ನದ 11 ನಾಣ್ಯಗಳಿವೆ. ಭಾರತ, ಸಿಂಗಪುರ, ಜರ್ಮನಿ, ಬ್ರಿಟನ್ ಮತ್ತು ಶ್ರೀಲಂಕಾದ ಕುಶಲಕರ್ಮಿಗಳು ಈ ನಾಣ್ಯವನ್ನು ರೂಪಿಸಿದ್ದಾರೆ.

Read More

ಕರ್ನಾಟಕದಲ್ಲಿ ಕಳೆದ 4 ವರ್ಷಗಳಲ್ಲಿ 6,810 ಮಕ್ಕಳು ಅಸಹಜ ಸಾವು ಕಂಡಿದ್ದಾರೆ. 2022ರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಅಸಹಜ ಸಾವು ಕಂಡಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ, ನಂತರದ ಸ್ಥಾನಗಳಲ್ಲಿ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಿವೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿ ದೊರೆತಿದ್ದು, ಬಾಕಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಮೂರಂಕಿಯಷ್ಟಿದೆ. ಬಡತನ, ಅಪೌಷ್ಠಿಕತೆ, ಬಡ್ಡಿ ದಂಧೆ, ಮೊಬೈಲ್ ಗೀಳು ಈ ಸಾವುಗಳಿಗೆ ಪ್ರಮುಖ ಕಾರಣಗಳು.

Read More

ಉಡುಪಿಯಲ್ಲಿ ಮೊನ್ನೆ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯನ್ನ ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ್ದಾರೆ. ಈತ ಮಂಗಳೂರು ಏರ್ ಏರ್‌ ಪೋರ್ಟ್‌ ಸೆಕ್ಯೂರಿಟಿಯಲ್ಲಿಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್ ಪಿಎಫ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎನ್ನಲಾಗಿದೆ.

Read More

ನಾಗಾಲ್ಯಾಂಡ್ ನ ದಿಮಾಪುರ ಜಿಲ್ಲೆಯ ನಹರಬಾರಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿದ್ದಾರೆ. ರಾತ್ರಿ ಸುಮಾರು 10:45ಕ್ಕೆ ನಾಗಾಯೇತರ ಸಮುದಾಯದ ಜನರು ವಾಸವಾಗಿರುವ ಹುಲ್ಲಿನ ಗುಡಿಸಲುಗಳ ಸಾಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ದೀಪಾವಳಿ ಸಂಭ್ರಮದಲ್ಲಿ ಪಟಾಕಿಗಳನ್ನು ಸಿಡಿಸಿದ್ದರಿಂದ ಬೆಂಕಿಯು ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೋರ್ವರು ತಿಳಿಸಿದರು. ಆದಾಗ್ಯೂ ತನಿಖೆಯ ಬಳಿಕವೇ ಬೆಂಕಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದರು.

Read More

ತಂಡದ ಪ್ರದರ್ಶನದ ಬಗ್ಗೆ ಪಾಕ್ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ಹೇಳಿಕೆ ವಿವಾದಕ್ಕೀಡಾಗಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ, ವಿಶ್ವಕಪ್‌ ನಲ್ಲಿ ತಂಡದ ನೀರಸ ಪ್ರದರ್ಶನಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಸಂದರ್ಭದಲ್ಲಿ ರಜಾಕ್ ಬಾಲಿವುಡ್ ನಟಿ ಐಶ್ವರ್ಯಾ ರೈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು. ಐಶ್ವರ್ಯಾ ರೈ ಅವರನ್ನು ಮದುವೆಯಾದ ಮಾತ್ರಕ್ಕೆ ಸುಂದರ ಮಗು ಹುಟ್ಟುವುದಿಲ್ಲ ಎಂಬುದು ತಾರೆಯರ ಮಾತು. ಮಾಜಿ ಆಟಗಾರರಾದ ಶಾಹಿದ್ ಅಫ್ರಿದಿ ಮತ್ತು ಉಮರ್ ಗುಲ್ ಕೂಡ ಭಾಗವಹಿಸಿದ ಚರ್ಚೆಯಲ್ಲಿ ಉಲ್ಲೇಖವಾಗಿದೆ. ರಜಾಕ್ ಮಾತು ಕೇಳಿ ಅಫ್ರಿದಿ ಮತ್ತು ಗುಲ್ ಚಪ್ಪಾಳೆ ತಟ್ಟಿದರು. ನಾನು ಪಿಸಿಬಿಯ ಉದ್ದೇಶದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಆಡುವಾಗ, ಯೂನಿಸ್ ಖಾನ್ ನಾಯಕನಾಗಿ ಸ್ಪಷ್ಟ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ ವ್ಯಕ್ತಿ. ಇದು ನನಗೆ ಆತ್ಮವಿಶ್ವಾಸ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ನೀಡಿತು. ಇಲ್ಲಿ ಎಲ್ಲರೂ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದಾರೆ. ವಾಸ್ತವವಾಗಿ, ಶ್ರೇಷ್ಠ ಆಟಗಾರರನ್ನು…

Read More

ಬೆಳಗಾವಿ: ಉಚಗಾಂವ ಗ್ರಾಮದ ಶ್ರೀ ಹನುಮಾನ ಯುವಕ ಮಂಡಳದವರು ದೀಪಾವಳಿಯ ಪ್ರಯುಕ್ತವಾಗಿ ನಿರ್ಮಾಣ ಮಾಡಿದ್ದ ಕಿಲ್ಲಾವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಧುರಾ ತೇರ್ಸೆ, ಉಪಾಧ್ಯಕ್ಷ ಬಾಳು ತೇರ್ಸೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯೋಗಿತಾ ದೇಸಾಯಿ, ಹನುಮಾನ ಯುವಕ ಮಂಡಳದ ಪದಾಧಿಕಾರಿಗಳು, ಲಕ್ಷ್ಮಣ ಚೌಗುಲೆ, ಬಾಬು ಫರ್ನಾಂಡೀಸ್, ವಾಯ್ ಬಿ ಚೌಗುಲೆ, ಅಶೋಕ ಹುಕ್ಕೇರಿಕರ್, ಸುನಿಲ ದೇಸಾಯಿ, ವಕೀಲರಾದ ಶರದ್ ದೇಸಾಯಿ, ಶರದ್ ದೇಸಾಯಿ, ಪತ್ರಕರ್ತರಾದ ಎನ್ ಒ ಚೌಗುಲೆ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

Read More

ತೆಲಂಗಾಣ ವಿಧಾನಸಭೆ ಚುನಾವಣೆ ನಿಮಿತ್ಯ ವನಪರ್ತಿ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ  ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೇಘಾ ರಡ್ಡಿ ಅವರ ಪರವಾಗಿ ನಡೆದ ಪ್ರಮೂಖ ಮುಖಂಡರ ಸಭೆಯಲ್ಲಿ  ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್ಎಸ್ ಬೋಸರಾಜು ಅವರು ಭಾಗವಹಿಸಿ ಚುನಾವಣೆಯ ಸಿದ್ದತೆ ಕುರಿತಯ ಸುಧೀರ್ಘ ಚರ್ಚಿಸಿದರು‌. ಟಿಆರ್ ಎಸ್ ಪಕ್ಷ ಹಣದ ಆಮಿಷದಿಂದ ಚುನಾವಣೆ ಮಾಡುತ್ತಿದೆ. ತೆಲಂಗಾಣದಲ್ಲಿ ಹಣ ಮತ್ತು ಸ್ವಾಭಿಮಾನದ ನಡುವೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಘಾ ರಡ್ಡಿ ಗೆಲ್ಲಿಸುವ ಮೂಲಕ ಸ್ವಾಭಿನವನ್ನು ಕಾಪಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕರ್ನೂಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಅಭೂತಪೂರ್ವವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ, ಎಐಸಿಸಿ ಕಾರ್ಯದರ್ಶಿ ಚಿನ್ನಾ ರಡ್ಡಿ,  ಎಐಸಿಸಿ ಕಾರ್ಯದರ್ಶಿ ಮೋಹನ್ ರಡ್ಡಿ, ನಾಗರ ಕರ್ನೂಲ್ ಮಾಜಿ ಸಂಸದ ಮಲ್ಲು ರವಿ,  ಕೆ ಶಾಂತಪ್ಪ, ಶ್ರೀಕಾಂತ ವಕೀಲ್, ಜಿ  ಶಿವಮೂರ್ತಿ, ಶ್ರೀ ಲತಾ ರಡ್ಡಿ, ರಾಜೇಂದ್ರ ಪ್ರಸಾದ ಸೇರಿ…

Read More

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಬಗ್ಗೆ ಗಮನಹರಿಸಲು ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ಕಿವಿಮಾತು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜವಾಹರಲಾಲ್ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ  ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಾಮಾಜಿಕ, ಆರ್ಥಿಕ ಶಕ್ತಿಗೆ ಅಡಿಪಾಯ ಹಾಕಿದವರು. ಬೆಂಗಳೂರಿನಲ್ಲಿನ ಮಾನವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೆಹರೂ ಅವರು ಆ ಕಾಲದಲ್ಲೇ ಎಚ್ ಎಎಲ್, ಹೆಚ್ ಎಂಟಿ, ಬಿಇಎಲ್, ಬಿಎಚ್ ಇಎಲ್, ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿದರು. ಈ ಸಂಸ್ಥೆಗಳಿಂದ ನಮ್ಮ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಕ್ಕೆ ಶಕ್ತಿ ಬಂದಿದೆ. ಅವರ ಕಾಲದಲ್ಲಿನ ಪಂಚವಾರ್ಷಿಕ ಯೋಜನೆ, ಅಂಬೇಡ್ಕರ್ ಅವರಿಗೆ ಕೊಟ್ಟ ಜವಾಬ್ದಾರಿ ಮಹತ್ವದ್ದಾಗಿದೆ. ಅವರ ಪ್ರತಿಯೊಂದು ನಿಲುವು ನೀತಿಗಳು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿತ್ತು. ಅವರ ವಿದೇಶಾಂಗ ನೀತಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸಿದವು.ನೆಹರೂ…

Read More

ಬೆಂಗಳೂರು: ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ಜವಾಹರಲಾಲ್ ನೆಹರೂ. ಅವರ ದೂರದೃಷ್ಟಿಯ ಫಲವನ್ನು ಆಗಿನ-ಈಗಿನ ಪೀಳಿಗೆಯವರೂ ಅನುಭವಿಸುತ್ತಿದ್ದಾರೆ. ಮುಂದಿನ ಪೀಳಿಗೆಯವರೂ ಅನುಭವಿಸುತ್ತಾರೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 134 ನೇ ಜನ್ಮ ದಿನೋತ್ಸವದ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವ-ಸಮಾಜವಾದ-ಜಾತ್ಯತೀತತೆ ನೆಹರೂ ಬದುಕಿನ ಮೌಲ್ಯಗಳು. ಈ ಮೌಲ್ಯಗಳನ್ನು ಪ್ರಧಾನಮಂತ್ರಿಯಾಗಿ ಭಾರತದಲ್ಲಿ ನೆಲೆಯೂರಿಸಲು ಶ್ರಮಿಸಿದರು. ಈ ಮೌಲ್ಯಗಳನ್ನು  ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನೆಹರೂ ಅವರಿಗೆ ನಾವು ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿ ಎಂದರು. ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕಾರಣಕ್ಕೇ ದೇಶದ ಮಕ್ಕಳ ಪಾಲಿಗೆ ಚಾಚಾ ನೆಹರೂ ಆದರು. ಸ್ವಾತಂತ್ರ್ಯ ಹೋರಾಟದಲ್ಲಿ 9 ವರ್ಷಗಳ ಕಾಲ ಜೈಲುವಾಸ ಅನುಭಸಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ದೇಶದ ಪ್ರಧಾನಿಯಾಗಿ ಆಧುನಿಕ ಭಾರತದ ಶಿಲ್ಪಿ ಎನ್ನಿಸಿಕೊಂಡರು ಎಂದು ವಿವರಿಸಿದರು. ನೆಹರೂ ಅವರು ಪ್ರಧಾನಿ ಆಗಿ ವಿರೋಧ ಪಕ್ಷದವರು ಮಾತಾಡುವಾಗ ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದರು.…

Read More