Subscribe to Updates
Get the latest creative news from FooBar about art, design and business.
- ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
- ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
- ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
- ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
- ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
- ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
- ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
- ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
Author: admin
ಬೆಂಗಳೂರು: ಪ್ರತಿ ಮಂಗಳವಾರ, ವಾಡಿಕೆಯಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಾರದ ರಜೆ ಕೊಡಲಾಗುತ್ತದೆ. ಆದರೆ ನ.14ರ ಮಂಗಳವಾರ ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಉದ್ಯಾನವನದ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗುವಂತೆ ಸದರಿ ದಿನದಂದು ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನವನ ಇವುಗಳನ್ನು ತೆರೆದಿಡಲಾಗುತ್ತದೆ. ಸಾರ್ವಜನಿಕರು ಈ ಬದಲಾವಣೆ ಹಾಗೂ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.
ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವ ವಿಚಾರವಾಗಿ ಸಂಸದ ರಮೇಶ ಜಿಗಜಿಣಗಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸೆಂಬ್ಲಿಯಲ್ಲೂ ನೋಡಿದ್ದೇವೆ, ಲೋಕಸಭೆಯಲ್ಲೂ ನೋಡಿದ್ದೇವೆ. ಕಳೆದ 75 ವರ್ಷಗಳಿಂದ ದಲಿತ ನಾಯಕರು ಮತ್ತೊಬ್ಬರ ಪರವಾಗಿ ಕೈ ಎತ್ತುತ್ತಲೇ ಬಂದವರು. ಆದರೆ, ಅವರ ಪರವಾಗಿ ಯಾರೂ ಕೈ ಎತ್ತುತ್ತಿಲ್ಲ ಅನ್ನೋದು ದುಃಖದ ಸಂಗತಿ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು: ನಡುರಸ್ತೆಯಲ್ಲೇ ಪುಂಡನೊಬ್ಬ ಯುವತಿಯ ಬಟ್ಟೆಯನ್ನು ಎಳೆದಾಡಿ, ಕಿರುಕುಳ ನೀಡಿರವ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿ ಎದರು ನಡೆದಿದೆ. ನವೆಂಬರ್ 6ರಂದು ರಾತ್ರಿ 10.40ರ ಸುಮಾರಿಗೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ, ಬೈಕ್ ನಲ್ಲಿ ಬಂಡ ದುಷ್ಕರ್ಮಿ ಯುವತಿಯ ಬಟ್ಟೆಯನ್ನು ಎಳೆದಾಡಿ ಅಶ್ಲೀಲವಾಗಿ ನಿಂದಿಸಿ ಎಸ್ಕೆಪ್ ಆಗಿದ್ದಾನೆ. ಯುವತಿ ನವೆಂಬರ್ 8ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದುಷ್ಕರ್ಮಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.
ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿರುವ ಭಯಾನಕ ಘಟನೆ ಬಳ್ಳಾರಿ ಜಿಲ್ಲೆ ತೋರಣಗಲ್ ಪಟ್ಟಣದ ಘೋರ್ಪಡೆ ನಗರದಲ್ಲಿ ನಡೆದಿದೆ. 11ನೇ ವಾರ್ಡ್‌ನ ಪುರಸಭೆ ಸದಸ್ಯ ನಾಗರಾಜ ನಾಯ್ಕ(32) ಮೇಲೆ ಶಿವಕುಮಾರ್ ಎಂಬುವವರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚರಂಡಿ ವಿಚಾರಚಾಗಿ ಇವರಿಬ್ಬರ ನಡುವೆ ದ್ವೇಷ ಇತ್ತು ಅದೇ ದ್ವೇಷದ ಹಿನ್ನೆಲೆ ಹಲ್ಲೆ ನಡೆಸಲಾಗಿದೆ. ತೆಲೆಗೆ, ಬೆನ್ನಿಗೆ, ಕೈಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ನಾಗರಾಜ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೋರಣಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿದ್ದಾರೆ. ಸೆಹ್ವಾಗ್ ಜೊತೆಗೆ ಭಾರತದ ಮಾಜಿ ಮಹಿಳಾ ಕ್ರಿಕೆಟಿಗ ಡಯಾನಾ ಎಡುಲ್ಲಿ ಮತ್ತು ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಅರವಿಂದ ಡಿಸಿಲ್ವಾ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳಲಾಗಿದೆ ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ. ಸೆಹ್ವಾಗ್ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ವೃತ್ತಿಜೀವನದಲ್ಲಿ 8,586 ರನ್, 251 ODIಗಳಲ್ಲಿ 8,273 ರನ್ ಮತ್ತು 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 394 ರನ್ ಗಳಿಸಿದ್ದಾರೆ. ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿರುವುದಕ್ಕೆ ಸೆಹ್ವಾಗ್ ಸಂತಸ ವ್ಯಕ್ತಪಡಿಸಿದ್ದಾರೆ
ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಮಿನಿರತ್ನ ವರ್ಗದ ಕರೆನ್ಸಿ ನೋಟು ಮುದ್ರಣ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆಯ ಮೂಲಕ ಒಟ್ಟು 117 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಜೂನಿಯರ್ ಟೆಕ್ನಿಷಿಯನ್-112 ಹುದ್ದೆಗಳು, ಆರ್ಟಿಸ್ಟ್-1 ಹುದ್ದೆ, ಸೂಪರ್ ವೈಸರ್-3 ಹುದ್ದೆಗಳು, ಸೆಕ್ರೆಟರಿಯೇಟ್ ಅಸಿಸ್ಟೆಂಟ್-1 ಹುದ್ದೆಗಳಿವೆ. ಆನ್‌ಲೈನ್ ಅಪ್ಲಿಕೇಶನ್ ಗೆ ಕೊನೆಯ ದಿನಾಂಕವನ್ನು 18.11.2023 ಎಂದು ನಿಗದಿಪಡಿಸಲಾಗಿದೆ. ಪೂರ್ಣ ವಿವರಗಳ ವೆಬ್‌ಸೈಟ್: cnpnashik.spmcil.com
ಬೆಂಗಳೂರಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವರ ವಿಗ್ರಹ ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಲಮುರಿ ದೇವಸ್ಥಾನದಲ್ಲಿ ನಡೆದಿದೆ. ಬಲಮುರಿ ದೇವಸ್ಥಾನದ ಕಟ್ಟಡದಲ್ಲಿ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವಿದ್ದು, ಗೋಪುರದ ಮೇಲ್ಬಾಗದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಹಿಡಿದಿರುವ ಆಯುಧವನ್ನ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಕಳೆದ 8 ನೇ ತಾರೀಖು ವಿಗ್ರಹ ಭಗ್ನಗೊಳಿಸಿರುವ ಕುರಿತು ಗೊತ್ತಾಗಿದೆ. ಆದ್ರೆ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಈಗ ದೂರು ಕೊಡಲಾಗಿದೆ.
ನಾನು ಕಳೆದ 35 ವರ್ಷಗಳ ಹಿಂದೆ ಪಕ್ಷದ ಬಾವುಟ ಕಟ್ಟಿದವನು. ನನಗೆ ಬೇಸರ ಆಗಿರುವುದು ನಿಜ. ಆದ್ರೆ, ಅದಕ್ಕೆಂದು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಸಚಿವ ಸಿ. ಟಿ. ರವಿ ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಕಳೆದ 35 ವರ್ಷಗಳ ಹಿಂದೆ ನಾನು ಪಕ್ಷದ ಬಾವುಟ ಕಟ್ಟಿದವನು. ನಂಬಿಕೆ ಕುಸಿದ ದಿನ ಪಕ್ಷ ಬಿಟ್ಟು ಹೊರಗೆ ನಡೆಯುತ್ತೇವೆ ಎಂದಿದ್ದಾರೆ. ಜೊತೆಗೆ ಒಂದು ಹೆಜ್ಜೆ ಮುಂದೆ ಹೋಗಿ ಯಾರೂ ಇಲ್ಲದ ಸಮಯದಲ್ಲಿ ಪಕ್ಷ ಕಟ್ಟಿದವರು ನಾವು ಎಂದು ಸಿ. ಟಿ. ರವಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಘೋಷಣೆ ಆಗಿದೆ, ಅದನ್ನು ಒಪ್ಪಿಕೊಂಡೇ ರಾಜ್ಯದ ಜನ ನಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡೂ ವಿರೋಧಿಸಿದ್ದವು, ಈ ಪಕ್ಷಗಳ ಸೋಲಿಗೆ ಗ್ಯಾರಂಟಿ ಯೋಜನೆಗಳ ಬಗೆಗಿನ ನಿಮ್ಮ ವಿರೋಧವೂ ಕಾರಣ ಎನ್ನುವುದು ನಿಮಗೆ ಇನ್ನೂ…
ಟಾಟಾ ಮಾಲೀಕತ್ವದ ಏರ್ ಇಂಡಿಯಾ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇದೀಗ ಬೆಂಗಳೂರು-ಮಂಗಳೂರಿಗೆ ಎರಡು ಹೊಸ ವಿಮಾನ ಸೇವೆ ಘೋಷಿಸಿದೆ. ನವೆಂಬರ್ 15 ರಿಂದ ಹೊಸ ವಿಮಾನ ಸೇವೆ ಆರಂಭಗೊಳ್ಳುತ್ತಿದೆ. ಬೆಂಗಳೂರು-ಮಂಗಳೂರು ವಿಮಾನ ಸೇವೆ ಚೆನ್ನೈ, ಕಣ್ಣೂರು, ತಿರುವನಂತಪುರಂ ಹಾಗೂ ವಾರಣಾಸಿಯನ್ನೂ ಕನೆಕ್ಟ್ ಮಾಡಲಾಗುತ್ತಿದೆ. ನವೆಂಬರ್ 25ರ ವರೆಗೆ ಮಾತ್ರ ವಾರಣಾಸಿ-ಮಂಗಳೂರು ಸಂಪರ್ಕ ವಿಮಾನ ಸೇವೆ ಇರಲಿದೆ. 10 ದಿನಗಳ ಬಳಿಕ ಈ ವಿಮಾನ ಸೇವೆ ಚೆನ್ನೈ-ಮಂಗಳೂರು ವಯಾ ಬೆಂಗಳೂರು ಆಗಿ ಬದಲಾಗಲಿದೆ.
ನರಕ ಚತುರ್ದಶಿ ಹಿನ್ನೆಲೆ ರಾಯಚೂರಿನ ಮಂತ್ರಾಲಯ ಮಠದಲ್ಲಿ ವಿಶೇಷ ಪೂಜೆ ನೆರವೇರಿದೆ. ಮಠದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪೂಜಾ ಕೈಂಕರ್ಯ, ಕಾರ್ತಿಕ ಮಹಾಮಂಗಳಾರತಿ ಮೂಲಕ ವಿಶೇಷ ಆಚರಣೆಗಳಿಗೆ ಚಾಲನೆ ನೀಡಿದರು. ರಾಯರ ಮೂಲ ಬೃಂದಾವನಕ್ಕೆ ಪೂಜೆ, ಬಳಿಕ ಗೋ ಪೂಜೆ ನೆರವೇರಿತು. ಬಳಿಕ ನಾರಿಕೃತ ನೀರಾಜನ, ತೈಲಾಭ್ಯಂಜನ ಕಾರ್ಯಕ್ರಮ ನೆರವೇರಿತು. ಇದೇ ವೇಳೆ ಮಠದಲ್ಲಿ ಸೇರಿದ ನೂರಾರು ಭಕ್ತರಿಗೆ ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ಜರುಗಿತು.