Author: admin

ಪತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತಳನ್ನು ಸರಿತಾ(35) ಎಂದು ಗುರುತಿಸಲಾಗಿದೆ. ತಾರಾನಾಥ್ ಕೊಲೆಗೈದ ಆರೋಪಿ. ಪತ್ನಿ ಸರಿತಾಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆಗೈದಿರುವ ಪತಿ ತಾರಾನಾಥ್ ವೈಟ್ ಫೀಲ್ಡ್ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಲತಃ ಮಂಗಳೂರಿನವರಾದ ಈ ದಂಪತಿ ಬೆಂಗಳೂರಿನಲ್ಲಿ ನೆಲೆಸಿ, ಪಾನೀಪುರಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಸಂಜೆ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ತಾರಾನಾಥ್ ಧೈರ್ಯ ಸಾಲದೇ ಪೊಲೀಸರಿಗೆ ಶರಣಾಗಿದ್ದಾನೆ. ಸರಿತಾ ವಿರುದ್ಧ ಈ ಹಿಂದೆ ಮಂಗಳೂರಿನ ಮೂಲ್ಕಿ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. “ಪರಿಚಿತರು ಪತ್ನಿಯನ್ನು ಕಳ್ಳಿ ಕಳ್ಳಿ ಎನ್ನುತ್ತಿದ್ದರು. ಇದನ್ನು ಸಹಿಸಲಾರದೇ ಪತ್ನಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ವೈಟ್ ಫೀಲ್ಡ್ ಠಾಣಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ, ಅನರ್ಹಗೊಂಡಿದ್ದ ರಾಹುಲ್‌ಗಾಂಧಿ, ಕೋರ್ಟ್‌ ಮೊರೆ ಹೋಗಿ ಸದ್ಯ ಮತ್ತೆ ಸಂಸತ್ ಸದಸ್ಯನ ಸ್ಥಾನ ಗಿಟ್ಟಿಸಿಕೊಂಡಿದ್ದು ಇಂದು ಇತಿಹಾಸ. ರಾಹುಲ್‌ಗಾಂಧಿ ಅವರದ್ದು ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಸುದ್ದಿಯಾದ್ರೆ, ಇತ್ತ ರಾಜ್ಯದಲ್ಲೂ ಕೂಡ ಇದೇ ಮಾದರಿಯ ಪ್ರಕರಣವೊಂದು ದೊಡ್ಡ ಸಂಚಲನ ಉಂಟು ಮಾಡುವ ಲಕ್ಷಣಗಳು ಗೋಚರಿಸುತ್ತಿದೆ. ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಆರಗ ಜ್ಞಾನೇಂದ್ರ ಜನಾಂಗೀಯ ನಿಂದನೆ ಹಾಗೂ ಪ್ರಾಂತ್ಯವಾರು ಭೇಧವನ್ನು ಉಂಟು ಮಾಡಿರುವ ಆರೋಪ ಎದುರಿಸುತ್ತಿದ್ದು, ಅಖಿಲ ಭಾರತ ವೀರಶೈವ ಮಹಾಸಭಾ, ಆರಗ ಜ್ಞಾನೇಂದ್ರರನ್ನು ಶಾಸಕ ಸ್ಥಾನದಿಂದ ಆನರ್ಹಗೊಳಿಸುವಂತೆ ಸ್ಪೀಕರ್‌ ಗೆ ಮನವಿ ಪತ್ರ ನೀಡಿದೆ. ಇಷ್ಟು ಮಾತ್ರವಲ್ಲದೇ ಬಿಜೆಪಿ ಪಕ್ಷ ಕೂಡ ಆರಗ ಜ್ಞಾನೇಂದ್ರ ಅವರನ್ನು ಪಕ್ಷದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದು, ಸದ್ಯ ಅನರ್ಹತೆಯ ತೂಗುಗತ್ತಿ ಆರಗ ಜ್ಞಾನೇಂದ್ರರ ತಲೆಯ ಮೇಲೆ ತೂಗಾಡುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ಬಾಗಲಕೋಟೆ: ಸಾಮಾಜಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದರ ಜೊತೆಗೆ ಗ್ರಾಮೀಣ ಸಮುದಾಯಗಳನ್ನು ಪರಿಚಯ ಮಾಡಿಸಲು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಸಹಾಯಕವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶ್ರಾಂತ ಪ್ರಾಚಾರ್ಯರಾದ ಬಿ.ಆರ್ ಪಾಟೀಲ್ ಹೇಳಿದರು. ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರಿಂದ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು, ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 1969ರಲ್ಲಿ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಲಾಗಿದ್ದು ಭಾರತದಲ್ಲಿ 1 ಕೋಟಿ 49 ಲಕ್ಷ ಹಾಗೂ ಕರ್ನಾಟಕದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಎಐ ತಂತ್ರಜ್ಞಾನದ ಜಗತ್ತಿನಲ್ಲಿ ನಾವು ಬದುಕುತ್ತಿದ್ದು ಯಂತ್ರಗಳು ತಮ್ಮಷ್ಟಕ್ಕೆ ತಾವೆ ಅಭಿವೃದ್ಧಿ ಪಡೆಯುವಷ್ಟು ಜಗತ್ತು ಮುಂದುವರೆದಿದೆ. ಅದರಲ್ಲಿ ಪೈಪೋಟಿ ಸಾಮರ್ಥ್ಯ ಬೆಳಸಿಕೊಳ್ಳಬೇಕಿದೆ. ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದ್ದು ಶಿಕ್ಷಣ, ನೀರು, ಆಹಾರ, ಆರೋಗ್ಯಗಳೆಲ್ಲವು ಮಾರಾಟ ಮಾಡುವ ಪೈಪೋಟಿ ಜಗತ್ತಿನಲ್ಲಿ ನಾವು ಬದಕುವ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕಿದೆ.…

Read More

ಹುಬ್ಬಳ್ಳಿ: ನರ್ಸ್ ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿದ್ದ ಹುಬ್ಬಳ್ಳಿಯ ಕಿಮ್ಸ್ ನ 11 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ರೀಲ್ಸ್ ವೈರಲ್ ಆಗುತ್ತುದ್ದಂತೆ ಆಕ್ರೋಶಗೊಂಡಿದ್ದ ಕಿಮ್ಸ್ ನ ನರ್ಸ್ ಗಳು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಹೀಗಾಗಿ ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ. ರೀಲ್ಸ್ ಮಾಡಿದ್ದು ಮನರಂಜನೆಗೆ. ಆದರೂ ನಾವು ನರ್ಸ್ ಗಳ ಬಳಿ ಕ್ಷಮೆ ಕೇಳುತ್ತೇವೆ ಎಂದು ವಿದ್ಯಾರ್ಥಿಗಳು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ಇನ್ನು ವಿದ್ಯಾರ್ಥಿಗಳು ನರ್ಸ್ ಗಳ ಬಗ್ಗೆ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಹಿನ್ನಲೆಯಲ್ಲಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕೋಲಾರ ಜಿಲ್ಲಾಸ್ಪತ್ರೆ ಎದುರು ನರ್ಸ್ ಗಳು ಪ್ರತಿಭಟನೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ರಾಜ್ಯದ ಪ್ರಸಿದ್ಧ ಹುಬ್ಬಳ್ಳಿಯ ಕಿಮ್ಸ್ ನ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್ ಗಳನ್ನು ಗುರಿಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿದ್ದರು. ಯಾವುದೇ…

Read More

ಬಾಕಿ ಬಿಲ್ ಪಾವತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ಇದಕ್ಕೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ಯಾರಿಗೂ ಉತ್ತರ ಕೊಡಲ್ಲ. ನನಗೂ ಪ್ರಜ್ಞೆ ಇದೆ. ನನಗೂ ರಾಜಕಾರಣ ಗೊತ್ತಿದೆ. ಯಾವ ಗುತ್ತಿಗೆದಾರನ ಹಿಂದೆ ಯಾರಿದ್ದಾರೆಂದು ನನಗೂ ಗೊತ್ತಿದೆ ಎಂದಿದ್ದಾರೆ. ಯಾವ ಬ್ಲ್ಯಾಕ್ಮೇಲ್ ಕೂಡ ನನ್ನ ಮುಂದೆ ನಡೆಯುವುದಿಲ್ಲ. ನಾವು ವಿಪಕ್ಷದಲ್ಲಿದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರುತ್ತಿರಲಿಲ್ವಾ? ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ. ಇಲ್ಲದಿದ್ದರೆ ಆಗುವುದಿಲ್ಲ. ಯಾರಿಗೋ ಬ್ಲ್ಯಾಕ್ಮೇಲ್ ಮಾಡಿದಂತೆ ನನಗೆ ಮಾಡಲು ಬರಬೇಡಿ ಎಂದು ಖಡಕ್ ಆಗಿ ತಿರುಗೇಟು ನೀಡಿದರು. ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ? ಯಾವ ಒತ್ತಡ ಇದ್ದರೂ ತಡೆದುಕೊಳ್ಳಲು ರೆಡಿ. ಯಾರಿಗೋ ಬ್ಲ್ಯಾಕ್ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ. ನನಗೆ ಬೆದರಿಕೆ ಹಾಕಿದ್ರೆ ಕೇಳ್ತೀನಾ.? ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ.…

Read More

ಪತಿಯ ಚರ್ಮದ ಬಣ್ಣ ಕಪ್ಪು ಎಂದು ಪದೇ ಪದೇ ಅವಹೇಳನ ಮಾಡುವುದು, ಅದೇ ಕಾರಣಕ್ಕೆ ಆತನನ್ನು ಬಿಟ್ಟು ಹೋಗುವುದು ಮತ್ತು ಆತನ ವಿರುದ್ಧ ಅಕ್ರಮ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಜತೆಗೆ, ದಂಪತಿಗೆ ವಿಚ್ಛೇದನ ನೀಡಿದೆ. 2007 ರ ನವೆಂಬರ್ 15 ರಂದು ವಿವಾಹವಾದ ದಂಪತಿಗೆ ಹೆಣ್ಣು ಮಗುವಿದೆ. ಮಗುವಿಗೆ ಮೂರೂವರೆ ವರ್ಷ ವಯಸ್ಸಾಗಿದ್ದಾಗ ಅವರು 2012 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಪ್ಪಗಿರುವ ಕಾರಣ ಹೆಂಡತಿ ತನ್ನನ್ನು ಅವಮಾನಿಸುತ್ತಿದ್ದಳು. ಆದರೆ, ಮಗುವಿನ ಭವಿಷ್ಯದ ಸಲುವಾಗಿ ಮಾತ್ರ ಅವಮಾನವನ್ನು ಸಹಿಸಿಕೊಳ್ಳುತ್ತಿದ್ದೆ ಎಂದು ಸಂತ್ರಸ್ತ ಪತಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬಾಡಿಗೆ ವಿಚಾರದಲ್ಲಿ ಆಟೋ ಚಾಲಕರ ಮಧ್ಯೆ ಮಾತಿಗೆ ಮಾತು ಬೆಳೆದು ಓರ್ವ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದ (Railway Station) ಬಳಿ ಘಟನೆ ಸಂಭವಿಸಿದೆ. ಆಟೋ ಚಾಲಕ ಫಯಾಜ್‌ ಖಾನ್‌ ಮೇಲೆ ಹಲ್ಲೆ ನಡೆಸಲಾಗಿದೆ. ರೈಲ್ವೆ ನಿಲ್ದಾಣದ (Railway Station) ಮುಂದೆ ಆಟೋ ನಿಲ್ಲಿಸಿಕೊಂಡಿದ್ದಾಗ ಮಹಿಳೆಯೊಬ್ಬರು ಕಮಲಾ ನೆಹರೂ ಹಾಸ್ಟೆಲ್‌ ವರೆಗೆ ಬಿಡುವಂತೆ ಕೇಳಿದ್ದಾರೆ. 40 ರೂ. ಬಾಡಿಗೆ ನೀಡುವಂತೆ ಫಯಾಜ್‌ ಖಾನ್‌ ತಿಳಿಸಿದ್ದಾರೆ. ಆಗ ಅಲ್ಲಿಯೇ ಇದ್ದ ಇತರೆ ನಾಲ್ವರು ಆಟೋ ಚಾಲಕರು ಆಕ್ರೋಶಗೊಂಡು, ಫಯಾಜ್‌ ಖಾನ್‌ ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಮೂಗು, ಕಣ್ಣಿನ ಭಾಗಕ್ಕೆ ಗಾಯವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇತರೆ ಆಟೋ ಚಾಲಕರು ಗಲಾಟೆ ಬಿಡಿಸಿದ್ದು ಫಯಾಜ್‌ ಖಾನ್‌ ನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬೆದರಿಕೆ ಹಾಕಿ, ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಫಯಾಜ್‌ ಖಾನ್‌ ಜಯನಗರ ಠಾಣೆಗೆ ದೂರು ನೀಡಿದ್ದಾರೆ.…

Read More

ವ್ಯಾಸಂಗಕ್ಕಾಗಿ ಕಾಲೇಜಿಗೆ ಬರುವ ಕೆಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತುಮಕೂರು ನಗರದ ವಿವಿಧ ಉದ್ಯಾನವನಗಳಲ್ಲಿ ಕುಳಿತು ಸುತ್ತಾಡುತ್ತಿದ್ದನ್ನು ಗಮನಿಸಿದ್ದ ಪೊಲೀಸರು ದಿಢೀರ್ ಪ್ರತ್ಯಕ್ಷರಾಗಿ ಅವರನ್ನು ಪ್ರಶ್ನಿಸಿದರು. ಏಕಾಏಕಿ ಪೊಲೀಸರನ್ನು ಕಂಡ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಕ್ ಆಗಿದ್ದಾರೆ. ಕಲ್ಪತರು ಪಡೆ, ಜಿಲ್ಲೆಯಲ್ಲಿ ರಚನೆಯಾಗಿದೆ. ಈ ವಿಶೇಷ ಪೊಲೀಸ್ ತಂಡ ಇಂದು ವಿಭಿನ್ನವಾಗಿ ಸಕ್ರಿಯವಾಗಿತ್ತು. ಕಾಲೇಜಿಗೆ ಹೋಗದೆ ಪಾರ್ಕ್ ಗಳಲ್ಲಿ ಮೋಜು ಮಾಡುತ್ತಿದ್ದ ಜೋಡಿಗಳು ಕಲ್ಪತರುಪಡೆಯ ಪೊಲೀಸ್ ಸಿಬ್ಬಂದಿಗಳನ್ನು ಕಂಡು ದಂಗಾಗಿದ್ದಾರೆ. ತುಮಕೂರು ನಗರದ ಅಮಾನಿಕೆರೆ , ಟೌನ್ ಹಾಲ್ ಪಾರ್ಕ್ ಗಳಲ್ಲಿ ಕುಳಿತಿದ್ದ ಜೋಡಿಗಳಿಗೆ ಪೊಲೀಸ್ ಸಿಬ್ಬಂದಿಗಳು ಬುದ್ಧಿ ಮಾತು ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ತಾವು ಮಾಡಿದ ಕೆಲಸಕ್ಕೆ ಪೊಲೀಸರ ಎದುರು ತಲೆ ತಗ್ಗಿಸಿನಿಂತಿದ್ದಾರೆ. ವಿದ್ಯಾರ್ಥಿಗಳ ಅತಿರೇಕದ ವರ್ತನೆಗೆ ಪೊಲೀಸರು ಸರಿಯಾದ ಪಾಠ ಹೇಳಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ತುಮಕೂರು: ಆಟೋ ಮತ್ತು ಮಾರುತಿ ಕಾರು ನಡುವೆ ಅಫಘಾತ ಸಂಭವಿಸಿದ್ದು, ಅಫಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ  ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಸಮೀಪದ ಹರಿವೇಸಂದ್ರ ಬಳಿ ನಡೆದಿದೆ. ಕಲ್ಲೂರು ನಾಗರಾಜ್(60) ಮೃತ ದುರ್ದೈವಿಯಾಗಿದ್ದಾರೆ. ಇವರು ದಂಪತಿಗಳಾಗಿದ್ದು, ಕೆ.ಜಿ.ಟೆಂಪಲ್  ಗ್ರಾಮದಲ್ಲಿ ಸಂತೆ ಇರೋ ಹಿನ್ನೆಲೆ ವ್ಯಾಪಾರಕ್ಕೆಂದು ತೆರಳುತ್ತಿದ್ದರು ಆಟೋದಲ್ಲಿ ತೆರಳುತ್ತಿದ್ದರು ಈ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ನಿನ್ನೆ ಹಾಂಕಾಂಗ್ ನಲ್ಲಿ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದು ಇಂದು ರಾತ್ರಿ ಬೆಂಗಳೂರಿಗೆ ಪಾರ್ಥೀವ ಶರೀರ ಆಗಮಿಸಲಿದೆ. ಈ ಕುರಿತು ಮಾಹಿತಿ ನೀಡಿದ ಎಂಎಲ್ ಸಿ ಬಿ.ಕೆ ಹರಿಪ್ರಸಾದ್, ಇಂದು ರಾತ್ರಿ 11 ಗಂಟೆ ಸುಮಾರಿಗೆ ಏರ್ ಪೋರ್ಟ್ ಗೆ ಮೃತದೇಹ ಬರಲಿದೆ. 12 ಗಂಟೆ ವೇಳೆಗೆ ಮಲ್ಲೇಶ್ವರಂ ಮನೆಗೆ ತಲುಪಲಿದ್ದು, ಮನೆಯ ಬಳಿಯೇ ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More