Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ಬೆಂಗಳೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ ಮಾನಸಿಕತೆಯಲ್ಲಿ ಉನ್ಮಾದ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರೋಪಿಸಿದರು. ಟಿ-ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ, ಹನುಮ ಜಯಂತಿ ಕಾರ್ಯಕ್ರಮದ ಸಂಚಾಲಕ ವೇಣುಗೋಪಾಲ್ ಅವರನ್ನು ಹತ್ಯೆ ಮಾಡಿದ ಸ್ಥಳಕ್ಕೆ ಸತ್ಯಶೋಧನಾ ಸಮಿತಿಯ ಸದಸ್ಯರ ಜೊತೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಮಹಾದೇವಪ್ಪ ಅವರು ಸಾಂತ್ವನ ನುಡಿ ಹೇಳಿಲ್ಲವೇಕೆ ಎಂದು ಆಕ್ಷೇಪಿಸಿದರು. ಇವರು ತುಟಿ ಬಿಟ್ಟಿಲ್ಲ. ಇದು ಆಘಾತಕರ ಸಂಗತಿ ಎಂದು ನುಡಿದರು. ಅವರಿಗೆ ಕೇಸರಿ ಕಂಡರೆ ಆಗದೆ ಇರುವ ಮಾನಸಿಕತೆ ಇದಕ್ಕೆ ಕಾರಣ ಇರಬಹುದು ಎಂದು ತಿಳಿಸಿದರು. ಸಾವನ್ನು ಖಂಡಿಸುವ, ಸಾವಿನ ಕುಟುಂಬದ ಜೊತೆ ನಿಲ್ಲುವುದರಿಂದಲೂ ಇವರು ದೂರ ಆದರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯರ ನೆರೆಯ ಕ್ಷೇತ್ರವಿದು ಎಂದು ತಿಳಿಸಿದರು. ವೇಣುಗೋಪಾಲ್ ಕೇಸರಿಯ ನೇತೃತ್ವ ವಹಿಸಿದ್ದ…
ಪಾವಗಡ: ತಾಲೂಕು ಸಿ.ಕೆ.ಪುರ ಗ್ರಾಮ ಪಂಚಾಯತಿಯ ಎರಡನೇ ಹಂತದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯ ಉದ್ದೇಶಕ್ಕಾಗಿ ಸಿ.ಕೆ.ಪುರ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 15 ಜನ ಇದ್ದು ಇವರ ಪೈಕಿ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯರು ಆರು ಜನ ಇದ್ದು ಬಿಜೆಪಿ ಪಕ್ಷದಿಂದ ಒಬ್ಬ ಸದಸ್ಯ ಇದ್ದು ಒಟ್ಟು ಏಳು ಜನ ಸದಸ್ಯರು ಸಾಮೂಹಿಕವಾಗಿ ತಮ್ಮ ಪಕ್ಷಗಳನ್ನು ತೊರೆದು ಶಾಸಕ ಹೆಚ್ ವಿ ವೆಂಕಟೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಟಿ.ಎನ್.ಕೋಟೆ ಪ್ರಭಾಕರ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪ ಇವರ ಸಮ್ಮುಖದಲ್ಲಿ ಮತ್ತು ಬಿಂದು ಮಾಧವರಾವ್ ಲಕ್ಷ್ಮಮ್ಮ ಈರಣ್ಣನವರು ಮಾಜಿ ಅಧ್ಯಕ್ಷರು ಇವರ ಸಮ್ಮುಖದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅರುಂಧತಿ ನಾಗಲಿಂಗಪ್ಪ, ದೊಡ್ಡಣ್ಣ ಹರಿಹರಪುರ, ಕಮಲಮ್ಮ ಮಹಾಲಿಂಗಪ್ಪ, ಗಿರೀಶ್, ಸಣ್ಣ ಬೊಮ್ಮಕ್ಕ ಚಿತ್ತಪ್ಪ, ಚಂದ್ರಕಲಾ ಜೆ.ಪಿ. ಹನುಮಂತರಾಯಪ್ಪ, ಹೇಮಲತಾ ಕೃಷ್ಣಮೂರ್ತಿ, ಮಮತಾ…
ತುಮಕೂರು: ರಸ್ತೆ ಬದಿಯಲ್ಲಿ ಕೊರೆಯಲಾಗಿದ್ದ ಹೊಂಡಕ್ಕೆ ಕಾರೊಂದು ಬಿದ್ದ ಘಟನೆ ತುಮಕೂರಿನ NH 4 ಪೂನಾ — ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ. ಪೂನಾ — ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸುಮಾರು 6ರಿಂದ 8 ಅಡಿ ಉದ್ದದ ಗುಂಡಿಯನ್ನು ತೆಗೆದು ಹಾಗೆಯೇ ಬಿಡಲಾಗಿದ್ದು, ಈ ಗುಂಡಿಗೆ ಕಾರು ಬಿದ್ದು ಮಗುಚಿ ಬಿದ್ದಿದೆ. ಅಂತರಸನಹಳ್ಳಿ ಬೈಪಾಸ್ ಬಳಿಯಲ್ಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾರ್ವಜನಿಕರಿಂದ ಆಕ್ರೋಶ: ಪೂನಾ — ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಂತರಸನಹಳ್ಳಿ ಬೈಪಾಸ್ ಬಳಿಯಲ್ಲಿ ರಸ್ತೆಯ ಎಡಬಾಗದಲ್ಲಿ ಸುಮಾರು 6 ರಿಂದ 8 ಅಡಿ ಉದ್ದ ಗುಂಡಿ ತೆಗೆದು ಹಾಗೆ ಬಿಟ್ಟಿರುತ್ತಾರೆ ಇಂತ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಬಲ್ ಅಳವಡಿಕೆ ಹಾಗೂ ಮತ್ತಿತರ ಕಾಮಕಾರಿ ನಡೆಸುವವರು ರಸ್ತೆ ಬದಿಯಲ್ಲಿ ಗುಂಡಿ ತೋಡಿಟ್ಟು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಈ ಒಂದು ಪ್ರದೇಶ ಮಾತ್ರವಲ್ಲದೇ ಹಲವು…
ಕೊರಟಗೆರೆ : ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿಯ ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 15 ಜನ ಆರೋಪಿಗಳನ್ನು ಕೊರಟಗೆರೆ ಪೊಲೀಸರ ತಂಡ ಬಂಧಿಸಿ ಅವರಿಂದ 4.15 ಲಕ್ಷ ರೂ ನಗದು, 3 ಕಾರು ಮತ್ತು 15 ಫೋನ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಹೊಳವನಹಳ್ಳಿ ಹೋಬಳಿಯ ಅರಸಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ಸರ್ಕಾರಿ ಹಳ್ಳದಲ್ಲಿ ಅಕ್ರಮ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬೆಂಗಳೂರು, ಮೈಸೂರು,ಮಂಡ್ಯ ಮತ್ತು ಗೌರಿಬಿದನೂರು ಮೂಲದ 15 ಜನ ಇಸ್ಪೀಟ್ ಆಟಗಾರರ ಮೇಲೆ ಕೊರಟಗೆರೆ ಪಿಎಸ್ಐ ಚೇತನ್ ಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಇವರ ವಿರುದ್ಧ ಪ್ರಕರಣ ದಾಖಲಾಗಿದೆ, ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಸುರೇಶ್ ಮತ್ತು ಪಿಎಸ್ಐ ಚೇತನ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ.. ಸಿಬ್ಬಂದಿಗಳಾದ ದೊಡ್ಡಲಿಂಗಯ್ಯ,ದಯಾನಂದ, ಮಲ್ಲೇಶ್, ರಾಘವೇಂದ್ರ, ರವಿಚಂದ್ರನ್, ಗಣೇಶ್, ಧರ್ಮಪಾಲ್ ನಾಯಕ, ದಿನೇಶ್, ಮಧು, ನಟರಾಜ್, ಪ್ರಕಾಶ್…
ತುಮಕೂರು: ಚಿಕ್ಕಪ್ಪನೇ 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ , ಅಪರಾಧಿಗೆ ಜಿಲ್ಲಾ ಸತ್ರ ನ್ಯಾಯಾಲಯ(FTSC) ಪೋಕ್ಸೋ ನ್ಯಾಯಾಲಯವು 30 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಹೆಬ್ಬೂರು ಹೋಬಳಿ ಮೇಣಸಂದ್ರ ಗ್ರಾಮದ ನೊಂದ 13 ವರ್ಷದ ಬಾಲಕಿಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಿರುವ ರಾಕೇಶ್ ಅಲಿಯಾಸ್ ಧನಂಜಯ ಎಂಬಾತ, ಬಾಲಕಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಈ ನಡುವೆ ನೊಂದ ಬಾಲಕಿಯನ್ನು ಲೈಂಗಿಕ ಉದ್ದೇಶದಿಂದ ಮೈ ಮುಟ್ಟಿ, ನಾನು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ, ನಿನ್ನ ತಂದೆ ತಾಯಿಯನ್ನು ಸಾಯಿಸುತ್ತೇನೆ ಎಂದು ಬೆದರಿಸಿ, ಬಾಲಕಿಯನ್ನು ಮಾವಿನ ತೋಪಿನ ಬಳಿಯ ವ್ಯಕ್ತಿಯೊಬ್ಬರ ಜಮೀನಿಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲೈಂಗಿಕ ಕಿರುಕುಳದ ವೇಳೆ ಬಾಲಕಿಯ ನಗ್ನ ಚಿತ್ರವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಬಾಲಕಿಯ ಚಿನ್ನದ ಒಡವೆ ಪಡೆದುಕೊಂಡು, ಆಕೆಯನ್ನು ಹೆದರಿಸಿ ಆಕೆಯ ಮೇಲೆ ಲೈಂಗಿಕ…
ತುಮಕೂರು: ಗೋಕುಲ ಗೋಶಾಲೆಯ ರಾಸುಗಳ ಬಗ್ಗೆ ನಮ್ಮತುಮಕೂರು ವರದಿಗೆ ಸ್ಪಂದಿಸಿದ ಕಂದಾಯ ಮತ್ತು ಪಶು ಇಲಾಖೆ, ತಕ್ಷಣದಲ್ಲೇ ಕ್ರಮಕೈಗೊಂಡಿದೆ. ಗೋಕುಲ ಗೋಶಾಲೆಯ ರಾಸುಗಳ ಸಾವಿನ ಬಗ್ಗೆ ನಮ್ಮ ತುಮಕೂರು ವಾಹಿನಿ ಸವಿವರವಾದ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಗೋಮುಖ ಗೋಶಾಲೆಯಿಂದ ಮಧುಗಿರಿ ತಾಲೂಕಿನ ಸುರಭಿ ಗೋಶಾಲೆಗೆ ಗೋವುಗಳನ್ನು ರವಾನಿಸಲಾಗಿದೆ. ಪಶು ಇಲಾಖೆಯ ಉಪ ನಿರ್ದೇಶಕ, ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ನೇತೃತ್ವದ ತಂಡ, ಉಪ ನಿರ್ದೇಶಕ ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ತುಮಕೂರು ಇವರ ಆದೇಶದ ಮೇರೆಗೆ ರಾಸುಗಳು ಸುರಭಿ ಗೋಶಾಲೆಗೆ ರವಾನೆ ಮಾಡಲಾಗಿದೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಕೊರಟಗೆರೆ: ಅಂಗನವಾಡಿ ಕಾರ್ಯಕರ್ತರಿಗೆ ಹೊಸ ಮೊಬೈಲ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಯಿತು. ಸರ್ಕಾರವು ಕಳಪೆ ಗುಣಮಟ್ಟದ ಮೊಬೈಲ್ ನೀಡಿರುವುದರ ವಿರುದ್ಧ ಧಿಕ್ಕಾರ ಕೂಗಿದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳಪೆ ಮೊಬೈಲ್ ಗಳನ್ನು ಸರ್ಕಾರ ಹಿಂಪಡೆದು ಹೊಸ ಮೊಬೈಲ್ ಗಳನ್ನು ನೀಡುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂಬ ಎಚ್ಚರಿಕೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ನೀಡಿದ್ದಾರೆ. ಇನ್ನೂ ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರ ಮನವಿಯನ್ನು ಸಿಡಿಪಿಓ ಅಂಬಿಕ ಸ್ವೀಕರಿಸಿದರು. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ನಮ್ಮತುಮಕೂರು ವಿಶೇಷ ವರದಿ: ಮನೆ ಇಲ್ಲದೆ ಗುಡಿಸಿಲಲ್ಲಿ ವಾಸ ಮಾಡುತ್ತಿದ್ದು ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಬಾಲಕಿ ಒಬ್ಬಳು ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿರುವ ರಾಷ್ಟ್ರಪತಿ ಭವನದ ಕಚೇರಿ ಅಧಿಕಾರಿಗಳು ತುಮಕೂರು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ತೂಯಲಹಳ್ಳಿ ಗ್ರಾಮದ ವಾಸಿಯಾಗಿರುವ ಲಕ್ಷ್ಮೀ ಎಂಬ ವಿದ್ಯಾರ್ಥಿನಿ ಮನವಿಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿ ಅಧೀನ ಕಾರ್ಯದರ್ಶಿಗಳಿಂದ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದನ್ವಯ ಶಾಲಾ ಬಾಲಕಿ ಮನೆಗೆ ಭೇಟಿ ನೀಡಿ ತುರುವೇಕೆರೆ ತಹಶಿಲ್ದಾರ್ ಪರಿಶೀಲನೆ ನಡೆಸಿದರು. ಕಳೆದ ತಿಂಗಳ 29 ರಂದು, ಮನೆ ಕಟ್ಟಲು ನಿವೇಶನ ನೀಡುವಂತೆ ರಾಷ್ಟ್ರಪತಿಗಳಿಗೆ ಶಾಲಾ ಬಾಲಕಿ ಲಕ್ಷ್ಮೀ ಪತ್ರ ಬರೆದು ಮನವಿ ಮಾಡಿದ್ದಳು. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ತೂಯಲಹಳ್ಳಿ ಗ್ರಾಮದ ವಾಸಿಯಾಗಿರುವ ಲಕ್ಷ್ಮೀ ತೂಯಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಬಾಲಕಿ ಮನೆಗೆ ಭೇಟಿ ನೀಡಿದ್ದ ತಹಶಿಲ್ದಾರ್, ಹಾಗೂ ಪಿಡಿಓ …
ವರ್ಗಾವಣೆಗೆ ಶಾಸಕರ ಭವನ, ಕುಮಾರಕೃಪಾ ಸುತ್ತಮುತ್ತ ಜನಜಂಗುಳಿ, ಹಪ್ತಾ ವಸೂಲಿಗೆ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಿ ಪೇದೆ ಆತ್ಮಹತ್ಯೆಗೆ ಯತ್ನ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಪರಿಯನ್ನು ಮಾಜಿ ಬಸವರಾಜ ಬೊಮ್ಮಾಯಿ ಬಿಚ್ಚಿಟ್ಟ ಪರಿ ಇದು. ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಬೇಕೆಂದರೆ 2013 ರಿಂದ 2023 ರ ವರೆಗಿನ ಎಲ್ಲ ಪ್ರಕರಣಗಳ ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಇರುವಾಗ ಅದನ್ನು ನಿಷ್ಕ್ರಿಯಗೊಳಿಸಿ ಎಸಿಬಿ ರಚನೆ ಮಾಡಿದ್ದರು. ಭ್ರಷ್ಟಾಚಾರದಿಂದ ರಕ್ಷಣೆ ಪಡೆಯಲು ಎಸಿಬಿ ರಚನೆ ಮಾಡಿದ್ದರು ಅಂತ ಕೋರ್ಟ್ ಆದೇಶದಲ್ಲಿಯೇ ಇದೆ ಎಂದು ಹೇಳಿದರು. ಭ್ರಷ್ಟಾಚಾರ ನಿಯಂತ್ರಣ ಮಾಡಲು 2013 ರಿಂದ 2023 ರ ವರೆಗಿನ ಎಲ್ಲ ಪ್ರಕರಣಗಳ ತನಿಖೆ ನಡೆಸಿ, ಈ ಸಮಯದಲ್ಲಿ ನಡೆದ ಹಗರಣಗಳ ಬಗ್ಗೆ ಯಾರೇ ದೂರು ಕೊಟ್ಟರೂ ತನಿಖೆ ನಡೆಸಿ, ಹಲವಾರು ಸಂದರ್ಭದಲ್ಲಿ ನ್ಯಾಯಾಂಗ ಆಯೋಗದ ತನಿಖೆಗಳನ್ನು ನೋಡಿದ್ದೇವೆ. ಮುಕ್ತವಾದ…
ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮತ್ತೊಂದು ಕಡೆ ಟೊಮೆಟೊ ಕಳವು ಪ್ರಕರಣಗಳು ಕೂಡ ವರದಿಯಾಗುತ್ತಿವೆ. ಇದರಿಂದ ಟೊಮೆಟೊ ಬೆಳೆದ ರೈತರು ತಮ್ಮ ಜಮೀನುಗಳಿಗೆ ಹಗಲಿರುಳು ಕಾವಲು ಕಾಯುವಂತಾಗಿದೆ. ಇಂಥದ್ದೇ ಪ್ರಕರಣದಲ್ಲಿ, ಸುಮಾರು 2 ಸಾವಿರ ಕೆಜಿಗೂ ಹೆಚ್ಚು ಟೊಮೆಟೊ ಇದ್ದ ಬೊಲೆರೊ ವಾಹನವನ್ನೇ ಕಳವುಗೈದಿರುವ ಘಟನೆ ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಶನಿವಾರ ಬೆಳಗ್ಗೆ ವರದಿಯಾಗಿದೆ. ಹಿರಿಯೂರಿನಿಂದ ಕೋಲಾರಕ್ಕೆ ಶನಿವಾರ ರೈತ ತಾನು ಬೆಳೆದ ಟೊಮೆಟೋವನ್ನು ಸಾಗಿಸುತ್ತಿದ್ದರು. ಈ ವೇಳೆ ಮೂವರು ಕಾರಿನಲ್ಲಿ ಟೊಮೆಟೊ ವಾಹನವನ್ನು ಹಿಂಬಾಲಿಸಿದ್ದಾರೆ. ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಮೂವರು ಆರ್ ಎಮ್ ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೊ ವಾಹನವನ್ನು ಅಡ್ಡಗಟ್ಟಿ, ನಿಮ್ಮ ವಾಹನ ತಮ್ಮ ಕಾರಿಗೆ ಪೀಣ್ಯಾ ಬಳಿ ತಾಗಿದೆ ಎಂದು ವಾದಿಸಿದ್ದಾರೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಣಕ್ಕಾಗಿ ಬೇಡಿಕೆ ಕೂಟ ಇಟ್ಟಿದ್ದ ದುಷ್ಕರ್ಮಿಗಳು, ಹಣ ಇಲ್ಲ ಎಂದಿದ್ದಕ್ಕೆ ಬೊಲೆರೊ ಸಮೇತ ರೈತ ಮತ್ತು ಚಾಲಕನನ್ನು…