nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಿಡಿಗೇಶಿ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಸಾವು

    July 4, 2026

    ಎಸ್‌ ಐಆರ್‌ ಲೋಪ: ಬಿಜೆಪಿ ಆಕ್ಷೇಪ, ಬಿಎಲ್‌ ಒಗಳಿಗೆ ಸೂಚನೆ ನೀಡಲು ಆಗ್ರಹ

    July 4, 2026

    ಎಸ್‌ ಐಆರ್ ಗೊಂದಲ ನಿವಾರಣೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹೆಲ್ಪ್‌ಲೈನ್ ಆರಂಭಿಸಿ: ಸಿ.ಬಿ.ಶಶಿಧರ್ ಆಗ್ರಹ

    July 4, 2026
    Facebook Twitter Instagram
    ಟ್ರೆಂಡಿಂಗ್
    • ಮಿಡಿಗೇಶಿ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಸಾವು
    • ಎಸ್‌ ಐಆರ್‌ ಲೋಪ: ಬಿಜೆಪಿ ಆಕ್ಷೇಪ, ಬಿಎಲ್‌ ಒಗಳಿಗೆ ಸೂಚನೆ ನೀಡಲು ಆಗ್ರಹ
    • ಎಸ್‌ ಐಆರ್ ಗೊಂದಲ ನಿವಾರಣೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹೆಲ್ಪ್‌ಲೈನ್ ಆರಂಭಿಸಿ: ಸಿ.ಬಿ.ಶಶಿಧರ್ ಆಗ್ರಹ
    • ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಉಳಿಸಿ: ಟಿ.ಬಿ. ಜಯಚಂದ್ರ ಕರೆ
    • ಪೋಷಕತ್ವ – ಮಕ್ಕಳ ಬಾಳಿಗೆ ಬೆಳಗಾಗಿ ಕಾರ್ಯಕ್ರಮ: ಪೋಷಕರಿಂದ ಅರ್ಜಿ ಆಹ್ವಾನ
    • ಎಸ್ ಐ ಆರ್: 3 ದಿನಗಳಲ್ಲಿ 5.15 ಲಕ್ಷ ಅರ್ಜಿ ವಿತರಣೆ | ಮನೆ ಭೇಟಿ ವೇಳೆ 59 ಮಂದಿ ಮೃತ ಮತದಾರರು ಪತ್ತೆ
    • ಕೇಂದ್ರದ ‘ರಿವಾರ್ಡ್’ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಕ್ರಮಕ್ಕೆ ಭೀಮ ಆರ್ಮಿ ಒತ್ತಾಯ
    • ಅಕ್ರಮ ಚಟುವಟಿಕೆ ತಡೆಗೆ ಅಂತಾರಾಜ್ಯ ಪೊಲೀಸ್ ಸಮನ್ವಯ ಸಭೆ: ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ ಮಾನಸಿಕತೆಯಲ್ಲಿ ಉನ್ಮಾದ: ಸಿ.ಟಿ.ರವಿ
    ರಾಜ್ಯ ಸುದ್ದಿ July 11, 2023

    ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ ಮಾನಸಿಕತೆಯಲ್ಲಿ ಉನ್ಮಾದ: ಸಿ.ಟಿ.ರವಿ

    By adminJuly 11, 2023No Comments2 Mins Read
    c t ravi

    ಬೆಂಗಳೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ ಮಾನಸಿಕತೆಯಲ್ಲಿ ಉನ್ಮಾದ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರೋಪಿಸಿದರು.

    ಟಿ-ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ, ಹನುಮ ಜಯಂತಿ ಕಾರ್ಯಕ್ರಮದ ಸಂಚಾಲಕ ವೇಣುಗೋಪಾಲ್ ಅವರನ್ನು ಹತ್ಯೆ ಮಾಡಿದ ಸ್ಥಳಕ್ಕೆ ಸತ್ಯಶೋಧನಾ ಸಮಿತಿಯ ಸದಸ್ಯರ ಜೊತೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಮಹಾದೇವಪ್ಪ ಅವರು ಸಾಂತ್ವನ ನುಡಿ ಹೇಳಿಲ್ಲವೇಕೆ ಎಂದು ಆಕ್ಷೇಪಿಸಿದರು. ಇವರು ತುಟಿ ಬಿಟ್ಟಿಲ್ಲ. ಇದು ಆಘಾತಕರ ಸಂಗತಿ ಎಂದು ನುಡಿದರು. ಅವರಿಗೆ ಕೇಸರಿ ಕಂಡರೆ ಆಗದೆ ಇರುವ ಮಾನಸಿಕತೆ ಇದಕ್ಕೆ ಕಾರಣ ಇರಬಹುದು ಎಂದು ತಿಳಿಸಿದರು.

    ಸಾವನ್ನು ಖಂಡಿಸುವ, ಸಾವಿನ ಕುಟುಂಬದ ಜೊತೆ ನಿಲ್ಲುವುದರಿಂದಲೂ ಇವರು ದೂರ ಆದರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯರ ನೆರೆಯ ಕ್ಷೇತ್ರವಿದು ಎಂದು ತಿಳಿಸಿದರು. ವೇಣುಗೋಪಾಲ್ ಕೇಸರಿಯ ನೇತೃತ್ವ ವಹಿಸಿದ್ದ ಎಂಬ ಮಾನಸಿಕತೆ ಇದಕ್ಕೆ ಕಾರಣವಿರಬಹುದು ಎಂದು ತಿಳಿಸಿದರು.

    ನಾವು ವೇಣುಗೋಪಾಲ್ ಕುಟುಂಬದ ಜೊತೆ ನಿಲ್ಲಲಿದ್ದೇವೆ. ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ವೇಣುಗೋಪಾಲ್ ಕುಟುಂಬದವರು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಹತ್ಯೆ ಹಿಂದಿರುವವರಿಗೆ ಬಲಾಢ್ಯರ ಜೊತೆ ಸಂಪರ್ಕ ಇದೆ ಮತ್ತು ಪ್ರಕರಣವನ್ನು ದುರ್ಬಲಗೊಳಿಸುವ ಅಪಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.

    ಚಿಕ್ಕೋಡಿಯ ಜೈನ ಮುನಿಗಳ ಹತ್ಯೆ ವಿಚಾರದಲ್ಲೂ ಬಡ್ಡಿ ವ್ಯವಹಾರ ಎಂಬ ಸುದ್ದಿಯನ್ನು ಹರಿಯಬಿಟ್ಟು ವಿಷಯಾಂತರ ಮಾಡುವ ಯತ್ನ ನಡೆದಿದೆ. ಬೊಗಸೆಯಲ್ಲಿ ದಿನಕ್ಕೆ ಒಮ್ಮೆ ಊಟ ಮಾಡುವ ಸ್ವಾಮೀಜಿ ಬಡ್ಡಿ ವ್ಯವಹಾರ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಜೈನ ಸನ್ಯಾಸ ಎಂಬುದು ಅತ್ಯಂತ ಕಠಿಣಾತಿಕಠಿಣ ಎಂದು ವಿವರಿಸಿದರು. ಹಸನ್ ದಲಾಯತ್ ಹೆಸರನ್ನು ಒತ್ತಡ ಬಂದ ಬಳಿಕ ಎಫ್‍ಐಆರ್‍ನಲ್ಲಿ ಸೇರಿಸಿದ್ದಾರೆ. ಅದಕ್ಕೆ ಮೊದಲು ನಾರಾಯಣ ಮಾಳಿ ಹೆಸರನ್ನು ಮಾತ್ರ ಉಲ್ಲೇಖಿಸಿದ್ದರು ಎಂದು ಅವರು ತಿಳಿಸಿದರು.

    ದನಗಳ್ಳ ಕಬೀರ್ ಪೊಲೀಸ್ ಎನ್‍ಕೌಂಟರ್‍ನಲ್ಲಿ ಸತ್ತಿದ್ದ. ಕಬೀರ್‍ಗೆ ಸರಕಾರ ಪರಿಹಾರ ಕೊಟ್ಟಿದೆ. ಎನ್‍ಕೌಂಟರ್ ಮಾಡಿದ ಪೊಲೀಸನನ್ನು ಸರಕಾರ ಜೈಲಿಗೆ ಹಾಕಿತ್ತು. ಈ ಮೂಲಕ ತಾನು ಕ್ರಿಮಿನಲ್ ಪರ ಎಂದು ಕಾಂಗ್ರೆಸ್ ಸರಕಾರ ಸಾಬೀತುಪಡಿಸಿತ್ತು ಎಂದು ಆರೋಪಿಸಿದರು. ಮಾನವೀಯತೆ ಸತ್ತ ಸ್ಥಿತಿಯಲ್ಲಿ ಈ ಸರಕಾರ ಇದೆ. ತುಷ್ಟೀಕರಣದ ಪರಮಾವಧಿಗೆ ತಲುಪಿದೆ ಎಂದು ಟೀಕಿಸಿದರು. ಸರಕಾರದ ಸಂದೇಶದಿಂದ ತಾಲಿಬಾನಿಗಳು ಮತ್ತೆ ಎದ್ದು ನಿಲ್ಲುವಂತಾಗಿದೆ ಎಂದು ನುಡಿದರು.

    ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಅಶ್ವತ್ಥನಾರಾಯಣ್, ಶಾಸಕರಾದ ಶ್ರೀವತ್ಸ, ಮಾಜಿ ಸಚಿವ ಎನ್ ಮಹೇಶ್, ಬಿಜೆಪಿ ನಾಯಕರಾದ ಶ್ರೀಮತಿ ಮಂಗಳಾ ಸೋಮಶೇಖರ್, ಮೈ.ವಿ.ರವಿಶಂಕರ್ ಸೇರಿದಂತೆ ಬಿಜೆಪಿ ಮುಖಂಡರು ನಿಯೋಗದಲ್ಲಿ ಇದ್ದರು. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ವೇಣುಗೋಪಾಲ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸರ್ವ ಪ್ರಯತ್ನ ಮಾಡುವುದಾಗಿ ಸತ್ಯ ಶೋಧನಾ ಸಮಿತಿಯ ಪರವಾಗಿ ಭರವಸೆ ನೀಡಲಾಯಿತು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC

    ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


    Provided by
    Provided by
    admin
    • Website

    Related Posts

    ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ

    July 3, 2026

    SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!

    June 30, 2026

    10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!

    June 30, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಮಿಡಿಗೇಶಿ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಸಾವು

    July 4, 2026

    ಮಿಡಿಗೇಶಿ: ಪಾದಚಾರಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಆತ ಅಸುನೀಗಿರುವ ಘಟನೆ ಪಾವಗಡ ರಾಜ್ಯ ಹೆದ್ದಾರಿ ಕೆಶಿಪ್ ರಸ್ತೆಯ…

    ಎಸ್‌ ಐಆರ್‌ ಲೋಪ: ಬಿಜೆಪಿ ಆಕ್ಷೇಪ, ಬಿಎಲ್‌ ಒಗಳಿಗೆ ಸೂಚನೆ ನೀಡಲು ಆಗ್ರಹ

    July 4, 2026

    ಎಸ್‌ ಐಆರ್ ಗೊಂದಲ ನಿವಾರಣೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹೆಲ್ಪ್‌ಲೈನ್ ಆರಂಭಿಸಿ: ಸಿ.ಬಿ.ಶಶಿಧರ್ ಆಗ್ರಹ

    July 4, 2026

    ಸಂವಿಧಾನ ಬದ್ಧ ಮತದಾನದ ಹಕ್ಕನ್ನು ಉಳಿಸಿ: ಟಿ.ಬಿ. ಜಯಚಂದ್ರ ಕರೆ

    July 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.