Author: admin

ರಾಜ್ಯದಲ್ಲಿ ‘108’ ಆ್ಯಂಬುಲೆನ್ಸ್ ಜನರ ಅತ್ಯಂತ ನಂಬಿಕಸ್ಥ ವೈದ್ಯಕೀಯ ವ್ಯವಸ್ಥೆಯಾಗಿದೆ. ಎಲ್ಲಿ ಯಾವುದೇ ಆರೋಗ್ಯ ತುರ್ತು ಸ್ಥಿತಿ ಇದ್ದರೂ, ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನ ತಲುಪಿಸಿ, ಅವರ ಜೀವ ಉಳಿಸುವ ಪುಣ್ಯದ ಕಾರ್ಯವನ್ನು ಆ್ಯಂಬುಲೆನ್ಸ್ ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ, ಹಾಸನ ಜಿಲ್ಲೆಯಲ್ಲಿ ‘108’ ಆ್ಯಂಬುಲೆನ್ಸ್ ಸಿಬ್ಬಂದಿಯ ನಡೆಯ ಬಗ್ಗೆ ತೀವ್ರ ಆತಂಕಕ್ಕೊಳಗಾಗುವ ವಿಚಾರವೊಂದು ಕೇಳಿ ಬಂದಿದೆ. ಹೌದು..! 108 ಆ್ಯಂಬುಲೆನ್ಸ್ ನಲ್ಲಿ ಕರೆತರುವ ರೋಗಿಗಳನ್ನು ಕಮಿಷನ್ ಆಸೆಗೆ ಆ್ಯಂಬುಲೆನ್ಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಸೇರಿಸುತ್ತಿದ್ದಾರೆ ಎಂದು ಹಾಸನದ ಯುವ ಮುಖಂಡ ಪ್ರದೀಪ್ ಅವರು ಗಂಭೀರ ಆರೋಪ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿದ ವ್ಯಕ್ತಿಗಳು ರೋಗಿಗಳ ಬ್ರೈನ್ ವಾಶ್ ಮಾಡಿ, ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುತ್ತಿರುವ ಘಟನೆಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ದರೆ 15ರಿಂದ 20% ಕಮಿಷನ್ ಸಿಗುತ್ತದೆ ಎನ್ನುವ ಆಸೆಗೆ ಬಡ ರೋಗಿಗಳನ್ನ ವ್ಯವಸ್ಥಿತವಾಗಿ ಸುಳ್ಳು ಹೇಳಿ ವಂಚಿಸಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಲಾಗುತ್ತಿದೆ. ಕಮಿಷನ್…

Read More

ಬೆಂಗಳೂರು: ನಾಳೆ ಯಾವುದೇ ರೀತಿಯ ಪ್ರತಿಭಟನಾ ಜಾಥಾ, ಮೆರವಣಿಗೆಗೆ ಅವಕಾಶ ಇಲ್ಲ. ಇಂದು ರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಾಗಲಿದೆ ಪೊಲೀಸ್  ಕಮಿಷನರ್‌  ದಯಾನಂದ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೆಲವು ಸಂಘಟನೆಗಳು 29 ನೇ ತಾರೀಖು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ  ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಾಳೆ ಯಾವುದೇ ರೀತಿಯ ಪ್ರತಿಭಟನಾ ಜಾಥಾ, ಮೆರವಣಿಗೆಗೆ ಅವಕಾಶ ಇಲ್ಲ. ನಗರದಲ್ಲಿ ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ. ಕರ್ನಾಟಕ ಬಂದ್​ ಕರೆ ನೀಡಿದವರಿಗೆ ನೋಟಿಸ್ ನೀಡಲಾಗುತ್ತದೆ. ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ಆದೇಶದ ಪ್ರಕಾರ, ಬಂದ್​ಗೆ ಕರೆ ನೀಡುವುದು ಕಾನೂನು ಬಾಹಿರ. ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಕಾರ್ಯ ನಿರ್ವಹಿಸಲಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.

Read More

ಬೆಂಗಳೂರು, ಸೆಪ್ಟೆಂಬರ್ 28: ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಯನ್ನು ಪುನಶ್ಚೇತನಗೊಳಿಸಲು ಅಲ್ಪಾವಧಿ ಟೆಂಡರ್ ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ಅವರು ಇಂದು ಮುಧೋಳ ತಾಲ್ಲೂಕಿನ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2023- 24 ನೇ ಸಾಲಿಗೆ ಕಬ್ಬು ಅರೆಯುವ ಕಾರ್ಯವನ್ನು ಲೀಸ್ ಮೂಲಕ ಪುನರಾರಂಭಿಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು. ಕಬ್ಬು ಅರೆಯುವ ಕಾರ್ಯ ಪ್ರಾರಂಭ ವಾಗಬೇಕು. ಪುನಶ್ಚೇತನದಿಂದ ರೈತರಿಗೂ ಅನುಕೂಲ ವಾಗಬೇಕು. ಅಲ್ಪಮಟ್ಟದ ಹೂಡಿಕೆಗೆ ಸಿದ್ದವಿರುವ ಸಂಸ್ಥೆಗಳು ಟೆಂಡರ್ ನಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಹಿರೇಮಠ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ , ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತ ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು…

Read More

ಬೆಂಗಳೂರು: ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಬಂದ್ ಮಾಡಲು ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ನಾಳೆ ಸಾರ್ವಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ.  ಸುಪ್ರೀಂ ಕೋರ್ಟ್,‌ ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ,‌ ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ,  ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಅವರು ಮನವಿ ಮಾಡಿದರು. ನಾಳೆ ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಗೆ ಆನ್‌ ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ತಮಿಳುನಾಡಿನವರು 11,000 ಸಾವಿರ ಕ್ಯೂಸೆಕ್ಸ್ ನೀರು ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2,000 ಕ್ಯೂಸೆಕ್ಸ್ ನೀರು ಹೋಗುತ್ತಿರಬಹುದು ಎಂದು ತಿಳಿಸಿದರು.

Read More

ತುಮಕೂರು: ಕಾಡು ಉಳಿಸಿ ನಾಡು ಬೆಳೆಸಿ ಅನ್ನೋ ಅರಣ್ಯ ಕಚೇರಿ ಸಮೀಪದಲ್ಲಿ 28 ಮರಗಳ ಮಾರಣಹೋಮವಾಗಿದೆ. ಸರ್ಕಾರಿ ಕಚೇರಿಗೆ ರಜೆ ಇರುವ ಭಾನುವಾರದ ಸಮಯವನ್ನೇ ಸದುಪಯೋಗ ಪಡಿಸಿಕೊಂಡ ದುಷ್ಕರ್ಮಿಯೊಬ್ಬ, ತೇಗದ ಮರಗಳನ್ನು ಕಡಿದಿದ್ದಾ‌ನೆ. ಸೆಕ್ಯೂರಿಟಿಗಾರ್ಡ್ ಪ್ರಶ್ನಿಸುತ್ತಿದ್ದಂತೆ ಮರ ಕಡಿದ ಆರೋಪಿ ತಲೆ ಮರೆಸಿಕೊಂಡಿರೋ ಘಟನೆ ತುಮಕೂರಿನ ಹೇಮಾವತಿ ನಾಲಾ ಕಚೇರಿ ಆವರಣದಲ್ಲಿ ನಡೆದಿದೆ. ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಯ ಆವರಣದಲ್ಲಿನ 28 ತೇಗದ ಮರಗಳನ್ನು ಕಟಾವು ಮಾಡಲಾಗಿದೆ.  ಭಾನುವಾರ ಕಚೇರಿಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ 28 ಮರಗಳನ್ನು ಕಡಿಯಲಾಗಿದೆ. ಜಲೀಲ್ ಎಂಬ ವ್ಯಕ್ತಿ ಮರ ಕಡಿದಿದ್ದಾನೆ ಎನ್ನಲಾಗಿದೆ. ನಿನ್ನೆ  ಮಧ್ಯಾಹ್ನ ನಾಲ್ಕಾರು ಆಳುಗಳು ಹಾಗೂ ಲಾರಿಯೊಂದಿಗೆ ಬಂದ ಜಲೀಲ್ ಎಂಬ ವ್ಯಕ್ತಿ ಮರ ಕಡಿಯಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಮರ ಕಡಿಯುವುದನ್ನು ತಡೆದಿದ್ದಾನೆ. ಕೂಡಲೇ ಜಲೀಲ್ ಸ್ಥಳದಿಂದ ಪರಾರಿಯಾಗಿದ್ದಾನೆ.‌ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹೇಮಾವತಿ ಕಚೇರಿ ಆವರಣದಲ್ಲಿದ್ದ 30 ತೇಗದ ಮರಗಳನ್ನು ಕಡಿಯುವಂತೆ  ಹೇಮಾವತಿ ನಾಲಾ…

Read More

ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಎಂಎಸ್ ಸ್ವಾಮಿನಾಥನ್ ಗುರುವಾರ ಚೆನ್ನೈನಲ್ಲಿ ನಿಧನರಾದರು. ಸ್ವಾಮಿನಾಥನ್ ಅವರು ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್‌ಎಸ್‌ಆರ್‌ಎಫ್) ಸ್ಥಾಪಕರಾಗಿದ್ದರು. ಸ್ವಾಮಿನಾಥನ್, ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ. ಅವರು ಆಗಸ್ಟ್ ೭, ೧೯೨೫ ರಂದು ಜನಿಸಿದ್ದರು. ಸ್ವಾಮಿನಾಥನ್ ಅವರ ತಂದೆ ಮೂಲತಃ ವೈದ್ಯರಾಗಿದ್ದು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ತಮ್ಮ ಪ್ರಾರಂಭಿಕ ಶಿಕ್ಷಣದ ನಂತರದಲ್ಲಿ ಸ್ವಾಮಿನಾಥನ್ ಅವರು ಕೃಷಿ ಪದವಿಗಾಗಿ ಓದಿದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11:15 ಕ್ಕೆ ತೆಯ್ನಾಂಪೇಟೆಯ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ಖಚಿತಪಡಿಸಿವೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

Read More

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬೆಂಗಳೂರು ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು. ನಗರದ ಪ್ರೆಸ್‌ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳು ಕೂಡ ಬಂದ್ ಯಶಸ್ವಿಯಾಗಲು ಕಾರಣ ಎಂದು ಧನ್ಯವಾದ ತಿಳಿಸಿದರು. ಯಾವುದೇ ಹಾನಿಯನ್ನು ಮಾಡದೇ ಶಾಂತಿಯುತವಾಗಿ ಬಂದ್ ಆಗಿದೆ. ಜನ ಸಂಪೂರ್ಣ ಸಹಕಾರ, ಬೆಂಬಲ ಕೊಟ್ಟರು ಎಂದು ಅವರು ಹೇಳಿದರು. ಬಂದ್ ಹಿಂದಿನ ದಿನ ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ನನಗೆ ಮತ್ತು ಕುರುಬೂರು ಶಾಂತಕುಮಾರ್ ಅವರಿಗೆ ಕರೆ ಮಾಡಿ, ಮೈಸೂರಿನಲ್ಲಿ ತುರ್ತು ಕಾರ್ಯಕ್ರಮ ಇರುವುದರಿಂದ ಜವಾಬ್ದಾರಿಯುತ ವ್ಯಕ್ತಿಯನ್ನು ಮನವಿ ಸ್ವೀಕರಿಸಲು ಕಳುಹಿಸುತ್ತೇನೆ. ಬಂದ ತಕ್ಷಣ ನಿಮ್ಮನ್ನು ಭೇಟಿಯಾಗುತ್ತೇನೆ ಎಂದಿದ್ದರು ಎಂದು ಅವರು ಹೇಳಿದರು. ತಮಿಳರನ್ನು ನೋಡಿ ಕಲಿಯಬೇಕು ನಾನು ಮೂಲತಃ ರೈತ, ನಂತರ ಸಿನಿಮಾ ಕಲಾವಿದ, ನಾನು ಈಗ ಒಂದು ಪಕ್ಷ ಅಧ್ಯಕ್ಷನಾಗಿದ್ದರೂ, ಮೊದಲಿನಿಂದಲೂ…

Read More

ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮಹಿಳೆ ಬ್ಯಾಗ್‌ ನಲ್ಲಿ ಕಂತೆ ಕಂತೆ ಭಾರತೀಯ ಕರೆನ್ಸಿ ಸಿಕ್ಕಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗ್ಗೇಜ್ ಸ್ಕ್ಯಾನಿಂಗ್ ಮಾಡುವಾಗ ಹಣ ಪತ್ತೆಯಾಗಿದೆ. ಮಹಿಳೆಯನ್ನು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯ ಬ್ಯಾಗ್ ‌ನಲ್ಲಿ 15 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಆದರೆ ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸಿಲ್ಲ.

Read More

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ ಐಗೆ ಬೇಹುಗಾರಿಕೆ ನಡೆಸುತ್ತಿದ್ದ ಯುವಕನೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ ಬಂಧಿಸಿದೆ. ಕಾಸ್ಗಂಜ್ ಪಟಿಯಾಲಿ ನಿವಾಸಿ ಶೈಲೇಶ್ ಕುಮಾರ್ ಸಿಂಗ್ ಅಲಿಯಾಸ್ ಶೈಲೇಂದ್ರ ಸಿಂಗ್ ಚೌಹಾಣ್ ಬಂಧಿತ ಆರೋಪಿ. ಸೇನಾ ವಾಹನಗಳ ಆಗಮನ ಮತ್ತು ಸ್ಥಳ ಸೇರಿದಂತೆ ಮಾಹಿತಿ ಮತ್ತು ಫೋಟೋಗಳನ್ನು ಆತ ಐಎಸ್‌ಐ ಸಂಪರ್ಕಕ್ಕೆ ಕಳುಹಿಸಿದ್ದ ಎಂದು ವರದಿಯಾಗಿದೆ. ಶೈಲೇಂದ್ರ ಚೌಹಾಣ್ ಅವರು ಒಂಬತ್ತು ತಿಂಗಳ ಕಾಲ ಗುತ್ತಿಗೆ ಆಧಾರದ ಮೇಲೆ ಭಾರತೀಯ ಸೇನೆಯಲ್ಲಿ ಪೋರ್ಟರ್ ಆಗಿ ಕೆಲಸ ಮಾಡಿದರು. ವಾಟ್ಸ್‌ ಆ್ಯಪ್ ಮತ್ತು ಫೇಸ್‌ ಬುಕ್ ಮೂಲಕ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದನ್ನು ಎಟಿಎಸ್ ಖಚಿತಪಡಿಸಿದೆ. ಎಟಿಎಸ್, ಲಕ್ನೋ ವಿಚಾರಣೆಗಾಗಿ. ಶೈಲೇಶ್ ಕುಮಾರ್ ಅವರನ್ನು ಪ್ರಧಾನ ಕಚೇರಿಗೆ ಕರೆಸಿಕೊಂಡು ಬಂಧಿಸಲಾಗಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಶೈಲೇಶ್ ಚೌಹಾಣ್ ಹೆಸರಿನ ಫೇಸ್ ಬುಕ್ ಖಾತೆಯ ಮೂಲಕ ಮಾಹಿತಿ ರವಾನಿಸಿದ್ದಾರೆ. ಹರ್ಲೀನ್ ಕೌರ್ ಪರಿಚಯಿಸಿದ ಪ್ರೀತಿ ಎಂಬ ಐಎಸ್‌ಐ ಏಜೆಂಟ್‌ಗೆ ಸೇನೆಯ…

Read More

ಅಪಸ್ಮಾರವು ಗುಣಪಡಿಸಲಾಗದ ಕಾಯಿಲೆ ಅಥವಾ ಮಾನಸಿಕ ಅಸ್ವಸ್ಥತೆಯಲ್ಲದ ಕಾರಣ ಅದನ್ನು ವಿಚ್ಛೇದನಕ್ಕೆ ಕಾರಣವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮೂವತ್ತಮೂರು ವರ್ಷದ ವ್ಯಕ್ತಿಯೊಬ್ಬ, ತನ್ನ ಪತ್ನಿಗೆ ಮೂರ್ಛೆ ರೋಗವಿದೆ ಮತ್ತು ಮಾನಸಿಕವಾಗಿ ತೊಂದರೆಗೀಡಾಗಿದ್ದಾಳೆ ಎಂಬ ಕಾರಣ ನೀಡಿ, ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್ ‌ಎ ಮೆನೆಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ತನ್ನ ಸಂಗಾತಿ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಮಾನಸಿಕವಾಗಿ ತೊಂದರೆಗೀಡಾಗಿದ್ದು, ಒಟ್ಟಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಪತಿ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಅಪಸ್ಮಾರವನ್ನು ಗುಣಪಡಿಸಲಾಗದ ಕಾಯಿಲೆ ಅಥವಾ ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಮಾತ್ರ ವಿಚ್ಛೇದನವನ್ನು ನೀಡಬಹುದು ಎಂದು ಪೀಠ ಹೇಳಿದೆ. ಯುವಕ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (1) (iii) ಅಡಿಯಲ್ಲಿ ವಿಚ್ಛೇದನವನ್ನು ಕೋರಿದ್ದಾನೆ. ಸಂಗಾತಿಗಳಲ್ಲಿ ಒಬ್ಬರು ಗುಣಪಡಿಸಲಾಗದ ಮಾನಸಿಕ ಅಸ್ವಸ್ಥರಾಗಿದ್ದರೆ ಅಥವಾ ನಿರಂತರವಾಗಿ ಅಥವಾ…

Read More