Author: admin

ತುಮಕೂರು: ಠಾಣೆಗೆ ಭೇಟಿ ನೀಡಿ, ನೇರವಾಗಿ ದೂರುದಾರರಿಗೆ ಫೋನ್ ಮಾಡಿದ ಗೃಹ ಸಚಿವ ಪರಮೇಶ್ವರ ಅವರು, ಪೊಲೀಸರು ನಿಮ್ಮ ದೂರಿಗೆ ಹೇಗೆ ಸ್ಪಂದಿಸಿದ್ದಾರೆ ಎಂದು ನೇರವಾಗಿ ಮಾಹಿತಿ ಪಡೆದ ಘಟನೆ ಪಾವಗಡ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಮೂಲಕ ಪೊಲೀಸ್ ಠಾಣೆಯಲ್ಲಿನ  ಪೊಲೀಸರ ಕಾರ್ಯವೈಖರಿ ಪರಿಶೀಲಿಸಿದ್ದು, ಸಚಿವರ ನಡೆಯಿಂದ ಪೊಲೀಸ್ ಸಿಬ್ಬಂದಿ ಕ್ಷಣ ಕಾಲ ಗಲಿಬಿಲಿಗೊಂಡರು. ಪಾವಗಡ ಪೊಲೀಸ್ ಠಾಣೆಗೆ ಏಕಾಏಕಿ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ ಠಾಣೆಯಲ್ಲಿದ್ದ ವಿಸೀಟರ್ ಪುಸ್ತಕ ತೆಗೆದು ನೇರವಾಗಿ ದೂರುದಾರನಿಗೆ ಕರೆ ಮಾಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಪೊಲೀಸ್ ಠಾಣೆಗೆ ಬಂದು ದೂರುದಾರನು ದೂರು ಕೊಟ್ಟಿದ್ದನು. ಪುಸ್ತಕದಲ್ಲಿದ್ದ ಆತನ ಮೊಬೈಲ್ ನಂಬರ್ ಅನ್ನು ಪರಿಶೀಲಿಸಿದ ಪರಮೇಶ್ವರ್ ಅವರು ಆತನಿಗೆ ನೇರವಾಗಿ ಕರೆ ಮಾಡಿ ಪೊಲೀಸರು ಸ್ಪಂದಿಸಿದ ರೀತಿ ಬಗ್ಗೆ ಮಾಹಿತಿ ಪಡೆದರು. ಪಾವಗಡ ತಿರುಮಣಿ ಸೋಲಾರ್ ಪಾರ್ಕ್ ಗೆ ಭೇಟಿ ನೀಡಿದ್ದ ಗೃಹ ಸಚಿವ ಪರಮೇಶ್ವರ ಅವರು ಬಳಿಕ ಪಾವಗಡ ಪೊಲೀಸ್ ಠಾಣೆ…

Read More

ತುಮಕೂರು: ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕೊಟ್ಟು ಜನರಿಗೆ ಟೋಪಿ ಹಾಕಿ ದ್ರೋಹ ಮಾಡಿ ಅಧಿಕಾರಕ್ಕೆ ಬಂದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿ ಈಗ ಹಲವು ಷರತ್ತು ಹಾಕಿ ಮೋಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದೇ ರೀತಿಯ ದ್ರೋಹ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಮೋಸದ ವಿರುದ್ದ ಸದನದ ಹೊರಗೆ ಒಳಗೆ ನಾವು ಹೋರಾಟ ಮಾಡುತ್ತೇವೆ ಎಂದರು. ಅಧಿವೇಶನ ಆರಂಭದಿಂದ ಮುಗಿಯುವವರೆಗೂ ಧರಣಿ ಮಾಡುತ್ತೇವೆ. ರಾಜ್ಯದ ಎಲ್ಲಾ ಕಡೆಯಿಂದ ಬಂದು ಪ್ರತಿಭಟನೆ ಮಾಡಲಿದ್ದೇವೆ. ಸರ್ಕಾರದ ಕೊಟ್ಟ ಯೋಜನೆ ಜಾರಿ ಮಾಡಬೇಕು, ಇಲ್ಲವಾದ್ರೆ ಅಧಿಕಾರಾದಲ್ಲಿ ಒಂದು  ನಿಮಿಷನೂ ಅವರು ಇರಬಾರದು. ಅಧಿವೇಶನಕ್ಕೆ ಮುಂಚೆ ವಿಪಕ್ಷನಾಯಕರ ಆಯ್ಕೆ ಮಾಡುತ್ತೇವೆ. ನನಗೆ 81 ವರ್ಷ ಆದರೂ ನಾನು ಹೋರಾಟ ಮಾಡುತ್ತೇನೆ ಎಂದರು. ಪ್ರಧಾನಿ ಮೋದಿಗೆ ವಿಶ್ವದಲ್ಲಿ ಗೌರವ ಸಿಗುತ್ತಿದೆ. ಈ ಬಾರಿ ಕಳೆದ ಬಾರಿಯಂತೆ ಲೋಕಸಭೆಯಲ್ಲಿ ಕರ್ನಾಟದಲ್ಲಿ ಹೆಚ್ಚು ಸ್ಥಾನ ಪಡೆಯುತ್ತೇವೆ. ನನ್ನನ್ನು…

Read More

ಕೊರಟಗೆರೆ: ತಾಲೂಕಿನ ಹುಲಿಕುಂಟೆ ಗ್ರಾಮದ ಅಲೆಮಾರಿ ಜನಾಂಗದ ವಾಸದ ಸ್ಥಳಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಭೇಟಿ ನೀಡಿ ಅಲೆಮಾರಿ ಜನಾಂಗದ ವಯೋವೃದ್ಧರಿಗೆ ಹಾಗೂ ಅಂಗವಿಕಲರಿಗೆ ಕೊಟ್ಟ ಮಾತಿನಂತೆ ಮಾಶಾಸನದ ಆದೇಶ ಪತ್ರವನ್ನು ಕೇವಲ 24 ಗಂಟೆ ಒಳಗೆ ವಿತರಿಸಿದ್ದಾರೆ. ಅಲೆಮಾರಿ ಜನಾಂಗದ ಬಡ ಜನರಿಗೆ ಬೇಕಾಗಿರುವಂತಹ ಎಲ್ಲಾ ಮೂಲಭೂತ ಸೌಕರ್ಯಗಳ ಬಗ್ಗೆ ಸ್ಥಳದಲ್ಲೇ ಎಲ್ಲಾ ಇಲಾಖೆಯ ಅಧಿಕಾರದೊಂದಿಗೆ ಚರ್ಚಿಸಿ ಶೀಘ್ರವೇ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು,ವಿದ್ಯುತ್, ಶೌಚಾಲಯ ವ್ಯವಸ್ಥೆ, ಸುಸಜ್ಜಿತವಾದ ರಸ್ತೆ, ಚರಂಡಿ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗಿದ್ದಾರೆ. 24 ಹೆಚ್ಚು ಅಲೆಮಾರಿ ಜನಾಂಗಕ್ಕೆ ಈಗಾಗಲೇ ನಿವೇಶನ ಮಂಜೂರಾಗಿದ್ದು ನಿವೇಶನ ಆದೇಶ ಪ್ರತಿಯನ್ನು ವಿತರಿಸುವದಷ್ಟೇ ಬಾಕಿ ಇದೆ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿರವರು ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಅಲೆಮಾರಿ ಜನಾಂಗದವರ ಕೊಟ್ಟಿಗೆ ನಮ್ಮ ತಾಲೂಕು ಆಡಳಿತ ಸದಾಕಾಲ…

Read More

ಬಿಬಿಎಂಪಿ ವತಿಯಿಂದ ನಡೆಯುವ ನಾಡಪ್ರಭು ಕೆಂಪೇಗೌಡ ದಿಣಾಚರಣೆಯ ಪ್ರಯುಕ್ತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ: 28-06-2023 ರಿಂದ 05-07-2023 ರೊಳಗೆ ಬೇರೆಬೇರೆ ದಿನಗಳಂದು ಕೆಂಪೇಗೌಡ ದಿನಾಚರಣೆ ಹಾಗೂ ಜುಲೈ 9 ರಂದು ಸಮಾರೋಪ ಸಮಾರಂಭವನ್ನು ವಿಧಾನಸೌಧದ ಭವ್ಯ ಮೆಟ್ಟಿಲು ಮೇಲೆ ಆಚರಿಸಲಿದ್ದು, ಅದಕ್ಕೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸುವ ಸಂಬಂಧ ನಡೆದ ರವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜುಲೈ 9 ರಂದು ಪಾಲಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲಾಗುವುದು. ಅದಕ್ಕಾಗಿ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಪಾಲಿಕೆಯ 198 ವರ್ ಗಳಲ್ಲಿಯೂ ವಿವಿಧ ಸೇವೆಗಳಲ್ಲಿ ಸಾಧನೆ ಮಾಡಿರುವಂತಹ ಒಬ್ಬರನ್ನು ಗುರುತಿಸಿ, 198 ಕೆಂಪೇಗೌಡ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುವುದು. ಅದಕ್ಕಾಗಿ ಮಾನ್ಯ…

Read More

ರಾಜ್ಯ ಸರ್ಕಾರದ ವಿದ್ಯುತ್ ನೀತಿ ಖಂಡಿಸಿ ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು ಮುಷ್ಕರ ನಡೆಸಿರುವುದು ರಾಜ್ಯದ ವಿದ್ಯುಶ್ಚಕ್ತಿ ಹಳಿ ತಪ್ಪಿರುವುದಕ್ಕೆ ಇದೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಕರ್ನಾಟಕ ಕೈಗಾರಿಕೆಯಲ್ಲಿ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಇಲ್ಲಿ ಸಣ್ಣ ಉದ್ಯಮಗಳಿಂದ ಹಿಡಿದು ಬೃಹತ್ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿದ್ಯುತ್ ನೀತಿ, ಗ್ರಾಹಕರು ಹಾಗೂ ಕೈಗಾರಿಕೋದ್ಯಮಿಗಳಿಗೆ ಮಾರಕವಾಗಿರುವುದು ದುರ್ದೈವ ಮತ್ತು ಖಂಡನೀಯ. ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಕೈಗಾರಿಕೆಗಳಿಗೂ ವಿದ್ಯುತ್ ಕ್ಷಾಮ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಬೇಕಾಗಿರುವ ಹಣಕಾಸನ್ನು ಬಿಡುಗಡೆ ಮಾಡಬೇಕು ಹಾಗೂ ವಿದ್ಯುತ್ ಬಳಕೆದಾರರ ಮೇಲಿನ ಹೊರೆ ಕಡಿಮೆ ಮಾಡಬೇಕು. ಪೂರ್ವ ತಯಾರಿ ಇಲ್ಲದೆ ಗ್ಯಾರೆಂಟಿ ಜಾರಿ ಮಾಡಿದರೆ ಅದರ ಎಲ್ಲ ಭಾರವೂ ಜನ ಸಾಮಾನ್ಯರ ಮೇಲೆ ಬೀಳುತ್ತದೆ. ಇದನ್ನು ತಪ್ಪಿಸಬೇಕು. ಈಗಿರುವ ಲೋಪವನ್ನು ಸರಿಪಡಿಸಲಿ ಎಂದು ಎಚ್ಚರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ…

Read More

ಹಾಲು, ಗ್ಯಾಸ್, ವಿದ್ಯುತ್ ದರ ಸೇರಿ ಎಲ್ಲ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾಫಿ, ಟೀ, ತಿಂಡಿ, ಊಟದ ದರವನ್ನು ಹೆಚ್ಚಳ ಮಾಡಲಾಗುವುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಒಂದು ಕಡೆ ವಿದ್ಯುತ್ ದರ ಹೆಚ್ಚಳವಾಗಿದೆ. ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧರಿಸಿದ್ದಾರೆ. ಅಲ್ಲದೆ ಹೋಟೆಲ್‌ ನಲ್ಲಿ ಉಪಯೋಗಿಸುವ ಗ್ಯಾಸ್, ತರಕಾರಿ, ಬೇಳೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ಕಾಫಿ, ತಿಂಡಿ, ಊಟದ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ. ಗ್ಯಾಸ್ ಮತ್ತು ವಿದ್ಯುತ್ ದರ ಹೆಚ್ಚಳ ಈಗಾಗಲೇ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಸುಳಿವು ನೀಡಿದೆ. ಹೋಟೆಲ್‌ ಗಳ ಮಾಲೀಕರ ಸಂಘದಿಂದ ದರ ಹೆಚ್ಚಳದ ಚರ್ಚೆ ಮಾಡಲಾಗುತ್ತಿದ್ದು, ಬಹುತೇಕ…

Read More

ಬೆಂಗಳೂರು: ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸಿರುವ ಪೊಲೀಸರು, 37 ಲಕ್ಷ ಮೌಲ್ಯದ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. ಈತನಿಂದ ಆಟೊ ರಿಕ್ಷಾ ಹಾಗೂ 9 ದ್ವಿಚಕ್ರ ವಾಹನಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಇದೇ ಆರೋಪಿ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎರಡು, ಮಹದೇವಪುರ, ತಿಲಕನಗರ, ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ್ದ ಬೈಕ್ ಹಾಗೂ ಆಟೊಗಳನ್ನು ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಜಾರಿಗೆ ಮುನ್ನವೇ ಮೇ ತಿಂಗಳಲ್ಲಿ ಟಿಕೆಟ್ ಇಲ್ಲದೇ ಓಡಾಡಿದ 3 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನಿಖಾ ತಂಡಗಳು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದರು. ಅಧಿಕಾರಿಗಳ ತಂಡ ಆ ತಿಂಗಳಲ್ಲಿ ಒಟ್ಟು 44, 052 ಸಾರಿಗೆ ಬಸ್‌ ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಅದರಿಂದ ಒಟ್ಟು ನಿಗಮದ ಆದಾಯಕ್ಕೆ ಉಂಟಾಗುತ್ತಿದ್ದ 73, 859 ರೂಪಾಯಿ ನಷ್ಟವನ್ನು ಅಧಿಕಾರಿಗಳು ತಪ್ಪಿಸಿದ್ದಾರೆ. ಇನ್ನೂ ಪತ್ತೆಯಾದ ಟಿಕೆಟ್ ರಹಿತ ಒಟ್ಟು 3636 ಪ್ರಕರಣಗಳಿಂದ ಅಧಿಕಾರಿಗಳು ಒಟ್ಟು 5, 89, 453 ರೂಪಾಯಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಮೂಲಕ ತಿಳಿಸಿದೆ. ಇದೊಂದಿಗೆ ಸಾರ್ವಜನಿಕರು, ಪ್ರಯಾಣಿಕರು ಬಸ್‌ ಗಳಲ್ಲಿ ಸಂಚರಿಸುವಾಗ ದಯಮಾಡಿ ಟಿಕೆಟ್ ಪಡೆದು ಚಲಾಯಿಸಬೇಕು ಎಂದು ತಿಳಿಸಿದೆ. ಇದು ಪುರುಷರಿಗೆ ಅನ್ವಯವಾಗಲಿದೆ. ಏಕೆಂದರೆ ಜೂನ್ 11ರಂದು ಎಲ್ಲ ಮಹಿಳೆಯರಿಗೆ ಉಚಿತ…

Read More

ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಕಾನೂನು ಬಾಹಿರವಾಗಿ ಕಡಿದ ಆರೋಪದಲ್ಲಿ ವಿರಾಜಪೇಟೆ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ (ಡಿಸಿಎಫ್), ಸದ್ಯ ಬೆಂಗಳೂರು ನಗರ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈ. ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ವಿರಾಜಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿರುವ ಎಂ. ಎನ್. ರಮೇಶ್ ಅವರ ಜಮೀನಿನಲ್ಲಿದ್ದ ಸಾಗುವಾನಿ ಮರಗಳನ್ನು ಕಡಿದ ಪ್ರಕರಣದಲ್ಲಿ ಕೆಲವು ಅಧಿಕಾರಿಗಳ ಜೊತೆ ಐಎಫ್‌ಎಸ್ ಅಧಿಕಾರಿಯಾಗಿರುವ ಚಕ್ರಪಾಣಿ ಕೂಡಾ ಭಾಗಿಯಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಅಮಾನತು ಆದೇಶದಲ್ಲಿ ವಿವರಿಸಲಾಗಿದೆ. ತಮ್ಮ ಕಾಫಿ ಎಸ್ಟೇಟ್‌ನಲ್ಲಿದ್ದ, ಸರ್ಕಾರಕ್ಕೆ ಸೇರಿದ ಆರು ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ರಮೇಶ್ ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಎಸ್ಟೇಟ್ ಮಾಲೀಕರ ನಕಲಿ ಸಹಿ ಮಾಡಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯದಿಂದ ಕೇವಲ 10 ಮೀಟರ್ ದೂರದಲ್ಲಿ ಸರ್ಕಾರ ಭೂಮಿ ಅತಿಕ್ರಮಿಸಿದ ಪ್ರದೇಶದಲ್ಲಿದ್ದ ಬೃಹತ್ ಗಾತ್ರದ 66 ಮರಗಳನ್ನು ಕಡಿಯಲು ಅನುಮತಿ…

Read More

ಶಕ್ತಿ ಯೋಜನೆಯಡಿ ಮಹಿಳೆಯೊಬ್ಬರು ವೇಗಧೂತ ಸಾರಿಗೆ ಬಸ್ ಏರಿ ಗಲಾಟೆ ಮಾಡಿಕೊಂಡಿದ್ದರು. ನಿಲುಗಡೆ ಕೊಡಲಿಲ್ಲ ಎಂಬ ಕಾರಣಕ್ಕೆ ಬಸ್ ನಿರ್ವಾಹಕ ಮೇಲೆ ಮಹಿಳೆಯ ಕಡೆಯವರು ಹಲ್ಲೆ ಮಾಡಿದ್ದರು. ಸದ್ಯ ಮಹಿಳೆ ಸೇರಿದಂತೆ ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿಗೆ ಹೋಗಲು ಮಹಿಳೆಯೊಬ್ಬರು ಚಳ್ಳಕೆರೆ ಡಿಪೋಗೆ ಸೇರಿದ ರಾಯದುರ್ಗ- ಬೆಂಗಳೂರು ಬಸ್ ಏರಿದ್ದರು. ಮಹಿಳೆ ದಾಬಸ್‌ ಪೇಟೆಗೆ ನಿಲುಗಡೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಈ ಬಸ್ ವೇಗಧೂತ ಬಸ್ ಆಗಿದ್ದರಿಂದ ಅವರು ಕೇಳಿದ ದಾಬಾಸ್‌ ಪೇಟೆಯಲ್ಲಿ ನಿಲುಗಡೆ ನೀಡಲು ಸಾಧ್ಯವಾಗಿಲ್ಲ. ಇದಾದ ಬಳಿಕ ಬೆಂಗಳೂರು ತಲುಪಿ ಬಸ್ ಕಂಡಕ್ಟರ್ ಜೊತೆ ಮಹಿಳೆ ಚಂದ್ರಿಕಾ ವಾಗ್ವಾದ ನಡೆಸಿದ್ದಳು. ಇಷ್ಟಕ್ಕೆ ಸುಮ್ಮನಾಗದೇ ಮಹಿಳೆಯ ಕಡೆಯವರಾದ ಮಲ್ಲಿಕಾರ್ಜುನ್, ಶಿವರಾಜ್, ನವೀನ್ ಅವರು ಬಂದು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದರು. ಈ ಸಂಬಂಧ ಪ್ರಕಟಣ ದಾಖಲಾಗಿದ್ದು, ಗುರುವಾರ ಮಹಿಳೆ ಸೇರಿ ಹಲ್ಲೆ ಮಾಡಿದವರನ್ನು ಬಂಧಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More